ಪ್ರೀತಿಸಿ ಮದುವೆಯಾದವರನ್ನು ಮೂರೇ ದಿನದಲ್ಲಿ ಬೇರೆ ಮಾಡಿದ ಮಂಡ್ಯದ ಪೊಲೀಸರು; ಕಣ್ಣೀರಿಡುತ್ತಿರುವ ಪತಿ

ಪತಿ ತೇಜಸ್  ಹಾಗೂ ಕುಣಿಗಲ್ ಮೂಲದ ಪತ್ನಿ ಚೈತನ್ಯ ಕ ಳೆದ ಎರಡು ವರ್ಷಗಳಿಂದ  ಪರಸ್ಪರ ಪ್ರೀತಿಸುತ್ತಿದ್ದು, ಹುಡುಗ ಬೇರೆ ಜಾತಿಯಾಗಿದ್ದ ಕಾರಣದಿಂದ ಇಬ್ಬರ ಮದುವೆಗೆ ಹುಡುಗಿ ಪೋಷಕರು ವಿರೋಧಿಸಿದ್ದರು. ಅಲ್ಲದೆ ಬೇರೋಬ್ಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಲು ಸಿದ್ದತೆ ನಡೆಸಿದ್ದರು.

ಪ್ರೀತಿಸಿ ಮದುವೆಯಾಗಿರುವ ನವ ಜೋಡಿಗಳು.

ಪ್ರೀತಿಸಿ ಮದುವೆಯಾಗಿರುವ ನವ ಜೋಡಿಗಳು.

  • Share this:
ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿಯ ನ್ನು ಮೂರೇ ದಿನಕ್ಕೆ ಬೇರೆ ಮಾಡಿರೋ ಆರೋಪ ಸಕ್ಕರೆ ನಾಡು ಮಂಡ್ಯದ ಪಶ್ಚಿಮ ಠಾಣೆಯ ಪೊಲೀಸರ ವಿರುದ್ದ ಕೇಳಿ ಬಂದಿದೆ. ಈ ಕುರಿತಾಗಿ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಪತ್ನಿಯಿಂದ ಬೇರ್ಪಟ್ಟ ಪತಿ ಮಂಡ್ಯದ ಎಸ್ಪಿಗೆ ಮನವಿ ಮಾಡಿ ಪಶ್ವಿಮ ಠಾಣೆಯ ಪೊಲೀಸರ ವಿರುದ್ದ  ದೂರು ನೀಡಿದ್ದಾರೆ. ಹೌದು!ಮಂಡ್ಯದ ಪಶ್ವಿಮ ಠಾಣೆಯ ಪೊಲೀಸರ ವಿರುದ್ದ ಇತ್ತೀಚೆಗೆ ಪ್ರೀತಿಸಿ ಮದುವೆಯಾದ ನವ ಜೋಡಿಯನ್ನು ಮೂರೇ  ದಿನಕ್ಕೆ ಬೇರೆ ಮಾಡಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಂಡ್ಯದ ಕಲ್ಲಹಳ್ಳಿಯ ನಿವಾಸಿಪತ್ನಿಯಿಂದ ಬೇರ್ಪಟ್ಟ ಪತಿ ತೇಜಸ್ ಮಂಡ್ಯ ಎಸ್ಪಿಗೆ ಪತ್ನಿಯನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದು, ನಮ್ಮನ್ನು ಬೇರ್ಪಡಿಸಿದ ಪಶ್ವಿಮ ಠಾಣೆಯ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾನೆ.

ಪತಿ ತೇಜಸ್  ಹಾಗೂ ಕುಣಿಗಲ್ ಮೂಲದ ಪತ್ನಿ ಚೈತನ್ಯ ಕ ಳೆದ ಎರಡು ವರ್ಷಗಳಿಂದ  ಪರಸ್ಪರ ಪ್ರೀತಿಸುತ್ತಿದ್ದು, ಹುಡುಗ ಬೇರೆ ಜಾತಿಯಾಗಿದ್ದ ಕಾರಣದಿಂದ ಇಬ್ಬರ ಮದುವೆಗೆ ಹುಡುಗಿ ಪೋಷಕರು ವಿರೋಧಿಸಿದ್ದರು. ಅಲ್ಲದೆ ಬೇರೋಬ್ಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಲು ಸಿದ್ದತೆ ನಡೆಸಿದ್ದರು. ಇದ್ರಿಂದ ಆತಂಕಗೊಂಡ ಯುವತಿ ಫೆ-15 ರಂದು ಮನೆ ಬಿಟ್ಟು ಬಂದಿದ್ಳು. ಫೆ-15 ರಂದು ಪ್ರಿಯಕರ ತೇಜಸ್ ಜೊತೆ ಮಂಡ್ಯದ ದೇಗುಲದಲ್ಲಿ ಮದುವೆ ಕೂಡ ಮಾಡಿಕೊಂಡಿದ್ದಳು. ಜೊತೆಗೆ ಫೆ- 16 ರಂದು ಮಂಡ್ಯದ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಣಿ ಮಾಡಿಸಿ ಕೊಂಡಿದ್ದರು.

ಇದಾದ ಬಳಿಕ ಫೆ-18 ರಂದು ಮಂಡ್ಯದ ಪಶ್ವಿಮ ಠಾಣೆಯ ಪೊಲೀಸರು ಠಾಣೆಯಲ್ಲಿ ಯುವತಿ ಪೋಷಕರು ದೂರು ನೀಡಿದ್ದಾರೆಂದು ಇಬ್ಬರನ್ನು ರಾಜಿ ಸಂಧಾನಕ್ಕೆಂದು ಠಾಣೆಗೆ ಕರೆಸಿದ್ರು. ಈ ವೇಳೆ ಯುವಕನ ಜೊತೆ ಮಾತ ನಾಡಿದ PSI ವೆಂಕಟೇಶ್ ತೇಜಸ್ ಗೆ ಇನ್ನೆರಡು ದಿನದಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರಿಗೂ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಸುವುದಾಗಿ ಹೇಳಿ ಯುವತಿನ್ನು ಪೋಷಕರ ಜೊತೆ ಕಳಿಸಿ ಕೊಟ್ಟಿದ್ದಾರೆ. ಪೊಲೀಸರ ಮಾತನ್ನು ನಂಬಿ ಮನೆಗೆ ಬಂದ ತೇಜಸ್ ಎರಡು ದಿನಗಳಾದ್ರು ಮದುವೆಯ ಯಾವುದೇ ಸೂಚನೆ ಕಾಣದ ಕಾರಣ ಠಾಣೆಗೆ ಬಂದು ವಿಚಾರಿಸಿದಾಗ ಪೊಲೀಸರು ಇದಕ್ಕೂನಮಗೂ ಸಂಬಂಧವಿಲ್ಲ ಎಂದು ತೇಜಸ್ ನನ್ನು ಕಳಿಸಿದ್ದಾರೆ.

ಇದನ್ನೂ ಓದಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕ ಉಪಚುನಾವಣೆಯ ದಿನಾಂಕ ಇಂದು ಸಂಜೆ ಘೋಷಣೆ

ಇದರಿಂದ ಕಂಗಾಲಾದ ತೇಜಸ್ ಪತ್ನಿಯ ಪೋನ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದೆ. ಇದರಿಂದ ಬೆದರಿದ ಆತ ಕುಣಿಗಲ್ನ ತನ್ನ ಪತ್ನಿಯ ಮನೆಗೆ ಹೋಗಿದ್ದಾನೆ. ಅಲ್ಲಿ ಕೂಡ ಮನೆ ಬೀಗ ಹಾಕಿದ್ದು ಪತ್ನಿ ಕಾಣದೆ ಕಂಗಾಲಾಗಿ ಕಡೆಗೆ ಮಂಡ್ಯ ಎಸ್ಪಿಗೆ ತನ್ನ ಪತ್ನಿಯನ್ನು ಹುಡುಕಿಕೊಡಿ ಎಂದು ತನ್ನ ಪೋಷಕರ ಜೊತೆ ಎಸ್ಪಿ ಕಚೇರಿಗೆ ಆಗಮಿಸಿ ಎಸ್ಪಿಗೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣಾಯ ಪೋಲೀಸರ ವಿರುದ್ದ  ದೂರು ನೀಡಿದ್ದಾನೆ.

ಒಟ್ಟಾರೆ ಮಂಡ್ಯ ಪೊಲೀಸರ ನಡೆಯಿಂದ  ನಡೆಯಿಂದಬಾಳಿ ಬದುಕಬೇಕಾದ ನವ ಜೋಡಿ ಇದೀಗ ಬೇರೆಯಾಗಿದ್ದು, ಪತ್ನಿ ಇಲ್ಲದೆ ಪತಿ ಕಂಗಾಲಾಗಿ ಪತ್ನಿಯನ್ನು ಹುಡುಕಿ ಕೊಡಿ ಅಂತಾ ಕಣ್ಣೀರಾಕ್ತಿದ್ದಾನೆ. ಹುಡುಗ ಬೇರೆ ಜಾ ತಿ ಎಂಬ ಕಾರಣಕ್ಕೆ ಪ್ರೀತಿಸಿ ಮದುವೆಯಾಗಿದ್ದ ಜೋಡಿಯನ್ನು ಮಂಡ್ಯ ಪಶ್ಚಿಮ ಠಾಣೆಯ ಪೊಲೀಸರು ಪ್ರಭಾವಕ್ಕೆ ಒಳಗಾಗಿ ಬೇರೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ್ರು ಪ್ರೀತಿಸಿ ಮದುವೆಯಾದ ಜೋಡಿಗಳನ್ನು ಒಂದು ಮಾಡಿ ಪ್ರೀತಿ ಪರ ನಿಲ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
Published by:MAshok Kumar
First published: