ಪತಿಯನ್ನ ಕೊಂದು ಅದೇ ರಾತ್ರಿ ಪ್ರಿಯಕರನೊಂದಿಗೆ ಪ್ರಣಯ; 45ರ ಮಹಿಳೆ 27ರ ಯುವಕನ ಲವ್ ಅಂಡ್ ಕ್ರೈಮ್

ಫೇಸ್​ಬುಕ್ ಮೂಲಕ ಪರಿಚಯವಾದ ಯುವಕನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿವಾಹಿತ ಮಹಿಳೆಯೊಬ್ಬಳು ಕೊನೆಗೆ ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನೇ ಕೊಂದುಹಾಕಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಂಡ್ಯ: ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಹತ್ಯೆಗೈದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನ ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ನಗರದ ಗುತ್ತಲು ಬಡಾವಣೆಯ ನಿವಾಸಿ 56 ವರ್ಷದ ಅಲ್ತಾಫ್ ಮೆಹದಿ ಕೊಲೆಯಾದ ದುರ್ದೈವಿ. ಜೂನ್ 29 ರಂದು ಪತ್ನಿ ರಿಜ್ವಾನ್ ಬಾನು ಮತ್ತು ಈಕೆಯ ಪ್ರಿಯಕರ ರಹಮತ್‌ಉಲ್ಲಾ ಸೇರಿ ಅಲ್ತಾಫ್ ಮೆಹದಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಅಲ್ತಾಫ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ಪತ್ನಿ ರಿಜ್ವಾನ್ ಕಥೆ ಕಟ್ಟಿದ್ದಳು.

  ಫೇಸ್ ಬುಕ್ಕಿನಲ್ಲಿ ಪರಿಚಯ, ಬಳಿಕ ಮಂಚಕ್ಕೆ ಆಯ್ತು ದಾರಿ....

  ಮೃತ ಅಲ್ತಾಫ್ ಮೆಹದಿ ಪತ್ನಿ ರಿಜ್ವಾನ್ ಬಾನು ಫೇಸ್​ಬುಕ್​ಗೆ ಅಡಿಕ್ಟ್ ಆಗಿದ್ದಳು. ಮೂರು ಹೊತ್ತು ಮೊಬೈಲ್ ಹಿಡಿದು ಚಾಟಿಂಗ್ ನಡೆಸ್ತಿದ್ಲು. ಈ ಸಂದರ್ಭ ಈಕೆಗೆ ದಾವಣಗೆರೆಯ ಹರಿಹರ ಮೂಲದ ರೆಹಮತ್‌ಉಲ್ಲಾ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ. ಪ್ರೀತಿ ಬಳಿಕ ಮಂಚಕ್ಕೆ ದಾರಿಯಾಗಿದೆ. ಹೀಗಾಗಿ ರೆಹಮತ್‌ಉಲ್ಲಾ ಹರಿಹರ ತೊರೆದು ಪ್ರಿಯತಮೆಗಾಗಿ ಮಂಡ್ಯಕ್ಕೆ ಆಗಮಿಸಿದ್ದ. ಮಂಡ್ಯದಲ್ಲೇ ಮನೆಯೊಂದನ್ನ ಬಾಡಿಗೆ ಪಡೆದು ವಾಸ ಮಾಡ್ತಿದ್ದ. ಸಮಯ ಸಿಕ್ಕಾಗಲೆಲ್ಲಾ ಕಳ್ಳ ಬೆಕ್ಕಿನಂತೆ ರಿಜ್ವಾನ್ ಬಾನುವನ್ನ ಆಕೆಯ ಮನೆಯಲ್ಲೇ ಭೇಟಿ ಮಾಡ್ತಿದ್ದ.

  ಪ್ರಿಯತಮನಿಗಾಗಿ ಟೈಲ್ಸ್ ಅಂಗಡಿ ಮಾಡಿಕೊಟ್ಟ ಆಂಟಿ ರಿಜ್ವಾನ್...

  45ವರ್ಷದ ಆಂಟಿ ರಿಜ್ವಾನಾಗೆ ರೆಹಮತ್‌‌ಉಲ್ಲಾನನ್ನ ಬಿಟ್ಟಿರಲು ಆಗುತ್ತಿರಲಿಲ್ಲ. ಆತನನ್ನ ಮಂಡ್ಯಕ್ಕೆ ಕರೆಸಿಕೊಂಡಿದ್ದಲ್ಲದೆ, ಆತನಿಗೆ ಈಕೆಯೇ ಹಣ ಕೊಟ್ಟು ಟೈಲ್ಸ್ ಅಂಗಡಿ ಮಾಡಿಕೊಟ್ಟಿದ್ದಳು. ಬಳಿಕ ಅದೇ ಟೈಲ್ಸ್ ಅಂಗಡಿಗೆ ಕೆಲಸಕ್ಕೆ ಸೇರುವುದಾಗಿ ಮನೆಯಲ್ಲಿ ತಿಳಿಸಿದ ರಿಜ್ವಾನ್ ಪ್ರತಿ ದಿನ ಟೈಲ್ಸ್ ಅಂಗಡಿಯಲ್ಲೇ ಲವ್ವಿ ಡವ್ವಿ ಶುರುಮಾಡಿದ್ದಳು. ಈ ವಿಚಾರ ಈಕೆಯ ಪತಿ ಅಲ್ತಾಫ್ ಮೆಹದಿಗೆ ಗೊತ್ತಾಗಿ ಹೋಗಿದೆ. ಬಳಿಕ ಈ ವಿಚಾರವಾಗಿ ಹಲವಾರು ಬಾರಿ ಜಗಳ ನಡೆದು ನ್ಯಾಯ ಪಂಚಾಯ್ತಿಯನ್ನ ಕೂಡ ಮಾಡಲಾಗಿತ್ತು. ಇಷ್ಟಾದರೂ ಕೂಡ ಆಂಟಿಗೆ ಮಾತ್ರ ಯುವಕ ರೆಹಮತ್‌ಉಲ್ಲಾ ಮೇಲಿನ ವ್ಯಾಮೋಹ ಕಡಿಮೆಯಾಗಿರಲಿಲ್ಲ.

  ಇದನ್ನೂ ಓದಿ: Karnataka Unlock 3.0: ಇಂದಿನಿಂದ ರಾಜ್ಯ ಫುಲ್​ ಅನ್​ಲಾಕ್​: ಸಡಿಲಿಕೆ ಕೇವಲ 14 ದಿನ ಮಾತ್ರ

  ಮಲಗಿದ್ದವನ ಮೇಲೆ ದಿಂಬ್ಬಿಟ್ಟು ಉಸಿರುಗಟ್ಟಿಸಿದ್ರು ಜೋಡಿ ಹಕ್ಕಿಗಳು....

  ಅವತ್ತು ಜೂನ್ 29. ಅಲ್ತಾಫ್ ಎಂದಿನಂತೆ ತನ್ನ ಕೆಲಸವನ್ನ ಮುಗಿಸಿ ಮನೆಯ ವರಾಂಡಾದಲ್ಲಿ ಮಲಗಿದ್ದ. ಅತ್ತ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಅಲ್ತಾಫ್ ಕಥೆ ಮುಗಿಸಿಯೇ ಬಿಡಬೇಕು ಎಂದು ಪತ್ನಿ ರಿಜ್ವಾನ್ ಹಾಗೂ ಪ್ರಿಯಕರ ರೆಹಮತ್‌ಉಲ್ಲಾ ನಿರ್ಧರಿಸಿದ್ದರು. ಹಿಗಾಗಿ ಅಂದು ಮಲಗಿದ್ದ ಅಲ್ತಾಫ್ ಮುಖದ ಮೇಲೆ ಮಧ್ಯ ರಾತ್ರಿ ದಿಂಬ್ಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಇಬ್ಬರೂ ಲೈಂಗಿಕ ಸಂಪರ್ಕ ನಡೆಸಿ ಬೆಳಗ್ಗೆ ಹೊತ್ತಿಗೆ ಕೊಲೆಗೂ ನಮಗೂ ಏನೂ ಸಂಬಂಧ ಇಲ್ಲಾ ಅನ್ನೋ ರೀತಿ ನಡೆದುಕೊಂಡಿದ್ದಾರೆ.

  ಕೊಲೆಯಾದ ಮೆಹದಿ ಮೈಮೆಲೆ ಗಾಯ, ದೂರು ನೀಡಿದ ಕುಟುಂಬಸ್ಥರು...

  ಮರು ದಿನ ಬೆಳಗ್ಗೆ ರಿಜ್ವಾನ ಬಾನು ತನ್ನ ಪತಿ ತೀರಿ ಹೋಗಿದ್ದಾರೆ. ರಾತ್ರಿ ಚೆನ್ನಾಗಿಯೇ ಮಲಗಿದವರು ಸಾವನ್ನಪ್ಪಿದ್ದಾರೆ‌. ಅವರಿಗೆ ಹೃದಯಾಘಾತವಾಗಿದೆ ಅಂತ ಕಥೆ ಕಟ್ಟಿದ್ದಳು. ಅತ್ತ ಅಲ್ತಾಫ್ ಸಾವಿನ ಸುದ್ದಿ ತಿಳಿದ ಅವರ ಕುಟುಂಬಸ್ಥರು ಮಂಡ್ಯಕ್ಕೆ ಆಗಮಿಸಿದ್ದರು. ಆಂಟಿ ರಿಜ್ವಾನಳ ನಾಟಕ ಕಂಡು ಅನುಮಾನಗೊಂಡಿದ್ದಾರೆ. ನಂತರ ಅಲ್ತಾಫ್ ಮೃತ ದೇಹದ ಮೇಲೆ ಗಾಯಗಳು ಆಗಿದ್ದನ್ನ ಗಮನಿಸಿ, ಮಂಡ್ಯ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ಕೊಲೆ ಮಾಡಿರುವ ಬಗ್ಗೆ ಆರೋಪಿಗಳಿಂದ ಬಾಯಿ ಬಿಡಿಸಿದ್ದಾರೆ. ಸದ್ಯ ಮಂಡ್ಯ ಪೊಲೀಸರು ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕ್ತಿದ್ದು, ಇಬ್ಬರು ಪ್ರೇಮಿಗಳನ್ನ ಜೈಲಿಗಟ್ಟಿದ್ದಾರೆ.

  ವರದಿ: ಸುನೀಲ್ ಗೌಡ
  Published by:Vijayasarthy SN
  First published: