Lingayat Community; ಲಿಂಗಾಯತ ಪಂಚಮಸಾಲಿ ಸ್ವಾಮೀಜಿಗಳಲ್ಲಿ ಬಿರುಕು: ಮೂರನೇ ಪೀಠ ಸ್ಥಾಪನೆ ಮುನ್ಸೂಚನೆ ನೀಡಿದ ಮನಗುಳಿ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ!

ಮುಂದಿನ ದಿನಮಾನಗಳಲ್ಲಿ ಮೂರನೇ ಪೀಠವಾಗಬಹುದು. ಈಗಾಗಲೇ ಒಂಭತ್ತು ಜಿಲ್ಲೆಯಲ್ಲಿ ಸಂಘಟನೆ ಆರಂಭವಾಗಿದೆ. ಸಂಘಟನೆ ಮಾಡುತ್ತಿದ್ದೇವೆ. ಜನರ ಒತ್ತಡ ಬಂದರೆ ಪರ್ಯಾಯ ಪೀಠ ಖಚಿತ ಎನ್ನುವ ಮೂಲಕ ಸಮಾಜ ಸುಧಾರಣೆಗೆ ಸಭೆ ಎನ್ನುತ್ತಲೇ ಮೂರನೇ ಪೀಠದ ಸುಳಿವು ನೀಡಿದ್ದಾರೆ. ಅಲ್ಲದೇ ಮುಂದಿನ‌ ದಿನಮಾನಗಳಲ್ಲಿ ಏನು‌ ಬೇಕಾದರೂ ಆಗಬಹುದು ಎಂದಿದ್ದಾರೆ.

ಜಮಖಂಡಿ ನಗರದಲ್ಲಿ ಬುಧವಾರ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಸಭೆ ನಡೆಯಿತು.

ಜಮಖಂಡಿ ನಗರದಲ್ಲಿ ಬುಧವಾರ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಸಭೆ ನಡೆಯಿತು.

 • Share this:
  ಬಾಗಲಕೋಟೆ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ (Lingayat Panchamasali Community 2A Reservation Protest) ಮತ್ತೆ ಚುರುಕುಗೊಂಡ  ಬೆನ್ನಲ್ಲೇ  ಪಂಚಮಸಾಲಿ ಸ್ವಾಮೀಜಿಗಳಲ್ಲಿ (Panchamasali Swamiji) ಬಿರುಕು ಮೂಡಿದೆ.  ಜಿಲ್ಲೆಯ ಜಮಖಂಡಿ ನಗರದಲ್ಲಿ ಬುಧವಾರ  ಪಂಚಮಸಾಲಿ ಮಠಾಧೀಶರ ಒಕ್ಕೂಟದ ಸಭೆ ನಡೆಸಲಾಗಿದೆ. ಈ ವೇಳೆ ಪಂಚಮಸಾಲಿ‌ ಸಮಾಜದ ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಪರ್ಯಾಯ ಪೀಠದ ಬಗ್ಗೆ ಚರ್ಚೆ ಇಲ್ಲ ಎನ್ನುತ್ತಲ್ಲೇ ಮೂರನೇ ಪೀಠದ ಬಗ್ಗೆ  ಸುಳಿವು ನೀಡಿದ್ದಾರೆ.

  ಹೌದು, ಪಂಚಮಸಾಲಿ ಮಠಾಧೀಶರ ಒಕ್ಕೂಟದ  ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹರಿಹರ ಪೀಠದ ಮೊದಲ ಜಗದ್ಗುರು, ಮನಗುಳಿಯ ಮಹಾಂತ ಶಿವಾಚಾರ್ಯರು ಪಂಚಮಸಾಲಿ ಸಮಾಜದ ಐದು‌ ಪೀಠಗಳಾದ್ರೆ ತಪ್ಪೇನಿದೆ ಅಂತಿದ್ದರು. ಈಗಾಗಲೇ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಹಾಗೂ ಹರಿಹರ ಪೀಠದ ವಚನಾನಂದ ಶ್ರೀಗಳು ಏನು ಮಾಡುತ್ತಿದ್ದಾರೆ  ಅನ್ನೋದು ನಿಮಗೆ ಗೊತ್ತಿದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

  ಇದೇ ವೇಳೆ ಮುಂದಿನ ದಿನಮಾನಗಳಲ್ಲಿ ಮೂರನೇ ಪೀಠವಾಗಬಹುದು. ಈಗಾಗಲೇ ಒಂಭತ್ತು ಜಿಲ್ಲೆಯಲ್ಲಿ ಸಂಘಟನೆ ಆರಂಭವಾಗಿದೆ. ಸಂಘಟನೆ ಮಾಡುತ್ತಿದ್ದೇವೆ. ಜನರ ಒತ್ತಡ ಬಂದರೆ ಪರ್ಯಾಯ ಪೀಠ ಖಚಿತ ಎನ್ನುವ ಮೂಲಕ ಸಮಾಜ ಸುಧಾರಣೆಗೆ ಸಭೆ ಎನ್ನುತ್ತಲೇ ಮೂರನೇ ಪೀಠದ ಸುಳಿವು ನೀಡಿದ್ದಾರೆ. ಅಲ್ಲದೇ ಮುಂದಿನ‌ ದಿನಮಾನಗಳಲ್ಲಿ ಏನು‌ ಬೇಕಾದರೂ ಆಗಬಹುದು ಎಂದಿದ್ದಾರೆ.

  ಇನ್ನು 2ಎ ಮೀಸಲಾತಿ ಹೋರಾಟದ ವಿಚಾರಕ್ಕೆ ಮಾತ್ರ ಎಲ್ಲರು ಒಂದುಗೂಡಿ ಮುಖ್ಯಮಂತ್ರಿಗಳನ್ನ ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ. ಆದ್ರೆ, ಈಗ ಮೂರನೇ ಒಕ್ಕೂಟದ ಸ್ವಾಮೀಜಿಗಳು ಮುಂದಿನ ದಿನಮಾನಗಳಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಾಯ್ದು ನೋಡಬೇಕಿದೆ ಎಂದು ಅಡ್ಡಗೋಡೆ ಮೇಲೆ ದೀಪ‌ ಇಟ್ಟಂತೆ ಮಾತನಾಡಿದ್ದಾರೆ.

  ಇನ್ನು ಸ್ವಾಮೀಜಿಗಳ ನಡುವಿನ ಬಿರುಕಿನ ವಿಚಾರವಾಗಿ ಮಾತನಾಡಿದ ಅವರು, ಬಿರುಕು ಎನ್ನುವುದಕ್ಕೆ ಉದಾಹರಣೆ, ಪಂಚಪೀಠದಲ್ಲಿ 5 ಜನ ಜಗದ್ಗುರುಗಳಿದ್ದಾರೆ. ಅವರು ಬಂದಾಗ ಅವರವರ ಶಾಖಾ ಮಠದವರನ್ನ ಕರೆದು ಕಾರ್ಯಕ್ರಮ ಮಾಡ್ತಾರೆ. ಹಾಗೆ ನೀವೂ ನಮ್ಮ ಸಮಾಜದ ನಮ್ಮ ಸ್ವಾಮಿಜಿಗಳನ್ನ ಕರೆಯಿರಿ ಅಂತಾ ಯಾಕೇ ಹೇಳುವುದಿಲ್ಲ. ನೀವು ಒಬ್ಬರೆ ಬರ್ತಿರಿ. ನಾನು ಒಬ್ಬನೇ ಬೆಳಿಬೇಕು ಅನ್ನೋ ಭಾವನೆ ಯಾಕಿದೆ? ಜಗದ್ಗುರುಗಳು ಆದವರ ಬಳಿ ಇಂತಹ ಭಾವನೆಗಳಿರಬಾರದು ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಇನ್ನು ಮೊನ್ನೆಯಷ್ಟೆ ಅಥಣಿಯಲ್ಲಿ  ಮಾತನಾಡಿದ ಕೂಡಲ ಸಂಗಮ ಸ್ವಾಮೀಜಿ,  ಒಕ್ಕೂಟದಲ್ಲಿ 8 ಜನ ಇದ್ದಾರೋ 60 ಜನ ಇದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ನಾವು 8 ಜನವಿದ್ದಿವೋ 60 ಜನ ಇದ್ದಿವೋ ಅನ್ನೋದನ್ನ ಬರುವ ದಿನಗಳಲ್ಲಿ ಪ್ರದರ್ಶನ ತೋರಿಸುವ ಶಕ್ತಿಯಿದೆ  ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಟಾಂಗ್ ನೀಡಿದ್ದಾರೆ.

  ಇಂದಿನ ಸಭೆಯಲ್ಲಿ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿ ಬಬಲೇಶ್ವರ ಬ್ರಹನ್ಮಠದ ಮಹಾದೇಶ್ವರ ಶಿವಾಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಮನಗುಳಿ ಹಿರೇಮಠದ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಗಳನ್ನ ಆಯ್ಕೆ ಮಾಡಲಾಗಿದೆ.

  ಇದನ್ನು ಓದಿ: K Sudhakar; ರಾಜ್ಯದಲ್ಲಿ ಪ್ರತಿ ಬುಧವಾರ ಲಸಿಕಾ ಉತ್ಸವ, ಸೆಪ್ಟೆಂಬರ್​ನಲ್ಲಿ 1.50 ಕೋಟಿ ಜನರಿಗೆ ವ್ಯಾಕ್ಸಿನ್; ಸಚಿವ ಕೆ. ಸುಧಾಕರ್

  ಇಂದಿನ ಸಭೆಯಲ್ಲಿ  ಶ್ರೀ ಮಹಾದೇವ ಶಿವಾಚಾರ್ಯರು ಬ್ರಹನ್ಮಠ ಬಬಲೇಶ್ವರ,  ಶ್ರೀ ಗುರುಸಿದ್ಧ ಸ್ವಾಮೀಗಳು  ರೇವಣಸಿದ್ದೇಶ್ವರ ಮಠ ಬೆಂಡವಾಡ,  ಶ್ರೀ ಸಿದ್ದಲಿಂಗ ದೇವರು ಕಮರಿಮಠ ಜಕನೂರು-ಕುಂಚನೂರು, ಶ್ರೀ ಮಲ್ಲಿಕಾರ್ಜುನ ದೇವರು ಓಂಕುಮಾರ ಯೋಗಾಶ್ರಮ ಕಿತ್ತೂರು,  ಶ್ರೀ ಲಕ್ಷ್ಮಣ ಮುತ್ಯಾ ದರಿದೇವರು ಮಠ ಆಲಗೂರ,  ಶ್ರೀ ಈರಣ್ಣ ಶಾಸ್ರ್ತಿಗಳು ಆದ್ಯಾತ್ಮ ವಿದ್ಯಾಶ್ರಮ ಚಿಕ್ಕರೂಗಿ,  ಶ್ರೀ ಗುರುಬಸವ ಸ್ವಾಮೀಜಿ ಲಿಂಗಾಯತ ಧರ್ಮ ಪೀಠ ಬೆಳಗಾವಿ,  ಶ್ರೀ ಪ್ರಶಾಂತ ಮಹಾಸ್ವಾಮೀಜಿ ಮದಗೊಂಡೇಶ್ವರ ಸಿದ್ಧ ಸಂಸ್ಥಾನ ಮಠ ಸಂಕ,  ಶ್ರೀ ಸಿದ್ಧಾರೂಢ ಶರಣರು ಶ್ರೀಗುರುನಾಥಾರೂಡ ಮಠ ಕುಳಲಿ ಸೇರಿದಂತೆ ಕೂಡಲ ಸಂಗಮ ಪೀಠದ ಟ್ರಸ್ಟಿಗಳು ಹಾಗೂ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದರು.

  ವರದಿ: ಮಂಜುನಾಥ್ ತಳವಾರ
  Published by:HR Ramesh
  First published: