HOME » NEWS » District » MAN KILLED HIS BROTHER WHO RETURNED HOME BEFORE GET CURED FROM COVID VCTV KVD

ಕೊರೋನಾದಿಂದ ಗುಣಮುಖನಾಗದೆಯೇ ಮನೆಗೆ ಬಂದ ಅಣ್ಣನನ್ನು ಕೊಚ್ಚಿ ಕೊಂದ ತಮ್ಮ!

ಮನೆಗೆ ಬಂದಿದ್ದ ಅಣ್ಣನ ಜೊತೆ ವಾಗ್ವಾದಕ್ಕಿಳಿದ ತಮ್ಮ, ಖಾಯಿಲೆ ವಾಸಿಯಾಗುವ ಮುನ್ನ ಯಾಕೆ ಬಂದೆ ಅಂತಾ ಪ್ರಶ್ನಿಸಿದ್ದಾನೆ. ಮಾತಿಗೆ ಮಾತು ಬೆಳೆದು ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ್ದಾನೆ.

news18-kannada
Updated:May 16, 2021, 7:58 PM IST
ಕೊರೋನಾದಿಂದ ಗುಣಮುಖನಾಗದೆಯೇ ಮನೆಗೆ ಬಂದ ಅಣ್ಣನನ್ನು ಕೊಚ್ಚಿ ಕೊಂದ ತಮ್ಮ!
ಕೊಲೆ ನಡೆದ ಸ್ಥಳ
  • Share this:
ಚಿಕ್ಕಮಗಳೂರು : ಹುಟ್ಟವಾಗ ಅಣ್ಣತಮ್ಮಂದಿರು ಬೆಳೆದಾಗ ದಾಯಾದಿಗಳ ಅಂತ ಇದಕ್ಕೆ ಹೇಳೋದು. ಕಾಫಿನಾಡಿನಲ್ಲಿ ಕೊರೋನಾದಿಂದ ಬಳಲುತ್ತಿದ್ದ ಅಣ್ಣನನ್ನು ತಮ್ಮನೇ ಬರ್ಬವಾಗಿ ಕೊಲೆ ಮಾಡಿದ್ದಾನೆ. ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ಮಹಾವೀರ್​​ (45)  ಎಂಬಾತನನ್ನು ತಮ್ಮ ಪಾರ್ಶ್ವನಾಥ್ ಕೊಚ್ಚಿ ಕೊಲೆಗೈದಿದ್ದಾನೆ. ಕೊರೋನಾ ಸೋಂಕಿಗೆ ಒಳಗಾಗಿದ್ದ ಮಹಾವೀರ್​​ ಗುಣಮುಖವಾಗುವ ಮುನ್ನವೇ ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದ. ಗುಣಮುಖನಾಗದ್ದಿದ್ದರೂ ಮನೆಗೆ ಬಂದಿದ್ದರ ಬಗ್ಗೆ ತಮ್ಮ ಪಾರ್ಶ್ವನಾಥ್​ ಪ್ರಶ್ನಿಸಿದ್ದಾನೆ. ಇದೇ ವಿಚಾರವಾಗಿ ಅಣ್ಣ-ತಮ್ಮನ ಮಧ್ಯೆ ಜಗಳ ನಡೆದಿದೆ. ಗಲಾಟೆಯಿಂದ ಕೋಪಗೊಂಡ ಪಾರ್ಶ್ವನಾಥ್​ ಮನೆಯಲ್ಲಿ ಮಲಗಿದ್ದ ಮಹಾವೀರ್​ನನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ.

ಕೊರೋನಾ ಸೋಂಕಿಗೆ ಒಳಗಾಗಿದ್ದ ಮಹಾವೀರ್ ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆ ಸೇರಿದ್ದ. ಮನೆಗೆ ಬಂದಿದ್ದ ಅಣ್ಣನ ಜೊತೆ ವಾಗ್ವಾದಕ್ಕಿಳಿದ ಸೋದರ ಪಾರ್ಶ್ವನಾಥ್, ಖಾಯಿಲೆ ವಾಸಿಯಾಗುವ ಮುನ್ನ ಯಾಕೆ ಬಂದೆ ಅಂತಾ ಪ್ರಶ್ನಿಸಿದ್ದಾನೆ. ಮಾತಿಗೆ ಮಾತು ಬೆಳೆದು ಆಗಲೇ ಕುಡಿದ ಮತ್ತಿನಲ್ಲಿದ್ದ ತಮ್ಮ ಪಾರ್ಶ್ವನಾಥ್, ಅಣ್ಣ ಮಹಾವೀರನನ್ನ ಕಿಂಚಿತ್ತೂ ಕರುಣೆ ತೋರದೇ ಕತ್ತಿಯಲ್ಲಿ ಕೊಚ್ಚಿದ್ದಾನೆ. ಅಪ್ಪ-ಅಮ್ಮ ಕತ್ತಿಯನ್ನ ಎಳೆದು ಬಿಸಾಕಿದಾಗ, ಕೊಡಲಿಯಿಂದ ಅಣ್ಣನ ತಲೆಗೆ ಮನಸೋ ಇಚ್ಛೆ ಹೊಡೆದು ಕೊಲೆ ಮಾಡಿದ್ದಾನೆ. ಜೋರು ಮಳೆಯ ನಡುವೆ ಈ ಮನೆಯಲ್ಲಿ ನಡೆದ ಹೋದ ಕೊಲೆಯನ್ನ ಕೇಳಿ ಇಡೀ ಊರೇ ಬೆಚ್ಚಿ ಬಿದ್ದಿದೆ.

ಅಷ್ಟಕ್ಕೂ ನಿನ್ನೆ ಮಾತ್ರ ಅಣ್ಣ -ತಮ್ಮನ ನಡುವೆ ಗಲಾಟೆ ನಡೆದಿಲ್ಲ. ಈ ಹಿಂದೆ ಕೂಡ ಇಬ್ಬರ ನಡುವೆ ಆಸ್ತಿ ವಿಚಾರಕ್ಕೆ ಆಗಾಗ ಗಲಾಟೆ-ವಾಗ್ವಾದ ನಡೆಯುತಲೇ ಇತ್ತಂತೆ. ಈ ನಡುವೆ ಅಣ್ಣ ಕೊರೋನಾ ಸೋಂಕಿನಿಂದ ವಾಸಿಯಾಗದೇ ಮನೆಗೆ ಬಂದಿದ್ದು ತಮ್ಮನನ್ನ ಮತ್ತಷ್ಟು ಕೆರಳಿಸಿದೆ. ನಿನ್ನೆ ಸಂಜೆ ಮಹಾವೀರ್ ಆಸ್ಪತ್ರೆಯಿಂದ ಮನೆಗೆ ಬಂದ ಕೂಡಲೇ ಇಬ್ಬರ ನಡುವೆ ಮಾತಿನ ಸಮರ ಏರ್ಪಟ್ಟು, ಕೊನೆಗೆ ಅದು ಮಹಾವೀರನ ಕೊಲೆಯಲ್ಲಿ ಅಂತ್ಯವಾಗಿದೆ.

ಇದನ್ನೂ ಓದಿ: ಸುಳ್ಳು ಅತ್ಯಾಚಾರ ಕೇಸ್​​ನಲ್ಲಿ 31 ವರ್ಷ ಜೈಲು ಶಿಕ್ಷೆ; ನೂರಾರು ಕೋಟಿ ರೂ. ಪರಿಹಾರ ನೀಡಿದ ಕೋರ್ಟ್!

ಒಂದ್ಕಡೆ ಸೋಂಕಿತ ಅಣ್ಣ ಮನೆಗೆ ಬಂದ ಸಿಟ್ಟು, ಇನ್ನೊಂದೆಡೆ ಆಸ್ತಿ ವ್ಯಾಜ್ಯದ ಕೋಪದಿಂದ ಅಣ್ಣನನ್ನೇ ತಮ್ಮ ಬಲಿಪಡೆದಿದ್ದಾನೆ. ಕಳಸ ಸುತ್ತಮುತ್ತ ನಿನ್ನೆ ರಾತ್ರಿಯಿಂದ ಧಾರಕಾರ ಮಳೆ ಸುರಿಯುತ್ತಿದ್ದು, ರಣಭೀಕರ ಮಳೆಯ ಮಧ್ಯೆ ಇದೊಂದು ಮನೆ ರಣರಂಗವಾಗಿದ್ದನ್ನ ಕೇಳಿ ಇಡೀ ಕಾಫಿನಾಡಿನ ಮಂದಿ ಬೆಚ್ಚಿದ್ದಾರೆ. ಇನ್ನೂ ಕಳಸ ಠಾಣೆ ಪೊಲೀಸರು ಆರೋಪಿ ಪಾರ್ಶ್ವನಾಥನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕೊರೋನಾದಿಂದ ಬಳಲುತ್ತಿದ್ದ ಎಂದೂ ನೋಡದೇ ತಮ್ಮನೇ ಅಣ್ಣನ ಪಾಲಿಗೆ ಯಮನಾಗಿದ್ದು ಮಾತ್ರ ನಿಜಕ್ಕೂ ದುರಂತ.
Published by: Kavya V
First published: May 16, 2021, 7:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories