HOME » NEWS » District » MALE MAHADESHWARA TEMPLE UGADI RATHOTSAVA CANCELED DUE TO CORONAVIRUS RHHSN NCHM

ಕೊರೋನಾ ಹಿನ್ನಲೆ: ಮಲೈಮಹದೇಶ್ವರನ ಯುಗಾದಿ ರಥೋತ್ಸವ ರದ್ದು

ಇತ್ತೀಚೆಗೆ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಒಂದು ವಾರದ ಹಿಂದಷ್ಟೇ 10-15 ರ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆಯ ಪ್ರಸ್ತುತ 200 ಗಡಿ ದಾಟಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ  ರಥೋತ್ಸವ ರದ್ದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.

news18-kannada
Updated:April 10, 2021, 5:02 PM IST
ಕೊರೋನಾ ಹಿನ್ನಲೆ: ಮಲೈಮಹದೇಶ್ವರನ ಯುಗಾದಿ ರಥೋತ್ಸವ ರದ್ದು
ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ
  • Share this:
ಚಾಮರಾಜನಗರ (ಏ. 10) ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೈಮಹದೇಶ್ವರ ಬೆಟ್ಟದಲ್ಲಿ ಏಪ್ರಿಲ್ 13 ರಂದು ನಡೆಯಬೇಕಿದ್ದ ಯುಗಾದಿ ರಥೋತ್ಸವವನ್ನುಕೊರೋನಾ ವೈರಸ್ ಕಾರಣದಿಂದ ರದ್ದುಪಡಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ 500 ಮಂದಿಗೆ ಸೀಮಿತಗೊಳಿಸಿ ರಥೋತ್ಸವ ಆಚರಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಆದರೆ 500 ಮಂದಿಯ ಮಿತಿಯಲ್ಲಿ ರಥೋತ್ಸವ ಆಚರಿಸಲು ಸಾಧ್ಯವಾಗದ ಕಾರಣ ರಥೋತ್ಸವ ರದ್ದು ಪಡಿಸಲಾಗಿದೆ ಎಂದು ಮಲೈಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ. 

30 ಮಂದಿ ದೇವಾಲಯದ ಅರ್ಚಕರು, 108 ಮಂದಿ ರಥಕ್ಕೆ ಆರತಿ ಬೆಳಗುವ   ಬಾಲಕಿಯರು,   100 ಮಂದಿ  ಪೋಷಕರು, 50 ಮಂದಿ ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿ, 200 ಮಂದಿ ನೌಕರರ ವೃಂದ, 100 ಮಂದಿ ಪೊಲೀಸ್ ಸಿಬ್ಬಂದಿ ಹಾಗು ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು ಸೇರಿ ಎರಡು ಸಾವಿರದಿಂದ ಮೂರು ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ದೇವಾಲಯದ ಪ್ರಧಾನ ಆಗಮಿಕರು, ಪಾರುಪತ್ತೆಗಾರರು ವರದಿ ನೀಡಿದ್ದಾರೆ.  ಇಷ್ಟು ಮಂದಿ ಸೇರಿದರೆ ಸರ್ಕಾರದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟಕರವಾಗಲಿದೆ. ಅಲ್ಲದೇ ಸರ್ಕಾರದ ಸುತ್ತೋಲೆಯಂತೆ 500 ಜನರಿಗೆ ಸೀಮಿತಗೊಳಿಸಿ ರಥೋತ್ಸವ ನಡೆಸುವುದು ಸಾಧ್ಯವಾಗುವುದಿಲ್ಲ ಎಂದು ಅವರು ವರದಿ ನೀಡಿದ್ದು ಈ ವರದಿಯನ್ನಾಧರಿಸಿ ರಥೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಆದೇಶಿಸಿದ್ದಾರೆ.

ಇಂದಿನಿಂದ ಏಪ್ರಿಲ್ 13 ರವರೆಗೆ ಮಹದೇಶ್ವರನ ಸನ್ನಿಧಿಯಲ್ಲಿ ಸರಳ ಹಾಗು ಸಾಂಪ್ರದಾಯಿಕವಾಗಿ ಮಾತ್ರ ಜಾತ್ರೆಗೆ ಸಂಬಂಧಿಸಿದ ವಿಶೇಷ ಪೂಜೆ ಹಾಗು ಉತ್ಸವಾದಿಗಳು ನಡೆಯಲಿವೆ  ಆದರೆ ಹೊರಗಿನ ಭಕ್ತರ ಪ್ರವೇಶ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದೇವಸ್ಥಾನದ ಅರ್ಚಕರು, ಪ್ರಾಧಿಕಾರದ ನೌಕರರು, ಸ್ಥಳೀಯ ನಿವಾಸಿಗಳು  ಸರ್ಕಾರಿ ಕೆಲಸದ ನಿಮಿತ್ತ ಬರುವ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳಿಗೆ ಮಾತ್ರ ಪ್ರವೇಶಾವಕಾಶ ಇರಲಿದೆ ಎಂದು ಅವರು ತಿಳಿಸಿದ್ದಾರೆ. ರಥೋತ್ಸವ  ರದ್ದುಗೊಂಡರು ಎಣ್ಣೆಮಜ್ಜನ, ಅಮಾವಾಸ್ಯೆ ವಿಶೇಷ ಪೂಜೆಗಳು, ಗುರುಬ್ರಹ್ಮೋತ್ಸವ, ಅನ್ನಬ್ರಹ್ಮೋತ್ಸವ ಮತ್ತಿತರ ಸೇವೆಗಳು ಪೂಜಾ ಕೈಂಕರ್ಯಗಳು ಸರಳ ಸಾಂಪ್ರದಾಯಿಕವಾಗಿ ನೆರವೇರಲಿವೆ.

ಇದನ್ನು ಓದಿ: ಆಗ ಗಡಿ ಭಾಗದಲ್ಲಿ ಎಚ್ಚೆತ್ತುಕೊಳ್ಳದೆ, ಈಗ ನೈಟ್ ಕರ್ಫ್ಯೂ ಮಾಡುತ್ತಿರುವುದು ಅನಾಗರಿಕತನ; ವಾಟಾಳ್ ನಾಗರಾಜ್

ಕೊರೋನಾ ಹರಡುವ ಭೀತಿಯ ಹಿನ್ನಲೆಯಲ್ಲಿ 2020 ರಲ್ಲಿ ಶಿವರಾತ್ರಿ ರಥೋತ್ಸವ, ಯುಗಾದಿ ರಥೋತ್ಸವ ಹಾಗು ದೀಪಾವಳಿ ರಥೋತ್ಸವಗಳನ್ನು  ರದ್ದುಗೊಳಿಸಲಾಗಿತ್ತು. ಆದರೆ ಕಳೆದ ತಿಂಗಳು ಶಿವರಾತ್ರಿ ಜಾತ್ರೆಯನ್ನು ಸರಳ ಹಾಗು ಸಾಂಪ್ರದಾಯಿಕವಾಗಿ ಮಾತ್ರ ಆಚರಿಸಲಾಗಿತ್ತು. ಸೀಮಿತ ಭಕ್ತರನ್ನೊಳಗೊಂಡಂತೆ ರಥೋತ್ಸವವನ್ನು ಸಹ ನಡೆಸಲಾಗಿತ್ತು. ಆಗಲು ಸಹ ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಯುಗಾದಿ ಜಾತ್ರೆಯನ್ನು ಸಹ ಇದೇ ರೀತಿ ಸರಳ ಹಾಗು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು ರಥೋತ್ಸವವನ್ನು ರದ್ದುಪಡಿಸಲಾಗಿದೆ.

ಇತ್ತೀಚೆಗೆ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಒಂದು ವಾರದ ಹಿಂದಷ್ಟೇ 10-15 ರ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆಯ ಪ್ರಸ್ತುತ 200 ಗಡಿ ದಾಟಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ  ರಥೋತ್ಸವ ರದ್ದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.

  • ವರದಿ: ಎಸ್.ಎಂ.ನಂದೀಶ್ 

Published by: HR Ramesh
First published: April 10, 2021, 5:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories