HOME » NEWS » District » MAN GOT KILLED FOR SPITTING GUTKA IN FRONT OF STORE IN CHINTHAMANI HK

ಅಂಗಡಿ ಮುಂದೆ ಗುಟ್ಕಾ ಎಂಜಲು ಉಗುಳಿದಕ್ಕೆ ವ್ಯಕ್ತಿಯ ಕೊಲೆ ಮಾಡಿದ ಮಾಲೀಕ

ವಿಷಯ ತಿಳಿದ ಚಿಂತಾಮಣಿ ಗ್ರಾಮಾಂತರ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಚೇತನ್ ವಶಕ್ಕೆ ಪಡೆದು ಮುಂದಿನ‌ ವಿಚಾಣೆ ಕೈಗೆತ್ತಿಕೊಂಡಿದ್ದಾರೆ.

news18-kannada
Updated:September 23, 2020, 11:02 PM IST
ಅಂಗಡಿ ಮುಂದೆ ಗುಟ್ಕಾ ಎಂಜಲು ಉಗುಳಿದಕ್ಕೆ ವ್ಯಕ್ತಿಯ ಕೊಲೆ ಮಾಡಿದ ಮಾಲೀಕ
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಬಳ್ಳಾಪುರ(ಸೆಪ್ಟೆಂಬರ್. 23): ಅಂಗಡಿ ಮುಂದೆ ಗುಟ್ಕಾ ಎಂಜಲು ಉಗುಳಿದಕ್ಕೆ ಅಂಗಡಿ ಮಾಲಿಕ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಉಲ್ಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುನಿಕೃಷ್ಣ (35) ಕೊಲೆಗೀಡಾದ ವ್ಯಕ್ತಿ, ಅದೇ ಗ್ರಾಮದ ಯುವಕ ಚೇತನ್ ಎಂಬಾತನಿಂದ ಕೊಲೆ ಯಾಗಿದ್ದಾನೆ. ಕಾಫಿ ಮಾಡಲು ಕಾಫಿ ಪುಡಿ ತರಲು ಅಂಗಡಿಗೆ ಹೊಗಿದ್ದ ವೇಳೆ ಅಂಗಡಿ ಬಳಿ ಮುನಿಕೃಷ್ಣ ಗುಟ್ಕಾ ಎಂಜಲು ಉಗಿದಿದ್ದಾನೆ, ಇದರಿಂದ ಕುಪಿತಗೊಂಡ ಚೇತನ್ ಅಂಗಡಿ‌ ಮುಂದೆ ಎಂಜಲು ಉಗಿಯಬೇಡ ಕೊರೋನಾ ಹರಡುತ್ತೆ, ಬರುವ ಬೇರೆ ಗ್ರಾಹಕರಿ‌ಗೆ ಇರಿಸು ಮುರಿಸು ಆಗುತ್ತೆ ಎಂದು ಬುದ್ದಿವಾದ ಹೇಳಿದ್ದಾನೆ. ಈ ವೇಳೆಯಲ್ಲಿ ಇಬ್ಬರ ಮದ್ಯೆ ಮಾತಿನ‌ ಚಕಮಕಿ‌ ನಡೆದು ಕೈ ಕೈ ಮಿಲಾಯಿಸಿದ್ದಾರೆ. ಮಾತು ಮಿತಿ ಮೀರಿ ಮನೆಯ ಹೆಣ್ಣುಮಕ್ಕಳ‌ ಬಗ್ಗೆ ಮಾತನಾಡುವ ಮೂಲಕ ಚೇತನ್‌ಗೆ ಮುನಿಕೃಷ್ಣ ರೊಚ್ವಿಗೆಬ್ಬಿಸಿದ್ದಾನೆ.

ಈ ವೇಳೆ‌ ಉದ್ರೇಕಗೊಂಡ ಚೇತನ್ ಕೈಯಲಿದ್ದ ಚಾಕುವಿನಿಂದ ಮುನಿಕೃಷ್ಣನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಎರಡು ಮೂರು ಬಾರಿ ತಿವಿದಿದ್ದಾನೆ. ಪರಿಣಾಮ ಮುನಿಕೃಷ್ಣನ ಸ್ಥಿತಿ ಗಂಭಿರವಾಗಿದೆ. ಸ್ಥಳದಲ್ಲಿದ್ದ ಗ್ರಾಮಸ್ಥರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ‌ಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಮುನಿಕೃಷ್ಣ ತೀರ್ವ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ :  ಕುಖ್ಯಾತ ಮಟ್ಕಾ ಬುಕ್ಕಿ ಸೇರಿ 23 ಜನರ ಬಂಧನ ; ಬೆಳಗಾವಿ ಡಿಸಿಪಿ ನೇತೃತ್ವದಲ್ಲಿ ನಡೆದ ಮಿಂಚಿನ ಕಾರ್ಯಾಚರಣೆ

ವಿಷಯ ತಿಳಿದ ಚಿಂತಾಮಣಿ ಗ್ರಾಮಾಂತರ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಚೇತನ್ ವಶಕ್ಕೆ ಪಡೆದು ಮುಂದಿನ‌ ವಿಚಾಣೆ ಕೈಗೆತ್ತಿಕೊಂಡಿದ್ದಾರೆ.

ಇನ್ನೂ ಕ್ಷುಲ್ಲಕ ಕಾರಣಗಳಿಗಾಗಿ ಕಿತ್ತಾಡಿ ಮುನಿಕೃಷ್ಣ ಸಾವಿನ ಮನೆ‌ ಸೇರಿದ್ದಾನೆ. ಕೋಪದ ಕೈಗೆ ಬುದ್ದಿ ಕೊಟ್ಟು ಚೇತನ್ ಜೈಲು ವಾಸ ಅನುಭವಿಸುವ ಮೂಲಕ ಎರಡೂ ಮನೆಯಲ್ಲಿ ನೆಮ್ಮದಿ ಹಾಳಾಗುವುದರ ಜೊತೆಗೆ ಇಷ್ಟು ದಿನ ನೆಮ್ಮದಿಯಿಂದ ಇದ್ದ ಇಡೀ ಗ್ರಾಮ ಬೂದಿ ಮುಚ್ವಿದ ಕೆಂಡದಂತಾಗಿದೆ. ಅವಿವೇಕದ ಕೈಗೆ ಬುದ್ದಿ ಕೊಟ್ಟು ಬಾಳಿ ಬದುಕಬೇಕಿದ್ದ ಇಬ್ಬರಲ್ಲಿ ಚೇತನ್ ಊರಿಂದ‌ ದೂರವಾದ್ರೆ, ಮುನಿಕೃಷ್ಣ ಲೋಕವನ್ನೆ ಅಗಲಿದ್ದು ಮಾತ್ರ ದುರಂತವೆ ಸರಿ.
Published by: G Hareeshkumar
First published: September 23, 2020, 10:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading