HOME » NEWS » District » MANDYA CRIME MAN MURDERS WOMAN IN MANDYA FOR QUESTIONING HIS SEXUAL RELATIONSHIP WITH HER DAUGHTER IN LAW SCT RGM

Mandya Crime: ಮಂಡ್ಯದಲ್ಲಿ ಸೊಸೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಕ್ಕೆ ಪ್ರಶ್ನಿಸಿದ ಅತ್ತೆಯ ಬರ್ಬರ ಹತ್ಯೆ

Mandya Murder: ಆರೋಪಿ ವಾಸು ಕೊಲೆಯಾದ  ಮಹಿಳೆಯ ಸೊಸೆಯೊಂದಿಗೆ ಕಳೆದ ಐದಾರು ತಿಂಗಳಿನಿಂದ ಅನೈತಿಕ  ಸಂಬಂಧ ಇಟ್ಟುಕೊಂಡಿದ್ದು ಕೊಲೆಯಾದ ಮಹಿಳೆ  ಇಲ್ಲದ ವೇಳೆ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

news18-kannada
Updated:March 18, 2021, 8:31 AM IST
Mandya Crime: ಮಂಡ್ಯದಲ್ಲಿ ಸೊಸೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಕ್ಕೆ ಪ್ರಶ್ನಿಸಿದ ಅತ್ತೆಯ ಬರ್ಬರ ಹತ್ಯೆ
ಮಂಡ್ಯದಲ್ಲಿ ಕೊಲೆ ಮಾಡಿದ ಯುವಕ ವಾಸು
  • Share this:
ಮಂಡ್ಯ: ತನ್ನ ಸೊಸೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಪ್ರಶ್ನೆ ಮಾಡಿ ಬುದ್ದಿ ಹೇಳಿದ ಅತ್ತೆಯನ್ನು ಆ ವ್ಯಕ್ತಿ ಕೊಡಲಿಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಘಟ‌ನೆಯಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಹತ್ಯೆ ಮಾಡಿದ  ಆರೋಪಿ ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಹೌದು! ತನ್ನ ಸೊಸೆಯೊಡನೆ ಅನೈತಿಕ ಸಂಬಂಧ ಇಟ್ಟುಕೊಂಡು ಆಗಾಗ ಮನೆಗೆ ಬಂದು ಹೋಗುತ್ತಿದ್ದ ವ್ಯಕ್ತಿಯನ್ನು ಪ್ರಶ್ನೆ ಮಾಡಿ ಬುದ್ದಿ ಹೇಳಿದ ಕಾರಣಕ್ಕೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ  ಆ ವ್ಯಕ್ತಿ ಮಹಿಳೆಯನ್ನು ಕೊಡಲಿಯಿಂದ ಹೊಡೆದು ಸಾಯಿಸಿದ ಪ್ರಕರಣ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ‌. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು,ಕೊಲೆಗೈದು ಆರೋಪಿ ಪರಾರಿಯಾಗಿದ್ದಾನೆ. ಹುಣಸನಹಳ್ಳಿ ಗ್ರಾಮದ ದೊಡ್ಡ ತಾಯಮ್ಮ(55) ಕೊಲೆಯಾದ ಮಹಿಳೆಯಾಗಿದ್ದು, ಅದೇ ಗ್ರಾಮದ ವಾಸು ಎಂಬಾತ ಕೃತ್ಯ ಎಸಗಿ ತಲೆ ಮರೆಸಿಕೊಂಡಿದ್ದಾನೆ.

ಇದನ್ನೂ ಓದಿ: Gadag Crime: ಚೆಲುವೆ ಸಿಗದಿದ್ದಕ್ಕೆ ಚಿಕ್ಕಪ್ಪನನ್ನೇ ಹತ್ಯೆ ಮಾಡಿದ ಯುವಕ; ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಕಗ್ಗೊಲೆ!

ಆರೋಪಿ ವಾಸು ಕೊಲೆಯಾದ  ಮಹಿಳೆಯ ಸೊಸೆಯೊಂದಿಗೆ ಕಳೆದ ಐದಾರು ತಿಂಗಳಿನಿಂದ ಅನೈತಿಕ  ಸಂಬಂಧ ಇಟ್ಟುಕೊಂಡಿದ್ದು ಕೊಲೆಯಾದ ಮಹಿಳೆ  ಇಲ್ಲದ ವೇಳೆ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಅಕ್ಕಪಕ್ಕದ ಜನರಿಂದ ಈ ವಿಷಯ ತಿಳಿದು ಕೊಲೆಯಾದ ಮಹಿಳೆ ರಾತ್ರಿ ವಾಸು ಮನೆಗೆ ಬಂದಿದ್ದ ವೇಳೆ  ಪ್ರಶ್ನೆ ಮಾಡಿ ಬುದ್ದಿ ಹೇಳಿ ಸೊಸೆಗೆ ತರಾಟೆ ತೆಗೆದುಕೊಂಡಿದ್ದಳು. ಈ ವೇಳೆ ಆಕ್ರೋಶಗೊಂಡ ಆರೋಪಿ ವಾಸು ಸ್ಥಳದಲ್ಲೆ ಇದ್ದ ಕೊಡಲಿಯಿಂದ ದೊಡ್ಡ ತಾಯಮ್ಮನ ಮೇಲೆ ಹಲ್ಲೆ ನಡೆಸಿ ಕೊಡಲಿಯಿಂದ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಮಹಿಳೆ ಸ್ಥಳದಲ್ಲೆ ಸಾವನ್ನಿಪ್ಪಿದ್ದು, ಆರೋಪಿ‌ ಕೃತ್ಯ ಎಸಗಿದ ಬಳಿಕ ನಾಪತ್ತೆಯಾಗಿ ತಲೆ ಮರೆಸಿಕೊಂಡಿದ್ದಾನೆ.

ಇನ್ನು, ಈ ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಖುದ್ದು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿ ಕೊಲೆಗೈದು ಪರಾರಿಯಾಗಿರೋ ವ್ಯಕ್ತಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು, ಮೃತನ ಶವವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿ ಕರಿಗೆ ಶವವನ್ನು ಹಸ್ತಾಂತರಿಸಿದ್ದಾರೆ.

ಒಟ್ಟಾರೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ K.R.ಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಕೊಲೆ ಗೈದು ತಲೆ ಮರೆಸಿಕೊಂಡಿರೋ ಆರೋಪಿ ವಾಸುಗಾಗಿ ಶೋಧ ಕಾರ್ಯ ಮುಂದುವರೆಸಿ ಬಲೆ ಬೀಸಿದ್ದಾರೆ.(ವರದಿ: ರಾಘವೇಂದ್ರ ಗಂಜಾಂ)
Published by: Sushma Chakre
First published: March 18, 2021, 8:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories