ಮಂಡ್ಯದ ಮೈಷುಗರ್ ಆರಂಭಕ್ಕಾಗಿ ಹಗ್ಗ ಜಗ್ಗಾಟ; ಸರ್ಕಾರವೇ ನಡೆಸುವಂತೆ ಪಟ್ಟು ಹಿಡಿದ ರೈತರು

ಸಕ್ಕರೆ ನಾಡು ಮಂಡ್ಯದಲ್ಲೀಗ ಮೈಷುಗರ್ ವಿಚಾರ ಸಖತ್ ಸದ್ದು ಮಾಡುತ್ತಿದೆ. ಕಾರ್ಖಾನೆ ಆರಂಭದ ವಿಚಾರದಲ್ಲಿ ಸರ್ಕಾರ ಮತ್ತು ಸಂಘಟನೆಗಳ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಈ ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಖಾಸಗಿ ಕಂಪೆನಿಗೆ ನೀಡುವ ಸರ್ಕಾರದ ನಿರ್ಧಾರಕ್ಕೆ ರೈತ ಸಂಘಟನೆಗಳ ಜೊತೆ ಜೆಡಿಎಸ್ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಷುಗರ್‌ ಕಾರ್ಖಾನೆ.

ಮೈಷುಗರ್‌ ಕಾರ್ಖಾನೆ.

  • Share this:
ಮಂಡ್ಯ: ಜಿಲ್ಲೆಯ ಮೈಷುಗರ್ ವಿಚಾರ ಇದೀಗ ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿದೆ. ಮೈಷುಗರ್ ಆರಂಭದ ವಿಚಾರದಲ್ಲಿ ಜಿಲ್ಲೆಯ ಜೆಡಿಎಸ್ ಜನಪ್ರತಿನಿಧಿಗಳು  ಹಾಗೂ ಕೆಲ ರೈತ ಸಂಘಟನೆಗಳು ಇದನ್ನು ಸರ್ಕಾರವೇ ಮುನ್ನಡೆಸಬೇಕು ಎಂದು ಒತ್ತಾಯಿಸುತ್ತಿದ್ದರೆ, ಜಿಲ್ಲೆಯ  ಉಸ್ತುವಾರಿ ಸಚಿವ ಹಾಗೂ ಸಂಸದೆ ಸುಮಲತಾ ಈ ಕಾರ್ಖಾನೆಯನ್ನು ಖಾಸಗಿಯವರ ಮೂಲಕ ಶತಾಯಗತ ಪ್ರಾರಂಭ ಮಾಡಿಸಲು  ಟೊಂಕಕಟ್ಟಿ ನಿಂತಿದ್ದಾರೆ‌. ಇದು  ಜಿಲ್ಲೆಯಲ್ಲಿ ಪ್ರತಿಷ್ಟೆಯ ವಿಷಯವಾಗಿದ್ದು ಇತ್ತಂಡಗಳ ನಡುವೆ ಇದೀಗ ಹಗ್ಗಜಗ್ಗಾಟ ಶುರು ವಾಗಿದೆ.

ಸಕ್ಕರೆ ನಾಡು ಮಂಡ್ಯದಲ್ಲೀಗ ಮೈಷುಗರ್ ವಿಚಾರ ಸಖತ್ ಸದ್ದು ಮಾಡುತ್ತಿದೆ. ಕಾರ್ಖಾನೆ ಆರಂಭದ ವಿಚಾರದಲ್ಲಿ ಸರ್ಕಾರ ಮತ್ತು ಸಂಘಟನೆಗಳ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಈ ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಖಾಸಗಿ ಕಂಪೆನಿಗೆ ನೀಡುವ ಸರ್ಕಾರದ ನಿರ್ಧಾರಕ್ಕೆ ರೈತ ಸಂಘಟನೆಗಳ ಜೊತೆ ಜೆಡಿಎಸ್ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಇದು ಸರ್ಕಾರಿ ಸ್ವಾಮ್ಯದಲ್ಲಿ‌ ಕಾರ್ಖಾನೆ ಹೀಗಾಗಿ ಸರ್ಕಾರವೇ ನಡೆಸುವಂತೆ  ಬಿಗಿ ಪಟ್ಟು ಹಿಡಿದಿವೆ. ಇದಕ್ಕಾಗಿ ಇಂದು ಸಹ ಪತ್ರಕರ್ತರ ಭವನದಲ್ಲಿ ಮಾಜಿ ಸಚಿವ ಕಾವೇರಿ ಹೋರಾಟಗಾರ ನೇತೃತ್ವದಲ್ಲಿ  ಕಾರ್ಖಾನೆ ವಿಚಾರದಲ್ಲಿ ವಿಚಾರ ಸಂಕಿರಣ ನಡೆಸಿ ಸರ್ಕಾರದ ನಡೆಗೆ ವಿರೋಧ ವ್ಯಕ್ತ ಪಡಿಸಿವೆ.

ಇನ್ನು  ಕಾರ್ಖಾನೆ ಆರಂಭದ ವಿಚಾರ ದಲ್ಲಿ ಮಂಡ್ಯ ಸಂಸದೆ ಸುಮಲತಾ ಹೇಗಾದರೂ ಮಾಡಿ ಈ ಬಾರಿ ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಈ ವರ್ಷದಿಂದಲೇ ಜಿಲ್ಲೆಯ ರೈತರ ಕಬ್ಬು ಅರೆಯಲು O&Mನಲ್ಲೆ (Operations and Maintenance)ಕಾರ್ಖಾನೆ ಆರಂಭಿಸಲು ಒತ್ತಾಯಿಸಿದ್ದಾರೆ.

ಇನ್ನೇನು ಕಾರ್ಖಾನೆ  ಆರಂಭವಾಗುವ ಹೊತ್ತಿನಲ್ಲಿ ಖ್ಯಾತೆ ತೆಗೆದರುವ ಸಂಘಟನೆಗಳ ವಿರುದ್ದ ಸುಮಲತಾ ಕಿಡಿ ಕಾರಿದ್ದಾರೆ. "ಇಂತಹ ವರ್ತನೆಗಳಿಂದಲೇ ಜಿಲ್ಲೆಯಲ್ಲಿ ಉದ್ಯಮಿಗಳು ಬಂಡವಾಳ ಹೂಡಲು  ಹಿಂಜಿರಿಯುತ್ತಿದ್ದಾರೆ. ಇವರ ಪ್ರತಿಭಟನೆಯಿಂದ ಜನರಲ್ಲಿ ಗೊಂದಲ ಮೂಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸಚಿವ ನಾರಾಯಣಗೌಡ ಕೂಡ ಮಾತನಾಡಿ, "ಈ ಬಾರಿ ಕಾರ್ಖಾನೆಯನ್ನು O&Mನಲ್ಲಿ ಆರಂಭಿಸಲಿದ್ದೇವೆ. ಇದರಲ್ಲಿ ಯಾರು ರಾಜಕಾರಣ ಮಾಡಬಾರದು. ರೈತರ ಸಮಸ್ಯೆ ಬಗೆಹರಿಸೋಣ" ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಬಾಯಿ ಬಿಟ್ಟರೆ ಬಣ್ಣಗೇಡು, ಕೈಲಾಗದ ನಾಯಕ ಗೋಲಾಟದಂತಿದೆ ಪ್ರಧಾನಿ ಮೋದಿ ಭಾಷಣ; ಸಿದ್ದರಾಮಯ್ಯ ಕಿಡಿ

ಒಟ್ಟಾರೆ ಮಂಡ್ಯ ಮೈಷುಗರ್ ಕಾರ್ಖಾನೆ ಆರಂಭ ವಿಚಾರ ಇದೀಗ ಜಿಲ್ಲೆಯಲ್ಲಿ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಅತ್ತ ಜೆಡಿಎಸ್‌ ಜನ ಪ್ರತಿನಿಧಿಗಳ ಜೊತೆ ಕೈ ಜೋಡಿಸಿ ವಿರೋಧ ವ್ಯಕ್ತಪಡಿಸುತ್ತಿರುವ ರೈತ ಸಂಘಟನೆಗಳಿಗೆ ಸೆಡ್ಡು ಹೊಡೆಯಲು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಮತ್ತು ಸಂಸದೆ ಸುಮಲತಾ  ಟೊಂಕ ಕಟ್ಟಿ ನಿಂತಿದ್ದಾರೆ. ಈ ನಡುವೆ ಕಾರ್ಖಾನೆ  ಆರಂಭವಾಗುತ್ತಾ? ಅಥವಾ ಮತ್ತೆ ಇಂತಹ ಹೋರಾಟ ವಿರೋಧದ ಮೂಲಕ ನಿಲ್ಲುತ್ತಾ? ಎಂಬುದನ್ನು ಕಾದು ನೋಡಬೇಕಿದೆ.
First published: