HOME » NEWS » District » MAN COMMITS MURDER ON ACCOUNT OF GIRLFRIEND WHOM HE MET ON FACEBOOK IN KOLAR RRK SKTV

Kolar Crime: Facebook ಪ್ರೇಮಿಗಾಗಿ ಕೊಲೆಗಾರನಾದ ವ್ಯಕ್ತಿ, ಯುವತಿ ಸೇರಿ ಮೂವರು ಅಂದರ್ !

ಆರೋಪಿಗಳಾದ ರಾಜೇಂದ್ರ ಪ್ರಸಾದ್  ಹಾಗು ಮೆಲ್ವಿನ್ ಎನ್ನುವರು ಕೆಲವೇ ಕ್ಷಣಗಳಲ್ಲಿ ಮತ್ತೆ ಕೋಚಿಂಗ್ ಸೆಂಟರ್‌ ನೊಳಕ್ಕೆ ನುಗ್ಗಿ ಮನಬಂದಂತೆ ಲಾಂಗ್ ಹಾಗು ರಾಡ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಕೂಡಲೇ ಮುಕುಂದನ್ ಅವರನ್ನ  ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದಾಗ, ಸಾವಿಗೂ ಮುನ್ನ ಮೃತ ಮುಕುಂದನ್ ತನ್ನ ಕೊಲೆಗೆ ಕಾರಣರಾದವರ ಹೆಸರನ್ನು ಹೇಳಿದ್ದರಿಂದ ಆರೋಪಿಗಳ ಪತ್ತೆ ಕಾರ್ಯ ಪೊಲೀಸರಿಗೆ ಸುಲಭವಾಗಿದೆ.

news18-kannada
Updated:May 3, 2021, 9:32 AM IST
Kolar Crime: Facebook ಪ್ರೇಮಿಗಾಗಿ ಕೊಲೆಗಾರನಾದ ವ್ಯಕ್ತಿ, ಯುವತಿ ಸೇರಿ ಮೂವರು ಅಂದರ್ !
ಕೊಲೆಗಾರರನ್ನು ಬಂಧಿಸಿದ ಪೋಲೀಸರು
  • Share this:
ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಪ್ ನಗರದಲ್ಲಿ ಇತ್ತೀಚೆಗೆ ಕೊಲೆ ಪ್ರಕರಣಗಳು ಹೆಚ್ಚುತ್ತಲೇ ಇದೆ. ಏಪ್ರಿಲ್ 28 ರಂದು ಸಂಜೆ, ಕೆಜಿಎಫ್ ನಗರದ ಕಿಂಗ್ ಜಾರ್ಜ್ ಹಾಲ್ ಪಕ್ಕದಲ್ಲೇ ಇರುವ ರಾಬರ್ಟ್‍ಸನ್ ಪೇಟೆ ಬಡಾವಣೆಯಲ್ಲಿ ಮೂರನೇ ಕ್ರಾಸ್‍ ಬಳಿಯಿರುವ ರಿಷಿಕೇಶ್ ಟ್ಯಾಲೆಂಟ್ ಐಐಟಿ ಎನ್ನುವ ಕಂಪ್ಯೂಟರ್ ತರಬೇತಿ ಸೆಂಟರ್ ನಲ್ಲಿ ಮುಕುಂದನ್ ಎನ್ನುವರ ಮೇಲೆ ಇಬ್ಬರು ಅಪರಿಚತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 30 ರಂದು, ಮುಕುಂದನ್ ಸಾವನ್ನಪ್ಪಿದ್ದಾರೆ.

ಏಪ್ರಿಲ್ 28 ರಂದು ಸಂಜೆ 7.30 ರ ವೇಳೆಯಲ್ಲಿ ಕೋಚಿಂಗ್ ಸೆಂಟರ್ ಗೆ  ಬಂದಿದ್ದ ಇಬ್ಬರು ವ್ಯಕ್ತಿಗಳು, ಸಾರ್ ನಿಮ್ಮ ಬಿಲ್ಡಿಂಗ್‍ನಲ್ಲಿ ಏನಾದರು ಪೇಂಟಿಂಗ್ ಕೆಲಸ ಇದಿಯಾ ಹೇಳಿ, ನಾವು ಪೇಂಟ್ ಮಾಡಿ ಕೊಡ್ತಿವಿ. ಪ್ಲಂಬಿಂಗ್ ಕೆಲಸವಾದರು ಮಾಡುತ್ತೀವಿ ಎಂದಿದ್ದಕ್ಕೆ , ಕೆಲಸವಿಲ್ಲ, ಹೋಗಿ ಎಂದು ಕಳಿಸಿದ್ದಾರೆ. ಆದರೆ ಆರೋಪಿಗಳಾದ ರಾಜೇಂದ್ರ ಪ್ರಸಾದ್  ಹಾಗು ಮೆಲ್ವಿನ್ ಎನ್ನುವರು ಕೆಲವೇ ಕ್ಷಣಗಳಲ್ಲಿ ಮತ್ತೆ ಕೋಚಿಂಗ್ ಸೆಂಟರ್‌ ನೊಳಕ್ಕೆ ನುಗ್ಗಿ ಮನಬಂದಂತೆ ಲಾಂಗ್ ಹಾಗು ರಾಡ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಕೂಡಲೇ ಮುಕುಂದನ್ ಅವರನ್ನ  ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದಾಗ, ಸಾವಿಗೂ ಮುನ್ನ ಮೃತ ಮುಕುಂದನ್ ತನ್ನ ಕೊಲೆಗೆ ಕಾರಣರಾದವರ ಹೆಸರನ್ನು ಹೇಳಿದ್ದರಿಂದ ಆರೋಪಿಗಳ ಪತ್ತೆ ಕಾರ್ಯ ಪೊಲೀಸರಿಗೆ ಸುಲಭವಾಗಿದೆ.

25 ವರ್ಷ ವಯಸ್ಸಿನ ಅಶ್ವತಿ ಅಲಿಯಾಸ್ ಆಶೃತಿ ಎನ್ನುವ ಯುವತಿಯ ಹೆಸರನ್ನ ಹೇಳಿ, ಅವಳೇ ನನ್ನ ಕೊಲೆಗೆ ಕಾರಣ ಎನ್ನುತ್ತಾ ಕೊನೆಯುಸಿರು ಎಳೆದಿದ್ದಾರೆ. ಜೊತೆಗೆ ಅಶ್ವತಿಯ ತಮ್ಮ ಮಣಿಕಿರಣ್ ಎನ್ನುವ ಯುವಕನ ಹೆಸರನ್ನು ಹೇಳಿ ಆವರು ನನ್ನ ಕೊಲೆಗೆ ಕಾರಣವೆಂದು ಹೇಳಿದ್ದಾರೆ. ಆಶೃತಿ ಕೆಜಿಎಪ್ ನರಗದ ಪೈಪ್‍ಲೈನ್ ಬಡಾವಣೆಯಲ್ಲಿ ವಾಸವಿದ್ದು, ಅಶ್ವತಿ ಮೃತ ಮುಕುಂದನ್ ಒಡೆತನದ ರಿಷಿಕೇಶ್ ಟ್ಯಾಲೆಂಟ್ ಐಐಟಿ ಕೋಚಿಂಗ್ ಸೆಂಟರ್‍ನಲ್ಲಿಯೇ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ, ಮ್ಯಾನೇಜರ್ ಕಮ್ ರಿಸೆಪ್ಸೆನಿಸ್ಟ್ ಆಗಿ ಕೆಲಸಮಾಡಿ, ಇತ್ತೀಚೆಗೆ ಕೆಲಸ ಬಿಟ್ಟಿದ್ದಾರೆ.

ಅಶ್ವತಿ ಮೊಬೈಲ್ ನಂಬರ್ ಗೆ ಯಾರ್ಯಾರು ಪೋನ್ ಕರೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನ ಪೊಲೀಸರು ಕಲೆಹಾಕಿದಾಗ,  ಪೈಪ್‍ಲೈನ್ ಬಡಾವಣೆಯ ರಾಜೇಂದ್ರ ಪ್ರಸಾದ್ ಎನ್ನುವರ ನಂಬರ್ ಗೆ ಹೆಚ್ಚು ಬಾರಿ ಕರೆ ಮಾಡಿದ್ದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆ ಆರೋಪಿಯಾದ  ಪ್ರಸಾದ್ ಅಲಿಯಾಸ್ ರಾಜೇಂದ್ರ ಪ್ರಸಾದ್ ಮತ್ತು ಅಶ್ವತಿ ಇಬ್ಬರು ಫೇಸ್‍ಬುಕ್ ಮೂಲಕ ಪರಿಚಯಸ್ಥರು.  ರಾಜೇಂದ್ರ ಪ್ರಸಾದ್‍ಗು ಮದುವೆಯಾಗಿದ್ದರು,  ಇಬ್ಬರ  ಸ್ನೇಹದ ಪರಿಚಯದಿಂದ ಹೊಸ  ಸಂಬಂಧವಾಗಿ  ರೂಪುಗೊಂಡಿದೆ.

ನನ್ನನ್ನ ಮದುವೆ ಮಾಡಿಕೊ ಎಂದು ಮುಕುಂದನ್ ಎನ್ನುವರು ಪೀಡಿಸುತ್ತಿದ್ದು, ದಿನವಿಡಿ ಪೋನ್ ಮೂಲಕ ಹಿಂಸೆ ಕೊಡುತ್ತಿದ್ದಾರೆ. ಹೀಗಾದರೆ ನಾವಿಬ್ಬರು ಖುಷಿಯಿಂದ ಇರೊಕೆ ಆಗಲ್ಲ,  ಎಂದು ಅಶ್ವತಿ ಹೇಳಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆರೋಪಿ ರಾಜೇಂದ್ರ ಪ್ರಸಾದ್,  ಏಪ್ರಿಲ್ 28 ರಂದು ಸಂಜೆ ಕೊಲೆ ಯತ್ನ ಮಾಡಿ,  TN 09 AQ  0766 ಸಂಖ್ಯೆಯ ಟಿವಿಎಸ್ ಗಾಡಿಯಲ್ಲಿ ಸ್ಥಳದಿಂದ ಪರಾರಿಯಾಗಿ, ಕೃತ್ಯಕ್ಕೆ ಬಳಸಿದ ಬೈಕ್ ಹಾಗು ಲಾಂಗ್ ಹಾಗು ರಾಡ್ ಅನ್ನು ಪಾರಾಂಡಹಳ್ಳಿ ರಸ್ತೆಯ ರಾಮಾಪುರ ಕೆರೆಯಲ್ಲಿ ಬಿಸಾಡಿ,  ಬಳಿಕ ಎಂದಿನಂತೆ ಆರಾಮಾಗಿ ಒಡಾಡಿಕೊಂಡಿದ್ದಾರೆ.

ಇದನ್ನೂ ಓದಿhttps://kannada.news18.com/news/coronavirus-latest-news/oxygen-shortage-everywhere-what-is-the-severity-of-corona-for-a-patient-to-be-icu-or-o2-dependent-sktv-559607.html

ಪೊಲೀಸರು ರಾಜೇಂದ್ರ ಪ್ರಸಾದ್  ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಿಯತಮೆಯ ಮನಶ್ಸಾಂತಿಗಾಗಿಯೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿರೋದಾಗಿ ಡಿವೈಎಸ್ಪಿ ಉಮೇಶ್ ಮಾಹಿತಿ ನೀಡಿದ್ದಾರೆ. 25 ವರ್ಷ ವಯಸ್ಸಿನ ಹುಡುಗಿಯನ್ನ ಮದುವೆ ಮಾಡಿಕೊ ಎಂದು ಪೀಡಿಸಿದ್ದಾನೆ, ಹಾಗಾಗಿಯೇ ಕೆಲಸ ಬಿಟ್ಟಿದ್ದರು. ಆದರೂ ಪೋನ್ ಮಾಡುವುದು, ಮೆಸೇಜ್ ಮಾಡುವ ಮೂಲಕ ಹಿಂಸೆ ಕೊಡುತ್ತಿದ್ದರು. ಕಿರುಕುಳವೇ ಕಾರಣವೆಂದು ತಂದೆ ಮೂರ್ತಿ ಹಾಗು ತಾಯಿ ಉಷಾ ಆರೋಪವಾಗಿದೆ.
Youtube Video

ಮುಕುಂದನ್ ಅವರಿಗೆ 11 ವರ್ಷದ ಮಗಳಿದ್ದು, ತಂದೆ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಪ್ರೀತಿ ಪ್ರೇಮದ ಹೆಸರಲ್ಲಿ ಯವತಿಯನ್ನ ಪೀಡಿಸಿದ ಮುಕುಂದನ್ ಸದ್ಯ ಇಹಲೋಕ ತ್ಯಜಿಸಿದ್ದು, ಪ್ರಿಯಕರನ ಜೊತೆಗೂಡಿ, ತಾನು ಹಿಂದೆ ಕೆಲಸ ಮಾಡಿದ ಮಾಲೀಕನನ್ನೆ ಮುಗಿಸಲು ಹೇಳಿದ್ದ ಅಶ್ವತಿ ಸೇರಿ ಮೂವರು ಜೈಲು ಪಾಲಾಗಿದ್ದಾರೆ.
Published by: Soumya KN
First published: May 3, 2021, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories