ಬ್ಯಾನರ್ ಬಂಟಿಂಗ್ಸ್‌ಗೆ ಕಟೌಟ್ ಆದ ಮಾಲೂರು ತಹಶಿಲ್ದಾರ್ ಕಚೇರಿ, ಕಣ್ಣಿದ್ದು ಕುರುಡಾದ  ಮಾಲೂರು ತಾಲೂಕು ಆಡಳಿತ

ಮಾಲೂರು ಪಟ್ಟಣದಲ್ಲಿ ಅಕ್ರಮವಾಗಿ ಎಲ್ಲೆಂದರಲ್ಲಿ ಬ್ಯಾನರ್ ಗಳು ನೇತಾಡುತ್ತಿದ್ದರು, ಮಾಲೂರು ಪುರಸಭೆ ಆಯುಕ್ತ ಹಾಗೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಕುತೂಹಲ ಮೂಡಿಸಿದೆ. ಇನ್ನು  ತಮ್ಮ ತಾಲೂಕು ಕಚೇರಿಗೆ ಸೇರುವ ಜಾಗದಲ್ಲೆ ಖಾಸಗಿ ಬ್ಯಾನರ್ ಗಳು ರಾರಾಜಿಸುತ್ತಿದ್ದರು ತಾಲೂಕು ದಂಡಾಧಿಕಾರಿ ಮಂಜುನಾಥ್ ಅವರು ಮೌನಕ್ಕೆ ಶರಣಾಗಿದ್ದಾರೆ.

news18-kannada
Updated:September 7, 2020, 7:25 AM IST
ಬ್ಯಾನರ್ ಬಂಟಿಂಗ್ಸ್‌ಗೆ ಕಟೌಟ್ ಆದ ಮಾಲೂರು ತಹಶಿಲ್ದಾರ್ ಕಚೇರಿ, ಕಣ್ಣಿದ್ದು ಕುರುಡಾದ  ಮಾಲೂರು ತಾಲೂಕು ಆಡಳಿತ
ತಾಲೂಕು ಕಚೇರಿ ಎದುರಿರುವ ಬ್ಯಾನರ್‌ ಬಂಟಿಂಗ್ಸ್‌.
  • Share this:
ಕೋಲಾರ; ಜಿಲ್ಲೆಯ ಮಾಲೂರು ತಾಲೂಕಿನ ತಹಶಿಲ್ದಾರ್ ಕಚೇರಿಯ ಕಾಂಪೌಂಡ್ ಗೋಡೆಯ ಮೇಲೆ ಬ್ಯಾನರ್, ಪ್ಲೆಕ್ಸ್ ಗಳು ರಾರಾಜಿಸುತ್ತಿದೆ, ತಾಲೂಕು ಕಚೇರಿಯ ಎದುರೇ ಈ ಅವ್ಯವಸ್ತೆ ಇದ್ದರು ಇದುವರೆಗೂ ಯಾರೊಬ್ಬರೂ ಈ ಬಗ್ಗೆ ಗಮನಹರಿಸದೆ ಇರೊದು ದುರಂತವೆನಿಸಿದೆ. ಕ್ಷೇತ್ರದ ಶಾಸಕರು, ಸಂಸದರು ಹಾಗು ಉಸ್ತುವಾರಿ ಸಚಿವರ ಪೋಟೋಗಳಿರೊ ಬ್ಯಾನರ್ ಗಳು ಕಚೇರಿಯ ಹೊರಭಾಗದ ಸೌಂದರ್ಯವನ್ನೆ ಮರೆಮಾಚಿದೆ. ಅದು ಸಾಲದು ಎಂಬಂತೆ ಹೊಸದಾಗಿ ತೆರೆದಿರೊ ಬಿರಿಯಾನಿ ಅಂಗಡಿಯ ಪ್ರಚಾರದ ಬ್ಯಾನರ್ ಸಹ ಕಾಂಪೌಂಡ್ ಗೋಡೆಯ ಮೇಲೆಯೆ ಹಾಕಿದ್ದಾರೆ. ತಾಲೂಕು ಕಚೇರಿ ಎದುರು ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ನೀಡುವ ಬೃಹತ್ ಬ್ಯಾನರ್ ಕಟೌಟ್ ಇದ್ದು, ಇದೀಗ ಅದು ಕಾಣದಷ್ಟು ಎತ್ತರಕ್ಕೆ ಖಾಸಗಿ ಬ್ಯಾನರ್ ಗಳನ್ನ ಮರದ ಕಟೌಟ್ ನಿರ್ಮಿಸಿ ಬ್ಯಾನರ್ ಗಳನ್ನು ಹಾಕಲಾಗಿದೆ. ಇನ್ನು ಹಾಕಿರೊ ಬ್ಯಾನರ್ ಗಳ ಕುರಿತ ಕಾರ್ಯಕ್ರಮಗಳು ಮುಗಿದಿದ್ದರು ಇನ್ನು ಬ್ಯಾನರ್ ಗಳನ್ನು ತೆರವು ಮಾಡಿಲ್ಲ.

ಮಾಲೂರು ಪಟ್ಟಣದಲ್ಲಿ ಅಕ್ರಮವಾಗಿ ಎಲ್ಲೆಂದರಲ್ಲಿ ಬ್ಯಾನರ್ ಗಳು ನೇತಾಡುತ್ತಿದ್ದರು, ಮಾಲೂರು ಪುರಸಭೆ ಆಯುಕ್ತ ಹಾಗೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಕುತೂಹಲ ಮೂಡಿಸಿದೆ. ಇನ್ನು  ತಮ್ಮ ತಾಲೂಕು ಕಚೇರಿಗೆ ಸೇರುವ ಜಾಗದಲ್ಲೆ ಖಾಸಗಿ ಬ್ಯಾನರ್ ಗಳು ರಾರಾಜಿಸುತ್ತಿದ್ದರು ತಾಲೂಕು ದಂಡಾಧಿಕಾರಿ ಮಂಜುನಾಥ್ ಅವರು ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ : ಡ್ರಗ್ಸ್‌ ಕೇಸ್‌ನಲ್ಲಿ ಬಂಧಿತರ ರಕ್ಷಣೆಗೆ ಕೆಲವು ಸಚಿವರೇ ಮುಂದಾಗಿದ್ದಾರೆ; ಸಿದ್ದರಾಮಯ್ಯ ಆರೋಪ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುರಸಭೆ ಆಯುಕ್ತ ಪ್ರಸಾದ್ ರೆಡ್ಡಿ ಅವರು ಮಾಲೂರಿನಲ್ಲಿ ರಾತ್ರೋ ರಾತ್ರಿ ಬ್ಯಾನರ್ ಗಳನ್ನ ಕಟ್ಟುತ್ತಿದ್ದಾರೆ. ಎಷ್ಟು ಬಾರಿ  ಮನವಿ ಮಾಡಿದರು ಈ ಕುರಿತು ಯಾರು ಕೇಳುತ್ತಿಲ್ಲ. ನಾನು ನೇರವಾಗಿಯೇ ಇದರ ವಿರುದ್ದ ಸಮರ ಸಾರಿದ್ದೇನೆ, ಮಾಲೂರು ನಗರ ಸೌಂದರ್ಯ ಮತ್ತು ಪರಿಸರ ಕಾಳಜಿಯ ದೃಷ್ಟಿಯಿಂದ ಸಾಕಷ್ಟು ಬಾರಿ ಕ್ರಮ ಜರುಗಿಸಿದ್ದೇನೆ, ಮುಂದೆ ಇದು ಪುನರಾವರ್ತನೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಘಟಾನುಘಟಿ ನಾಯಕರ ಭಾವಚಿತ್ರಗಳಿರೊ ಬ್ಯಾನರ್ ಗಳನ್ನ ತೆರವು ಮಾಡಿದರೆ, ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸೊ ಭೀತಿಯಿದೆ, ಇನ್ನು ಬ್ಯಾನರ್ ಗಳನ್ನ ನಿಯಮಾನುಸಾರ ಹಾಕಿದರೆ ಪುರಸಭೆಗು ಆದಾಯ ಬರುತ್ತದೆ, ಆದರೆ ಅನುಮತಿ ಪಡೆಯದೆ ಪ್ಲೆಕ್ಸ್ ಹಾಕಿದಲ್ಲಿ, ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡರೆ ಮಾತ್ರ ಇಂತಹ ವ್ಯವಸ್ತೆಯನ್ನ ಬದಲಾಯಿಸಲು ಸಾಧ್ಯ.
Published by: MAshok Kumar
First published: September 7, 2020, 7:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading