ಬಾಗಿಲು ತೆರೆದು ವಾರವಾದರೂ ಭಕ್ತರಿಲ್ಲದೆ ಭಣಗುಡುತ್ತಿರುವ ಮಂಡ್ಯ ಜಿಲ್ಲೆಯ ಪ್ರಸಿದ್ದ ದೇಗುಲಗಳು!

ಕೊರೋನಾದಿಂದಾಗಿ ಎಲ್ಲಾ ದೇಗುಲಗಳಲ್ಲಿ ಭಕ್ತರಿಗೆ ಬರೀ ದರ್ಶನಕ್ಕೆ ಮಾತ್ರ ಅವಕಾಶವಿದೆ. ಯಾವುದೇ ಪೂಜೆ ಇಲ್ಲದೆ ಹಣ್ಣು-ಕಾಯಿ, ಹೂವಿಗೂ ನಿರ್ಬಂಧ ಹೇರಲಾಗಿದೆ. ಹೀಗಾಗಿ ದೇಗುಲದ ಮುಂಭಾಗ ಇದ್ದ ಪೂಜಾ ಸಾಮಾಗ್ರಿಯ ಅಂಗಡಿಗಳಲ್ಲಿ ವ್ಯಾಪಾರವಿಲ್ಲದೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಶ್ರೀರಂಗಪಟ್ಟಣದ ರಂಗನಾಥ  ದೇವಾಲಯ

ಶ್ರೀರಂಗಪಟ್ಟಣದ ರಂಗನಾಥ  ದೇವಾಲಯ

  • Share this:
ಮಂಡ್ಯ: ಕಳೆದ ವಾರ ಕೇಂದ್ರ ಸರ್ಕಾರ ದೇಗುಲಗಳ ಬಾಗಿಲು ತೆರೆಯಲು ಅನುಮತಿ ನೀಡಿದೆ. ದೇಗುಲಗಳ ಬಾಗಿಲು ತೆರೆದು ಒಂದು ವಾರ ಕಳೆದರೂ ಮಂಡ್ಯ ಜಿಲ್ಲೆಯ ದೇಗುಲಗಳು ಭಕ್ತರಿಲ್ಲದೆ ಭಣಗುಡುತ್ತಿವೆ. ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 300ಕ್ಕೂ ಹೆಚ್ಚಿದ್ದು, ಜನರಲ್ಲಿ ಕೊರೋನಾ ಆತಂಕ ಮನೆ ಮಾಡಿದ್ದು, ಬೆರಳೆಣಿಕೆಯಷ್ಟು ಭಕ್ತರು ಭಯದಲ್ಲೇ ‌ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.

ಹೌದು! ಕೊರೋನಾ ಲಾಕ್ಡೌನ್​ನಿಂದ ರಾಜ್ಯದಲ್ಲಿ ಎರಡೂವರೆ ತಿಂಗಳು‌ ದೇಗುಲಗಳು ಬಂದ್​ ಆಗಿದ್ದವು. ಕೇಂದ್ರ ಸರ್ಕಾರ ಇದೇ ಜೂನ್​ 8ರಿಂದ ದೇಗುಲಗಳು ಬಾಗಿಲು ತೆರಯಲು ಅನುಮತಿ‌ ನೀಡಿತ್ತು. ಅದರಂತೆ ಮಂಡ್ಯ ಜಿಲ್ಲೆಯಲ್ಲೂ ಜೂ.8ರಿಂದ ದೇಗುಲಗಳು ಬಾಗಿಲು ತೆರೆದಿವೆ. ಜಿಲ್ಲೆಯಲ್ಲಿ ಪ್ರಸಿದ್ದ ದೇಗುಲಗಳಾದ ಶ್ರೀರಂಗಪಟ್ಟಣದ ನಿಮಿಷಾಂಭ, ರಂಗನಾಥ, ಪಾಂಡವಪುರದ ಮೇಲುಕೋಟೆ ಚಲುವ ನಾರಾಯಣ ಹಾಗೂ ಕಿಕ್ಕೇರಿಯ ಸಾಸಲು ಗ್ರಾಮ ಸೋಮೇ ಶ್ವರ ದೇಗುಲಗಳು ಭಕ್ತರಿಲ್ಲದೆ ಭಣಗುಡುತ್ತಿವೆ. ಜಿಲ್ಲೆಯಲ್ಲಿ ಪ್ರಸಿದ್ದ ಎ ದರ್ಜೆಯ ಈ ದೇಗುಲಗಳಿಗೆ ಭಕ್ತರು ಕೊರೋನಾ ಭಯದಿಂದ ಬರದೆ ದೇಗುಲ ಖಾಲಿ ಖಾಲಿಯಾಗಿವೆ.

ಇನ್ನು ಕೊರೋನಾದಿಂದಾಗಿ ಜಿಲ್ಲೆಯ ದೇಗುಲಗಳಲ್ಲಿ ಬರೀ ದರ್ಶನ ಬಿಟ್ಟರೇ, ಮಂಗಳಾರತಿ, ಪ್ರಸಾದ ಪೂಜಾ ಸೇವೆಗಳಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಅವಕಾಶ ನೀಡಿಲ್ಲ. ಇದು ಭಕ್ತರಿಗೆ ಒಂದು ಕಡೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಅಲ್ಲದೆ ಗರ್ಭಗುಡಿಯೊಳಗೆ ಹೆಚ್ಚಿನ ಜನರು ಪ್ರವೇಶದಿಂದ ಸಾಮಾಜಿಕ ಅಂತರ ಇಲ್ಲದೆ ಕೊರೋನಾ ಹರಡುವ ಭಯ ಭಕ್ತರಿಗೆ ಹೆಚ್ಚಾಗಿದೆ. ಈ ಕಾರಣಕ್ಕಾಗಿ ದೇಗುಲಕ್ಕೆ ಬರುತ್ತಿರುವ ಬೆರಳೆಣಿಕೆಯ ಭಕ್ತರು ದೇಗುಲದ ಗೋಪುರದ ದ್ವಾರದಲ್ಲಿಯೇ ಪೂಜೆ ಸಲ್ಲಿಸುತ್ತಿದ್ದಾರೆ.

ಇದನ್ನು ಓದಿ: ಕೊರೋನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳಿಗೂ ಪಂಜಾಬ್ ಮಾದರಿಯಾಗಲಿ; ನರೇಂದ್ರ ಮೋದಿ

ಇನ್ನು ಕೊರೋನಾದಿಂದಾಗಿ ಎಲ್ಲಾ ದೇಗುಲಗಳಲ್ಲಿ ಭಕ್ತರಿಗೆ ಬರೀ ದರ್ಶನಕ್ಕೆ ಮಾತ್ರ ಅವಕಾಶವಿದೆ. ಯಾವುದೇ ಪೂಜೆ ಇಲ್ಲದೆ ಹಣ್ಣು-ಕಾಯಿ, ಹೂವಿಗೂ ನಿರ್ಬಂಧ ಹೇರಲಾಗಿದೆ. ಹೀಗಾಗಿ ದೇಗುಲದ ಮುಂಭಾಗ ಇದ್ದ ಪೂಜಾ ಸಾಮಾಗ್ರಿಯ ಅಂಗಡಿಗಳಲ್ಲಿ ವ್ಯಾಪಾರವಿಲ್ಲದೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ದೇಗುಲಗಳು ತೆರೆದರೂ ಕೊರೋನಾ ಆತಂಕದಿಂದ ಭಕ್ತರು ಮಾತ್ರ ದೇವಾಲಯದತ್ತ ಬರುತ್ತಿಲ್ಲ. ಭಕ್ತರಿಲ್ಲದೆ ದೇಗುಲಗಳ ಭಣಗುಡುತ್ತಿದ್ದು, ದೇಗುಲದ ಆದಾಯಕ್ಕೂ ಕತ್ತರಿ ಬಿದ್ದಿದೆ.
First published: