Crime News: ಅನೈತಿಕ ಸಂಬಂಧ ಬಿಟ್ಟಿದ್ದಕ್ಕೆ ಮಹಿಳೆ ಮೇಲೆ ಡೆಡ್ಲಿ ಅಟ್ಯಾಕ್; ಬಸ್ ಒಳಗೆ ಬಂದು ಚಾಕುವಿನಿಂದ ಇರಿದ ಕ್ರೂರಿ!

ತನ್ನ ಪತ್ನಿಗೂ ಹಾಗೂ ಕೊಲೆ ಮಾಡಲು ಬಂದ ಪ್ರವೀಣನಿಗೂ ಅನೈತಿಕ ಸಂಬಂಧ ಇತ್ತು. ನನ್ನ ಹೆಂಡತಿ ಅವನ ಸಂಪರ್ಕ ಬಿಟ್ಟಿದ್ದರಿಂದ ಈ ರೀತಿ ಆತ ಹಲ್ಲೆ‌ ನಡೆಸಿ, ಕೊಲೆ ಮಾಡಿದ್ದಾನೆ ಅಂತ ಸ್ವತಃ ವಂದನಾ ಗಂಡ ಮಹಾದೇವ ಸಂಕೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Belagavi Crime News ಚಿಕ್ಕೋಡಿ: ಆಕೆ ತನ್ನ ಮಗುವಿನ ಜನನ ಪ್ರಮಾಣ ಪತ್ರ ತರೋಕೆ ಅಂತ ತನ್ನೂರಿನಿಂದ ಪಟ್ಟಣಕ್ಕೆ ಬಂದಿದ್ದಳು.‌ ಬಂದ ಕೆಲಸ ಮುಗಿಸಿಕೊಂಡು ಶಿವ ಶಿವ ಅಂತ ಬಸ್ ಹತ್ತಿ ಊರಿನ ಕಡೆ ಪಯಣ ಬೆಳೆಸಿದ್ದಳು. ಇನ್ನೇನು ಊರು ಬಂದೆ ಬಿಡ್ತು ಅನ್ನುವಷ್ಟರಲ್ಲಿ ಮಧ್ಯದಾರಿಯಲ್ಲಿ ಅದೇ ಬಸ್ ಹತ್ತಿದ್ದ ಆಸಾಮಿ ಆಕೆಯ ಮೇಲೆ ಚಾಕುವಿನಿಂದ ಮನಸೋ ಇಚ್ಛೆ ಹಲ್ಲೆ (Man Sliced with a knife) ಮಾಡಿದ್ದ. ಸಹ ಪ್ರಯಾಣಿಕರು ಯಾರಾದರೂ ಹತ್ತಿರ ಬಂದರೆ ಅವರಿಗೆ ಚಾಕು ತೋರಿಸಿ, ಹೆದರಿಸಿ, ಆಕೆಯ ಮೇಲೆ ಆಮಾನುಷವಾಗಿ ಹಲ್ಲೆ ಮಾಡುವುದನ್ನು ಮುಂದುವರೆಸಿದ್ದ. ಅಷ್ಟಕ್ಕೂ ಹಲ್ಲೆಗೆ ಕಾರಣ ಏನು ಗೊತ್ತಾ? ಅಲ್ಲಿ ನಡೆದಿದ್ದಾದರೂ ಏನೂ ಅನ್ನುವ ಕುರಿತು ಇಲ್ಲಿದೆ ಕಂಪ್ಲೀಟ್ ಕಹಾನಿ.

ಮಹಿಳೆ ಮೇಲೆ ದಾಳಿ ನಡೆಸಿರುವ ಆರೋಪಿ.


ಹೌದು, ಇಂತಹದೊಂದು ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ (Hukkeri Taluk) ಬಾಡ ಮತ್ತು ಕೆ ಎಂ ಆಲೂರು ಮಾರ್ಗ ದಿನಂ ಪ್ರತಿ ಟ್ರಿಪ್ ಸರ್ವಿಸ್ ಮಾಡೋ ಬಸ್ ನಲ್ಲಿ. ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರೋ ಈ ಮಹಿಳೆಯ ಹೆಸರು ವಂದನಾ ಹಟ್ಟಿಕರ್ ಅಂತ. ಇದೇ ಹುಕ್ಕೇರಿ ತಾಲೂಕಿನ ಬಾಡ ಗ್ರಾಮದ ಹೆಣ್ಣುಮಗಳು. ಹುಕ್ಕೇರಿಗೆ ತನ್ನ ಮಗುವಿನ ಜನನ ಪ್ರಮಾಣ ಪತ್ರ ತಗೊಂಡು ವಾಪಸ್ ಊರಿಗೆ ಬರಲು ಬಸ್ ಹತ್ತಿದ್ದ ಈ ಹೆಣ್ಣುಮಗಳ ಮೇಲೆ ಚಿಕ್ಕೋಡಿ ತಾಲೂಕಿನ ಮಾಂಗನೂರು ಗ್ರಾಮದ ಪ್ರವೀಣ ಕಾಂಬಳೆ ಎಂಬಾತ ಮನಸೋ ಇಚ್ಛೆ ಹಲ್ಲೆ ಮಾಡತೊಡಗಿದ್ದ. ಬಸ್ ನಲ್ಲಿ ಈತ ಮಾಡಿದ ಹಲ್ಲೆಯನ್ನು ನೋಡಿ ಜನ ಭಯಭೀತರಾಗಿ ಬಸ್ ನಿಂದ ಜಿಗಿಯೋಕೆ ಶುರು ಮಾಡಿದರು.‌ ಅಷ್ಟೊತ್ತಿಗಾಗಲೇ ಬಸ್ ಚಾಲಕ ಬಸ್ ನಿಲ್ಲಿಸಿದ್ದ. ಆದರೆ ಈ ಪ್ರವೀಣ ಆಕೆಯ ಮೇಲೆ ಹಲ್ಲೆ ಮಾಡೋದು ಮಾತ್ರ ನಿಲ್ಲಿಸಿರಲಿಲ್ಲ. ಯಾರಾದ್ರೂ ಸಮೀಪ ಬಂದ್ರೆ ನಿಮ್ಮನ್ನೂ ನಾನು ಸುಮ್ಮನೆ ಬಿಡೊಲ್ಲ ಅಂತ ಕೈಲಿ ಚಾಕು ಹಿಡಿದು ಸಮೀಪ ಬಂದವರನ್ನೂ ಸಹ ಬೆದರಿಸಿದ್ದ.

ಹಲ್ಲೆಗೆ ಕಾರಣ ಏನು ಗೊತ್ತಾ?

ಅಷ್ಟಕ್ಕೂ ಈ ಹಲ್ಲೆಗೆ ಕಾರಣ ಏನು ಗೊತ್ತಾ.  ಕೊಲೆ ಮಾಡೊಕೆ ಬಂದ ಪ್ರವೀಣ ಹಾಗೂ ವಂದನಾ ಇಬ್ಬರೂ ಸಹ ಸಂಬಂಧಿಕರೆ ಅಂತೆ. ಇಬ್ಬರಿಗೂ ಸಹ ಮದುವೆಯಾಗಿದೆ. ಇಬ್ಬರಿಗೂ ಸಹ ಸುಂದರ ಸಂಸಾರವಿದೆ. ಹೀಗಿರುವಾಗ ಈ ಪ್ರವೀಣ ಯಾಕೆ ಈಕೆಯ ಮೇಲೆ ಹಲ್ಲೆ ಮಾಡೋಕೆ ಹಾಡಹಗಲಲ್ಲೆ ಕೈಲಿ ಚಾಕು ಹಿಡಿದು ತುಂಬಿದ ಬಸ್ ಹತ್ತಿ ಬಂದ ಅಂತ ಜನ ಕೂಡ ಕನ್ಪ್ಯೂಸ್ ಆಗಿದ್ರು. ಆದರೆ ಸಂಕೇಶ್ವರ ಠಾಣೆಗೆ ಸ್ವತಃ ವಂದನಾ ಗಂಡ ಮಹಾದೇವ ಕಂಪ್ಲೇಂಟ್ ನೀಡಿದ್ದು ತನ್ನ ಪತ್ನಿಗೂ ಹಾಗೂ ಕೊಲೆ ಮಾಡಲು ಬಂದ ಪ್ರವೀಣನಿಗೂ ಅನೈತಿಕ ಸಂಬಂಧ ಇತ್ತು. ನನ್ನ ಹೆಂಡತಿ ಅವನ ಸಂಪರ್ಕ ಬಿಟ್ಟಿದ್ದರಿಂದ ಈ ರೀತಿ ಆತ ಹಲ್ಲೆ‌ ನಡೆಸಿ, ಕೊಲೆ ಮಾಡಿದ್ದಾನೆ ಅಂತ ಸ್ವತಃ ವಂದನಾ ಗಂಡ ಮಹಾದೇವ ಸಂಕೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನು ಓದಿ: CM Visit To Chamarajanagara: ಚಾಮರಾಜನಗರಕ್ಕೆ ಭೇಟಿ ನೀಡಿ ಅಧಿಕಾರ ಕಳೆದುಕೊಂಡ ಸಿಎಂಗಳಿಗಿಂತ ಭೇಟಿ ನೀಡದೆ ಪದಚ್ಯುತಿಗೊಂಡ ಸಿಎಂಗಳೇ ಹೆಚ್ಚು!

ಮದುವೆ ಆಗಿ  ಇಬ್ಬರು ಮಕ್ಕಳಿರುವ ವಂದನಾ ಈ ಪ್ರವೀಣ ಜತೆ ಅನೈತಿಕ ಸಂಪರ್ಕ ಹೊಂದಿ ಈಗ ಅದೇ ಅಸಾಮಿಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಸಾವು- ಬದುಕಿನ‌ ಮಧ್ಯೆ ಹೋರಾಡುತ್ತಿದ್ದರೆ ಇತ್ತ ತನ್ನ ಸಂಸಾರದೊಂದಿಗೆ ಸುಖವಾಗಿರಬೇಕಿದ್ದ ಪ್ರವೀಣ ಪೊಲೀಸರ ಅತಿಥಿಯಾಗಿದ್ದು ಕಂಬಿ ಎಣಿಸುತ್ತಿದ್ದಾನೆ.‌ ಇವರಿಬ್ಬರ ಅನೈತಿಕ ಸಂಬಂಧದಿಂದ ಈಗ ಇಬ್ಬರ ಸಂಸಾರದಲ್ಲೂ ಬಿರುಗಾಳಿ ಎದ್ದಿದೆ.
Published by:HR Ramesh
First published: