HOME » NEWS » District » MAN KILLED IN HUBLI PTH MAK

ತಲೆಯ ಮೇಲೆ ಕಲ್ಲುಹಾಕಿ ಹುಬ್ಬಳ್ಳಿಯ ಅಂಚಟಗೇರಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ; ಮಾವನ ಮನೆಗೆ ಬಂದು ಹೆಣವಾದ ಅಳಿಯ

ಪತ್ನಿ ಮತ್ತು ಮಗುವನ್ನು ನೋಡಲು ಜಗದೀಶ್ ನಾಲ್ಕು ದಿನಗಳ ಹಿಂದೆ‌ ಅಂಚಟಗೇರಿಗೆ ಬಂದಿದ್ದ. ರಾತ್ರಿ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೊರಗೆ ಹೋಗಿದ್ದ.ತಡರಾತ್ರಿ ಯಾದರೂ ಮನೆಗೆ ಬರದಿದ್ದಾಗ ಮನೆಯವರೆಲ್ಲಾ ಹುಡುಕಾಟ ನಡೆಸಿದ್ದಾರೆ. ಇಂದು ಜಗದೀಶನ ಶವ ಊರ ಹೊರ ಭಾಗದಲ್ಲಿ ಸಿಕ್ಕಿದೆ.

news18-kannada
Updated:November 24, 2020, 8:56 PM IST
ತಲೆಯ ಮೇಲೆ ಕಲ್ಲುಹಾಕಿ ಹುಬ್ಬಳ್ಳಿಯ ಅಂಚಟಗೇರಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ; ಮಾವನ ಮನೆಗೆ ಬಂದು ಹೆಣವಾದ ಅಳಿಯ
ಪ್ರಾತಿನಿಧಿಕ ಚಿತ್ರ.
  • Share this:
ಹುಬ್ಬಳ್ಳಿ; ತಲೆಯ ಮೇಲೆ ಕಲ್ಲುಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಬಳಿ ನಡೆದಿದೆ. ಜಗದೀಶ್ ಕೊಲ್ಲಾಪುರ್ ಎಂಬಾತನನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಂಚಟಗೇರಿ ಗ್ರಾಮದ ಹೊರ ವಲಯದ ನಿರ್ಜನ ಪ್ರದೇಶದಲ್ಲಿ ಕೊಲೆ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ನಿವಾಸಿ ಜಗದೀಶ್, ಅಂಚಟಗೇರಿ ಗ್ರಾಮದ ಅಕ್ಷತಾಳನ್ನ ಮದುವೆಯಾಗಿದ್ದ. ಪತ್ನಿ ಅಕ್ಷತಾ ಹೆರಿಗೆಗೆಂದು ತವರೂ ಮನೆಗೆ ಬಂದಿದ್ದಳು.

ಪತ್ನಿ ಮತ್ತು ಮಗುವನ್ನು ನೋಡಲು ಜಗದೀಶ್ ನಾಲ್ಕು ದಿನಗಳ ಹಿಂದೆ‌ ಅಂಚಟಗೇರಿಗೆ ಬಂದಿದ್ದ. ರಾತ್ರಿ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೊರಗೆ ಹೋಗಿದ್ದ.ತಡರಾತ್ರಿ ಯಾದರೂ ಮನೆಗೆ ಬರದಿದ್ದಾಗ ಮನೆಯವರೆಲ್ಲಾ ಹುಡುಕಾಟ ನಡೆಸಿದ್ದಾರೆ. ಇಂದು ಜಗದೀಶನ ಶವ ಊರ ಹೊರ ಭಾಗದಲ್ಲಿ ಸಿಕ್ಕಿದೆ.

ಇದನ್ನೂ ಓದಿ : ಕೊರೋನಾ ಭೀತಿ; ಕಾಲೇಜು ಆರಂಭವಾಗಿ ಒಂದು ವಾರ ಕಳೆದರೂ ವಿದ್ಯಾರ್ಥಿಗಳ ಸುಳಿವಿಲ್ಲ!

ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಸರಾಯಿ ಬಾಟಲಿಗಳು ಸಿಕ್ಕಿವೆ. ಯಾರೋ ದುಷ್ಕರ್ಮಿಗಳು ಮದ್ಯಪಾನ ಮಾಡಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿರುವ ಪೊಲೀಸರು ಕೊಲೆಗೆ ಕಾರಣ ಹಾಗೂ ಕೊಲೆಗಡುಕರ ಪತ್ತೆಗೆ ಬಲೆ ಬೀಸಿದ್ದಾರೆ.

ಕೊಲೆಗೀಡಾಗಿರುವ ಜಗದೀಶ್​ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೂ ಮೃತನ ಮನೆಯಲ್ಲಿ ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ.
Published by: MAshok Kumar
First published: November 24, 2020, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories