ಕಲಬುರ್ಗಿ; ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಶಾಸಕರ ಪತ್ನಿಯ ಕಾರು ಸೀಜ್ ಪ್ರಕರಣದ ಕುರಿತ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದು, ಪರಸ್ಪರ ವಾಗ್ದಾಳಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ಗ್ರಾಮೀಣ ಶಾಸಕ ಬಸವರಾಜ ಮತ್ತಿಮೋಡ ಪತ್ನಿ ಕಾರು ಸೀಜ್ ಮಾಡಿರೋದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರುವಂತೆ ಮಾಡಿದೆ. ಮತ್ತಿಮೋಡ ಪತ್ನಿ ಕಾರು ಸೀಜ್ ನ ಹಿಂದೆ ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಘಟನೆಯನ್ನು ಖಂಡಿಸಿದ್ದರು. ಇದಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶರಣಪ್ರಕಾಶ ಪಾಟೀಲ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಲೀಕಯ್ಯ ಅಂತಹ ಹಿರಿಯರಿಂದ ಇಂಥದ್ದನ್ನು ನಿರೀಕ್ಷಿಸಿರಲಿಲ್ಲ. ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದ್ದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಆಸ್ಪತ್ರೆಯಿಂದಲೇ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಾಲಿಗೆ ಬಿಗಿ ಹಿಡಿದು ಮಾತನಾಡುವಂತೆ ತಾಕೀತು ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಗಬ್ಬರ್ ಸಿಂಗ್ ಗೆ, ಮಾಜಿ ಸಚಿವ ಶರಣಪ್ರಕಾಶ್ ಪಾಟೀಲಗೆ ಸಾಂಬಾ ಗೆ ಹೋಲಿಕೆ ಮಾಡಿದ್ದಾರೆ. ಶೋಲೆ ಸಿನೆಮಾದಲ್ಲಿ ಗಬ್ಬರ್ ಸಿಂಗ್ ಗೆ ಸಾಂಬಾ ಆತ್ಮೀಯ. ಹಾಗೆಯೇ ಮಲ್ಲಿಕಾರ್ಜುನ ಖರ್ಗೆಗೆ ಶರಣಪ್ರಕಾಶ ಪಾಟೀಲ ಆತ್ಮೀಯ ಶಿಷ್ಯ.
ಹೀಗಾಗಿಯೇ ಅವರ ಅಣತಿಯಂತೆ ಪಾಟೀಲ ಹೇಳಿಕೆ ನೀಡ್ತಿದಾರೆ. ಶರಣಪ್ರಕಾಶ ಪಾಟೀಲಗೆ ಸ್ವಾಭೀಮಾನ ಅನ್ನೋದೆ ಇಲ್ಲ. ಬೇರೊಬ್ಬರ ಮಾತನ್ನು ನಂಬಿ ಬಾಲಿಷ ಹೇಳಿಕೆ ನೀಡ್ತಿದಾರೆ. ಶರಣಪ್ರಕಾಶರೇ ನಿಮ್ಮ ಬಗ್ಗೆ ಅಪಾರ ಗೌರವವಿದೆ. ಆದ್ರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ರನ್ನ ಸಮರ್ಥಿಸಿಕೊಳ್ಳೋದು ಬಿಡಿ. ಸ್ವಾಭಿಮಾನಿಯಾಗಿ ಬದುಕಿ, ಗುಲಾಮರಾಗಿ ಬದುಕಬೇಡಿ.
ನಾನು ಸಚಿವನಾಗೋದಕ್ಕೆ ಖರ್ಗೆ ವಿರೋಧ ಮಾಡಿದ್ರು. ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಮೇಲೆ ಅಭಿಮಾನವಿದ್ದಿದ್ರೆ ನಮ್ಮನ್ನೆಲ್ಲಾ ಉಳಿಸಿಕೊಳ್ತಿದ್ರು. ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಹೊರಹೋಗೋ ವಾತಾವರಣ ಸೃಷ್ಟಿಸಿದ್ರು. ನಾನು, ಎ.ಬಿ.ಮಾಲಕರೆಡ್ಡಿ, ಬಾಬುರಾವ್ ಚಿಂಚನಸೂರ, ಉಮೇಶ್ ಜಾಧವ್ ಪಕ್ಷ ಬಿಡೋ ಪರಿಸ್ಥಿತಿ ಸೃಷ್ಟಿಸಿದರು.
ಇದನ್ನೂ ಓದಿ : ಅನಾವಶ್ಯಕವಾಗಿ ಬಂದ್ ಮಾಡಿದ್ರೆ ನಾನು ಸಹಿಸಲ್ಲ; ಕನ್ನಡಪರ ಸಂಘಟನೆಗಳಿಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ
ರಾಹುಲ್ ಗಾಂಧಿ ಚೈಲ್ಡಿಷ್ ರಾಜಕಾರಣಿ. ರಾಷ್ಟ್ರಮಟ್ಟದಲ್ಲಿ ರಾಹುಲ್, ರಾಜ್ಯಮಟ್ಟದಲ್ಲಿ ಪ್ರಿಯಾಂಕ್ ಖರ್ಗೆ ಚೈಲ್ಡಿಷ್. ರಾಹುಲ್ ಗಾಂಧಿ ಪ್ರಿಯಾಂಕ್ ಗಾಂಧಿ ಅಣ್ಣ. ಇಬ್ಬರೂ ಯುವಕರಾಗಿದ್ದರೂ ಬಾಲಿಷ ವರ್ತನೆ ಬಿಟ್ಟಿಲ್ಲ. ಆದ್ರೆ ನಮಗೆ ಫಿಲಾಸಫಿ ಹೇಳೋಕೆ ಹೊರಟಿದ್ದಾರೆ. ನನ್ನ ಬಗ್ಗೆ ನಾಲಿಗೆ ಬಿಗಿ ಹಿಡಿದು ಮಾತನಾಡಿ. ಭ್ರಷ್ಟಾಚಾರ ಆಗಿದ್ದರೆ ದಾಖಲೆ ತನ್ನಿ, ವಿಧಾನಸಭೆಯಲ್ಲಿ ಚರ್ಚಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ