HOME » NEWS » District » MANDYA KAREKURA VILLAGERS PROTEST FOR GRAVEYARD SESR RGM

ಸ್ಮಶಾನ ಜಾಗ ಒತ್ತುವರಿ: ಚಟ್ಟದೊಂದಿಗೆ ಪ್ರತಿಭಟನೆ ನಡೆಸಿದ ಕಾರೇಕುರ ಗ್ರಾಮಸ್ಥರು

ಸ್ಮಶಾನ ಜಾಗದ ಒತ್ತುವರಿ ಮಾಡಿದ್ದ ವ್ಯಕ್ತಿ ಮೇಲಿನ‌ ನ್ಯಾಯಾಲಯದ ಮೊರೆ ಹೋಗಿದ್ದು,  ಸ್ಥಳೀಯ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ತಂದಿದ್ದಾರೆ

news18-kannada
Updated:January 20, 2021, 6:31 AM IST
ಸ್ಮಶಾನ ಜಾಗ ಒತ್ತುವರಿ: ಚಟ್ಟದೊಂದಿಗೆ ಪ್ರತಿಭಟನೆ ನಡೆಸಿದ ಕಾರೇಕುರ ಗ್ರಾಮಸ್ಥರು
ಸ್ಮಶಾನ ಜಾಗದ ಒತ್ತುವರಿ ಮಾಡಿದ್ದ ವ್ಯಕ್ತಿ ಮೇಲಿನ‌ ನ್ಯಾಯಾಲಯದ ಮೊರೆ ಹೋಗಿದ್ದು,  ಸ್ಥಳೀಯ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ತಂದಿದ್ದಾರೆ
  • Share this:
ಮಂಡ್ಯ (ಜ. 20): ಜನರು ಸಮಸ್ಯೆ ಎದುರಾದಾಗ ಪ್ರತಿಭಟನೆ ಮಾಡುವುದು ಸಹಜ. ತಮ್ಮ ಪ್ರತಿಭಟನೆಯ ಗಮನ ಸೆಳೆಯಲು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಶ್ರೀರಂಗಪಟ್ಟಣದ ತಾಲೂಕಿನ ಕಾರೇಕುರ ಗ್ರಾಮಸ್ಥರು ಸ್ಮಶಾನ ಜಾಗದ ವಿಚಾರವಾಗಿ ತಾಲೂಕು ಕೇಂದ್ರ ಪಟ್ಟಣದ ತಾಲೂಕು ಕಚೇರಿ ಮುಂದೆ ಚಟ್ಟ ದೊಂದಿಗೆ ಶವ ತಂದು ಪ್ರತಿಭಟನೆ ಮಾಡಿ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಕಾರೇಕುರ ಗ್ರಾಮದ ಜನರು ಬಹಳ ಹಿಂದಿನಿಂದಲೂ ಬೆಳಗೊಳ ಸರ್ವೆ‌‌ ನಂ‌ 342 ರಲ್ಲಿ ಅಂತ್ಯ ಸಂಸ್ಕಾರ  ಮಾಡುತ್ತಿದ್ದರು. ಆದರೆ   ಮೈಸೂರು  ಮೂಲದ ಮ್ಯಾಥ್ಯೂ ಎಂಬಾತ ಈ ಜಾಗ  ತನಗೆ ಸೇರಿದ್ದೆಂದು ಅತಿಕ್ರಮಿಸಿ ಬೇಲಿ ಹಾಕಿಕೊಂಡಿದ್ದ. ಈ ಹಿನ್ನೆಲೆ  ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ, ಕಡೆಗೆ ಸ್ಥಳೀಯ ನ್ಯಾಯಾಲಯದಲ್ಲಿ ಜನರ ಪರವಾಗಿ  ತೀರ್ಪು ನೀಡಿತು. ಇದರಿಂದ ಸ್ಮಶಾನದ  ಸಮಸ್ಯೆ ಬಗೆ ಹರಿದಿತ್ತು. ಎಂದಿನಂತೆ ಗ್ರಾಮದಲ್ಲಿ ಸತ್ತ ಜನರ ಅಂತ್ಯ ಸಂಸ್ಕಾರ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ  ಸ್ಮಶಾನ ಜಾಗದ ಒತ್ತುವರಿ ಮಾಡಿದ್ದ ವ್ಯಕ್ತಿ ಮೇಲಿನ‌ ನ್ಯಾಯಾಲಯದ ಮೊರೆ ಹೋಗಿದ್ದು,  ಸ್ಥಳೀಯ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ಇದೀಗ ಆ ಜಾಗದಲ್ಲಿ ಮತ್ತೆ ಬೇಲಿ ನಿರ್ಮಿಸಿಕೊಂಡಿದ್ದಾರೆ.

ಇದರಿಂದಾಗಿ ಗ್ರಾಮದ ಯಾರೇ ಸತ್ತರು ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದಂತೆ ಆಗಿದೆ. ಗ್ರಾಮದ ಮಹಿಳೆ  ಪುಟ್ಟಮ್ಮ ಎಂಬುವರು ಸಾವನ್ನಪ್ಪಿದಾಗ ಊರಿನ ಜನರು ಅಂತ್ಯ ಸಂಸ್ಕಾರಕ್ಕೆಂದು ಆ ಸ್ಮಶಾನ ಜಾಗಕ್ಕೆ ಕೊಂಡೊಯ್ದಗ ಅಡ್ಡಿ ಪಡಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಊರಿನ ಜನರು ಚಟ್ಟದ ಸಮೇತ ಶವವನ್ನು ವಾಹನದಲ್ಲಿ ಶ್ರೀರಂಗಪಟ್ಟಣದ ತಾಲೂಕು ಕಚೇರಿ ಮುಂದೆ ತಂದು  ಪ್ರತಿಭಟನೆ ಮಾಡಿದ್ದಾರೆ.   ಸ್ಮಶಾನ ಜಾಗ ಅತಿಕ್ರಮಿಸಿದ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಹಾಗೂ ಆ ಸ್ಮಶಾನ ಜಾಗವನ್ನು ಬಿಡಿಸಿಕೊಡಿಸುವಂತೆ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ  ತಹಶಿಲ್ದಾರ್ ಜಾಗ ಬಿಡಿಸಿಕೊಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಟ್ಟು ಸತ್ತ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ.

ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡು ಊರ ಜನರ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ಮಾಡಿದ ವ್ಯಕ್ತಿ ಯ ವಿರುದ್ದ ಜನರು ತಿರುಗಿ ಬಿದಿದ್ದಾರೆ. ಅಲ್ಲದೇ ಸಮಸ್ಯೆಯ ಗಮನ ಸೆಳೆಯಲು ಚಟ್ಟದ ಸಮೇತ ತಾಲೂಕು ಕಚೇರಿಗೆ ಬಂದು ಕಚೇರಿ ಮುಂದೆ ಪ್ರತಿಭಟನೆ ಮಾಡಿ ಕಡೆಗೂ ಅಧಿಕಾರಿ ಗಳಿಂದ  ಸಮಸ್ಯೆಗೆ ಪರಿಹಾರ ಕಂಡು ಕೊಂಡಿದ್ದಾರೆ.
Published by: Seema R
First published: January 20, 2021, 6:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories