ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿ; ಒಬ್ಬರೂ ನಿರ್ದೇಶಕರಿಲ್ಲದ ಬಿಜೆಪಿಗೆ ಅಧಿಕಾರ ಭಾಗ್ಯ?

ನವೆಂಬರ್ 5ರ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದ ಬಿಜೆಪಿ ಈಗ ಅಧ್ಯಕ್ಷ ಸ್ಥಾನದ ಭಾಗ್ಯ ಗಿಟ್ಟಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿಯಲ್ಲಿ ಬಿಜೆಪಿ ಲಾಭ ಪಡೆದುಕೊಳ್ಳುತ್ತಿದೆ. ಬಹುಮತ ಇದ್ದರೂ ಕಾಂಗ್ರೆಸ್ ಅಧಿಕಾರದಿಂದ ದೂರವಾಗಬೇಕಿದೆ.

ಮಂಡ್ಯ ಡಿಸಿಸಿ ಬ್ಯಾಂಕ್

ಮಂಡ್ಯ ಡಿಸಿಸಿ ಬ್ಯಾಂಕ್

  • Share this:
ಮಂಡ್ಯ(ನ. 17): ಮಂಡ್ಯ ಡಿಸಿಸಿ ಬ್ಯಾಂಕ್​ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆಯಲಿರುವ ಚುನಾವಣೆ ತೀವ್ರ ಕುತೂ ಹಲ ಕೆರಳಿಸಿದೆ. ನಿರ್ದೇಶಕರ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದ ಬಿಜೆಪಿ ಪಕ್ಷ ಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿಯವ ಸಾಧ್ಯತೆ ದಟ್ಟವಾಗಿದೆ. ಅದಕ್ಕಾಗಿ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದ್ದು, ಜೆಡಿಎಸ್​ನವರು ರೂಪಿಸಿರುವ ರಣತಂತವನ್ನು ಕಾರ್ಯಗತಗೊಳಿಸಲು ಬಿಜೆಪಿ ಮುಂದಾಗಿದೆ. ಹೆಚ್ಚು ನಿರ್ದೇಶಕರನ್ನು ಹೊಂದಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ನಿರಾಸೆಯಾಗಿದೆ. ಬಿಜೆಪಿ ನಾಮನಿರ್ದೇಶನ ಮಾಡಿರುವ ಸಿ.ಪಿ. ಉಮೇಶ್ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನ ಸಿಗಲಿದೆ.

ನ 5 ರಂದು ಮಂಡ್ಯ DCCಬ್ಯಾಂಕ್​ನ 12 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರು ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣೆ ಮಾಡಿದರು. ಕಾಂಗ್ರೆಸ್​ಗೆ ಅಧಿಕಾರ ಕೊಡಿಸುವ ನಿಟ್ಟಿನಲ್ಲಿ ಮಾಜಿ ಸಚಿವ ನರೇಂದ್ರಸ್ವಾಮಿ ಖುದ್ದು ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಜೆಡಿಎಸ್​ನಿಂದ ಮಾಜಿ ಸಚಿವ ಪುಟ್ಟರಾಜು ತಮ್ಮ‌ ಪಕ್ಷದ ಪರವಾಗಿ ಬೆಂಬಲಿಗರನ್ನು ಕಣಕ್ಕಿಳಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್​ನ 8 ನಿರ್ದೇಶಕರು ಹಾಗೂ ಜೆಡಿಎಸ್​ನ ನಾಲ್ವರು ನಿರ್ದೇಶಕರು ಜಯಗಳಿಸಿದರು. ಕಾಂಗ್ರೆಸ್ ಬೆಂಬಲಿತ 8 ನಿರ್ದೇಶಕರ ಮೂಲಕ ಕೈ ಪಾಳಯಕ್ಕೆ ಅಧಿಕಾರ ಸಿಗುವುದು ಸ್ಪಷ್ಟವಾಗಿತ್ತು.

ಆದ್ರೆ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಸಿ. ಅಶ್ವಥ್ ಮನಸ್ತಾಪಗೊಂಡು ಜೆಡಿಎಸ್ ಪಕ್ಷದ ಮುಖಂಡರ ಸಖ್ಯಕ್ಕೆ ಬಂದಿದ್ದಾರೆ. ಜೆಡಿಎಸ್ ಮುಖಂಡರು ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಪ್ಪಿಸಿಲು ರಣತಂತ್ರವೊಂದನ್ನು‌ ರೂಪಿಸಿದ್ದಾರೆ. ಅದನ್ನು ಕಾರ್ಯಗತಗೊಳಿಸಲು ಸ್ವತಃ ಮಾಜಿ ಸಿಎಂ ‌ಕುಮಾರಸ್ವಾಮಿ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮೈತ್ರಿಯ ಮಾತುಕತೆ ನಡೆಸಿದ್ದಾರೆ. ಒಂದೂ ನಿರ್ದೇಶಕ ಸ್ಥಾನ ಗೆಲ್ಲದ ಬಿಜೆಪಿ ಪಕ್ಷ ಕೇವಲ ಸಹಕಾರ ಮಾಡಿದ್ರೆ DCC ಬ್ಯಾಂಕ್ ನ ಅಧ್ಯಕ್ಷಸ್ಥಾನದ ಅಧಿಕಾರ ಕೊಡುವುದಾಗಿ ಜೆಡಿಎಸ್ ನಾಯಕರು ರಣತಂತ್ರ ಮುಂದಿಟ್ಟಿದ್ದಾರೆ. ಇದಕ್ಕೆ ಬಿಜೆಪಿ ಕೂಡ ಒಪ್ಪಿಕೊಂಡಿದೆ.

ಇದನ್ನೂ ಓದಿ: ಹಂಪಿಯಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ; ಇದರ ಎತ್ತರ ಮತ್ತು ವೆಚ್ಚ ಎಷ್ಟು ಗೊತ್ತಾ?

ಹೇಗೆ ಸಾಧ್ಯ?

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ15 ಮತಬಲವಿದ್ದು,ಕಾಂಗ್ರೆಸ್ 8 ಸ್ಥಾನ ಗೆದಿದೆ. ಅವರ ಪೈಕಿ ಓರ್ವ ಅತೃಪ್ತ ನಿರ್ದೇಶಕ ಸಿ. ಅಶ್ಚಥ್ ಅವರು ಜೆಡಿಎಸ್​ಗೆ ಬಂದಿದ್ದಾರೆ. ಇದರಿಂದ ಕಾಂಗ್ರೆಸ್ ಸಂಖ್ಯೆ 7ಕ್ಕೆ ಕುಸಿಯುತ್ತದೆ. ಜೆಡಿಎಸ್ ಬಲ 5ಕ್ಕೆ ಏರುತ್ತದೆ. ಈ 5 ನಿರ್ದೇಶಕರೊಳಗೊಂಡಂತೆ ಸರ್ಕಾರದ ಒಬ್ಬ ನಾಮಿನಿ ಸದಸ್ಯ, ಒಬ್ಬ ಜಿಲ್ಲಾ ರಿಜಿಸ್ಟ್ರಾರ್ ಹಾಗೂ ಒಬ್ಬ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯ ಮತಗಳ ಮೂಲಕ 8 ಸ್ಥಾನಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ರಣತಂತ್ರ ಇದಾಗಿದೆ. ಅಶ್ವಥ್ ಅವರು ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಅವರ ಸಹೋದರರಾಗಿದ್ದಾರೆ.

ಸರ್ಕಾರದ ನಾಮಿನಿ ಮಾಡೋ ನಿರ್ದೇಶಕನಿಗೆ ಅಧ್ಯಕ್ಷ ಸ್ಥಾನ ನೀಡಿ ಜೆಡಿಎಸ್​ಗೆ ಉಪಾಧ್ಯಕ್ಷ ಸ್ಥಾನದ ಜೊತೆಗೆ ಜೆಡಿಎಸ್​ಗೆ ಬಂದಿರುವ ಸಿ. ಅಶ್ವಥ್ ಅವರಿಗೆ ಅಪೆಕ್ಸ್ ಬ್ಯಾಂಕ್ ನ್ಯಾಮಿನಿ ಮಾಡಿಸುವ ಫ್ಲ್ಯಾನ್ ರೂಪಿಸಿದೆ. ಇದೀಗ ಬಿಜೆಪಿಗೆ ಈ ಮೂಲಕ ಒಂದು ಸ್ಥಾನ ಗೆಲ್ಲದಿದ್ದರೂ ಕೇವಲ ಮೈತ್ರಿಗೆ ಮಂಡ್ಯ ಡಿಸಿಸಿ ಬ್ಯಾಂಕ್ ಅಧಿಕಾರ ಗದ್ದುಗೆ ಸಿಗುವುದು ನಿಶ್ಚಿತವಾಗಿದೆ.

ಇದನ್ನೂ ಓದಿ: ಅಂಬರೀಶ್ ಇರುವವರೆಗೂ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ; ಪ್ರತಾಪ್ ಸಿಂಹ ಹೇಳಿಕೆಗೆ ಸುಮಲತಾ ತಿರುಗೇಟು

ಸರ್ಕಾರ ಈ ಮುಂಚೆ ಕೆಆರ್ ಪೇಟೆ ತಾಲೂಕಿನ ಸಾಸಲು ಗ್ರಾಮದ ನಾಗೇಶ್ ಅವರನ್ನ ನಾಮನಿರ್ದೇಶನ ಮಾಡಿತ್ತು. ಇದೀಗ ಅವರನ್ನು ಬದಲಿಸಿ ಸಿ.ಪಿ. ಉಮೇಶ್ ಅವರನ್ನ ನಾಮಿನಿ ಮಾಡಿದೆ. ಉಮೇಶ್ ಅವರು ಮಾಜಿ ಸಿಎಂ ಎಸ್.ಎಂ. ಕೃಷ್ಣ ಮತ್ತು ಡಿಸಿಎಂ ಅಶ್ವಥ ನಾರಾಯಣ ಅವರ ಆಪ್ತರಾಗಿದ್ದಾರೆ. ಇಂದಿನ‌ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಕೂಡ ಉಮೇಶ್ ಅವರಿಗೆ ವರಿಷ್ಠರು ಸೂಚಿಸಿದ್ದಾರೆ. ಇದರ ಮದ್ಯೆ ನಿನ್ನೆ ಸಂಸದೆ ಸುಮಲತಾ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರೋದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಸಂಸದೆ ಈ ವಿಚಾರದಲ್ಲಿ ಮೈತ್ರಿ ಬೇಡವಂಬ‌ ಸಲಹೆ ನೀಡಿದ್ದರೆಂದು ಹೇಳಲಾಗುತ್ತಿದೆ. ಇವತ್ತು ಬಿಜೆಪಿ-ಜೆಡಿಎಸ್ ಮೈತ್ರಿ ನಿಶ್ಚಿತವಾಗುವುದರ ಮೂಲಕ ಜೆಡಿಎಸ್​ನ ಆತಂಕ ನಿವಾರಣೆ ಆಗಿದೆ.

ವರದಿ: ರಾಘವೇಂದ್ರ ಗಂಜಾಮ್
Published by:Vijayasarthy SN
First published: