ಜನ್ಮ ದಿನದಂದು ಬಡ ವಿದ್ಯಾರ್ಥಿಗಳೆಗೆ ಸ್ಮಾರ್ಟ್ ಪೋನ್ ಗಿಫ್ಟ್​​ ; ಆನ್​​ಲೈನ್ ಶಿಕ್ಷಣ ಕಲಿಕೆಗೆ ಪ್ರೇರಣೆಯಾದ ಮಲ್ಲಿಕಾರ್ಜುನ ಸ್ವಾಮೀಜಿ

ಕೆಂಪಯ್ಯಸ್ವಾಮಿ ಮಠದ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು  ತಮ್ಮ ಜನ್ಮ ದಿನದ ಪ್ರಯುಕ್ತ ಗ್ರಾಮದ ಸುತ್ತ-ಮುತ್ತಲಿನ ಬಡ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ಅಭ್ಯಾಸಕ್ಕೆ ಅನುಕೂಲವಾಗಲೆಂದು ಸ್ಮಾರ್ಟ್ ಪೋನ್ ಗಳನ್ನ ಗಿಫ್ಟ್​ ಆಗಿ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಸ್ಮಾರ್ಟ್​ ಪೋನ್​​ ವಿತರಿಸಿದ ಮಲ್ಲಿಕಾರ್ಜು ಸ್ವಾಮೀಜಿ

ವಿದ್ಯಾರ್ಥಿಗಳಿಗೆ ಸ್ಮಾರ್ಟ್​ ಪೋನ್​​ ವಿತರಿಸಿದ ಮಲ್ಲಿಕಾರ್ಜು ಸ್ವಾಮೀಜಿ

  • Share this:
ಚಿಕ್ಕೋಡಿ(ಆಗಸ್ಟ್.05): ಇತ್ತೀಚಿನ ದಿನಗಳಲ್ಲಿ ಕೊರೋನಾ ದಿಂದಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಇಲಾಖೆಗಳು ಬಾಗಿಲು ಮುಚ್ಚಿವೆ. ಕೊರೋನಾ ಹಾವಳಿ ಕಡಿಮೆಯಾಗುವ ವರೆಗೂ ಯಾವುದೇ ಶಾಲೆಗಳನ್ನ ತೆರೆಯಬಾರದು ಎಂದು ಸರ್ಕಾರ ಆದೇಶ ಮಾಡಿದೆ. ಹಾಗಾಗಿ ಬಹುತೇಕ ಎಲ್ಲಾ ಶಾಲೆಗಳು ಸಹ ಇತ್ತಿಗೆ ಆನ್​​ಲೈನ್​​ ಶಿಕ್ಷಣ ಕಡೆಗೆ ಮುಖ ಮಾಡಿದ್ದು ಎಲ್ಲರೂ ಸಹ ಆನ್​ಲೈನ್ ಮೂಲಕವೆ ಶಾಲೆ ಕಲಿಯುವಂತಾಗಿ. ಉಳ್ಳವರು ತಮ್ಮ ಮಕ್ಕಳಿಗೆ ಮನೆಯಲ್ಲಿ ಮೊಬೈಲ್ ಲ್ಯಾಪ್‌ಟಾಪ್ ಸ್ಮಾರ್ಟ್ ಪೋನ್ ಗಳ ಮೂಲಕ ಶಾಲೆ ಕಲಿಸುತ್ತಿದ್ದಾರೆ.

ಆದರೆ ಬಡವರ ಸ್ಥಿತಿ ಹಾಗಲ್ಲಾ ಒಂದು ಮೊಬೈಲ್ ಕೊಳ್ಳಲು ಕೆಲವರು ತಮ್ಮ ಮನೆಯ ಬಂಗಾರದ ವಸ್ತುಗಳನ್ನ ಅಡ ವಿಟ್ಟರೆ ಇನ್ನು ಕೆಲವರು ತಮ್ಮ ತಾಳಿ ಓಲೆಗಳನ್ನ ಅಡವಿಟ್ಟು ತಮ್ಮ ಮಕ್ಕಳಿಗೆ ಆನ್​​ಲೈನ್ ಶಿಕ್ಷಣ ಕೊಡಿಸಲು ಪ್ರಯತ್ನ ನಡೆಸಿದ್ದಾರೆ. ಹಾಗಾಗಿಯೇ ಬಡವರ ಕಷ್ಟ ಕಂಡ ಇಲ್ಲಿ ಒಬ್ಬ ಸ್ವಾಮೀಜಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ತಮ್ಮ ಜನ್ಮ ದಿನದ ಪ್ರಯುಕ್ತ ಸ್ಮಾರ್ಟ್ ಪೋನ್ ಗಳನ್ನ ಬಡ ವಿದ್ಯಾರ್ಥಿಗಳಿಗೆ ಗಿಪ್ಟ್ ಆಗಿ ನೀಡಿದ್ದಾರೆ‌.

ಬೆಳಗಾವಿ ಜಿಲ್ಲೆಯ ಘಟಪ್ರಭಾದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಮ್ಮ ಜನ್ಮ ದಿನದ ಪ್ರಯುಕ್ತ ಗ್ರಾಮದ ಸುತ್ತ-ಮುತ್ತಲಿನ 10 ಬಡ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ಅಭ್ಯಾಸಕ್ಕೆ ಅನುಕೂಲವಾಗಲೆಂದು ಅಂಡ್ರಾಯ್ಡ್​ ಮೊಬೈಲ್ ಪೊನ್‍ಗಳನ್ನು ಗಿಫ್ಟ್​ ಆಗಿ ನೀಡಿದ್ದಾರೆ.

ಇದ್ದವರು ಇಲ್ಲದವರಿಗೆ ನೀಡಬೇಕು ನನ್ನ ಶಕ್ತಿಯ ಅನುಗುಣವಾಗಿ ಹತ್ತು ವಿದ್ಯಾರ್ಥಿಗಳಿಗೆ ಸದ್ಯ ಪೋನ್‍ಗಳನ್ನು ನೀಡಿದ್ದೇನೆ. ಕೊರೋನಾ ರೋಗದ ಕಾರಣ ಸರಕಾರ ಆನ್‍ಲೈನ್ ಹಾಗೂ ಆಪ್‍ಲೈನ್ ತರಗತಿ ಪ್ರಾರಂಭಿಸಿದೆ. ಆದರೆ ಕೆಲವು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಮನೆಯಲ್ಲಿ ದುಡಿದು ತಿನ್ನುವ ಪರಿಸ್ಥಿತಿ ಇರುತ್ತದೆ. ಅವರಿಗೆ ಪೋನ್‍ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಪ್ರತಿಭೆಗೆ ತೊಂದರೆಯಾಗಿ ಅಭ್ಯಾಸಕ್ಕೆ ಆಡಚಣೆಯಾಗುತ್ತದೆ ಆದ್ದರಿಂದ ಇಂದು ಸಾಧ್ಯವಿದ್ದವರು ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಸಹಾಯ ಮಾಡುವುದು ಉತ್ತಮ ಎಂದು ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ : Ram Mandir: ಸಕ್ಕರೆನಾಡಿನಲ್ಲೂ ಇತ್ತು ಶ್ರೀರಾಮನ ವನವಾಸ ; ಶ್ರೀರಾಮನಿಂದ ಸೀತಾಮಾತೆ ದಾಹ ತೀರಿಸಲು ನಡೆದಿತ್ತು ಆ ಸ್ಥಳದಲ್ಲಿ ದೈವ ಲೀಲೆ

ಇದೆ ವೇಳೆ ಮಾತನಾಡಿದ ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಮಾತನಾಡಿ ಇಂದು ಶಾಲೆಗಳು ತೆರಯದ ಕಾರಣ ಸರಕಾರ ಆನ್‍ಲೈನ್ ತರಗತಿ ಪ್ರಾರಂಭಿಸಿರುವುದರಿಂದ ಕೆಲವು ಬಡ ವಿದ್ಯಾರ್ಥಿಗಳ ಶಿಕ್ಷಣ ವಂಚತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಶ್ರೀಗಳು ತಮ್ಮ ಜನ್ಮ ದಿನದಂದು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅಂಡ್ರಾಯ್ಡ್​ ಪೋನ್​ ಗಳನ್ನು ನೀಡಿರುವುದು ಉತ್ತಮ ಕೆಲಸ ಎಂದು ಹೇಳಿದರು.

ಒಟ್ಟಿನಲ್ಲಿ ಹಲವಾರು ರಾಜಕೀಯ ವ್ಯಕ್ತಿಗಳು ಆಗಿರಬಹುದು ಶ್ರೀಮಂತರು ಆಗಿರಬಹುದು ತಮ್ಮ ಹುಟ್ಟು ಹಬ್ಬಕ್ಕೆ ಪ್ಲೇಕ್ಸ್​ ಬ್ಯಾನರ್ ಹಾಗೂ ಕಾರ್ಯಕ್ರಮಗಳಿಗೆ ಲಕ್ಷಾಂತರ ಹಣವನ್ನ ಖರ್ಚು ಮಾಡುತ್ತಾರೆ. ಕೊರೋನಾ ಕಾಲದಲ್ಲಿ ಇದೆ ಖರ್ಚಿನ ಹಣವನ್ನು ಉಪಯೋಗಿ ತಮಗೆ ಸಾಧ್ಯವಾದಷ್ಟು ಬಡ ಮಕ್ಕಳಿಗೆ ಆನ್​ಲೈನ್ ಶಿಕ್ಷಣಕ್ಕೆ ಬೇಕಾದ ಮೊಬೈಲ್ ಗಳನ್ನು ಉಡುಗೊರೆಯಾಗಿ ನೀಡಿದ್ರೆ ಬಡ ಪ್ರತಿಭೆಗಳಿಗೆ ಶಿಕ್ಷಣಕ್ಕೆ  ಸಹಾಯಾವಾಗಲಿದೆ ಎಂದು ಸ್ವಾಮೀಜಿ ಕರೆ ಕೊಟ್ಟಿದ್ದಾರೆ.
Published by:G Hareeshkumar
First published: