ಮೆಕ್ಕೆ ಜೋಳ ಬೆಳೆದವರಿಗೆ ತಿಂಗಳಾದರೂ ಇನ್ನೂ ಕೈಸೇರಿಲ್ಲ ಪರಿಹಾರ ಹಣ; ಚಾತಕಪಕ್ಷಿಯಂತೆ ಕಾಯುತ್ತಿರುವ ರೈತರು

ಸರ್ಕಾರ ಘೋಷಣೆ ಮಾಡಿದರೆ ಸಾಲದು, ಈ ಸಮಯದಲ್ಲಿ ಪರಿಹಾರ ಹಾಕಬೇಕು. ಈಗ ಹಣ ರೈತರ ಖಾತೆಗಳಿಗೆ ಬಂದರೆ, ಮುಂಗಾರು ಹಂಗಾಮಿಗೆ ರೈತರಿಗೆ ಬೀತ್ತನೆ ಬೀಜ, ಗೊಬ್ಬರ ಖರೀದಿ ಮಾಡಲು ಸಹಕಾರಿಯಾಗುತ್ತೆ.

ಮೆಕ್ಕೆ ಜೋಳ

ಮೆಕ್ಕೆ ಜೋಳ

  • Share this:
ಶಿವಮೊಗ್ಗ(ಜೂನ್ 11): ಮೆಕ್ಕೆಜೋಳ ಬೆಳೆದ ರೈತರಿಗೆ 5 ಸಾವಿರ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ಅದೇ ರೀತಿ ಹೂವು  ಬೆಳೆದ ರೈತರಿಗೆ ಹೆಕ್ಟೇರ್ ಗೆ 25 ಸಾವಿರ,  ಹಣ್ಣು ಬೆಳೆದ ರೈತರಿಗೆ  ಹೆಕ್ಟೇರ್ ಗೆ 15 ಸಾವಿರ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದೆ. ಆದರೆ, ಮೆಕ್ಕೆಜೋಳ, ಹಣ್ಣ, ಹೂವು ಬೆಳೆದ ರೈತರಿಗೆ ಇದುವರೆಗೂ ಪರಿಹಾರ ಬಂದಿಲ್ಲ.

ಜಿಲ್ಲಾಡಳಿತ ಮೆಕ್ಕೆಜೋಳ ಬೆಳೆದ ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಬೆಳೆ ಸರ್ವೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರ ಪಟ್ಟಿ ಇದ್ದು, ಅದನ್ನು ಅನುಮೋದಿಸಿ ಕೊಡುವಂತೆ ತಾಲೂಕು ಅಡಳಿತಗಳಿಗೆ ಜಿಲ್ಲಾಡಳಿತ ಗಡುವು ನೀಡಿದೆ. ಜೊತೆಗೆ ಬೆಳೆ ಸರ್ವೆಯಲ್ಲಿ ರೈತರ ಹೆಸರು ಇಲ್ಲದೇ ಹೋದರೆ, ಅಂತಹ ರೈತರಿಗೆ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ  ಮುಂಗಾರು, ಹಿಂಗಾರು, ಬೇಸಿಗೆ ಹಂಗಾಮಿನಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಸುಮಾರು 56 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಾಗಿದೆ. ಸರಿ ಸುಮಾರು 40 ಸಾವಿರ ರೈತರು ಮಕ್ಕೆಜೋಳ ಬೆಳೆದಿದ್ದಾರೆ. ಅವರೆಲ್ಲರ ಮಾಹಿತಿ ಬೆಳೆ ಸರ್ವೆಯಲ್ಲಿ ಇದೆ. ಅಂತಹ ರೈತರಿಗೆ ಅವರ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ಸರ್ಕಾರ ಹಾಕಲಿದೆ. ಬೆಳೆ ಸಮೀಕ್ಷೆ ಆಧಾರದಲ್ಲಿ ರೈತರ ಪಟ್ಟಿ ಮಾಡಿಕೊಳ್ಳಲಾಗುತ್ತಿದೆ. ರೈತರು ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಪಾಸ್​ಬುಕ್​ಗಳನ್ನು ರೈತ ಸಂಪರ್ಕ ಕೇಂದ್ರಗಳಿಗೆ ಕೊಡಲು ತಿಳಿಸಲಾಗಿದೆ. ಪಟ್ಟಿಯನ್ನು ಗ್ರಾಮ ಪಂಚಾಯಾತ್​ನಲ್ಲಿ ಹಾಕಲಾಗುತ್ತೆ. ಯಾರ ಹೆಸರು ಪಟ್ಟಿಯಲ್ಲಿ ಇರಲ್ಲ, ಅಂತಹ ರೈತರು ಆರ್​ಟಿಸಿ ಸೇರಿದಂತೆ ಬೆಳೆದ ಮಾಹಿತಿಯನ್ನು ಕೊಡಬೇಕು. ತಾಲೂಕು ಮತ್ತು ಹೊಬಳಿ ಮಟ್ಟದ ಸಮಿತಿ ಇದ್ದು, ಅವರು ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ.

ಇದನ್ನೂ ಓದಿ: ವಂಚಕ ಆ್ಯಪ್ ಬಳಸಿ ಓಲಾ ಕಂಪನಿಗೆ ಉಂಡೆನಾಮ ಹಾಕುತ್ತಿದ್ದ ನಾಲ್ವರು ಕ್ಯಾಬ್ ಚಾಲಕರ ಬಂಧನ

ಜಿಲ್ಲೆಯಲ್ಲಿ ಈಗಾಗಲೇ ಹೂವು ಬೆಳೆದ 150 ರೈತರಿಗೆ ಹಣ ಹಾಕಲು ಕ್ರಮ ಕೈಗೊಳ್ಳಾಗಿದೆ. ಜಿಲ್ಲೆಯಲ್ಲಿ 1,300 ರೈತರ ಹೂವು ಬೆಳೆ ಸರ್ವೆಯಲ್ಲಿ ಇರಲ್ಲಿಲ್ಲ. ಅವರು ಅರ್ಜಿ ಸಲ್ಲಿಸಿದ್ದಾರೆ. ಅವರ ಬೆಳೆ ಸಮೀಕ್ಷೆ ಮತ್ತು ಫೀಲ್ಡ್ ಸರ್ವೆ ಮಾಡಲಾಗಿದೆ. ಅದೇ ರೀತಿ 5 ಸಾವಿರ ರೈತರು ಹಣ್ಣುಗಳನ್ನು ಬೆಳೆದಿದ್ದು, ಅವರಿಗೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರಿಗೆ ಸರ್ಕಾರ ಘೋಷಣೆ ಮಾಡಿದ ಪರಿಹಾರದ ಹಣವನ್ನು ತಕ್ಷಣ ವಿತರಣೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಸರ್ಕಾರ ಘೋಷಣೆ ಮಾಡಿದರೆ ಸಾಲದು, ಈ ಸಮಯದಲ್ಲಿ ಪರಿಹಾರ ಹಾಕಬೇಕು. ಈಗ ಹಣ ರೈತರ ಖಾತೆಗಳಿಗೆ ಬಂದರೆ, ಮುಂಗಾರು ಹಂಗಾಮಿಗೆ ರೈತರಿಗೆ ಬೀತ್ತನೆ ಬೀಜ, ಗೊಬ್ಬರ ಖರೀದಿ ಮಾಡಲು ಸಹಕಾರಿಯಾಗುತ್ತೆ. ಜಿಲ್ಲೆಯಲ್ಲಿ ಇದುವರೆಗೂ ಮೆಕ್ಕೆಜೋಳ, ಹಣ್ಣು ಮತ್ತು ಹೂವು ಬೆಳೆದ ರೈತರ ಖಾತೆಗಳಿಗೆ ಪರಿಹಾರ ಹಣ ತಲುಪಿಲ್ಲ. ಜಿಲ್ಲಾಡಳಿತ ಇನ್ನು ಎರಡು ದಿನಗಳಲ್ಲಿ ಸರ್ಕಾರಕ್ಕೆ ಸಂಪೂರ್ಣ ರೈತರ ಮಾಹಿತಿ ನೀಡಲಿದ್ದು, ಆ ನಂತರವೇ ಸರ್ಕಾರದ ಹಣ ಬರುವ ಸಾಧ್ಯತೆ ಇದೆ. ರೈತರು ಪರಿಹಾರದ ಹಣಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
First published: