ಮಂಡ್ಯ :ಸಕ್ಕರೆನಾಡು ಮಂಡ್ಯದಲ್ಲಿ ಬೇಬಿ ಬೆಟ್ಟದ ಅಕ್ರಮ ಕಲ್ಲು ಗಣಿಗಾರಿಕೆ ಸಾಕಷ್ಟು ಸದ್ದು ಮಾಡುತ್ತಿದೆ. ಬೇಬಿ ಬೆಟ್ಟದ ಗಣಿಗಾರಿಕೆ ಯಿಂದ KRS ಅಪಾಯವಿದೆ ಎಂದು ಈಗಾಗಲೇ ವರದಿ ಕೂಡ ಬಂದಿದೆ. ಈ ವರದಿಯಿಂದ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯ ಹಲವಾರು ಸಂಘಟನೆಗಳು ಇಲ್ಲಿನ ಅಕ್ರಮ ಕಲ್ಲುಗಣಿಗಾರಿಕೆ ನಿಷೇಧ ಮಾಡುವಂತೆ ಪ್ರತಿಭಟನೆ ಹೋರಾಟ ಮಾಡುತ್ತಲೇ ಇವೆ. ಜಿಲ್ಲಾಡಳಿತ ತಾತ್ಕಾಲಿಕ ನಿಷೇಧ ಹೇರಿದ್ರು, ಇಲ್ಲಿನ ಅಕ್ರ ಮ ಕಲ್ಲು ಗಣಿಗಾರಿಕೆ ಮಾತ್ರ ನಿಂತಿಲ್ಲ. ಕದ್ದು ಮುಚ್ಚಿ ರಾತ್ರಿ ವೇಳೆ ಅಕ್ರಮ ನಡೀತಿದೆ. ಇದ ಕ್ಕೆಲ್ಲ ಕಡಿವಾಣ ಹಾಕಲು ಜಿಲ್ಲಾಡಳಿತ ಬೇಬಿ ಬೆಟ್ಟವನ್ನು ಇದೀಗ ಇಸ್ರೋ ಕಣ್ಗಾವಲಿಗೆ ಒಳ ಪಡಿಸಲು ಮುಂದಾಗಿದೆ.
ಹೌದು! ಮಂಡ್ಯ ಜಿಲ್ಲೆಯ ರೈತರ ಜೀವ ನಾಡಿ KRS ಡ್ಯಾಂಗೆ ಗಣಿಗಾರಿಕೆಯಿಂದ ಅಪಾ ಯವಿದೆ ಎಂಬ ಮಾತುಗಳು ಹಲವು ದಿನಗ ಳಿಂದ ಕೇಳಿಬರುತ್ತಿದೆ. ಡ್ಯಾಂ ವ್ಯಾಪ್ತಿಯ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣ ನಿಷೇ ಧಿಸುವಂತೆ ಹೋರಾಟಗಳು ನಡೆಯುತ್ತಿವೆ. ಆದರೆ, ತಾತ್ಕಾಲಿಕ ನಿಷೇಧಾಜ್ಙೆ ನಡುವೆಯೂ ಬೇಬಿಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು. ಅಧಿಕಾರಿಗಳು ಗಣಿಧಣಿಗಳೊಂದಿಗೆ ಶಾಮೀಲಾಗಿ ರಾತ್ರೋ ರಾತ್ರಿ ಅಕ್ರಮ ಗಣಿ ಚಟುವಟಿಕೆಗೆ ಅವಕಾಶ ನೀಡಿದ್ದಾರೆಂದು ಸ್ಥಳೀಯ ಆರೋಪಿಸಿದ್ದಾರೆ.
ಪದೇ ಪದೇ ಸ್ಥಳೀಯರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಗಣಿಗಾರಿಕೆ ಮೇಲೆ ನಿಗಾವಹಿಸಲು ಜಿಲ್ಲಾಡಳಿತ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ. ಇಸ್ರೋ ಮ್ಯಾಪಿಂಗ್ ಮೂಲಕ ಗಣಿಗಾರಿಕೆ ಪ್ರಮಾಣ ವನ್ನ ಜಿಲ್ಲಾಡಳಿತ ಪತ್ತೆಹಚ್ಚಲಿದ್ದು ಅಕ್ರಮಗಳಿಗೆ ಕಡಿವಾಣ ಹಾಕಲಿದ್ದಾರೆ.
ಇನ್ನು ಇಸ್ರೋ ಮ್ಯಾಪಿಂಗ್ ಎಂಬುದು ಉಪ ಗ್ರಹ ಚಿತ್ರ ತಂತ್ರಜ್ಞಾನವಾಗಿದ್ದು.ಕಲ್ಲಿನ ಸ್ವರೂಪ, ಪ್ರಾಕೃತಿಕ ಬದಲಾವಣೆ,ಹವಾಮಾನ, ಕಲ್ಲುಗಣಿ ಗಾರಿಕೆ, ಅರಣ್ಯ ಪ್ರದೇಶ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚಿತ್ರ ಸಹಿತ ಮಾಹಿತಿ ಕಲೆ ಹಾಕಲು ಸಹಕಾರಿಯಾಗಲಿದೆ. ಇನ್ನು ಡಿಸಿ ವೆಂಕಟೇಶ್ ನೇತೃತ್ವದಲ್ಲಿ ನಡೆದ ಗಣಿ ಇಲಾಖೆ, ಅರಣ್ಯ ಇಲಾಖೆಗಳ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಇಸ್ರೋ ಮ್ಯಾಪಿಂಗ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಟಿಕ್ಟಾಕ್; ಸಿಇಒ ಹುದ್ದೆ ತ್ಯಜಿಸಿದ ಕೆವಿನ್ ಮೇಯರ್, ಸಿಬ್ಬಂದಿಗಳಿಗೆ ಪತ್ರ ಬರೆದು ವಿಷಾಧ
ಈಗಾಗಲೇ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಅಧಿಕಾರಿಗಳನ್ನು ಜಿಲ್ಲಾಡಳಿತ ಸಂಪರ್ಕಿಸಿ ದ್ದು.ಅವ್ರಿಂದ ಬೇಬಿಬೆಟ್ಟದ ಚಟುವಟಿಕೆಗಳ ಮಾಹಿತಿಯನ್ನ ಪ್ರತಿವಾರ ಚಿತ್ರ ಸಹಿತ ಪಡೆ ಯಬಹುದಾಗಿದೆ. ಇದರ ಜೊತೆಗೆ ಬೇಬಿಬೆಟ್ಟಕ್ಕೆ ಸಿಸಿ ಟಿವಿ ಅಳವಡಿಸಿ ಹೆಚ್ಚಿನ ಪೋಲೀಸ್ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ