ಪ್ರಾಣ ಉಳಿಸಿ ಪ್ರಾಣ ಬಿಟ್ಟ.. ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿ, ಕೊಚ್ಚಿ ಹೋದ ವ್ಯಕ್ತಿ

ಶರೀಫ್​ ಪ್ರಾಣವನ್ನೇ ಲೆಕ್ಕಿಸದೆ ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿಗೆ ಹಾರಿ ಬಾಲಕನನ್ನು ರಕ್ಷಿಸಿದ್ದಾರೆ. ಆದರೆ ನೀರಿನ ರಭಸಕ್ಕೆ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಶರೀಫ್​ ಅವರ ಇಬ್ಬರು ಮಕ್ಕಳು, ಪತ್ನಿ ಕಣ್ಣೀರಿಡುತ್ತಿದ್ದಾರೆ.

ಕೃಷ್ಣಾ ನದಿಯಲ್ಲಿ ಮುಳುಗಿದ ಶರೀಫ್​

ಕೃಷ್ಣಾ ನದಿಯಲ್ಲಿ ಮುಳುಗಿದ ಶರೀಫ್​

  • Share this:
ಬೆಳಗಾವಿ : ಮುಳುಗುತ್ತಿದ್ದ ಬಾಲಕನ‌ ರಕ್ಷಣೆ ಮಾಡಲು ಹೋಗಿ ವ್ಯಕ್ತಿಯೋರ್ವ ನದಿ ಪಾಲಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿಗೆ 10 ವರ್ಷದ ಬಾಲಕ ಕಾಲು ಜಾರಿ ಬಿದ್ದಿದ್ದ, ಬಾಲಕನ ರಕ್ಷಣೆ ಮಾಡಲು ಹೋಗಿ 34 ವರ್ಷದ ಶರೀಫ್​​ ಖಂಜಾಡೆ ನದಿಗೆ ಹಾರಿದ್ದರು. ಬಾಲಕ ಬದುಕಿದ್ರೆ ಶರೀಪ್ ಮಾತ್ರ ಮರಳಿ ಬರಲೇ ಇಲ್ಲ. ಕಳೆದ ಎರಡು ದಿನಗಳ ಕಾರ್ಯಾಚರಣೆ ಬಳಿಕ ಇಂದು ಶರೀಫ್​​ ಶವವಾಗಿ ಪತ್ತೆಯಾಗಿದ್ದಾರೆ. ವಿಧಿಯಾಟಕ್ಕೆ ಶರೀಫ್​ ಅವರ ಕುಟುಂಬ ಈಗ ಕಣ್ಣೀರು ಹಾಕುತ್ತಿದೆ.

ಮಾಂಜರಿ ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಸುಮಾರು 13 ವರ್ಷದ ಬಾಲಕನೋರ್ವ ಆಟವಾಡುತ್ತು ಕಾಲು ಜಾರಿ ನದಿಗೆ ಬಿದ್ದಿದ್ದ. ಸಾಕಷ್ಟು ಜನ ಅಲ್ಲೆ ಇದ್ರು ಯಾರು ಸಹ ಅದನ್ನ ಗಮನಿಸಿರಲಿಲ್ಲ. ಆದ್ರೆ ಶರೀಫ್​ ಅವರು ಬಾಲಕ ಮುಳುಗುತ್ತಿದ್ದ ಬಾಲಕನನ್ನು ಕಂಡು ಕೂಡಲೆ ತನ್ನ ಪ್ರಾಣವನ್ನೇ ಲೆಕ್ಕಿಸದೆ ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿಗೆ ಹಾರಿ ರಕ್ಷಣೆಗೆ ಮುಂದಾಗಿದ್ದರು. ಈಜಿ ಬಾಲಕನ ಬಳಿ ತೆರಳಿ  ಹರಿಯುವ ನೀರಿನಿಂದ ಪಾರು ಮಾಡಿದ್ದಾರೆ. ಆದ್ರೆ ನದಿ ನೀರಿನ ಹರಿವಿನ ಪ್ರಮಾಣ ಜಾಸ್ತಿ ಇದ್ದ ಕಾರಣದಿಂದ ನೀರಿನ ರಭಸಕ್ಕೆ ಶರೀಫ್​​ ಈಜಲು ಆಗದೆ ನದಿಯಲ್ಲೆ ಮುಳುಗಲು ಆರಂಭಿಸಿದ್ದರು.

ಶರೀಫ್​​ ಮುಳುತ್ತಿದ್ದನ್ನ ಗಮನಿಸಿದ ಆತನ ಗೆಳೆಯರು ಕೂಡಲೇ ನದಿಗೆ ಹಾರಿದ್ದಾರೆ.  ನೀರಿನ ರಭಸದಿಂದಾಗಿ ಶರೀಫ್​​ ನನ್ನ ರಕ್ಷಣೆ ಮಾಡಲು ಸಾಧ್ಯವಾಗೆದೆ ವಾಪಸ್ ಆಗಿದ್ದಾರೆ. NDRF ತಂಡದ ಮೂಲಕ ಆತನನ್ನು ಹುಡುಕಲು ಎಷ್ಟೆ ಪ್ರಯತ್ನ ಮಾಡಿದ್ರು ಎರಡು ದಿನಗಳ ಬಳಿಕ ಶರೀಪ್ ಇಂದು ಶವವಾಗಿ ಪತ್ತೆಯಾಗಿದ್ದಾರೆ.

34 ವರ್ಷದ ಶರೀಪ್ ಮೂಲತಃ ಹುಕ್ಕೇರಿ ಪಟ್ಟಣದ ನಿವಾಸಿ, ಕೃಷ್ಣಾ ನದಿಗೆ ನೀರು ಬಂದಿದ್ದ ಹಿನ್ನಲೆ ಮೀನು  ಹಿಡಿಯಲು ಅಂತ ತನ್ನ ಸ್ನೇಹಿತರ ಜೊತೆಗೆ ಆಗಮಿಸಿದ್ದ. ಇದೇ ಸಮಯದಲ್ಲಿ  ದುರಂತಕ್ಕೆ ಬಲಿಯಾಗಿದ್ದು, ಆತನ ಸ್ನೇಹಿತರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಶರೀಫ್​ ಪ್ರಯತ್ನದಿಂದಾಗಿ ಬಾಲಕ ಏನೂ ಬದುಕಿದ್ದಾನೆ. ಆದ್ರೆ ಶರೀಫ್​​ ಮಾತ್ರ ಮರಳಿ ಬರಲಿಲ್ಲ. ಆತನ ಇಬ್ಬರು ಮಕ್ಕಳು ಹಾಗೂ ಹೆಂಡತಿ ಬೀದಿಗೆ ಬಿದ್ದಂತಾಗಿದೆ. ಇಡೀ ಕುಟುಂಬಕ್ಕೆ ಶರೀಫ್​​ ಒಬ್ಬರೇ ಆಸರೆಯಾಗಿದ್ದರು. ನಮ್ಮ ಮುಂದಿನ ಜೀವನ ಹೇಗೆ ಎಂಬುದು ಶರೀಫ್​​ ಕುಟುಂಬಸ್ಥರು ಕಣ್ಣೀರಾಕುತ್ತಿದ್ದಾರೆ.

ಸಾಮಾನ್ಯವಾಗಿ ಪ್ರವಾಹದ ಪರಿಸ್ಥಿತಿಯಲ್ಲಿ ಯಾರಾದರು ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡ್ರೆ ಅಂತವರಿಗೆ ಪರಿಹಾರ ನೀಡಲು ಅವಕಾಶಗಳಿವೆ. ಪ್ರವಾಹ ತಗ್ಗಿದ ಬಳಿಕ ಇಂತಹ ಘಟನೆ ನಡೆದಾಗ ಪರಿಹಾರ ನೀಡಲು ನಮಗೆ ಅನುಮತಿ ಇಲ್ಲಾ ಎನ್ನುವ ಮಾತನ್ನ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಶರೀಪ್ ಮಾನವೀಯತೆ ಆಧಾರದ ಮೇಲೆ ಷರೀಫ್​​ ಕುಟುಂಬಕ್ಕೆ ಪರಿಹಾರ ನೀಡಬೇಕು ಸ್ಥಳೀಯರು ಜನ ಒತ್ತಾಯಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: