• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಸಿಗಲು ಯಡಿಯೂರಪ್ಪ ಕಾರಣ: ಕೈ ಶಾಸಕ ನಂಜೇಗೌಡ ಹೇಳಿಕೆ

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಸಿಗಲು ಯಡಿಯೂರಪ್ಪ ಕಾರಣ: ಕೈ ಶಾಸಕ ನಂಜೇಗೌಡ ಹೇಳಿಕೆ

ಕೆ.ವೈ. ನಂಜೇಗೌಡ

ಕೆ.ವೈ. ನಂಜೇಗೌಡ

ಯಡಿಯೂರಪ್ಪ ಮೊದಲು ಸಿಎಂ ಆಗಿದ್ದಾಗ ರೈತರಿಗೆ ಪ್ರತಿ ಲೀಟರ್ ಹಾಲಿಗೆ 2 ರೂ ಪ್ರೋತ್ಸಾಹ ನೀಡಿದ್ದರು. ಅದಾದ ನಂತರ ಬಂದ ಮುಖ್ಯಮಂತ್ರಿಗಳೂ ಇದೇ ಪರಂಪರೆ ಮುಂದುವರಿಸಿದರು. ಇದಕ್ಕೆ ಬಿಎಸ್​ವೈ ಪ್ರಶಂಸಾರ್ಹ ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಹೇಳಿದ್ದಾರೆ.

  • Share this:

ಕೋಲಾರ: ರಾಜ್ಯದಲ್ಲಿ ಹಾಲು ಉತ್ಪಾದಕ ರೈತರಿಗೆ ಪ್ರತೀ ಲೀಟರ್​ಗೆ 5 ರೂಪಾಯಿ  ಪ್ರೋತ್ಸಾಹ ಧನ ಇಂದು ಸಿಗುತ್ತಿದೆ ಎಂದರೆ ಅದಕ್ಕೆ  ಹಾಲಿ ಸಿಎಂ ಯಡಿಯೂರಪ್ಪ ಅವರ ಮೊದಲ ಪ್ರಯತ್ನವೇ ಕಾರಣ ಎಂದು ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಶ್ಲಾಘಿಸಿದ್ದಾರೆ. ಮಾಲೂರು ಪಟ್ಟಣದ  ಕೋಮುಲ್ ಡೈರಿಯ ಕ್ಯಾಂಪ್ ಕಚೇರಿಯಲ್ಲಿ ಆಯೋಜಿಸಿದ್ದ 67 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಶಾಸಕ ನಂಜೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ್ಯ ಗೊವಿಂದಗೌಡ, ಜಿಲ್ಲಾ ಸಹಕಾರ ಸಂಘದ ಉಪಾಧ್ಯಕ್ಷ್ಯ ಗೊವರ್ಧನ ರೆಡ್ಡಿ ಹಾಗು ಬ್ಯಾಂಕ್ ನಿರ್ದೇಶಕರು ಭಾಗಿಯಾಗಿದ್ದರು.


ಕಾರ್ಯಕ್ರಮದಲ್ಲಿ ಎಲ್ಲರನ್ನ ಉದ್ದೇಶಿಸಿ ಮಾತನಾಡಿದ ನಂಜೇಗೌಡ, ಮುಂದಿನ ವಿಧಾನಸಭೆ ಅಧಿವೇಶನದಲ್ಲಿ, ಮಹಿಳಾ ಸಂಘಗಳಿಗೆ 10 ಲಕ್ಷ ಹಣವನ್ನ ಶೂನ್ಯ ಬಡ್ಡಿಯಲ್ಲಿ ಸಾಲವಾಗಿ ನೀಡಲು ಸಹಕಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುವುದಾಗಿ ಭವರಸೆ ನೀಡಿದರು. ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಪಡೆದಿರುವ ಎಲ್ಲಾ ಮಹಿಳೆಯರು ಕಡು ಬಡರಾಗಿದ್ದಾರೆ. ಎಲ್ಲದಕ್ಕೂ ಮಿಗಿಲಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದರೂ ಸಮಯಕ್ಕೆ ಸರಿಯಾಗಿ ಹಣ ವಾಪಾಸ್ ಪಾವತಿ ಮಾಡುತ್ತಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: BTS 2020: ಗಡಿ, ಖಂಡ ದಾಟಿ 2.5 ಕೋಟಿಗೂ ಹೆಚ್ಚು ಜನರ ಮುಟ್ಟಿದ ತಂತ್ರಜ್ಞಾನ ಮೇಳ; ಹಲವು ದೇಶಗಳಿಂದ ಮೆಚ್ಚುಗೆ


ಡಿಸಿಸಿ ಬ್ಯಾಂಕ್​ಗೆ ಬರುವವರು ಬಡವರಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರದಿಂದ ಎಲ್ಲರಿಗು ಶೂನ್ಯ ಬಡ್ಡಿಯಲ್ಲಿ ಸಾಲ ಸಿಗುತ್ತಿದೆ. ಮುಂದಿನ ದಿನದಲ್ಲಿ ಪ್ರತಿ ಮಹಿಳಾ ಸ್ವ ಸಹಾಯ ಸಂಘಕ್ಕೂ 10 ಲಕ್ಷ ಸಾಲ ಸಿಗುವಂತೆ ಆಗಬೇಕು. ಹಾಲಿ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಉತ್ತಮ ಸಹಕಾರಿಯಾಗಿದ್ದು, ಸಹಕಾರಿ ರಂಗ ಮತ್ತಷ್ಟು ಬಲಿಷ್ಟ ಆಗಲಿದೆ ಎಂದು ಕಾಂಗ್ರೆಸ್ ಶಾಸಕ ನಂಜೇಗೌಡ ತಿಳಿಸಿದರು.


ಇನ್ನು ಯಡಿಯೂರಪ್ಪ ಅವರು ಮೊದಲು ಸಿಎಂ ಆದ ನಂತರ, ರೈತರಿಗೆ ಪ್ರತಿ ಲೀಟರ್​ಗೆ 2 ರೂಪಾಯಿ ಪ್ರೋತ್ಸಾಹ ನೀಡುವ ಯೋಜನೆ ಘೋಷಿಸಿದ್ದರು. ತದನಂತರ ಬಂದ ಮುಖ್ಯಮಂತ್ರಿಗಳು ಹೆಚ್ಚುವರಿ ಪ್ರೋತ್ಸಾಹ ಧನ ಘೋಷಿಸಿದ್ದರು ಎನ್ನುವ ಮೂಲಕ ಮಾಲೂರು ಶಾಸಕರು ಮುಖ್ಯಮಂತ್ರಿಗಳ ಗುಣಗಾನ ಮಾಡಿದರು.


ಇದನ್ನೂ ಓದಿ: ವಿಜಯನಗರ ಹೊಸ ಜಿಲ್ಲೆ ಅಸ್ತು ಬೆನ್ನಲ್ಲೇ ಜಮಖಂಡಿಯಲ್ಲಿ ಕೇಳದ ಕೂಗು; ನಾಮಕಾವಸ್ಥೆಯಾಗ್ತಿದೆಯಾ ಜಮಖಂಡಿ ಹೊಸ ಜಿಲ್ಲೆ ಬೇಡಿಕೆ?


ನಾನೊಬ್ಬ ಸಾಮಾನ್ಯ ಎಮ್ಎಲ್ಎ, ಹೈಟೆಕ್ ಆಗಿರಲು ಇಷ್ಟಪಡಲ್ಲ:


ಹಣವಿದ್ದರೆ ಶಾಸಕರ ಬಳಿ ಏನು ಕೆಲಸವಾದರೂ ಮಾಡಿಕೊಳ್ಳಬಹುದು ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ. ಆದರೆ ನಾನು ಸಾಮಾನ್ಯ ಶಾಸಕನಾಗಿ ಇರಲು ಇಷ್ಟಪಡುವೆ. ಪ್ರತಿದಿನ ಬೆಳಗ್ಗೆ ಸಂಜೆ ನನ್ನ ಸ್ವಗ್ರಾಮ ಕೊಮ್ಮನಹಳ್ಳಿ ಗ್ರಾಮದಲ್ಲಿ ಜನರಿಗೆ ಸಿಗಲು ಇಷ್ಟಪಡುವೆ. ರಾಜಕೀಯ ಶಾಶ್ವತವಲ್ಲ. ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡುವುದು ನನ್ನ ಗುರಿ ಎಂದು ಕೆ.ವೈ. ನಂಜೇಗೌಡ ಅವರು ತಿಳಿಸಿದರು.


ವರದಿ: ರಘುರಾಜ್

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು