HOME » NEWS » District » MANDYA PUBLIC NOT SUPPORT TO THE KARNATAKA BANDH RGM MAK

Karnataka Bandh; ಮಂಡ್ಯದಲ್ಲಿ ಕರ್ನಾಟಕ ಬಂದ್​ಗಿಲ್ಲ ಜನ ಬೆಂಬಲ; ಪ್ರತಿಭಟನೆಗಷ್ಟೇ ಸೀಮಿತವಾಯ್ತು ಹೋರಾಟ

ಮಂಡ್ಯದ ಸಂಜಯ್ ವೃತ್ತದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಎಮ್ಮೆಯೊಂದಿಗೆ ಪ್ರತಿಭಟನೆ ನಡೆಸಿದರೆ, ಕರವೇ ಬಣದವರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಇನ್ನು ಕೆ.ಆರ್. ಪೇಟೆಯಲ್ಲಿ ಕನ್ನಡ ಸಂಘಟನೆ ಕಾರ್ಯಕರ್ತರು ರಸ್ತೆಯಲ್ಲಿ ಉರುಳು ಸೇವೆ ಮಾಡಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

news18-kannada
Updated:December 5, 2020, 4:19 PM IST
Karnataka Bandh; ಮಂಡ್ಯದಲ್ಲಿ ಕರ್ನಾಟಕ ಬಂದ್​ಗಿಲ್ಲ ಜನ ಬೆಂಬಲ; ಪ್ರತಿಭಟನೆಗಷ್ಟೇ ಸೀಮಿತವಾಯ್ತು ಹೋರಾಟ
ಮಂಡ್ಯದಲ್ಲಿ ಬೈಕ್​ ರ್ಯಾಲಿ ನಡೆಸಿದ ಕನ್ನಡಪರ ಹೋರಾಟಗಾರರು.
  • Share this:
ಮಂಡ್ಯ (ಡಿಸೆಂಬರ್​ 05): ರಾಜ್ಯದಲ್ಲಿ ಮಠಾರ ಪ್ರಾಧಿಕಾರ ರಚನೆ ವಿ ರೋಧಿಸಿ ಇಂದು ಕನ್ನಡಪರ ಸಂಘ‌ಟನೆಗಳು ಕರ್ನಾ ಟಕ ಬಂದ್ ಗೆ ಕರೆ ನೀಡಿದ್ದವು. ಇಂದು ಕರೆ ನೀಡಿದ್ದ ಕರ್ನಾಟಕ ಬಂದ್ ಬೆಂಬಲಿಸಿ ಮಂಡ್ಯ ಜಿಲ್ಲೆಯಲ್ಲಿ ಹಲವು ಕನ್ನಡ ಪರ ಹಾಗೂ ಕೆಲ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆ ಮಾಡಿದ್ದರು. ಆದರೆ, ಇದನ್ನು  ಹೊರತು ಪಡಿಸಿದರೆ, ಇಂದಿನ ಬಂದ್ ಗೆ ಮಂಡ್ಯ ಜಿಲ್ಲೆಯ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೌದು! ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮರಾ ಠರ ಓಲೈಕೆಗಾಗಿ ಮರಾಠ ಅಭಿವೃದ್ದಿ ಪ್ರಾಧಿಕಾರ ರಚ ನೆಗೆ ಮುಂದಾಗಿತ್ತು.ರಾಜ್ಯ ಸರ್ಕಾರದ ಈ ಕ್ರಮದ ವಿರುದ್ದ ರಾಜ್ಯದ ಕನ್ನಡ ಪರ ಸಂಘಟನೆಗಳು ಸೇರಿಂದ ಕಾಂಗ್ರೆಸ್ ಹಾಗು ಜೆಡಿಎಸ್ ನಿಂದ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಕನ್ನಡ ಪರ‌ಸಂಘಟನೆಗಳು ಇಂದು ರಾಜ್ಯ ಬಂದ್ ಗೆ ಕರೆ ನೀಡಿದ್ದವು.

ರಾಜ್ಯ ಸರ್ಕಾರದ ಮರಾಠ ಪ್ರಾಧಿಕಾರ   ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಸಕ್ಕರೆನಾಡು ಮಂಡ್ಯದಲ್ಲಿ ನೀರ ಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕನ್ನಡಪರ ಸಂಘಟನೆಗಳು ಪ್ರತಿಭಟನೆಗಷ್ಟೆ ಸೀಮಿತವಾಗುವ ಮೂಲಕ ಇಂದಿನ‌ ಕರ್ನಾಟಕ ಬಂದ್​ಗೆ ನೈತಿಕ ಬೆಂಬಲವಷ್ಟೆ ಸಿಕ್ಕಂತಾಯಿತು.

ಇನ್ನು ಮುಂಜಾನೆಯಿಂದಲೇ ನಗರದಲ್ಲಿ ಎಂದಿನಂತೆ ಜನ ಜೀವನ ಇದ್ರೆ, ವಾಹನ ಸಂಚಾರಕ್ಕೂ ಕೂಡ ಯಾವುದೇ ಅಡ್ಡಿಯಾಗಲಿಲ್ಲ. ಅಂಗಡಿ ಮುಂಗ್ಗಟ್ಟುಗಳು ಮುಚ್ಚದೆ ವ್ಯಾಪಾರ ವಹಿವಾಟು ನಡೆಸಿದವು‌. ಇನ್ನು ಬಂದ್ ಬೆಂಬಲಿಸಿ ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಮಂಡ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ  ಕನ್ನಡಪರ ಸಂಘಟನೆಗಳ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು.

ಮಂಡ್ಯದ ಸಂಜಯ್ ವೃತ್ತದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಎಮ್ಮೆಯೊಂದಿಗೆ ಪ್ರತಿಭಟನೆ ನಡೆಸಿದರೆ, ಕರವೇ ಬಣದವರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಇನ್ನು ಕೆ.ಆರ್. ಪೇಟೆಯಲ್ಲಿ ಕನ್ನಡ ಸಂಘಟನೆ ಕಾರ್ಯಕರ್ತರು ರಸ್ತೆಯಲ್ಲಿ ಉರುಳು ಸೇವೆ ಮಾಡಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ, ಹೆದ್ದಾರಿ ತಡೆಗೆ ಮುಂದಾದವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ರಸ್ತೆ ತಡೆ ಕೈಬಿಟ್ಟು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ತಮ್ಮ ಅಸಮಧಾನ ಹೊರ ಹಾಕಿದರು.

ಇದನ್ನೂ ಓದಿ : Karnataka Bandh LIVE: ಕರ್ನಾಟಕ ಬಂದ್- ಬೆಂಗಳೂರಿನಲ್ಲಿ ಕರವೇ ಬಣದ ಉಪವಾಸ ಸತ್ಯಾಗ್ರಹ ಅಂತ್ಯ

ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಟನೆ ಮಾಡುವ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯೂ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು. ಹೆದ್ದಾರಿ ರಸ್ತೆಯ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ತುಕಡಿ ನಿಯೋಜಿಸುವ ಮೂಲಕ ಸಾಕಷ್ಟು ಭದ್ರತೆ ಕೈಗೊಳ್ಳಲಾಗಿತ್ತು. ಅಲ್ಲದೆ, ಪ್ರತಿಭಟನಾಕಾರರಿಗೆ ರಸ್ತೆ ತಡೆ ನಡೆಸದೆ ಶಾಂತಿಯುತವಾಗಿ ಪ್ರತಿಭಟನೆ ಮಾಡುವಂತೆ  ಪೊಲೀಸ್ ಇಲಾಖೆ ಸೂಚಿಸಿತ್ತು. ಪ್ರತಿಭಟನೆ ನಡೆಸಿ ಶಾಂತಿಯುತವಾಗಿ ನಡೆಸದಿದ್ದರೆ ಬಂಧಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿತ್ತು.
Youtube Video
ಒಟ್ಟಾರೆ  ಇಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್​ಗೆ ಸಕ್ಕರೆನಾಡು ಮಂಡ್ಯದಲ್ಲಿ ಜನರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಲ್ದೆ  ಕನ್ನಡಪರ ಸಂಘಟನೆ ಗಳ ಪ್ರತಿಭಟನೆಗಷ್ಟೇ ಬಂದ್ ಸೀಮೀತವಾದಂತೆ ಕಂಡು ಬಂದಿತು. ಆದರೂ, ಜಿಲ್ಲೆಯ ಜನರು ನಾಡು ನುಡಿ ಜಲದ ವಿಚಾರದಲ್ಲಿ ಹೋರಾಟಗಾರರಿಗೆ ನೈತಿಕ ಬೆಂಬಲದ ಮೂಲಕ ಸರ್ಕಾರದ ಮರಾಠ ಪ್ರಾಧಿಕಾರ ರಚನೆ ಗೆ ತಮ್ಮ ವಿರೋಧ ವ್ಯಕ್ತಪಡಿಸಿರೋದು ಸುಳ್ಳಲ್ಲ.
Published by: MAshok Kumar
First published: December 5, 2020, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories