• ಹೋಂ
 • »
 • ನ್ಯೂಸ್
 • »
 • ಜಿಲ್ಲೆ
 • »
 • Attempted Theft: ಅಂಗನವಾಡಿ ಕಳ್ಳತನಕ್ಕೆ ಬಂದವ ಅಡುಗೆ ಮಾಡಿ ತಿಂದು, 3 ಪುಟಗಳ ಕಥೆ, ಕವನ ಬರೆದಿಟ್ಟು ಪರಾರಿಯಾದ

Attempted Theft: ಅಂಗನವಾಡಿ ಕಳ್ಳತನಕ್ಕೆ ಬಂದವ ಅಡುಗೆ ಮಾಡಿ ತಿಂದು, 3 ಪುಟಗಳ ಕಥೆ, ಕವನ ಬರೆದಿಟ್ಟು ಪರಾರಿಯಾದ

ಅಂಗನವಾಡಿ ಕಳ್ಳತನ

ಅಂಗನವಾಡಿ ಕಳ್ಳತನ

ಕಳ್ಳತನಕ್ಕೆ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಅಡುಗೆ ಮಾಡಿ ತಿಂದು, ನಂತರ ಅಲ್ಲಿದ್ದ ನೋಟ್ ಪುಸ್ತಕದಲ್ಲಿ ಕಥೆ, ಕವನ ಬರೆದು ಹೋಗಿದ್ದಾನೆ

 • Share this:

ಮಂಡ್ಯ (ಫೆ.23): ದರೋಡೆಗಾಗಿ (Robbery) ಅಂಗನವಾಡಿಗೆ ನುಗ್ಗಿದ ಕಳ್ಳನೋರ್ವ, ಕಳ್ಳತನಕ್ಕೆ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಅಡುಗೆ (Cooking) ಮಾಡಿ ತಿಂದು, ನಂತರ ಅಲ್ಲಿದ್ದ ನೋಟ್ ಪುಸ್ತಕದಲ್ಲಿ ಕಥೆ, ಕವನ (Story, Poetry) ಬರೆದು ಹೋಗಿದ್ದಾನೆ. ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದ ಅಂಗನವಾಡಿಯಲ್ಲಿ ಈ ಘಟನೆ ನಡೆದಿದೆ. ಕಳೆದ ರಾತ್ರಿ ಬೀಗ ಮುರಿದು ಹೆಬ್ಬಣಿ ಗ್ರಾಮದ ಅಂಗನವಾಡಿಗೆ ನುಗ್ಗಿದ ಖದೀಮ, ಕಳ್ಳತನ ಮಾಡಲು ವಸ್ತುಗಳನ್ನು ಹುಡುಕಾಡಿದ್ದಾನೆ.  ಅಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಅಲ್ಲೇ ವಾಸ್ತವ್ಯ ಹೂಡಿ ಅಂಗನವಾಡಿಯಲ್ಲಿ ಮಕ್ಕಳಿಗೆ ಇರೋ ಆಹಾರ ಪದಾರ್ಥದಲ್ಲೇ ಪುಳಿಯೋಗರೆ ತಯಾರಿಸಿ ತಿಂದಿದ್ದಾನೆ. ಬಳಿಕ ಅಲ್ಲೇ ಇದ್ದ ಪುಸ್ತಕದಲ್ಲಿ. ಕಥೆ, ಕವನ ಬರೆದಿಟ್ಟು ಪರಾರಿಯಾಗಿದ್ದಾನೆ.


ಕಳ್ಳನಿಗೆ ಅಂಗನವಾಡಿಯಲ್ಲಿ ಸಿಕ್ಕಿದ್ದು ಏನು?


ಆತ ಕಳ್ಳತನ ಮಾಡೋದಕ್ಕೆ ಅಂತಾನೇ ಅಂಗನವಾಡಿ ಬೀಗ ಒಡೆದು ಒಳ ನುಗ್ಗಿದ್ದ. ಮೂಲೆ ಮೂಲೆ ಜಾಲಾಡಿದ್ರೂ ಬೆಲೆ ಬಾಳುವ ವಸ್ತುಗಳು ಮಾತ್ರ ಆತನ ಕೈಗೆ ಸಿಗಲಿಲ್ಲ. ತಡರಾತ್ರಿಯಿಂದ ಬೆಳಗ್ಗೆವರೆಗೂ ಅಲ್ಲೇ ಠಿಕಾಣಿ ಹೂಡಿದ್ದ. ಅಂಗನವಾಡಿಯಲ್ಲಿ ಏನೂ ಸಿಕ್ಕಿಲ್ಲ. ಖಾಲಿ ಕೈಯಲ್ಲಿ ಹೋಗೊದು ಬೇಡ ಅಂತ ಹೊಟ್ಟೆ ತುಂಬ ತಿಂದು ಹೋಗಿದ್ದಾನೆ. ಅಲ್ಲೇ ಇದ್ದ ಸಾಮಾಗ್ರಿಗಳನ್ನು ಬಳಸಿ ರಾತ್ರಿ ಅಡುಗೆ ಮಾಡಿಕೊಂಡು ಊಟ ಮಾಡಿದ್ದಾನೆ. ನಂತರ ಅಲ್ಲೇ ಇದ್ದ ಪುಸ್ತಕದಲ್ಲಿ ಬರೋಬ್ಬರಿ 3 ಪುಟದಲ್ಲಿ ತನ್ನ ಅನಿಸಿಕೆಯನ್ನ ಕಥೆ, ಕವನ ರೂಪದಲ್ಲಿ  ಬರೆದಿಟ್ಟು ಹೋಗಿದ್ದಾನೆ.


ಇದನ್ನೂ ಓದಿ: Bengaluru: ದರೋಡೆಗೆ ಯತ್ನಿಸಿದ್ದ ಮೂವರು ಆರೋಪಿಗಳು ಅರೆಸ್ಟ್


ಪುಳಿಯೊಗ್ಗರೆ ಮಾಡಿ ತಿಂದ ಕಳ್ಳ


ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಗ್ರಾಮಸ್ಥರು ಕಳ್ಳ ಕೆಲಸ ನೋಡಿ ಅಶ್ಚರ್ಯ ಪಡ್ತಿದ್ದಾರೆ.  ಗ್ರಾಮದ ಅಂಗನವಾಡಿ ಕೇಂದ್ರದ ಬಾಗಿಲು ಮುರಿದು ಕಳ್ಳ  ಒಳನುಗ್ಗಿದ್ದಾನೆ ಬಾಗಿಲು ಬೀಗ ಮುರಿದು ಕಳ್ಳನೊಬ್ಬ ಒಳಗೆ ಹೋಗಿದ್ದಾನೆ. ಬಳಿಕ ಬೀರು ಬೀಗ ಹಾಗೂ ದಿನಸಿ ದಾಸ್ತಾನು ರೂಮ್ ನ ಬೀಗವನ್ನು ಮುರಿದಿದ್ದಾನೆ. ಆದರೆ, ಅಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದಿದ್ದಾಗ ಅಲ್ಲೇ ಇದ್ದ ಅಡುಗೆ ಸಾಮಗ್ರಿ ತೆಗೆದುಕೊಂಡು ಗ್ಯಾಸ್‌ ಹಚ್ಚಿ ಅಡುಗೆ  ತಯಾರಿಸಿಕೊಂಡು ತಿಂದಿದ್ದಾನೆ. ನಂತರ ನೋಟ್ ಪುಸ್ತಕವೊಂದರಲ್ಲಿ ಮೂರು ಪುಟಗಳಲ್ಲಿ ಜೀವನದಲ್ಲಿ ತನಗಾಗಿರುವ ಅನುಭವಗಳನ್ನು ಕವನ, ಕಥೆ ರೂಪದಲ್ಲಿ ಬರೆದು ಜಾಗ ಖಾಲಿ ಮಾಡಿದ್ದಾನೆ.


ಪೊಲೀಸ್​ ಠಾಣೆಗೆ ದೂರು ಕೊಟ್ಟ ಪಿಡಿಒ


ಇನ್ನು ಬೆಳಗ್ಗೆ ಎಂದಿನಂತೆ ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ಹಾಗೂ ಸಹಾಯಕಿ ಮಹದೇವಮ್ಮ ಕರ್ತವ್ಯಕ್ಕೆ ಬಂದಿದ್ದಾರೆ. ಆಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಈ ವಿಚಾರವನ್ನ ಪಂಡಿತಹಳ್ಳಿ ಗ್ರಾಮದ ಪಿಡಿಒ ಗೆ ತಿಳಿಸಲಾಗಿದೆ. ಮಾಹಿತಿ ಪಡೆದುಕೊಂಡ ಪಂಡಿತಹಳ್ಳಿ ಗ್ರಾಮದ ಪಂಚಾಯಿತಿ ಪಿಡಿಒ ಮಹದೇವು ಸ್ಥಳ ಪರಿಶೀಲಿಸಿ, ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಡುಗೆ ಮಾಡಿಕೊಂಡು ಊಟ ಮಾಡಿರೋದು ಬಿಟ್ಟರೆ ಯಾವುದೇ ವಸ್ತುಗಳನ್ನ ಆತ ಕಳವು ಮಾಡದೇ ಬರಿಗೈಯಲ್ಲಿ ವಾಪಸ್ಸಾಗಿದ್ದಾನೆ.


ಇದನ್ನೂ ಓದಿ: 3 Diamond Rings ಸುತ್ತ ಅಪರಾಧದ ಕಥೆ; ದಿಢೀರ್ ಶ್ರೀಮಂತನಾಗಲು ಹೊರಟವನು ಕಂಬಿ ಹಿಂದೆ!

top videos


  ಇನ್ನು ಗ್ರಾಮದಲ್ಲಿ ಈ ಘಟನೆಗೆ ಆತಂಕ ಹಾಗೂ ಆಶ್ಚರ್ಯವನ್ನ ವ್ಯಕ್ತಪಡಿಸುತ್ತಿದ್ದಾರೆ‌‌. ಗ್ರಾಮದಲ್ಲಿ ಯಾರೋ ಒಬ್ಬ ಈ ರೀತಿ ಕಳ್ಳತನವನ್ನ ಮಾಡ್ತಿದ್ದಾನೆ. ಈ ರೀತಿ ಆಗಿರೋದು ಮೊದಲೇನಲ್ಲ. ಗ್ರಾಮದಲ್ಲಿ ಈ ಹಿಂದೆ ಕೂಡ ಇದೆ ರೀತಿ ಕಳ್ಳತನ ಮಾಡಲಾಗಿದೆ. ಆದ್ರೆ ಹಿಂದೆ ಯಾವತ್ತು ಕೂಡ ಕಥೆ ಕವನಗಳನ್ನ ಬರೆದಿರಲಿಲ್ಲ ಆದ್ರೆ ಈ ಬಾರಿ ಮಾತ್ರ ಕಳ್ಳನಿಗೂ ಒಳ್ಳೆ ಮನಸ್ಸಿದೆ ಎಂಬಂತೆ ಕಥೆ ಬರೆದಿದ್ದಾನೆ ಅಂತಿದ್ದಾರೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಳ್ಳನ ವರ್ತನೆ ಕಂಡು ಪೊಲೀಸರೇ ಅಚ್ಚರಿಗೆ ಒಳಗಾಗಿದ್ದಾರೆ.

  First published: