HOME » NEWS » District » MAN FIRE AT FRIEND HOME REGARDING MONEY AND LAND ISSUE VCTV KVD

Crime News: ಹಣಕಾಸಿನ ವಿಚಾರದಲ್ಲಿ ಗಲಾಟೆ : ಸ್ನೇಹಿತನ ಮನೆ ಮೇಲೆ ಗುಂಡಿನ ಸುರಿಮಳೆಗೈದ ಆರೋಪಿ!

ಚೇತನ್ ತಾಯಿ ಕಿಟಕಿ ತೆಗೆದು ವಿಚಾರಿಸಿದಾಗ ಮನಸ್ಸೋ ಇಚ್ಛೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಚೇತನ್ ಮನೆಯವರಾಗಲಿ, ತಾಯಿಯಾಗಲಿ ಅಥವಾ ಚೇತನ್ ಕೂಡ ಮನೆಯಿಂದ ಹೊರಬಂದಿಲ್ಲ.

news18-kannada
Updated:June 10, 2021, 10:23 PM IST
Crime News: ಹಣಕಾಸಿನ ವಿಚಾರದಲ್ಲಿ ಗಲಾಟೆ : ಸ್ನೇಹಿತನ ಮನೆ ಮೇಲೆ ಗುಂಡಿನ ಸುರಿಮಳೆಗೈದ ಆರೋಪಿ!
ಗುಂಡಿನ ದಾಳಿ ಆಗಿರುವುದು
  • Share this:
ಚಿಕ್ಕಮಗಳೂರು :  ಕ್ಷುಲ್ಲಕ ಕಾರಣಕ್ಕೆ ಸೇಹಿತನ ಮನೆ ಮೇಲೆಯೇ ಗುಂಡಿನ ದಾಳಿ ನಡೆಸಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಯಡದಾಳು ಗ್ರಾಮದಲ್ಲಿ ನಡೆದಿದೆ. ಸ್ನೇಹಿತರ ಮಧ್ಯೆ ಜಮೀನು ವಿವಾದ ಹಾಗೂ ಹಣಕಾಸಿನ ಗಲಾಟೆ ನಡೆದ ಕಾರಣ ಸ್ನೇಹಿತನೇ ಮನೆ ಮೇಲೆ ಮನಸ್ಸೋ ಇಚ್ಛೆ ಗುಂಡು ಹಾರಿಸಿದ್ದಾನೆ. ಎಡದಾಳು ಗ್ರಾಮದ ಚೇತನ್ ಹಾಗೂ ಕಿರಣ್ ಇಬ್ಬರೂ ಸ್ನೇಹಿತರು. ಇಬ್ಬರಿಗೂ ಹಲವು ರೀತಿಯ ವ್ಯವಹಾರವೂ ಇತ್ತು. ಇತ್ತೀಚೆಗೆ ಜಮೀನು ವಿಚಾರವಾಗಿ ವಾದ-ವಿವಾದವೂ ನಡೆದಿತ್ತು. ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ಬಾಕಿ ಇತ್ತು. ಆದರೆ, ಇತ್ತೀಚೆಗೆ ಗ್ರಾಮದಲ್ಲಿ ಚೇತನ್ ಕಿರಣ್ ಬಗ್ಗೆ ವೈಯಕ್ತಿಕವಾಗಿ ಕೆಟ್ಟದಾಗಿ ಮಾತನಾಡಿದ್ದಾನೆಂದು ಕಿರಣ್ ಚೇತನ್ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.

ಕಿರಣ್ ಮಾವ ನಾಗೇಶ್ ಗೌಡರ ಮನೆಯಲ್ಲಿ ಬಂದೂಕು ಇತ್ತು. ಗ್ರಾಮೀಣ ಭಾಗದಲ್ಲಿ ಜೀವ ಹಾಗೂ ಬೆಳೆಗಳ ರಕ್ಷಣೆಗೆ ಪೊಲೀಸ್ ಇಲಾಖೆಯೇ ನೀಡಿದ್ದ ಅನುಮತಿಯುಳ್ಳ ಗನ್. ಅದನ್ನ ತಂದ ಕಿರಣ್ ಚೇತನ್ ಮನೆ ಬಳಿ ಬಂದು ಕೂಗಾಡಿದ್ದಾನೆ. ಆಗ ಚೇತನ್ ತಾಯಿ ಕಿಟಕಿ ತೆಗೆದು ವಿಚಾರಿಸಿದಾಗ ಮನಸ್ಸೋ ಇಚ್ಛೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಚೇತನ್ ಮನೆಯವರಾಗಲಿ, ತಾಯಿಯಾಗಲಿ ಅಥವಾ ಚೇತನ್ ಕೂಡ ಮನೆಯಿಂದ ಹೊರಬಂದಿಲ್ಲ. ಬಂದಿದ್ದರೆ ಎಷ್ಟು ಜನ ಸಾಯುತ್ತಿದ್ದರು ಎಂದು ಹೇಳಲಾಗುತ್ತಿರಲಿಲ್ಲ. ಮನಸ್ಸೋ ಇಚ್ಛೆ ಸುಮಾರು ಮೂರ್ನಾಲ್ಕು ಗುಂಡು ಹಾರಿಸಿರುವುದರಿಂದ ಮನೆಯ ಬಾಗಿಲು, ಗೋಡೆ ಹಾಗೂ ಹೆಂಚಿಗೆ ಹೊಡೆದಿರುವ ಪಟ್ಟಿಯಲ್ಲೂ ಗುಂಡಿನ ಮಾರ್ಕ್ ಬಿದ್ದಿದೆ.

ಅವೆಲ್ಲಾ ಮನುಷ್ಯನ ದೇಹ ಹೊಕ್ಕರೆ ಆಸ್ಪತ್ರೆಗೆ ಗಾಡಿ ಹುಡುಕುವಷ್ಟರಲ್ಲಿ ಜೀವ ಹೋಗಿರುತ್ತೆ. ಅಷ್ಟು ದೊಡ್ಡ ಪ್ರಮಾಣಲ್ಲಿ ಅನಾಹುತ ನಡೆಯುತ್ತಿತ್ತು. ಅದೃಷ್ಟವಶಾತ್ ಏನೂ ಆಗಿಲ್ಲ. ಇದೀಗ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾನೂನುಬಾಹಿರವಾಗಿ ಬಂದೂಕು ಉಪಯೋಗಿಸದನೆಂದು ಕಿರಣ್ ಮೇಲೆ ಹಾಗೂ ಬಂದೂಕು ಪರವಾನಗಿ ಪಡೆದಿದ್ದ ಅತನ ಮಾವ ನಾಗೇಶ್ ಗೌಡ ಮೇಲೆ ಎಫ್.ಐ.ಆರ್. ದಾಖಲಾಗಿದೆ. ಪ್ರಕರಣ ಸಂಬಂಧ ಗುಂಡಿನ ದಾಳಿ ನಡೆಸಿದ ಕಿರಣ್ ಹಾಗೂ ಘಟನೆಯ ಬಳಿಕ ಆತನಿಗೆ ಉಳಿಯಲು ಸಹಕಾರ ಮಾಡಿದ ಆರೋಪದ ಮೇಲೆ ಮೂಡಿಗೆರೆ ತಾಲೂಕಿನ ಕಳಸ ಠಾಣಾ ವ್ಯಾಪ್ತಿಯ ಲೋಹಿತ್ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ತಾಯಿಯ ಅಕ್ರಮ ಸಂಬಂಧದ ಬಗ್ಗೆ ತಂದೆಗೆ ತಿಳಿಸಿದ ಮಕ್ಕಳು: ರೊಚ್ಚಿಗೆದ್ದವಳು ಮಕ್ಕಳಿಗೆ ತೋರಿಸಿದಳು ನರಕ!

ಘಟನೆ ಬಳಿಕ ತಲೆಮರೆಸಿಕೊಂಡಿರೋ ನಾಗೇಶ್ ಗೌಡನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.ಒಟ್ಟಾರೆ, ಕ್ಷುಲ್ಲಕ ಕಾರಣಕ್ಕೆ ಏಕಾಏಕಿ ಮನೆಯಲ್ಲಿದ್ದ ಬಂದೂಕಿನಿಂದ ಗುಂಡಿನ ದಾಳಿ ನಡೆಸಿರೋದು ದುರಂತವೇ ಸರಿ, ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 10, 2021, 10:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories