HOME » NEWS » District » MALAVALLI PEOPLE ABGRY ON GOVERNMENT OFFICIALS AS THEY NOT PROVIDING WATER SUPPLY HK

ಮಳವಳ್ಳಿಯ ಕಿರುಗಾವಲು ರೈತರಿಗೆ ಕೊಳಚೆ ನೀರಿನ ಭಾಗ್ಯ : ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ..!

ಸುಮಾರು 20 ಗ್ರಾಮಗಳ ರೈತರು ಈ ಕೆರೆಯ ನೀರನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಸಣ್ಣ ನೀರಾವರಿ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಭಾಗದ ಜನರು ಸೇರಿದಂತೆ ಈ ಭಾಗದ ರೈತರು ಚರ್ಮ ರೋಗಕ್ಕೆ ತುತ್ತಾಗುತ್ತಿದ್ದಾರೆ

news18-kannada
Updated:July 31, 2020, 8:18 AM IST
ಮಳವಳ್ಳಿಯ ಕಿರುಗಾವಲು ರೈತರಿಗೆ ಕೊಳಚೆ ನೀರಿನ ಭಾಗ್ಯ : ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ..!
ಕಿರುಗಾವಲು ಕೆರೆ
  • Share this:
ಮಂಡ್ಯ(ಜುಲೈ.31): ಈ ಊರಿನ ಕೆರೆ ತುಂಬಿದ್ರೆ, ಐವತ್ತು ಹಳ್ಳಿಗೆ ನೀರಾವರಿ ಸೌಭಾಗ್ಯ. ಇಲ್ಲವಾದರೇ ಹುರಳಿಯೇ ಗತಿ ಎಂಬ ಮಾತು ಮಳವಳ್ಳಿ ತಾಲೂಕಿನಲ್ಲಿ ಇದೆ. ಆದರೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಎಡವಟ್ಟೋ ಅಥವಾ ಗ್ರಾಮ ಪಂಚಾಯತಿಯ ನಿರ್ಲಕ್ಷ್ಯವೋ ಗೊತ್ತಿಲ್ಲ. ನೀರಾವರಿ ಸೌಭಾಗ್ಯ ಸಿಗದೇ ಇರುವುದರಿಂದ ಜನರಿಗೆ  ರೋಗದ ಭಾಗ್ಯ ಕಟ್ಟಿಟ್ಟ ಬುತ್ತಿಯಾಗಿದೆ. 

ಎಲ್ಲೆಡೆ ಮುಂಗಾರು ಆರಂಭವಾಗಿ, ರೈತರು ಸಂತಸದಿಂದ ಕೃಷಿ ಚಟುವಟಿಕೆ ಆರಂಭ ಮಾಡುತ್ತಿದ್ದಾರೆ. ಆದರೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಕೃಷಿ ಜಮೀನಿಗೆ ಇಳಿಯಲು ಭಯ ಬೀಳುತ್ತಿದ್ದಾರೆ. ಇದಕ್ಕೆ ಕಾರಣ ಕಿರುಗಾವಲು ಕೆರೆಯ ಈ ಕಾಲುವೆ. ಈ ನಾಲೆಯಿಂದ ಸುಮಾರು 1500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.

ಸುಮಾರು 20 ಗ್ರಾಮಗಳ ರೈತರು ಈ ಕೆರೆಯ ನೀರನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಸಣ್ಣ ನೀರಾವರಿ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದೀಗ ಈ ಭಾಗದ ಜನರು ಸೇರಿದಂತೆ ಈ ಭಾಗದ ರೈತರು ಚರ್ಮ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಕಿರುಗಾವಲು ಪಟ್ಟಣದ ಕೊಳಚೆ ನೀರನ್ನು ಈ ನಾಲೆಗೆ ಬಿಟ್ಟಿರುವುದು. ಇದರಿಂದ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ : ಡಿ.ಕೆ.ಶಿವಕುಮಾರ್ ಕೊತ್ವಾಲ್ ರಾಮಚಂದ್ರನ ಸಂಸ್ಕೃತಿ ಬಿಡಬೇಕು: ಸಿ.ಪಿ.ಯೋಗೇಶ್ವರ್ ತಿರುಗೇಟು

ಇನ್ನು ಈ ಕಿರುಗಾವಲು ಕೆರೆ ನಾಲೆ ದುರಸ್ಥಿಗೆ ಮೂರು ಬಾರಿ ಗುದ್ದಲಿ ಪೂಜೆ ಮಾಡಲಾಗಿದೆ. ಮಾಜಿ ಶಾಸಕ ನರೇಂದ್ರ ಸ್ವಾಮಿ, ಹಾಲಿ ಶಾಸಕ ಅನ್ನದಾನಿ ಗುದ್ದಲಿ ಪೂಜೆ ಮಾಡಿದರೂ ನಾಲೆ ದುರಸ್ಥಿ ಕಾಮಗಾರಿ ಕೈಗೊಂಡಿಲ್ಲ. ಇದರಿಂದ ಕಿರುಗಾವಲು ಪಟ್ಟಣದ ಕೊಳಚೆ ನೀರು ಸಂಪೂರ್ಣವಾಗಿ ಈ ನಾಲೆಗೆ ಸೇರುತ್ತಿದೆ. ಈಗಾಗಲೇ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಲಾಗಿದೆ. ಇನ್ನೇನಿದ್ದರೂ ಕೆರೆ ತುಂಬಿಸಿ ಕೃಷಿ ಚಟುವಟಿಕೆಗೆ ಈ ನಾಲೆಗೆ ನೀರು ಬಿಡಲಾಗುತ್ತದೆ. ಆದರೂ ಅಧಿಕಾರಿಗಳು ಇತ್ತ ಕಡೆ ಗಮನವನ್ನೇ ಹರಿಸಿಲ್ಲ ಎಂಬುದು ರೈತರ ನೋವಿನಿಂದ ಮಾತನಾಡುತ್ತಿದ್ದಾರೆ.

ಒಟ್ಟಿನಲ್ಲಿ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ. ಈ ನಾಲೆಯಲ್ಲಿ ಬೆಳೆದು ನಿಂತಿರುವ ಗಿಡಗಳ ತೆರವು ಮಾಡಿ, ನಾಲೆಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆಗಟ್ಟಬೇಕಾಗಿದೆ. ಇಲ್ಲವಾದರೆ ರೈತರಿಗೆ ಚರ್ಮರೋಗ ಬಂದು ಸಂಕಷ್ಟಕ್ಕೆ ಒಳಗಾಗಿ ಮತ್ತಷ್ಟು ಹಿಡಿ ಶಾಪ ಹಾಕೋದಂತು ಸುಳ್ಳಲ್ಲ.
Published by: G Hareeshkumar
First published: July 31, 2020, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories