Mandya Crime: ಐವರ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್​; ತಂಗಿಯ ಗಂಡನ ಮೋಹಕ್ಕೆ ಬಿದ್ದ ಅಕ್ಕನಿಂದಲೇ ಕೃತ್ಯ

ಇದೇ ಫೆಬ್ರವರಿ 6ರಂದು ಮಂಡ್ಯದ ಕೆಆರ್​​ಎಸ್​​​ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿತ್ತು.  ಒಂದೇ ಕುಟುಂಬದ ಐವರು ಶವವಾಗಿ ಮಲಗಿದ್ದರು. ಮಹಿಳೆ ಹಾಗೂ ನಾಲ್ಕು  ಮಕ್ಕಳು ಸೇರಿ ಐವರ ಕೊಲೆಯಾಗಿತ್ತು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಂಡ್ಯ(ಫೆ. 09): ಕೆಆರ್​ಎಸ್​​ನ(KRS) ಒಂದೇ ಕುಟುಂಬದ ಐವರ ಕೊಲೆ ಪ್ರಕರಣ ಮಂಡ್ಯ(Mandya) ಜನರನ್ನು ಬೆಚ್ಚಿ ಬೀಳಿಸಿತ್ತು. ಹತ್ಯೆ ಸಂಬಂಧ ಒಂದು ಸಣ್ಣ ಸುಳಿವೂ ಸಹ ಸಿಗದೇ ಪೊಲೀಸರು(Police) ತೀರಾ ತಲೆಕೆಡಿಸಿಕೊಂಡಿದ್ದರು. ಆದರೆ ಈಗ ಈ ಐವರ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಒಂದೇ ಕುಟುಂಬದ ಐವರ ಕೊಲೆಗೆ ಕಾರಣರಾದವರು ಯಾರು ಅಂತಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೊಲೀಸ್ ಇಲಾಖೆಗೆ ತಲೆನೋವಾಗಿದ್ದ ಈ ಕೊಲೆ ಪ್ರಕರಣವನ್ನು ಕೊನೆಗೂ ಭೇದಿಸಲಾಗಿದೆ. ಹಾಗಿದ್ರೆ ಐವರ ಕೊಲೆಗೆ ಯಾರು ಕಾರಣ ಅಂತೀರಾ? ಮುಂದೆ ಓದಿ.

  ಕೊಲೆಯಾದ ತಾಯಿ-ಮಕ್ಕಳು

  ಇದೇ ಫೆಬ್ರವರಿ 6ರಂದು ಮಂಡ್ಯದ ಕೆಆರ್​​ಎಸ್​​​ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿತ್ತು.  ಒಂದೇ ಕುಟುಂಬದ ಐವರು ಶವವಾಗಿ ಮಲಗಿದ್ದರು. ಮಹಿಳೆ ಹಾಗೂ ನಾಲ್ಕು  ಮಕ್ಕಳು ಸೇರಿ ಐವರ ಕೊಲೆಯಾಗಿತ್ತು. ತಾಯಿ ಲಕ್ಷ್ಮೀ (26) ಹಾಗೂ ಮಕ್ಕಳಾದ ರಾಜ್ (13), ಕೋಮಲ್ (7), ಕುನಾಲ್ (4), ಗೋವಿಂದ (8) ಕೊಲೆಯಾಗಿದ್ದರು.

  ಇದನ್ನೂ ಓದಿ: Bike on Fire: ಫೈನಾನ್ಸ್​ ಕಂಪನಿ ಕಿರುಕುಳಕ್ಕೆ ಬೇಸತ್ತು ಶೋರೂಂ ಎದುರು ಬೈಕ್​ಗೆ ಬೆಂಕಿ ಹಚ್ಚಿದ ವ್ಯಕ್ತಿ

  ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿ

  ಈ ಪ್ರಕರಣ ಮಂಡ್ಯ ಪೊಲೀಸರಿಗೆ ತೀರಾ ತಲೆನೋವು ತಂದಿತ್ತು. ಯಾಕೆಂದರೆ ಒಂದು ಸಣ್ಣ ಸುಳಿವೂ ಸಹ ಸಿಗದೇ ಪೊಲೀಸರು ಪರದಾಡಿದ್ದರು. ಈ ಹತ್ಯೆಯ ಸಂಚುಕೋರರನ್ನು ಪತ್ತೆ ಹಚ್ಚುವುದು ಹೇಗೆ ಎಂಬ ಪ್ರಶ್ನೆ ಪೊಲೀಸರ ಮನಸಲ್ಲಿ ಹುಟ್ಟಿತ್ತು. ಆದರೆ ಕೊಲೆಯಾದ ಎರಡೇ ದಿನಗಳಲ್ಲಿ ಪೊಲೀಸರು ಕೊಲೆಗಾರನನ್ನು ಹಿಡಿದು ಹಡೆಮುರಿ ಕಟ್ಟಿದ್ದಾರೆ.

  ಅಷ್ಟಕ್ಕೂ ಈ ಕೊಲೆ ಮಾಡಿದ್ದು ಯಾರು?

  ಲಕ್ಷ್ಮೀ(30) ಐವರ ಹತ್ಯೆಗೆ ಕಾರಣಳಾದ ಪಾತಕಿ. ಕೊಲೆಯಾದ ಮಹಿಳೆಯ ಗಂಡನ ಮೇಲೆ ಈಕೆಗೆ ಇತ್ತು ಕ್ರಶ್. ಆತನ‌ ಮೇಲಿನ ಪ್ರೀತಿಗೆ ಐವರನ್ನು ಕೊಲೆ‌‌ ಮಾಡಿದ್ದಳು ಈಕೆ. ಕೊಲೆ ಮಾಡಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಕೊಲೆಯಾದ ಲಕ್ಷ್ಮಿ(26) ಗಂಡ ಗಂಗಾರಾಮ್ ಜೊತೆ ಈಕೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆಕೆಯನ್ನು ಬಿಟ್ಟು ತನ್ನನ್ನ ಮದುವೆಯಾಗು ಅಂತ ಗಂಗಾರಾಮ್​​ನನ್ನು ಪೀಡಿಸುತ್ತಿದ್ದಳು ಎಂದೂ ಸಹ ತಿಳಿದು ಬಂದಿದೆ.  ಅದೇ ಮಹಿಳೆಯಿಂದ ಈ ಕೃತ್ಯ ನಡೆದಿದೆ.

  ತಂಗಿಯ ಗಂಡನ ಮೋಹಕ್ಕೆ ಬಿದ್ದ ಅಕ್ಕನಿಂದಲೇ ಕೃತ್ಯ

  ಹಾಗಿದ್ರೆ ಈ ಆರೋಪಿತೆ ಲಕ್ಷ್ಮೀ ಯಾರು? ಆಕೆಗೂ ಕೊಲೆಯಾದ ಮಹಿಳೆಯ ಗಂಡನಿಗೂ ಏನು ಸಂಬಂಧ ಅಂತೀರಾ? ಇಲ್ಲೇ ಇರೋದು ನೋಡಿ ಟ್ವಿಸ್ಟ್​. ಈ ಲಕ್ಷ್ಮೀ ಬೇರೆ ಯಾರೂ ಅಲ್ಲ. ಕೊಲೆಯಾದ ಲಕ್ಷ್ಮೀಯ ಅಕ್ಕ. ತಂಗಿಯ ಗಂಡನ ಮೋಹಕ್ಕೆ ಬಿದ್ದ ಆಕೆ ಕೊಲೆ ಎಸಗಿದ್ದಾಳೆ. ಈಕೆ ಆಂಧ್ರ ಪ್ರದೇಶದಲ್ಲಿ ವಾಸವಿದ್ದು, ಕಳೆದ 2 ತಿಂಗಳಿನಿಂದ ಮೈಸೂರಿನಲ್ಲಿ ವಾಸ ಮಾಡುತ್ತಿದ್ದಳು. ಅಂದು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಜನರ ಮಧ್ಯ ಅಳುತ್ತಾ ಕುಳಿತಿದ್ದಳು ಈ ಪಾತಕಿ.

  ಇದನ್ನೂ ಓದಿ: Kolar: ಕೋಣೆಯಿಲ್ಲ, ಸ್ನಾನಕ್ಕೆ ನೀರೂ ಇಲ್ಲ! ಚಿಕ್ಕ ತಿರುಪತಿಯಲ್ಲಿ ಭಕ್ತರ ಗತಿ ಗೋವಿಂದ ಗೋವಿಂದ

  ಸುತ್ತಿಗೆಯಿಂದ ಹಲ್ಲೆ ಮಾಡಿ ಕೊಲೆ

  ಗಂಡನ ಅಕ್ರಮ ಸಂಬಂಧ 5 ಜನರನ್ನು ಬಲಿ ಪಡೆದಿದೆ. ಫೆಬ್ರವರಿ 5 ರ ರಾತ್ರಿ ಮೃತ ಲಕ್ಷ್ಮೀ ಮನೆಗೆ ಈ ಹಂತಕಿ ಬಂದಿದ್ದಳು. ಜೊತೆಯಲ್ಲಿ ಊಟ ಮಾಡಿ ಎಲ್ರೂ ನಿದ್ರೆಗೆ ಜಾರಿಗೆ ಬಳಿಕ , ತಾನು ತಂದಿದ್ದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಲಕ್ಷ್ಮೀ ಮೇಲೆ ಹಲ್ಲೆ ಆಗ್ತಿದ್ದಂತೆ ಮಕ್ಕಳು ಎಚ್ಚರಗೊಂಡಿದ್ದಾರೆ. ಬಳಿಕ ಮಕ್ಕಳ ಮೇಲೂ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾಳೆ. ಸುತ್ತಿಗೆಯಿಂದ ಹಲ್ಲೆ ಮಾಡಿದ ಬಳಿಕವೂ ಲಕ್ಷ್ಮೀ ಕುತ್ತಿಗೆ ಹಿಸುಕಿ ಸಾಯಿಸಿದ್ದಾಳೆ.  ಐವರನ್ನ ಕೊಲೆಗೈದು 2-3 ಗಂಟೆ ಅದೇ ಮನೆಯಲ್ಲಿ ಕಾಲ ಕಳೆದಿದ್ದಾಳೆ ಕೊಲೆಗಾತಿ.

  ಬೆಳಗಿನ ಜಾವ 4 ಗಂಟೆ ಸಮಯದಲ್ಲಿ KRS ನಿಂದ ಬಸ್ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾಳೆ. ಬೆಳಿಗ್ಗೆ 10 ಗಂಟೆ ವೇಳೆಗೆ ತನಗೆ ಏನು ಗೊತ್ತಿಲ್ಲ ಎಂಬಂತೆ ಮತ್ತೆ ಕೆಆರ್​​ಎಸ್​​ಗೆ ಬಂದಿದ್ದಾಳೆ. ಮೃತರ ಮನೆ‌ ಮುಂದೆ ಕುಳಿತು ಗೋಳಾಡಿದ್ದಾಳೆ. ಕ್ಯಾಮೆರಾ ಕಂಡು ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದಾಳೆ. ಕ್ಯಾಮೆರಾ ದೂರ ತೆಗೆದುಕೊಂಡು ಹೋಗಿ ಎಂದು ಅವಾಜ್ ಹಾಕಿದ್ದಾಳೆ.

  ಗಂಡನ ಅಕ್ರಮ ಸಂಬಂಧವೇ ಕೊಲೆಗೆ ಕಾರಣ

  ಮೃತನ ಮಹಿಳೆ ಗಂಡನ ಲವ್ ಸ್ಟೋರಿ ಸುಳಿವಿನಿಂದ ಕೊಲೆ ಪ್ರಕರಣ ಬಯಲಾಗಿದೆ. ಮೃತ ಲಕ್ಷ್ಮೀ ಗಂಡ ಗಂಗಾರಾಮ್ ಜೊತೆ ಆರೋಪಿ ಲಕ್ಷ್ಮೀ ಅಕ್ರಮ ಸಂಬಂಧ ಹೊಂದಿದ್ದಳು. ಮದುವೆಯಾಗುವಂತೆ ಗಂಗಾರಾಮ್​​ನ್ನು ಪೀಡಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಅಕ್ರಮ ಸಂಬಂಧ ವಿಚಾರ ತಿಳಿದು ಗಂಗಾರಾಮ್ ಜೊತೆ ಪತ್ನಿ ಲಕ್ಷ್ಮೀ ಜಗಳವಾಡಿದ್ದಾಳೆ. ಜಗಳದ ಬಳಿಕ ಗಂಗಾರಾಮ್​ ಆರೋಪಿ ಲಕ್ಷ್ಮೀ‌ಯಿಂದ ಅಂತರ ಕಾಯ್ದುಕೊಂಡಿದ್ದ.  ಪತ್ನಿ ಸಾಯಿಸಿದ್ರೆ ಗಂಗಾರಾಮ್ ಜೊತೆ ಇರಬಹುದು ಎಂಬ ಕಾರಣಕ್ಕೆ ಹಂತಕಿ ಕೊಲೆ ಮಾಡಿದ್ದಾಳೆ. ಗಂಗಾರಾಮ್ ವ್ಯಾಪಾರಕ್ಕಾಗಿ ಹೊರ ರಾಜ್ಯಕ್ಕೆ ತೆರಳಿದ್ದ ವೇಳೆ ಈ ಕೃತ್ಯ ಎಸಗಿದ್ದಾಳೆ.
  Published by:Latha CG
  First published: