Kodagu: ಕೊಡಗು ಜಿಲ್ಲೆಯ ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ಹತ್ಯೆಗೈದು ಕೊನೆಗೆ ತಾನು ನೇಣಿಗೆ ಶರಣಾದ ವ್ಯಕ್ತಿ

ಕಮಲಳನ್ನು ಹೊಳೆಗೆ ದೂಡಿದ್ದ ಮುತ್ತಾ ಅಷ್ಟಕ್ಕೆ ಸುಮ್ಮನಾಗಿಲ್ಲ. ಹೊಳೆಯಲ್ಲಿ ಕಡಿಮೆ ನೀರು ಇದ್ದಿದ್ದರಿಂದ ಅಲ್ಲಿಂದಲೂ ಆಕೆಯನ್ನು ಎತ್ತಿಕೊಂಡು  ಹೋಗಿ ಅಲ್ಲಿ ಮರವೊಂದಕ್ಕೆ ಆಕೆಯದ್ದೇ ಸೀರೆಯಿಂದಲೇ ನೇಣು ಬಿಗಿದು, ಬಳಿಕ ತಾನೂ ಅದೇ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಕೊಡಗು : ಕೊಡಗು ಜಿಲ್ಲೆ(Kodagu District)  ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮ ಪಂಚಾಯತಿಯ (Chembu Grama Panchayat) ರಾಮನಹಳ್ಳಿಯಲ್ಲಿ ಪಂಚಾಯಿತಿ ಸದಸ್ಯೆಯನ್ನು ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಂಬಂಧಿಕರ ಮಗುವಿನ ಬರ್ತಡೇಗೆ ಅಂತ ಹೋದ ಹೆಂಡತಿ ಹೆಣವಾಗಿ ಮರದಲ್ಲಿ ನೇತಾಡುತ್ತಿರುವುದನ್ನು ನೋಡಿ ಪತಿ ಕೇಶವ ಕಣ್ಣೀರಿಟ್ಟಿದ್ದಾರೆ. ಅಷ್ಟಕ್ಕೂ ಹೀಗೆ ಈ ಗ್ರಾಮ ಪಂಚಾಯಿತಿ ಸದಸ್ಯೆ ಕಮಲಳನ್ನು ಕೊಂದಿದ್ದಾರೂ ಯಾಕೆ ಎನ್ನೊ ಪ್ರಶ್ನೆಗೆ ಒಂದೊಂದೇ ಸುಳಿವು ಬಿಚ್ಚಿಕೊಳ್ಳುತ್ತವೆ.

ಅಷ್ಟಕ್ಕೂ ಕಮಲಗಳನ್ನು ಹೀಗೆ ಹೀನಾಯವಾಗಿ ಸಾಯಿಸಿ ತಾನೂ ನೇಣಿಗೆ ಕೊರಳೊಡ್ಡಿರೋ ಈ ಪಾಪಿ ಬೇರ್ಯಾರು ಅಲ್ಲ, ವರಸೆಯಿಂದ ಮೃತ ಕಮಲಗೆ ಚಿಕ್ಕಪ್ಪನೇ ಆಗಬೇಕಾಗಿರುವ 52 ವರ್ಷದ ಮುತ್ತು. ಬುಧವಾರ ಸಂಜೆ 7 ಗಂಟೆ ವೇಳೆಗೆ ಕಮಲ ತನ್ನ ಒಂಭತ್ತು ವರ್ಷದ ಮಗಳನ್ನು ಕರೆದುಕೊಂಡು ರಾಮನಹಳ್ಳಿಯ ಹೊಳೆಯಿಂದ ಆಚೆಗೆ ಇರುವ ಸಂಬಂಧಿಕರ ಮನೆಗೆ ಹೋಗೋದಕ್ಕೆ ಇದೇ ಸೇತುವೆಯನ್ನು ದಾಟುತ್ತಿದ್ದರು. ಹೊಳೆಯ ಮತ್ತೊಂದು ದಂಡೆಯಲ್ಲೇ ಇರುವ ಮನೆಯಿಂದ ಬಂದ ಈ ಪಾಪಿ ಮುತ್ತು ನೀನು ಇಲ್ಲಿ ಬರಲೇಬಾರದು. ನಿನ್ನನ್ನು ಸುಮ್ಮನೇ ಬಿಡೋದಿಲ್ಲ ಎಂದು ಹಿಡಿದು ಎಳೆದಾಡಿ ಹೊಳೆಗೆ ನೂಕೇ ಬಿಟ್ಟ ಎಂದು ಪ್ರತ್ಯಕ್ಷದರ್ಶಿ ಗಿರೀಶ್ ಹೇಳಿದ್ದಾರೆ. ಕಮಲಳ ಜೊತೆಯಲ್ಲೇ ಇದ್ದ ಗಿರೀಶ್ ಆಕೆಯನ್ನು ಯಾಕೆ ಹೀಗೆ ಎಳೆದಾಡ್ತೀಯಾ,  ಆಕೆಯ ಮೈ ಮುಟ್ಟಬೇಡ ಬಿಡು ಅಂತ ಮುತ್ತನನ್ನು ತಳ್ಳಲು ಮುಂದಾಗಿದ್ದಾನೆ. ಆದರೆ ಮೊದಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಮುತ್ತಾ ಮಚ್ಚನ್ನೂ ಜೊತೆಯಲ್ಲೇ ತಂದಿದ್ದನಂತೆ. ಯಾರದ್ರೂ ಅಡ್ಡ ಬಂದ್ರೆ ಕತ್ತರಿಸಿಬಿಡ್ತೇನೆ ಅಂತ ಮಚ್ಚು ತೋರಿಸಿ ಧಮ್ಕಿ ಹಾಕಿದ್ನಂತೆ. ಯಾವಾಗ ಮುತ್ತ ಮಚ್ಚು ಹಿಡಿದು ಎಗರಾಡಿದ್ನೋ ಜೊತೆಯಲ್ಲೇ ಇದ್ದ ಗಿರೀಶನಿಗೂ ಭಯವಾಗಿ ಸುಮ್ಮನಾಗಿದ್ದಾನೆ. ಅವರು ಸುಮ್ಮನಾಗುತ್ತದ್ದಂತೆ ಮುತ್ತಾ ಕಮಲಳನ್ನು ಹಿಡಿದು ಹೊಳೆಗೆ ದೂಡಿಯೇ ಬಿಟ್ಟಿದ್ದಾನೆ. ಅದು ನಿರ್ಜನ ಪ್ರದೇಶ ಆಗಿರೋದ್ರಿಂದ ಬೇರ್ಯಾರು ಸಹಾಯಕ್ಕೂ ಬಂದಿಲ್ಲ. ಈ ವೇಳೆ ಜೊತೆಯಲ್ಲಿದ್ದ ಕಮಲಳ ಒಂಭತ್ತು ವರ್ಷದ ಮಗಳು ಚೀರಾಡುತ್ತಾ ಅಲ್ಲಿಂದ ವಾಪಸ್ ತನ್ನ ಮನೆಗೆ ಓಡಿದ್ದಾಳೆ. ಮನೆಗೆ ಹೋಗಿ ತಂದೆ ಕೇಶವನಿಗೆ ಅಮ್ಮನನ್ನು ಮುತ್ತ ಹೊಳೆಗೆ ದೂಡಿರುವ ವಿಷಯ ತಿಳಿಸಿದ್ದಾಳೆ. ಅಷ್ಟೊತ್ತಿಗಾಗಲೇ ಕತ್ತಲೆಯೂ ಆವರಿಸಿದೆ. ಕತ್ತಲೆಯಲ್ಲೇ ಊರಿನವರೆಲ್ಲಾ ಹುಡುಕುತ್ತಾ ಹೋಗಿದ್ದಾರೆ. ಎಷ್ಟೇ ಹುಡುಕಿದ್ರೂ ಕಮಲ ಪತ್ತೇ ಆಗಿಲ್ಲ. ಸರಿರಾತ್ರಿವರೆಗೂ ಹುಡುಕಾಡಿದ ಗ್ರಾಮಸ್ಥರು ಬೆಳಿಗ್ಗೆ ನೋಡೋಣ ಅಂತ ಸುಮ್ಮನಾಗಿದ್ದಾರೆ.

ತನ್ನ ಪತ್ನಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಗಂಡ ಕೇಶವ ತನ್ನ ಗ್ರಾಮದವರೊಂದಿಗೆ ಗುರುವಾರ ಬೆಳಿಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಅಷ್ಟೊತ್ತಿಗಾಗಲೇ ಹೊಳೆಯಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಬೆಟ್ಟದ ತುದಿಯಲ್ಲಿ ಮರವೊಂದರಲ್ಲಿ ಇಬ್ಬರು ನೇಣು ಬಿಗಿದ  ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಮಲಳನ್ನು ಹೊಳೆಗೆ ದೂಡಿದ್ದ ಮುತ್ತಾ ಅಷ್ಟಕ್ಕೆ ಸುಮ್ಮನಾಗಿಲ್ಲ. ಹೊಳೆಯಲ್ಲಿ ಕಡಿಮೆ ನೀರು ಇದ್ದಿದ್ದರಿಂದ ಅಲ್ಲಿಂದಲೂ ಆಕೆಯನ್ನು ಎತ್ತಿಕೊಂಡು  ಹೋಗಿ ಅಲ್ಲಿ ಮರವೊಂದಕ್ಕೆ ಆಕೆಯದ್ದೇ ಸೀರೆಯಿಂದಲೇ ನೇಣು ಬಿಗಿದು, ಬಳಿಕ ತಾನೂ ಅದೇ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.

ಇದನ್ನು ಓದಿ: Crime News: ಗದಗ ಜಿಲ್ಲೆಯಲ್ಲಿ ಹೆಚ್ಚಿದ ಕಳ್ಳತನ; ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರದ ಸೋಗಿನಲ್ಲಿ ಕಳ್ಳಿಯರು ಬರ್ತಾರೆ ಎಚ್ಚರ..!

ಮುತ್ತಾ ಮೂರು ವರ್ಷಕ್ಕೂ ಮೊದಲು ಕಮಲ ಮತ್ತು ಆಕೆ ಪತಿ ಕೇಶವನೊಂದಿಗೆ ಚೆನ್ನಾಗಿಯೇ ಇದ್ನಂತೆ. ಕೇಶವನ ಮನೆಯಲ್ಲೇ ಹೊಲ ಗದ್ದೆಗಳ ಕೆಲಸವನ್ನೂ ಮಾಡಿಕೊಂಡು ತುಂಬಾ ಸಲಿಗೆಯಿಂದಲೇ ಇದ್ನಂತೆ. ಆದರೆ ಬರಬರುತ್ತಾ ಯಾಕೋ ಆತನ ವರ್ತನೆ ಸರಿಯಾಗಿರಲಿಲ್ವಂತೆ. ಕಮಲಳ ಮನೆಗೆ ಬೇರೆ ಯಾರೇ ಗಂಡಸರು ಬಂದರು ಆತ ಸಹಿಸಿಕೊಳ್ಳುತ್ತಿರಲಿಲ್ಲವಂತೆ. ಹೀಗಾಗಿ ಇತ್ತೀಚೆಗೆ ಜಗಳವಾಗಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತಂತೆ. ಕೊನೆಗೆ ಪೊಲೀಸರು ಕೂಡ ಆತನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಇನ್ಮುಂದೆ ಯಾವುದೇ ಕಾರಣಕ್ಕೂ ಕಮಲಳ ತಂಟೆಗೆ ಹೋಗದಂತೆ  ವಾರ್ನ್ ಮಾಡಿ ಕಳುಹಿಸಿದ್ದರಂತೆ. ಹೀಗಾಗಿ ಈ ದ್ವೇಷವೇ ಇಂತಹ ಹೀನಾಯ ಕೆಲಸಕ್ಕೆ ಇಳಿಸಿ ಬಿಟ್ಟಿದೆ ಎಂದು ಕಮಲಳ ಪತಿ ಕೇಶವ ಕಣ್ಣೀರಿಟ್ಟಿದ್ದಾರೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Published by:HR Ramesh
First published: