ತುಮಕೂರು: ಟೊಮೊಟೋ ಬೆಳೆದು 20 ಲಕ್ಷ ರೂ. ಗಳಿಸಿದ ಈ ಯುವಕ ಎಲ್ಲರಿಗೂ ಮಾದರಿ

ಒಟ್ಟಾರೆ ನಾವು ಕೈಕಟ್ಟಿ ಕುಳಿತರೆ ಯಾರು ನಮ್ಮನ್ನ ಕೈ ಹಿಡಿಯಲ್ಲ. ನಾವು ಮಾಡೋ ಕೆಲಸ ಮಾತ್ರ ನಮ್ಮ ಹಿಂದೆ ಇರುತ್ತೆ, ಕಾಪಾಡುತ್ತೇ. ಅದ್ರಲ್ಲೂ ನಂಬಿದವರನ್ನ ಭೂಮಿತಾಯಿ ಯಾವತ್ತೂ ಕೈಬಿಡೋದಿಲ್ಲ ಎಂಬುದಕ್ಕೆ ಈ ಯುವ ರೈತ ತಾಜಾ ಉದಾಹರಣೆ.

ಟೊಮೊಟೋ

ಟೊಮೊಟೋ

  • Share this:
ತುಮಕೂರು(ಜು.24): ಕೊರೊನಾದಿಂದ ನಮ್ಮ ಬದುಕೇ ಹಾಳಾಗಿ ಹೊಯ್ತು. ನಮ್ಮ ವ್ಯವಹಾರವೇ ಬಿದ್ದೋಯ್ತು. ನಾವು ಬೀದಿಗೆ ಬಂದೆವು ಎಂದು ಹಲವರು ಅಳಲು ತೋಡಿಕೊಂಡಿರುವುದು ಕಂಡಿದ್ದೇವೆ. ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡವರ  ಸಂಖ್ಯೆಯೂ ಹೆಚ್ಚಿದೆ. ಹೀಗಿರುವಾಗ ಇಲ್ಲೊಬ್ಬ ಯುವಕ ಇಂತವರಿಗೆ ಮಾದರಿಯಾಗಿ ನಿಂತಿದ್ದಾನೆ. ಮನಸ್ಸಿದ್ರೆ ಮಾರ್ಗ ಎಂಬುದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ.

ಹೌದು, ಅಡಿಕೆ ವ್ಯಾಪಾರವನ್ನೇ ಜೀವನನ್ನಾಗಿ ಮಾಡಿಕೊಂಡಿದ್ದ ಯುವಕನೊಬ್ಬನಿಗೆ ಲಾಕ್​​ಡೌನ್ ಬಾರೀ ಹೊಡೆತ ನೀಡಿತ್ತು. ಮುಂದೇನು ಅಂತ ಚಿಂತೆ ಮಾಡಿದ ಈ ಯುವಕ ನೇರಾ ಕೈ ಹಾಕಿದ್ದು ಕೃಷಿಗೆ. ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಬಂಡಿಹಳ್ಳಿ ಗ್ರಾಮದ ನಿಜಾನಂದಮೂರ್ತಿ ಎಂಬ ಯುವ ರೈತನೊಬ್ಬ ತನ್ನ 3 ಎಕರೆ ಜಾಗದಲ್ಲಿ ತೆಂಗಿನ ತೋಟದ ನಡುವೆ ಟೊಮೊಟೋ ಬೆಳೆ ಬೆಳೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಲಾಕ್​​ಡೌನ್​​ ವೇಳೆ ಸುಮಾರು 2 ತಿಂಗಳ ಕಾಲ ಸುಖಾಸುಮ್ಮನೆ ಕಾಲ ಕಳೆಯದೆ ತನ್ನೂರಿನ ಕೂಲಿ ಹಾಳುಗಳಿಗೂ ಕೆಲಸ ಕೊಟ್ಟು ತಾನು ಕೆಲಸ ಮಾಡಲು ಶುರು ಮಾಡಿದ. ತನ್ನ ಮೂರು ಎಕರೆ ಜಮೀನಲ್ಲಿ 2 ರಿಂದ 3 ಲಕ್ಷ ಬಂಡವಾಳ ಹಾಕಿ ಟೊಮೊಟೊ ಬೆಳೆದ. ಈಗ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್​ಗೆ 700 ರಿಂದ 750 ರೂ.ಗೆ ಮಾರಾಟ ಮಾಡುತ್ತಿದ್ದಾನೆ. ಈಗಾಗಲೇ ಹಾಕಿರುವ ಬಂಡವಾಳ ವಾಪಸ್ಸು ಬಂದಿದೆ. ಮೂರರಿಂದ ನಾಲ್ಕು ಸಾವಿರ ಬಾಕ್ಸ್​ ಟೊಮೊಟೋ ಮಾರಾಟ ಮಾಡಿ ಸುಮಾರು 20 ಲಕ್ಷ ರೂ. ಗಳಿಸಿದ್ಧಾನೆ.

ನಾವು ಅಡಿಕೆ ವ್ಯಾಪಾರ ಮಾಡಿಕೊಂಡು ಇದ್ದವರು. ಲಾಕ್​​ಡೌನ್​ನಿಂದ ಅಡಿಕೆ ವ್ಯಾಪಾರ ಬಿದ್ದು ಹೋಯಿತು. ಮನೇಲಿ ಕುಳಿತು ಏನು ಮಾಡುವುದು ಎಂಬ ಆಲೋಚನೆ ಮಾಡಿದಾಗ ನಮ್ಮ ಸುತ್ತ ಮುತ್ತಲ ರೈತರು ಟೊಮೊಟೋ ಬೆಳೆದು ಸಾಕಷ್ಟು ದುಡಿಯುತ್ತಾರೆ ಅನ್ನುವ ಮಾತು ಕೇಳಿದ್ದೆ. ಆದಕ್ಕೆ ನಾನು ಒಮ್ಮೆ ಹಾಕಿದ್ರೆ ಹೇಗೆ ಎಂದು ಆಲೋಚನೆ ಮಾಡಿ ಬೆಳೆಯಲಾಗಿದೆ ಅಂತಾರೆ ನಿಜಾನಂದಮೂರ್ತಿ.

ಇದನ್ನೂ ಓದಿ: ಜನರ ಬದುಕನ್ನೇ ಕಸಿಯುತ್ತಿರುವ ಸಮಯದಲ್ಲಿ ಆಡಳಿತ-ವಿಪಕ್ಷಗಳ ಕೆಸರೆರಚಾಟ ಬೇಸರ ತರಿಸಿದೆ; ಎಚ್.ಡಿ.ಕುಮಾರಸ್ವಾಮಿ

ಒಟ್ಟಾರೆ ನಾವು ಕೈಕಟ್ಟಿ ಕೂತ್ರೆ ಯಾರು ನಮ್ಮನ್ನ ಕೈ ಹಿಡಿಯಲ್ಲ. ನಾವು ಮಾಡುವ ಕೆಲಸ ಮಾತ್ರ ನಮ್ಮ ಹಿಂದೆ ಇರುತ್ತೆ, ಕಾಪಾಡುತ್ತೇ. ಅದರಲ್ಲೂ ನಂಬಿದವರನ್ನ ಭೂಮಿತಾಯಿ ಯಾವತ್ತೂ ಕೈಬಿಡುವುದಿಲ್ಲ ಎಂಬುದಕ್ಕೆ ಈ ಯುವ ರೈತ ತಾಜಾ ಉದಾಹರಣೆ.
Published by:Ganesh Nachikethu
First published: