HOME » NEWS » District » MANDYA MLA M SRINIVAS BECOMES EMOTIONAL SEEING HIS STATUE BUILT BY FANS RGM SNVS

ಬದುಕಿರುವಾಗಲೇ ಅಭಿಮಾನಿಗಳು ನಿರ್ಮಿಸಿದ ಕಂಚಿನ ಪುತ್ಥಳಿ ಕಂಡು ಭಾವುಕರಾದ ಮಂಡ್ಯ ಶಾಸಕ ಎಂ ಶ್ರೀನಿವಾಸ್

ಮಂಡ್ಯ ಶಾಸಕ ಎಂ ಶ್ರೀನಿವಾಸ್ ಅವರು ತಾವು ಬದುಕಿರುವಾಗಲೇ ಅಭಿಮಾನಿಗಳ ಅಭಿಮಾನ ಕಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ತಮ್ಮದೇ ಪುತ್ಥಳಿಯನ್ನು ಅವರು ಅನಾವರಣಗೊಳಿಸುವ ಸೌಭಾಗ್ಯ ಪಡೆದಿದ್ದಾರೆ.

news18-kannada
Updated:January 9, 2021, 1:37 PM IST
ಬದುಕಿರುವಾಗಲೇ ಅಭಿಮಾನಿಗಳು ನಿರ್ಮಿಸಿದ ಕಂಚಿನ ಪುತ್ಥಳಿ ಕಂಡು ಭಾವುಕರಾದ ಮಂಡ್ಯ ಶಾಸಕ ಎಂ ಶ್ರೀನಿವಾಸ್
ಎಂ ಶ್ರೀನಿವಾಸ್ ಪುತ್ಥಳಿ
  • Share this:
ಮಂಡ್ಯ: ಯಾವುದೇ ವ್ಯಕ್ತಿಯ ಮರಣದ ಬಳಿಕ ಅಭಿಮಾನಿಗಳು ಅವರ ಪುತ್ಥಳಿ ನಿರ್ಮಿಸಿ ಗುಡಿ ಕಟ್ಟಿ ಅಭಿಮಾನ ತೋರೋದು ಸಹಜ. ಆದರೆ ಸಕ್ಕರೆನಾಡು ಮಂಡ್ಯದಲ್ಲಿ ವ್ಯಕ್ತಿ ಜೀವಂತ ಇರುವಾಗಲೇ ಆ ವ್ಯಕ್ತಿಯ ಕಂಚಿನ ಪುತ್ಥಳಿ‌ ನಿರ್ಮಿಸಿ ಅವರ ಹುಟ್ಟು ಹಬ್ಬದ ದಿನದಂದೇ ಅನಾವರಣ ಮಾಡಿ ಅವರ ಮೇಲಿರೋ ತಮ್ಮ ಅಭಿಮಾನ ಮೆರೆದಿದ್ದಾರೆ. ಆ ಮೂಲಕ ಆ ವ್ಯಕ್ತಿಗೆ ಗೌರವ ಸೂಚಿಸಿದ್ದಾರೆ.

ಶಾಸಕ ಎಂ ಶ್ರೀನಿವಾಸ್ ಅವರ 70 ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವ್ರ ಅಭಿಮಾನಿ ಬಳಗದವರು ಅವರ ಕಂಚಿನ ಪುತ್ಥಳಿ ನಿರ್ಮಿಸಿ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದ್ದಾರೆ. ಅವರ ಹುಟ್ಟೂರು ಹನಕೆರೆಯಲ್ಲಿ ಅವರೇ ಕಟ್ಟಿ ಬೆಳಸಿದ ವಿವೇಕ ವಿದ್ಯಾಸಂಸ್ಥೆಯ ಆವರಣದಲ್ಲಿ ಅವ್ರ ಕಂಚಿನ ಪ್ರತಿಮೆ ನಿರ್ಮಿಸಿ ಚುಂಚಶ್ರೀ ಸ್ವಾಮೀಜಿಗಳಿಂದ ಅನಾವರಣಗೊಳಿಸಿರೋದು ಮತ್ತೊಂದು ವಿಶೇಷ. ತಮ್ಮ ನೆಚ್ಚಿನ ನಾಯಕನ ಪುತ್ಥಳಿ ಯನ್ನು ಆದಿಚುಂಚನಗಿರಿಯ ಚುಂಚಶ್ರೀಗಳಾದ ನಿರ್ಮಲಾನಂದ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ  ಶುಕ್ರವಾರ ಅನಾವರಣಗೊಳಿಸಿ ಸ್ವಾಮೀಜಿಗಳಿಂದಲೂ ಕೂಡ ತಮ್ಮ ನೆಚ್ಚಿನ ನಾಯಕನನ್ನು ಸನ್ಮಾಸಿದ್ದಾರೆ.

ಈ ಸಂಧರ್ಭದಲ್ಲಿ ಮಾತನಾಡಿದ ಸ್ವಾಮೀಜಿಗಳು, ಶಾಸಕ ಶ್ರೀನಿವಾಸ್ ಅವರ ಸಾಧನೆಗಳನ್ನು ಕೊಂಡಾಡಿ ಮೌನ ಸಾಧಕನಿಗೆ ಇದು ಅಭಿ ಮಾನಿಗಳಿಂದ ಸಂದ ಗೌರವ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಅಭಿಮಾನಿಗಳು ನಿರ್ಮಿಸಿರೋ ಪುತ್ಥಳಿ ಕಂಡು ಸ್ವತಃ ಶಾಸಕ ಶ್ರೀನಿವಾಸ್ ಅವರು  ಭಾವುಕರಾಗಿ ಹುಟ್ಟು ಹಬ್ಬದ ಸನ್ಮಾನ ಸಭೆಯಲ್ಲಿ ಕೇವಲ ಎರಡೇ ವಾಕ್ಯದಲ್ಲಿ ತಮ್ಮ ಭಾಷಣ ಮುಗಿಸಿ ಅಭಿಮಾನಗಳ ಋಣ ತೀರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ನಗರದಲ್ಲಿ ಸಮರ್ಪಕ ರಸ್ತೆ, ತ್ಯಾಜ್ಯ ವಿಲೇವಾರಿ, ಸೌಂದರ್ಯೀಕರಣಕ್ಕೆ ಗಮನ ನೀಡಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಒಟ್ಟಾರೆ, ಓರ್ವ ವ್ಯಕ್ತಿ ಸತ್ತ ನಂತರ ಅವರ ಅಭಿಮಾನಿಗಳ ಅಭಿಮಾನ ಎಂತಹದ್ದು ಎಂದು ಗೊತ್ತಾಗುತ್ತದೆ. ಆದರೆ, ಮಂಡ್ಯದ  ಶಾಸಕ ಶ್ರೀನಿವಾಸ್ ಅವರಿಗೆ ತಾವು ಜೀವಂತ ಇದ್ದಾಗಲೇ ತಮ್ಮ ಅಭಿಮಾನಿಗಳ ಪ್ರೀತಿ ಮತ್ತು ಅಭಿಮಾನ ಎಂತಹದ್ದು ಅನ್ನೋದು ಗೊತ್ತಾಗಿದೆ. ಅಭಿಮಾನಿಗಳಿಂದ ನಿರ್ಮಿತವಾದ ತಮ್ಮದೇ ಪ್ರತಿರೂಪದ ಕಂಚಿನ ಪ್ರತಿಮೆ ನೋಡುವ ಭಾಗ್ಯ ಸಿಕ್ಕಿದ್ದು ಈ ಜನನಾಯಕನ ಸೌಭಾಗ್ಯವೇ ಸರಿ‌.

ವರದಿ: ರಾಘವೇಂದ್ರ ಗಂಜಾಮ್
Published by: Vijayasarthy SN
First published: January 9, 2021, 1:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories