ಕೊರೋನಾ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಲೂಟಿ: ಸಿದ್ದರಾಮಯ್ಯ ಆರೋಪಕ್ಕೆ ದನಿಗೂಡಿಸಿದ ನಂಜೇಗೌಡ

ಸರ್ಕಾರದ ತಪ್ಪು ನಿರ್ಧಾರದಿಂದಲೇ ಇಂದು ಕೊರೋನಾ ರಾಜ್ಯದಲ್ಲಿ ಹೆಚ್ಚಾಗಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ವಲಸಿಗರನ್ನ ಕಳಿಸುವುದು ಹಾಗು ಬೇರೆ ರಾಜ್ಯಗಳಿಂದ ಜನರನ್ನ ವಾಪಾಸ್ ಕರೆಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿತು ಎಂದು ನಂಜೇಗೌಡ ಆರೋಪಿಸಿದ್ದಾರೆ.

news18-kannada
Updated:July 8, 2020, 5:25 PM IST
ಕೊರೋನಾ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಲೂಟಿ: ಸಿದ್ದರಾಮಯ್ಯ ಆರೋಪಕ್ಕೆ ದನಿಗೂಡಿಸಿದ ನಂಜೇಗೌಡ
ಕೆ.ವೈ. ನಂಜೇಗೌಡ
  • Share this:
ಕೋಲಾರ: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ, ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು ರಾಜ್ಯ ಸರ್ಕಾರಕ್ಕೆ ಮುಂದಿನ ದಿನಗಳು ಸವಾಲಾಗಿ ಪರಿಣಮಿಸಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲು ನಿರಂತರವಾಗಿ ಪ್ರಕರಣಗಳು ದಾಖಲಾಗುತ್ತಿದ್ದು ಸದ್ಯಕ್ಕೆ ಸೋಂಕು ತಡೆಗಟ್ಟುವ ಕ್ರಮಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ‌ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿದ್ದಾರೆ. ಕೋವಿಡ್-19 ಚಿಕಿತ್ಸಾ ಸಲಕರಣೆಗಳ ಖರೀದಿಯಲ್ಲಿ ದುಪ್ಪಟ್ಟು ಲೆಕ್ಕ ತೋರಿಸಿದ್ದು, ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದಕ್ಕೆ ದನಿಗೂಡಿಸಿರುವ ಕೋಲಾರ ಜಿಲ್ಲೆಯ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ, ಸಿದ್ದರಾಮಯ್ಯ ಹೇಳಿದಂತೆ ಇದೊಂದು ಲೂಟಿ ಮಾಡುವ ಸರ್ಕಾರ ಎಂದು ಕಿಡಿಕಾರಿದ್ದಾರೆ.

ಕೋಲಾರದ ಹಾಲು ಒಕ್ಕೂಟ ಕಚೇರಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸರ್ಕಾರದ ತಪ್ಪು ನಿರ್ಧಾರದಿಂದಲೇ ಇಂದು ಕೊರೋನಾ ರಾಜ್ಯದಲ್ಲಿ ಹೆಚ್ಚಾಗಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ವಲಸಿಗರನ್ನ ಕಳಿಸುವುದು ಹಾಗು ಬೇರೆ ರಾಜ್ಯಗಳಿಂದ ಜನರನ್ನ ವಾಪಾಸ್ ಕರೆಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿತು ಎಂದು ನಂಜೇಗೌಡ ಆರೋಪಿಸಿದ್ದಾರೆ.

ಇದನ್ನೂ ಓದಿ: ಮೃತನಾದ 6 ತಿಂಗಳ ಬಳಿಕ ಅಂತ್ಯಸಂಸ್ಕಾರ; ಮಲೇಷಿಯಾದಲ್ಲಿ ಮೃತಪಟ್ಟ ಮೈಸೂರಿನ ಯವಕನ ಸಾವಿನ ರಹಸ್ಯ ಇನ್ನೂ ನಿಗೂಢ



ತಬ್ಲಿಘಿಗಳ ವಿರುದ್ಧ ಅಪಪ್ರಚಾರ:

ಕೊರೋನಾ ಆರಂಭದ ದಿನಗಳಲ್ಲಿ ದೆಹಲಿಯಲ್ಲಿ ನಡೆದ ತಬ್ಲಿಘಿ ಸಮಾವೇಶದಿಂದ ದೇಶದೆಲ್ಲೆಡೆ ಸೋಂಕಿತರು ಪತ್ತೆಯಾಗಿದ್ದರು. ಇದೇ ವಿಚಾರವನ್ನ ಮುಂದಿಟ್ಟುಕೊಂಡು ಬಿಜೆಪಿ ನಾಯಕರು, ರಾಜ್ಯದಲ್ಲಿ ತಬ್ಲಿಘಿಗಳಿಂದ ಸೋಂಕು ಹೆಚ್ಚಾಗಿದೆ ಎಂಬ ಆರೋಪವನ್ನು ಮಾಡಿದ್ದರು. ಆದರೆ ಮುಂದೆ ತಬ್ಲಿಘಿ ಸೋಂಕಿತರು ಕಡಿಮೆಯಾದಾಗ, ಮತ್ತೊಮ್ಮೆ ಮಹಾರಾಷ್ಟ್ರ ಮೂಲದಿಂದ ಸೋಂಕು ಪತ್ತೆಯಾಗುತ್ತಿದೆ ಎಂದಿದ್ದರು. ಆದರೀಗ ರಾಜ್ಯದಲ್ಲಿ ಬೆಂಗಳೂರಿನಿಂದ ಎಲ್ಲೆಡೆ ಸೋಂಕು ಹರಡುತ್ತಿದೆ ಎಂದಿದ್ದಾರೆ. ಮಾಲೂರು ತಾಲೂಕಿನಲ್ಲಿ ಇತ್ತೀಚೆಗೆ ಪತ್ತೆಯಾದ ಪ್ರಕರಣದಲ್ಲಿ ಬೆಂಗಳೂರು ಸಂಪರ್ಕಿತರಿಂದಲೇ ಸೋಂಕು ಪತ್ತೆಯಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ದುಡುಕು ನಿರ್ಧಾರಗಳೇ ಕಾರಣ ಎಂದು ನಂಜೇಗೌಡ ಕಿಡಿಕಾರಿದ್ದಾರೆ.
Published by: Vijayasarthy SN
First published: July 8, 2020, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading