ದೇಶಾದ್ಯಂತ ಟೊಮೆಟೊ(Tomato)ಬೆಲೆ (Price)ಪೆಟ್ರೋಲ್ ಡೀಸೆಲ್(Petrol-Disel) ಹಾಗೂ ಸೇಬಿನ(Apple) ಹಣ್ಣಿನ ಬೆಲೆಗಿಂತ ದುಬಾರಿಯಾಗಿದೆ..ಇತರರೂ ಟೊಮೆಟೊ ಬೆಲೆ ಹೆಚ್ಚಳವಾಗಿರುವುದರಿಂದ ಉತ್ತಮ ಲಾಭ ಪಡೆಯುತ್ತಿದ್ದಾರೆ ಗ್ರಾಹಕರೂ ಟೊಮೆಟೊ ಬೆಲೆ ಹೆಚ್ಚಳಕ್ಕೆ ಕಣ್ಣೀರು ಸುರಿಸುತ್ತಿದ್ದಾರೆ.. ಒಂದು ಕಡೆ ಟೊಮೆಟೊ ಬೆಲೆ 150 ರೂಪಾಯಿಂದ 250 ರೂಪಾಯಿಗಳಿಗೆ ತಲುಪಿದೆ.. ಹೀಗಾಗಿ ಅಡುಗೆಗೆ ಟೊಮೆಟೊ ಬಳಸುವ ಮುನ್ನ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಲೆ ಹೆಚ್ಚಳವಾಗಿರುವ ಟೊಮ್ಯಾಟೋ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದೆ. ತೀವ್ರಗತಿಯಲ್ಲಿ ಗಗನಕ್ಕೇರಿರುವ ಟೊಮೆಟೊ ಬೆಳೆಯ ರಕ್ಷಣೆಗಾಗಿ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ(Illegal electricity connections) ತುಳಿದು ವ್ಯಕ್ತಿ ಚಿಕ್ಕಬಳ್ಳಾಪುರದಲ್ಲಿ ಮೃತಪಟ್ಟಿದ್ದ. ಇದರಿಂದ ರೊಚ್ಚಿಗೆದ್ದ ಮೃತ ಯುವಕನ ಕುಟುಂಬಸ್ಥರು ತೋಟದ ಮಾಲೀಕನನ್ನು ಥಳಿಸಿ ಹತ್ಯೆಗೈದಿದ್ದಾರೆ.
ಇಬ್ಬರನ್ನು ಟೊಮ್ಯಾಟೋ ಬಲಿಪಡೆದಿದ್ದು ಹೇಗೆ..?
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚರಕಮಟ್ಟೇನಹಳ್ಳಿಯಲ್ಲಿ ಟೊಮೆಟೊ ಬೆಳೆ ರಕ್ಷಣೆಗೆ ಹಾಕಲಾಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಸಂತರಾವ್ ಎಂಬಾತ ಮೃತಪಟ್ಟಿದ್ದ . ವಸಂತರಾವ್ ಸಾವಿಗೆ
ಚಿಕ್ಕಹುಸೇನಪುರ ಗ್ರಾಮದ ರೈತ ಅಶ್ವತ್ಥರಾವ್ ಹಾಕಿದ್ದ ಅಕ್ರಮ ವಿದ್ಯುತ್ ಸಂಪರ್ಕವೇ ಕಾರಣ ಎಂದು ರೊಚ್ಚಿಗೆದ್ದ ವಸಂತರಾವ್ ಕುಟುಂಬಸ್ಥರು, ಅಶ್ವತ್ಥರಾವ್ ಚೆನ್ನಾಗಿ ಥಳಿಸಿ ಆತನ ಸಾವಿಗೆ ಕಾರಣರಾಗಿದ್ದಾರೆ..
ಸಾಮಾನ್ಯವಾಗಿ ಆಸ್ತಿ ಒಡವೆ ವಸ್ತುಗಳ ವಿಚಾರಕ್ಕೆ ಗಲಾಟೆಯಾಗುತ್ತದೆ.. ಕೆಲವೊಮ್ಮೆ ಅತಿರೇಕಕ್ಕೆ ಪರಿಸ್ಥಿತಿ ಹೋದಾಗ ಕೊಲೆಯು ನಡೆಯುತ್ತದೆ.. ಆದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಇಬ್ಬರು ಅಮಾಯಕರು ಅರಿವಿಲ್ಲದೆ ಟೊಮೆಟೊ ಬೆಳೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹೌದು ಇದು ಆಶ್ಚರ್ಯ ಅನಿಸಿದ್ರೂ ಸತ್ಯ.. ಚಿಕ್ಕಹುಸೇನಪುರ ಗ್ರಾಮದ ರೈತ ಅಶ್ವತ್ಥರಾವ್ ಟೊಮೆಟೋ ಬೆಳೆದಿದ್ದರು. ಟೊಮೆಟೋ ದರ ದುಬಾರಿಯಾಗಿದ್ದರ ಹಿನ್ನೆಲೆಯಲ್ಲಿ ತೋಟಕ್ಕೆ ಕಳ್ಳರ ಕಾಟ ಎದುರಾಗಬಹುದು. ಜತೆಗೆ ಪ್ರಾಣಿಗಳು ಲಗ್ಗೆ ಇಡಬಹದೆಂದು ಬೆಳೆ ರಕ್ಷಣೆ ಸಲುವಾಗಿ ತೋಟಕ್ಕೆ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ತೋಟದ ಪಕ್ಕದಲ್ಲೇ ಜಮೀನು ಹೊಂದಿರುವ ವಸಂತರಾವ್ ಸಹ ತನ್ನ ಜಮೀನಿನಲ್ಲಿ ಮೇಕೆ ಶೆಡ್ ನಿರ್ಮಿಸಿಕೊಂಡಿದ್ದರು. ಕಳೆದ ರಾತ್ರಿ ಮೇಕೆ ಮರಿ ತಪ್ಪಿಸಿಕೊಂಡು ಟೊಮೇಟೊ ತೋಟಕ್ಕೆ ನುಗ್ಗಿದೆ. ಆ ವೇಳೆ ಅಶ್ವತ್ಥರಾವ್ ತೋಟದ ಬಳಿ ಹೋದಾಗ ವಿದ್ಯುತ್ ತಗುಲಿ ವಸಂತರಾವ್ ಸಾವನ್ನಪ್ಪಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಚರಕಮಟ್ಟೇನಹಳ್ಳಿ ಸಮಸ್ತರೂ ವಸಂತರಾವ್ ಅವರ ಶೆಡ್ ಪಕ್ಕದ ತೋಟದಲ್ಲಿ ಮಲಗಿದ್ದ ಅಶ್ವತ್ಥರಾವ್ರನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಅಶ್ವತ್ಥಾಮನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಆಸ್ಪತ್ರೆಗೆ ಹೋಗುವ ವೇಳೆಗಾಗಲೇ ಸಾವನ್ನಪ್ಪಿದ್ದಾರೆ.ಸದ್ಯ ಮಂಚೇನಹಳ್ಳಿ ಪೊಲೀಸರು ಅಶ್ವಥ್ ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ..
ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಕಡಿವಾಣ ಹಾಕುವಂತೆ ಎಸ್ಪಿ ಸೂಚನೆ
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಅಶ್ವತ್ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದರು. ಹೆಚ್ಚುತ್ತಿರುವ ಟೊಮೆಟೊ ಬೆಲೆಯಿಂದ ಹಣ್ಣು ಕಳ್ಳತನ ವಾಗಬಹುದು ಎಂಬ ಕಾರಣಕ್ಕೆ ಜಮೀನಿನ ಸುತ್ತ ವಿದ್ಯುತ್ ತಂತಿ ಅಳವಡಿಸಿದ್ದರು.. ಆದ್ರೆ ಬೆಸ್ಕಾಂ ಅಧಿಕಾರಿಗಳ ಅನುಮತಿ ಈ ಕೃತ್ಯ ನಡೆದಿದೆ. ಹೀಗಾಗಿ ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಕಡಿವಾಣ ಹಾಕುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ..
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ