HOME » NEWS » District » MAN ALLEGEDLY MURDERS HIS NEPHEW AT NELAMANGALA ANLM SNVS

ನೆಲಮಂಗಲದಲ್ಲಿ ಹಳೆ ವೈಷಮ್ಯಕ್ಕೆ ಅಣ್ಣನ ಮಗುವಿನ ಕೊಲೆ; ಉಂಡ ಮನೆಗೆ ದ್ರೋಹ

ಆತ ಇನ್ನೂ ಪ್ರಪಂಚದ ಆಗೂ ಹೋಗುಗಳನ್ನ ಅರಿಯದ ಪುಟ್ಟು ಕುವರ, ತಾನಾಯ್ತು ತನ್ನ ಪಾಡಾಯ್ತು ಅಂತ ಮನೆಯಲ್ಲಿ ಇರುತ್ತಿದ್ದ. ಆದ್ರೆ ಆತನಿಗೆ ತನ್ನ ಚಿಕ್ಕಪ್ಪನ ಮೇಲೆ ಎಲ್ಲಿಲ್ಲದೆ ಪ್ರೀತಿ, ಚಿಕ್ಕಪ್ಪ ಎಂದು ಬಿಗಿದಪ್ಪಿ ಕೊಳ್ಳುತ್ತಿದ್ದ ಮಗುವನ್ನೇ ಆ ಪಾಪಿ ಚಿಕ್ಕಪ್ಪ ಹೊಡೆದು ಸಾಯಿಸಿದ್ದಾನೆ.

news18-kannada
Updated:October 23, 2020, 4:05 PM IST
ನೆಲಮಂಗಲದಲ್ಲಿ ಹಳೆ ವೈಷಮ್ಯಕ್ಕೆ ಅಣ್ಣನ ಮಗುವಿನ ಕೊಲೆ; ಉಂಡ ಮನೆಗೆ ದ್ರೋಹ
ಕೊಲೆಯಾದ ಮಗು ರಿಯಾನ್ ಮತ್ತು ಆರೋಪಿ ದಾದಾಪೀರ್
  • Share this:
ನೆಲಮಂಗಲ: ಇಲ್ಲಿಯ ದಾನೋಜಿಪಾಳ್ಯದಲ್ಲಿ ಪುಟ್ಟ ಬಾಲಕನೊಬ್ಬನ ಕಗ್ಗೊಲೆಯಾಗಿದೆ. ಮೊಹಮ್ಮದ್ ರಿಯಾನ್​ನನ್ನು ಆತನ ಸ್ವಂತ ಚಿಕ್ಕಪ್ಪ ದಾದಾಪೀರ್ ಎಂಬಾತನೇ ಕೊಲೆ ಮಾಡಿರುವ ಆರೋಪ ಇದೆ. ತನ್ನ ಅಣ್ಣನ ಮೇಲಿನ ಹಳೆಯ ದ್ವೇಷ ತೀರಿಸಿಕೊಳ್ಳಲು ದಾದಾಪೀರ್ ಈ ಕೃತ್ಯ ಎಸಗಿರುವ ಶಂಕೆ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ದಾನೋಜಿಪಾಳ್ಯದಲ್ಲಿ ಜೀವನೋಪಾಯಕ್ಕಾಗಿ ಕಳೆದ 20 ವರ್ಷದ ಹಿಂದೆ ದಾವಣಗೆರೆಯ ಹರಪ್ಪನಹಳ್ಳಿಯಿಂದ ನೆಲಮಂಗಲಕ್ಕೆ ಬಂದಿದ್ದವರು ಚಮನ್ ಹಾಗೂ ಆತನ ಪತ್ನಿ ಆಯಿಷಾ. ಇವರ ಏಕೈಕ ಗಂಡು ಮಗ ಮೊಹಮದ್ ರಿಯಾನ್ ಈಗ ಕೊಲೆಯಾಗಿರುವ ಬಾಲಕ.

ನಿನ್ನೆ ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಮನೆ ಬಳಿ ಬಂದ ಆರೋಪಿ ದಾದಾಪೀರ್, ಸಿಸಿ ಕ್ಯಾಮೆರಾಗಳ ಮೈನ್ ಸ್ವಿಚ್ ಆಫ್ ಮಾಡಿ, ನಂತರ ಮೃತ ರಿಯಾನ್‌ನನ್ನ ತನ್ನ ರೂಮಿನ ಬಳಿ ಕರೆದುಕೊಂಡು ಹೋಗಿ, ಆಟ ಆಡಿಸುವಾಗ ಒಂದು ಕಬ್ಬಿಣದ ಸರಳಿನಿಂದ ತಲೆಗೆ ಬಲವಾಗಿ ಹೊಡೆದು ಕೊಲೆಗೈಯ್ಯುತ್ತಾನೆ. ಬಳಿಕ ಅಲ್ಲೇ ಇದ್ದ ಸಿಂಟ್ಯಾಕ್ಸ್‌ಗೆ ಹಾಕಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ವಿಚಾರ; ಗಂಡನನ್ನು ಬರ್ಬರವಾಗಿ ಕೊಂದು ಕುಕ್ಕರ್​ನಲ್ಲಿ ಬೇಯಿಸಿದ ಹೆಂಡತಿ

ಈ ಪುಟ್ಟ ಕಂದನನ್ನ ಆತ ಕೊಲ್ಲಲು ಹಳೆ ದ್ವೇಷ ಕಾರಣ ಎಂದು ಹೇಳಲಾಗುತ್ತಿದೆ. ನೆಲಮಂಗಲದ ಸುತ್ತಮುತ್ತ ಚಮನ್ ಗಾರೆ ಕೆಲಸ ಮಾಡಿಸುತ್ತಾನೆ, ತನ್ನ ಕೆಲಸಕ್ಕೆ ಕೂಲಿಯಾಳುಗಳು ಬೇಕೆಂದು ತಮ್ಮ ಊರಿನವರನ್ನ ಕರೆಸಿಕೊಳ್ಖುತ್ತಾನೆ. ಅದೇ ತಂಡದಲ್ಲಿ ಆರೋಪಿ ದಾದಾಪೀರ್ ಸಹ ಬರುತ್ತಾನೆ. ದಾದಾಪೀರ್‌ಗೆ ತನ್ನದೇ ಊರಿನ ಅನ್ಯಕೋಮಿನ ಯುವತಿಯೊಂದಿಗೆ ಪ್ರೇಮಾಂಕುರವಾಗುತ್ತದೆ. ಈ ವಿಷಯ ಎಲ್ಲರಿಗೂ ತಿಳಿಯುವ ಮುಂಚೆಯೇ ಆರೋಪಿ ದಾದಾಪೀರ್ ಹಾಗೂ ಯುವತಿಯ ಕುಟುಂಬ ಹರಪ್ಪನಹಳ್ಳಿಗೆ ತೆರಳುತ್ತಾರೆ. ಅಲ್ಲಿ ಗಲಾಟೆ ಗದ್ದಲಗಳಾಗಿ ಯುವತಿಯ ಪೋಷಕರು ದಾದಾಪೀರ್ ವಿರುದ್ದ ಅತ್ಯಾಚಾರ ಪ್ರಕರಣದ ದೂರು ದಾಖಲಿಸಿ ಜೈಲಿಗಟ್ಟುತ್ತಾರೆ. ಕೆಲದಿನಗಳ ನಂತರ ಜಾಮೀನಿನ ಮೇಲೆ ಹೊರಬಂದು ಈತ ಮದುವೆ ಮಾಡಿಕೊಳ್ಳುತ್ತಾನೆ. ತಾನು ‌ಜೈಲಿಗೆ ಹೋದಾಗ ಅಣ್ಣ ಚಮನ್ ತನಗೆ ಸಹಾಯ ಮಾಡಿಲ್ಲ ಎಂಬ ದ್ವೇಷ ಈತನಲ್ಲಿ ಉಳಿದಿರುತ್ತದೆ. ಊರಿನಲ್ಲಿ ಈ ವಿಚಾರಕ್ಕೆ ಆಗಾಗ್ಗೆ ಜಗಳ ಸಹ ಆಗುತ್ತಿತ್ತೆನ್ನಲಾಗಿದೆ.

ಇದನ್ನೂ ಓದಿ: ಅಣ್ಣನ ಮಗಳಿಗೆ ಮದ್ಯ ಕುಡಿಸಿ ಅತ್ಯಾಚಾರಗೈದು ಕೊಲೆ; ಆರೋಪಿಯ ಬಂಧನ

ನಿನ್ನೆ ಮಗುವನ್ನು ಕೊಲ್ಲಲು ಇದೇ ದ್ವೇಷ ಕಾರಣ ಎಂದು ಮೃತನ‌ ಪೋಷಕರು ಆರೋಪ ಮಾಡಿದ್ದಾರೆ. ಪ್ರಾರಂಭದಲ್ಲಿ ಕೊಲೆ ಮಾಡಿರುವ ಅಸಲಿ ಸತ್ಯ ತಿಳಿಯದೇ ಚಿಕ್ಕಪ್ಪನ ಜೊತೆ ಮಗು ಎಲ್ಲಿಗೋ ಹೋಗಿರಬೇಕು ಎಂದು ಭಾವಿಸುತ್ತಾರೆ. ದಾದಾಪೀರ್ ಮೊಬೈಲ್ ಇದ್ದಕ್ಕಿದ್ದಂತೆ ಸ್ವಿಚ್ ಆಫ್ ಆಗುತ್ತೆ, ಆಗ ಆತಂಕಗೊಂಡ ಪೋಷಕರು ಮಗನಿಗಾಗಿ ಎಲ್ಲೆಡೆ ಹುಡುಕಾಡತೊಡಗುತ್ತಾರೆ. ಮಗ ಪತ್ತೆಯಾಗದೆ ಪೋಷಕರು ಹತಾಶರಾಗುತ್ತಾರೆ. ಆದ್ರೆ ಪಕ್ಕದ ಮನೆಯವರು ನಲ್ಲಿ ನೀರು ಬಿಟ್ಟಾಗಲೇ ಗೊತ್ತಾಗಿದ್ದು ಮಗನ ಶವ ಸಿಂಟ್ಯಾಕ್ಸ್‌ನಲ್ಲಿ ಇದೆ ಎಂದು.

ಇದನ್ನೂ ಓದಿ: ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆಗೆ ಹೊಸ ತಿರುವು; ಹಿರಿಯಡ್ಕ ಕೊಲೆ ಪ್ರತೀಕಾರ ಎಂದ ಆರೋಪಿಮೃತನ ಪೋಷಕರು ತಕ್ಷಣ ನೆಲಮಂಗಲ ನಗರ ಪೊಲೀಸರಿಗೆ  ಮಾಹಿತಿ ನೀಡಿ ಮೃತ ದೇಹವನ್ನ ಶವಪರೀಕ್ಷೆಗೆ ರವಾನಿಸಿದ್ದಾರೆ. ಈ ವೇಳೆ ಪೊಲೀಸರು ಚುರುಕಿನ‌ ತನಿಖೆಗೆ ಮುಂದಾಗಿದ್ದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ತಪ್ಪಿಸಿಕೊಂಡಿದ್ದು ಆತನನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ಧಾರೆ.

ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
Published by: Vijayasarthy SN
First published: October 23, 2020, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading