Mysore: ಮೃತ ಅಣ್ಣನ ಹೆಸರಿನಲ್ಲಿ 24 ವರ್ಷ ಕೆಲಸ ಮಾಡಿದ ಶಿಕ್ಷಕ ಅರೆಸ್ಟ್! ಕಳ್ಳಾಟವಾಡಿ ಸಿಕ್ಕಿಬಿದ್ದ ಮಾಸ್ಟರ್

ಮೃತಪಟ್ಟ ಅಣ್ಣನ ಹೆಸರಿನಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿದ್ದಾರೆ. 24 ವರ್ಷಗಳ ಕಾಲ ಅಣ್ಣನ ಹೆಸರಿನಲ್ಲಿ ಆರೋಪಿ ಲಕ್ಷಣೇಗೌಡ ಕಾರ್ಯ ನಿರ್ವಹಣೆ ಮಾಡಿದ್ದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಣಸೂರು : ಮೃತ ಸಹೋದರನ ಹೆಸರಿನಲ್ಲಿ ಶಿಕ್ಷನಾಗಿ 24 ವರ್ಷ ಕಾಲ ಸರ್ಕಾರಿ ಶಿಕ್ಷಕನಾಗಿ (Government Teacher) ಸೇವೆ ಸಲ್ಲಿಸುತ್ತಿರುವ ಘಟನೆ ಮಾಹಿತಿ ಹಕ್ಕಿನಲ್ಲಿ ಬಹಿರಂಗಗೊಂಡಿದ್ದು, ಇದೀಗ ಹುಣಸೂರು (Hunasuru) ನಗರ ಪೊಲೀಸರು (Police) ಆರೋಪಿ ನಕಲಿ ಶಿಕ್ಷಕನನ್ನು ಬಂಧಿಸಿದ್ದಾರೆ.  ಹುಣಸೂರು ತಾಲೂಕಿನ ಕಟ್ಟೆಮಾಳಲವವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(Primary School) 29 ವರ್ಷಗಳ ಹಿಂದೆ ಸಹಶಿಕ್ಷಕನಾಗಿ ನೇಮಕಗೊಂಡಿದ್ದ ಲೋಕೇಶ್ ಗೌಡ (Lokesh Gowda) ಹೆಸರಿನಲ್ಲಿ ಆತನ ಕಿರಿಯ ಸಹೋದರ ಲಕ್ಷ್ಮಣೇ ಗೌಡ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಅನುಮಾನಗೊಂಡ ಸಾಮಾಜಿಕ ಕಾರ್ಯಕರ್ತ ಹುಣಸೂರಿನ ಇಂಟೆಕ್ ರಾಜು ಅನುಮಾನ (Doubt) ವ್ಯಕ್ತಪಡಿಸಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ದಾಖಲಾತಿ ಪಡೆದ ನಂತರ ನಕಲಿ ಶಿಕ್ಷಕನ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ 2019 ರಲ್ಲಿ ದೂರು ಸಲ್ಲಿಸಿದ್ದರು.

ಅಣ್ಣನ ಜಾಗದಲ್ಲಿ ತಮ್ಮನ ಕೆಲಸ

ಮೂಲತಃ ಕೆ.ಆರ್. ನಗರ ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಲಕ್ಷ್ಮಣೇ ಗೌಡನ ಕುಟುಂಬ ವಾಸವಿದ್ದು ಈತನ ಹಿರಿಯ ಸಹೋದರ ಲೋಕೇಶ್ ಗೌಡ 1994-95 ರಲ್ಲಿ ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಮುನ್ನವೇ ಮೃತಪಟ್ಟರು. ಅಣ್ಣನಿಗೆ ಬಂದಿದ್ದ ನೇಮಕಾತಿ ಆದೇಶ ಪತ್ರದೊಂದಿಗೆ ಕೆಲಸಕ್ಕೆ ಹಾಜರಾದ ಲಕ್ಷ್ಮಣೇ ಗೌಡ ತಾನೇ ಲೋಕೇಶ್ ಗೌಡ ಎಂದು ಹೇಳಿಕೊಂಡು ಪಿರಿಯಾಪಟ್ಟಣ ತಾಲೂಕಿನ ಮದ್ದನಹಳ್ಳಿ ಗ್ರಾಮದ ಶಾಲೆಯಲ್ಲಿ ಕರ್ತವ್ಯ ಆರಂಭಿಸಿದ್ದ.

ನಂತರದ ವರ್ಷಗಳಲ್ಲಿ ಮೈಸೂರು ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಕೆಲಸ ನಿರ್ವಹಿಸಿ ಸರಕಾರದ ಕಣ್ಣಿಗೆ ಮಣ್ಣೇರಚಿ ನಂಜನಗೂಡು ತಾಲೂಕು, ಹುಣಸೂರು ತಾಲೂಕಿನ ಕಟ್ಟಮಾಳಲವಾಡಿ ನಂತರ ಹಿರಿಕ್ಯತನಹಳ್ಳಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿದ್ದ. ಈ ವೇಳೆ ಸಂಬಳ ಹಾಗೂ ಸರಕಾರದ ಎಲ್ಲಾ ಸವಲತ್ತುಗಳನ್ನು ಪಡೆದಿದ್ದ.

ಇದನ್ನೂ ಓದಿ: Accident: ಓವರ್ ಟೇಕ್ ಗುದ್ದಾಟ; ಪರಸ್ಪರ ಡಿಕ್ಕಿ ಹೊಡೆದು, ಪಲ್ಟಿಯಾಗಿ ಹೊತ್ತಿ ಉರಿದ ಲಾರಿಗಳು

ಮಾಹಿತಿ ಹಕ್ಕಿನಿಂದ ಬಹಿರಂಗ 

ಪತ್ರಕರ್ತ ಇಂಟೆಕ್ ರಾಜುಗೆ ಈತನ ಮೇಲೆ ಅನುಮಾನ ಮೂಡಿದೆ. ಮಾಹಿತಿ ಹಕ್ಕಿನ ಮೂಲಕ ಪಡೆದ ದಾಖಲೆಗಳನ್ನು ಕೆದಕಿದಾಗ ಅವರ ಅನುಮಾನ ನಿಜವಾಗಿದೆ. 2019 ರಲ್ಲಿ ಇಂಟೆಕ್ ರಾಜು ಶಿಕ್ಷಣ ಇಲಾಖೆ ಆಯುಕ್ತರು, ಉಪ ನಿರ್ದೇಶಕರು ಮತ್ತೊಂದೆಡೆ ಲೋಕಾಯುಕ್ತರಿಗೂ ದೂರು ಸಲ್ಲಿಸುತ್ತಾರೆ. ದೂರು ಸಲ್ಲಿಕೆಯಾದ ನಂತರ ತನಿಖೆ ನಡೆಸಲು ಕೆ,ಆರ್ ನಗರ ತಹಶೀಲ್ದಾರಿಗೆ ಡಿ.ಡಿ.ಪಿ.ಐ ಕೋರಿದ್ದರು. ಲಕ್ಷ್ಮಣೇ ಗೌಡರ ಕುಟುಂಬ ಮಾಹಿತಿ ನೀಡಲು ನಿರಾಕರಿಸುತ್ತಿರುವ ಬಗ್ಗೆ ವರದಿ ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೆ,ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆದರೆ 2020ರಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನೇ ಗಾಳಿಗೆ ತೂರಿದ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು.

ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಮತ್ತೆ ಲೋಕಾಯಕ್ತ ಅಧಿಕಾರಿಗಳು ಆರೋಪಿತ ಶಿಕ್ಷಕ ಲಕ್ಷ್ಮಣೇ ಗೌಡ ಮತ್ತು ದೂರುದಾರ ಇಂಟೆಕ್ ರಾಜು ಇವರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಇತ್ತ ಶಿಕ್ಷಣ ಇಲಾಖೆ ನೇಮಕಾತಿ ಪ್ರಾಧಿಕಾರದಲ್ಲೂ ವಿಚಾರಣೆ ನಡೆಸಲಾಯಿತು. ಈ ವೇಳೆ ಆರೋಪಿ ಲೋಕೇಶ್ ಗೌಡ ನೀಡಿದ್ದ ವಂಶ ವೃಕ್ಷದಲ್ಲಿ ಲಕ್ಷ್ಮಣೇ ಗೌಡ ಹೆಸರು ಕೈಬಿಟ್ಟಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರಣ ಕೇಳಿ ನೋಟಿಸ್​ ಜಾರಿ ಮಾಡಿದ್ದರು. ಸಮರ್ಪಕ ಉತ್ತರ ನೀಡುವ ಬದಲು ಲೋಕೇಶ್ ಗೌಡ ಇಲಾಖೆ ಅಧಿಕಾರಿಗಳ ವಿರುದ್ಧವೇ ಕ್ರಿಮಿನಲ್ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು.

ಇದನ್ನೂ ಓದಿ: Hassan: ನಗರದಲ್ಲಿ ಹೆಚ್ಚಾಯ್ತು ಗಂಧದ ಕಳ್ಳರ ಹಾವಳಿ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಸಂಚಾರ

ಪೊಲೀಸರ ವಶದಲ್ಲಿ ಆರೋಪಿ

ಪ್ರಕರಣದಲ್ಲಿ ಆರೋಪಿ ಸೂಕ್ತ ಮತ್ತು ಅಧಿಕೃತ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲನಾಗಿರುವುದು ಮತ್ತು ದೂರುದಾರರು ವ್ಯಕ್ತಪಡಿಸಿರುವ ಅನುಮಾನಗಳಲ್ಲಿ ನೈಜತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಮಾ.21ರಂದು ಪಿರಿಯಾಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಅಂದು ಮಧ್ಯಾಹ್ನ ನಕಲಿ ಶಿಕ್ಷಕನ ಆರೋಪ ಹೊತ್ತಿರುವ ಲಕ್ಷಣೇಗೌಡನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಾಗರಾಜ್‌ ತಿಳಿಸಿದ್ದಾರೆ.
Published by:Pavana HS
First published: