ಮಂಡ್ಯ ಜಿಲ್ಲೆಯ ದೇಗುಲಗಳ ಬಾಗಿಲು ಓಪನ್; ಭಕ್ತರಿಲ್ಲದೆ ಭಣಗುಡುತ್ತಿದೆ ನಿಮಿಷಾಂಭ ದೇವಾಲಯ

ಇನ್ನು ದೇಗುಲಗಳು‌ ಸೋಮವಾರದಿಂದ ತೆರೆಯುವ ಸುದ್ದಿ ತಿಳಿದು ಭಕ್ತರು ಈಗಾಗಲೇ ದೇವಾಲಯದ ಬಳಿ ಬಂದು ಬಾಗಿಲ ಬಳಿಯೇ  ದೇವರಿಗೆ ಕೈ ಮುಗಿದು ಕರ್ಪೂರ ಹಚ್ಚಿ ಪ್ರಾರ್ಥನೆಯನ್ನೂ ಮಾಡಿದ್ದಾರೆ. ದೇಗುಲಗಳ ಬಳಿ ಅಂಗಡಿಯರು ಸಿದ್ದತೆ ನಡೆಸಿದರೆ ಕೆಲವರು ದೇಗುಲಗಳ ಬಳಿ ಈಗಾಗಲೇ ಅಂಗಡಿ ತೆರೆದಿದ್ದಾರೆ. 

ಶ್ರೀರಂಗಪಟ್ಟಣದ ರಂಗನಾಥ  ದೇವಾಲಯ

ಶ್ರೀರಂಗಪಟ್ಟಣದ ರಂಗನಾಥ  ದೇವಾಲಯ

  • Share this:
ಮಂಡ್ಯ: ರಾಜ್ಯದಲ್ಲಿ ಇಂದಿನಿಂದ ದೇಗುಲಗಳ ಬಾಗಿಲು ತೆಗೆಯಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಕೇಂದ್ರದ ಆದೇಶ ಹೊರಬೀಳುತ್ತಿದ್ದಂತೆ ಮಂಡ್ಯ ಜಿಲ್ಲೆಯಲ್ಲೂ ಕಳೆದ ಎರಡೂವರೆ ತಿಂಗಳಿನಿಂದ ಮುಚ್ಚಿದ್ದ ಪ್ರಸಿದ್ದ ದೇವಾಲಯಗಳು ಕೂಡ  ಸೋಮವಾರದಿಂದ ದೇವಾಲಯದ ಬಾಗಿಲು ತೆರೆದಿವೆ.

ಶ್ರೀರಂಗಪಟ್ಟಣದ ಪ್ರಸಿದ್ಧ ನಿಮಿಷಾಂಭ ದೇವಾಲಯ 9 ಗಂಟೆಗೆ ಬಾಗಿಲು ತೆರೆಯಲಿದೆ.  ದೇಗುಲದ ಪ್ರವೇಶ ದ್ವಾರದ ಬಳಿ ಮಾವಿನ ತೋರಣ ಕಟ್ಟಿ ಸಿದ್ದತೆ ಮಾಡಲಾಗಿದೆ.  ದೇವಾಲಯದಲ್ಲಿ ಸಾಮಾಜಿಕ ಅಂತರಕ್ಕಾಗಿ ಸಾಲಿನಲ್ಲಿ ಬಾಕ್ಸ್ ಮಾರ್ಕ್ ಮಾಡಲಾಗಿದೆ. ಆದರೆ, ದೇವಾಲಯದ ಪ್ರಾಂಗಣದಲ್ಲಿ ದರ್ಶನಕ್ಕೆ ಕೇವಲ ಬೆರಳೆಣಿಕೆ ಮಂದಿಯಷ್ಟೇ ಬಂದಿದ್ದಾರೆ. ದೇವಾಲಯದ ಪ್ರಾಂಗಣದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿವೆ. ಕೇಂದ್ರದ ಮಾರ್ಗಸೂಚಿಯಂತೆ ದರ್ಶನಕ್ಕಷ್ಟೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಪೂಜೆ, ಸೇವೆ ಆರತಿ, ಪ್ರಸಾದ ತೀರ್ಥಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮಂಡ್ಯ ಜಿಲ್ಲೆಯ ಪ್ರಸಿದ್ದ ದೇಗುಲಗಳು ಸೋಮವಾರದಿಂದ ಬಾಗಿಲು ತೆರೆಯಲಿವೆ. ಈಗಾಗಲೇ ದೇವಾಲಯಗಳನ್ನು ಶುಚಿಗೊಳಿಸಲಾಗಿದ್ದು, ಸಾಮಾಜಿಕ ಅಂತರ ಮತ್ತು ಸ್ಯಾನಿಟೇಜ್ ವ್ಯವಸ್ಥೆ ಮಾಡಿಲಾಗಿದೆ. ಜಿಲ್ಲೆಯಲ್ಲಿ ಪ್ರಸಿದ್ದ ದೇಗುಲ ಎನಿಸಿರುವ ನಿಮಿಷಾಂಭ ದೇವಾಲಯದಲ್ಲಿ ಆಡಳಿತದ ಮಂಡಳಿ ಈಗಾಗಲೇ ಸಕಲ ಸಿದ್ದತೆ ಮಾಡಿದೆ. ಸಾಮಾಜಿಕ ಅಂತರಕ್ಕಾಗಿ ಮಾರ್ಕಿಂಗ್ ವ್ಯವಸ್ಥೆ, ಭಕ್ತರಿಗೆ ಕಡ್ಡಾಯ ಮಾಸ್ಕ್ ಮತ್ತು  ಸ್ಯಾನಿಟೇಜೆಶನ್ ವ್ಯವಸ್ಥೆ ಮಾಡಿದೆ.

ನಿಮಿಷಾಂಭ ದೇವಾಲಯ


ಇನ್ನು ಶ್ರೀರಂಗಪಟ್ಟಣದ ರಂಗನಾಥ  ದೇವಾಲಯದಲ್ಲಿ  ದೇಗುಲ ಶುಚಿಗೊಳಿಸಿದ್ದು, ಬರುವ ಭಕ್ತರಿಗೆ ಸ್ಯಾನಿಟೇಜಶ್ ವ್ಯವಸ್ಥೆ, ಮತ್ತು ಥರ್ಮಲ್ ಸ್ಕ್ರೀನಿಂಗ್ ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಗೋಪುರದ ಬಳಿಯೇ ಭಕ್ತರಿಗೆ ಕಾಲು ತೊಳೆದುಕೊಂಡು ಬರುವ ವ್ಯವಸ್ಥೆ ಮಾಡಿದ್ದು, ಬರೀ ದರ್ಶನಕ್ಕಷ್ಟೆ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನು ಓದಿ: ಭಾರತದಲ್ಲಿ ಕೋವಿಡ್​​-19: 2.5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ 7,117ಕ್ಕೆ ಏರಿಕೆ

ಇನ್ನು ದೇಗುಲಗಳು‌ ಸೋಮವಾರದಿಂದ ತೆರೆಯುವ ಸುದ್ದಿ ತಿಳಿದು ಭಕ್ತರು ಈಗಾಗಲೇ ದೇವಾಲಯದ ಬಳಿ ಬಂದು ಬಾಗಿಲ ಬಳಿಯೇ  ದೇವರಿಗೆ ಕೈ ಮುಗಿದು ಕರ್ಪೂರ ಹಚ್ಚಿ ಪ್ರಾರ್ಥನೆಯನ್ನೂ ಮಾಡಿದ್ದಾರೆ. ದೇಗುಲಗಳ ಬಳಿ ಅಂಗಡಿಯರು ಸಿದ್ದತೆ ನಡೆಸಿದರೆ ಕೆಲವರು ದೇಗುಲಗಳ ಬಳಿ ಈಗಾಗಲೇ ಅಂಗಡಿ ತೆರೆದಿದ್ದಾರೆ.
First published: