ಮದುವೆ ಮತ್ತು ಮಾನವೀಯತೆ; ಉಡುಪಿಯಲ್ಲಿ ಕಾಲಿಲ್ಲದ ಯುವತಿಯ ವರಿಸಿದ ದುಬೈನ ಉದ್ಯೋಗಿ

ದುಬೈನ ಪ್ರತಿಷ್ಠಿತ ತೈಲ ಕಂಪನಿಯೊಂದರಲ್ಲಿ ಕೆಲಸ ಮಾಡುವ ಸಂದೀಪ್ ಅವರು ಉಡುಪಿಯಲ್ಲಿ ಪೋಲಿಯೋಪೀಡಿತ ಯುವತಿಯೊಬ್ಬಳನ್ನ ವರಿಸಿ ಬಾಳು ಕೊಟ್ಟಿದ್ದಾರೆ. ಮಾನವೀಯತೆ ಜೀವಂತ ಇದೆ ಎನ್ನುವುದಕ್ಕೆ ಈ ಮದುವೆ ಸಾಕ್ಷಿಯಾಗಿದೆ.

ಉಡುಪಿಯಲ್ಲೊಂದು ಆದರ್ಶ ಮದುವೆ. ದುಬೈನಿಂದ ಬಂದು ಪೋಲಿಯೋಪೀಡಿತ ಸುನೀತಾಳನ್ನು ವರಿಸಿದ ಸಂದೀಪ್

ಉಡುಪಿಯಲ್ಲೊಂದು ಆದರ್ಶ ಮದುವೆ. ದುಬೈನಿಂದ ಬಂದು ಪೋಲಿಯೋಪೀಡಿತ ಸುನೀತಾಳನ್ನು ವರಿಸಿದ ಸಂದೀಪ್

  • Share this:
ಉಡುಪಿ: ಆಕೆಗೆ ಹುಟ್ಟಿನಿಂದ ಅದೃ಼ಷ್ಟ ಕೈಹಿಡಿಯದಿದ್ದರೂ ಮದುವೆ ವಯಸ್ಸಿನಲ್ಲಿ ಕೊನೆಗೂ ಅದೃಷ್ಟವೊಂದು ಕೈಹಿಡಿದಿದೆ. ತನಗೆ ಮದುವೆ ಬರೀ ಕನಸು ಅಂತ ಕಣ್ಣೀರಲ್ಲೇ ದಿನಕಳೆಯುತ್ತಿದ್ದ ಆಕೆಗೆ ಯುವಕನೋರ್ವ‌ ಕಣ್ಣೀರು ಒರೆಸುವ ಕೆಲಸ‌ ಮಾಡಿದ್ದಾನೆ. ದೂರದ ದುಬೈನಿಂದ ಓಡೋಡಿ‌ ಬಂದು ಆಕೆಯ ಜೊತೆ ಖುಷಿ ಖುಷಿಯಾಗಿ ಹಸೆಮಣೆ ಏರಿದ್ದಾನೆ. ಆಕೆಯ ಹೆಸರು ಸುನಿತಾ. ಈಕೆಗೆ ಬಾಳು ಕೊಟ್ಟ ಸಂದೀಪ್ ದುಬೈನ ತೈಲ ಕಂಪನಿಯೊಂದರ ಉದ್ಯೋಗಿ.

ಉಡುಪಿಯ‌ ಕರಂಬಳ್ಳಿ ಗ್ರಾಮದ ನಿವಾಸಿಯಾಗಿರುವ ಸುನೀತಾ ಹುಟ್ಟಿನಿಂದಲೇ ಸೌಂದರ್ಯವತಿಯಾಗಿದ್ದರೂ ಪೋಲಿಯೋ ಎಂಬ ಮಹಾಮಾರಿ ಆಕೆಯ ಎರಡೂ ಕಾಲುಗಳನ್ನ ಕಿತ್ತುಕೊಂಡಿತ್ತು. ಈ ಅಂಗವೈಕಲ್ಯತೆ ಆಕೆಯ ನೆಮ್ಮದಿ ಹಾಳುಮಾಡಿತ್ತು.‌ ಪಿಯುಸಿವರೆಗೆ ಓದಿಕೊಂಡು ತಂದೆ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡಾ ನಿರಾಧಾರವಾಗುತ್ತೆ ಎಂದು ಖಿನ್ನತೆಗೆ ಜಾರಿದ್ದಳು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ ದೇವರು ಮದುವೆಯ ವಿಚಾರದಲ್ಲಿ ಈಕೆಯ ಭಾಗ್ಯದ ಬಾಗಿಲು ತೆರೆದಿದ್ದಾರೆ. ದುಬೈನ ಆಯಿಲ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ ಮಂಗಳೂರಿನ ನಿವಾಸಿ‌ ಸಂದೀಪ್ ತಾನೇ ಮುಂದೆ ಬಂದು ಈಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ.

ಮನೆಯವರ ಒಪ್ಪಿಗೆಯಂತೆ ನಿನ್ನೆ ಈ ಅಪರೂಪದ ಮದುವೆಗೆ ಉಡುಪಿಯ ಕಂಬಳ್ಳಿ ದೇವಸ್ಥಾನ ಸಾಕ್ಷಿಯಾಯ್ತು. ಮಾನವೀಯತೆ ಇನ್ನೂ ಸತ್ತಿಲ್ಲ ಅನ್ನೋದಕ್ಕೆ ಉಡುಪಿಯ ಕರಂಬಳ್ಳಿಯಲ್ಲಿ ನಡೆದ ಈ ಆದರ್ಶ ಮದುವೆಯೇ ಸಾಕ್ಷಿ. ಈಗಿನ‌ ಕಾಲದಲ್ಲಿ ದೇಹದಲ್ಲಿ ಒಂದು ಸಣ್ಣ ವೈಕಲ್ಯತೆ ಕಂಡರೂ ಹುಡುಗಿ ನನಗೆ ಬೇಡ ಅನ್ನುವವರೆ ಜಾಸ್ತಿ. ಆದರೆ, ದುಬೈನಂತಹ ಸಿರಿತನದ ನಾಡಿನಲ್ಲಿ ದೊಡ್ಡ ಕಂಪೆನಿಯೊಂದರಲ್ಲಿ ಕೆಲಸದಲ್ಲಿರುವ ಯುವಕ ಕಾಲಿಲ್ಲದ ಯುವತಿಗೆ ಬಾಳುಕೊಡುವ ನಿರ್ಧಾರ ಮಾಡಿ‌ ಸುನಿತಾಳ ಕೈಹಿಡಿದಿರೋದು ಮಾನವೀಯತೆಗೆ ಹಿಡಿದ‌ ಕೈಗನ್ಬಡಿ ಅಂದರೆ ತಪ್ಪಾಗಲ್ಲ.

ಇದನ್ನೂ ಓದಿ: ಕೋಲಾರ: ಡಿ. 1ರಿಂದ ಬೈಕ್ ಸವಾರರಿಗೆ ಹೆಲ್ಮೆಟ್; ಆಟೋಗಳಿಗೆ ಮೀಟರ್ ಕಡ್ಡಾಯ - ಜಿಲ್ಲಾಧಿಕಾರಿ ಆದೇಶ

ಆತುರದ ನಿರ್ಧಾರ ತೆಗೆದುಕೊಳ್ಳೋದು ಸುಲಭ. ಆದರೆ ಜೀವನವಿಡೀ ನಿಭಾಯಿಸುವುದು ಕಷ್ಟ. ಆದರೆ ಈ ಜೋಡಿಯ ವಿಚಾರದಲ್ಲಿ ಹಾಗಾಗುವುದಿಲ್ಲ ಅನ್ನೋದು ಮನೆಯವರ ಅಭಿಪ್ರಾಯ. ಇಂತಹ ಹುಡುಗಿಗೆ ಬಾಳು ನೀಡಬೇಕೆಂದು ಮೊದಲೇ ನಿರ್ಧರಿಸಿದ್ದ ಸಂದೀಪ್, ಸಂಬಂಧಿಕರ ಮೂಲಕ ಈ ಯುವತಿಯ ಬಗ್ಗೆ ವಿಚಾರಿಸಿ ತಾನೇ ಮುಂದೆ ಬಂದು ವಿವಾಹವಾಗಿದ್ದಾರೆ. ಇನ್ನೇನು ಮನೆಮಗಳ ಬಾಳು ನರಕವಾಯ್ತು ಎಂದು ದಿವೂ ಕೊರಗುತ್ತಿದ್ದ ಸುನಿತಾ ಕುಟುಂಬದವರಿಗೆ ಜಗತ್ತಿನ ಭಾರವೆಲ್ಲಾ ಹಗುರಾದಷ್ಟು ಸಂತೋಷ ಆಗಿದೆ. ಮದುವೆ ಮುಗಿಯುವವರೆಗೂ ಆನಂದ ಬಾಷ್ಪ ಸುರಿಸಿ ಪ್ರೀತಿಯ ಮಗಳನ್ನು ಬೀಳ್ಕೊಟ್ಟಿದ್ದಾರೆ.

ತನ್ನ ಕಷ್ಟ ಹೇಳಿಕೊಂಡು ಸುನಿತಾ ಮದುವೆಯಾಗಲಿಲ್ಲ. ತಾನು ಆದರ್ಶ ಮೆರೆದಿದ್ದೇನೆಂಬ ಹಮ್ಮ ಬಿಮ್ಮು ಸಂದೀಪ್ ಗೆ ಇಲ್ಲ, ಹಾಗಾಗಿ ಇಬ್ಬರೂ ಮಾದ್ಯಮಗಳಿಗೆ ಮಾತನಾಡಿಲ್ಲ. ಈ ಅಪರೂಪದ ಜೋಡಿ ಸುಖವಾಗಿರಲಿ ಎಂಬುಷ್ಟೇ ನಮ್ಮ ಹಾರೈಕೆ.

ವರದಿ: ಪರೀಕ್ಷಿತ್ ಶೇಟ್
Published by:Vijayasarthy SN
First published: