• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Viral Video: ನೆರೆಯಲ್ಲಿ ಕೊಚ್ಚಿ ಹೋದ ಪಿಕಪ್​; ದಕ್ಷಿಣ ಕನ್ನಡದಲ್ಲಿ ವರುಣನ ರುದ್ರ ನರ್ತನ

Viral Video: ನೆರೆಯಲ್ಲಿ ಕೊಚ್ಚಿ ಹೋದ ಪಿಕಪ್​; ದಕ್ಷಿಣ ಕನ್ನಡದಲ್ಲಿ ವರುಣನ ರುದ್ರ ನರ್ತನ

ಮಹೀಂದ್ರಾ ಪಿಕಪ್​

ಮಹೀಂದ್ರಾ ಪಿಕಪ್​

ಉಪ್ಪಿನಂಗಡಿಯ ಕಾಂಚನದಲ್ಲಿ ಈ ಘಟನೆ ನಡೆದಿದೆ. ನೇತ್ರಾವತಿ ನದಿ ಹರಿವು ಜೋರಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆಯ ಭೀತಿ ಉಂಟಾಗಿದೆ. ಹೊಳೆ ಉಕ್ಕಿ ಸೇತುವೆ ಮೇಲೆ ನೀರು ಹರಿಯುತ್ತಿದ್ದರು ಅದನ್ನು ಲೆಕ್ಕಿಸದೇ ಚಾಲಕ ಪಿಕಪ್​ ವಾಹನವನ್ನು ಚಲಾಯಿಸಿದ್ದಾನೆ.

  • Share this:

    ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಎಡೆಬಿಡದೆ ಮಳೆ ಸರಿಯುತ್ತಿದೆ. ದಕ್ಷಿಣ ಕನ್ನಡದಲ್ಲೂ ವರುಣನ ಆರ್ಭಟ ಹೆಚ್ಚಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದ್ದು, ವರುಣನ ರೌದ್ರ ನರ್ತನಕ್ಕೆ ಪಿಕಪ್​ ವಾಹನವೊಂದು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.


    ಉಪ್ಪಿನಂಗಡಿಯ ಕಾಂಚನದಲ್ಲಿ ಈ ಘಟನೆ ನಡೆದಿದೆ. ನೇತ್ರಾವತಿ ನದಿ ಹರಿವು ಜೋರಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆಯ ಭೀತಿ ಉಂಟಾಗಿದೆ. ಹೊಳೆ ಉಕ್ಕಿ ಸೇತುವೆ ಮೇಲೆ ನೀರು ಹರಿಯುತ್ತಿದ್ದರು ಅದನ್ನು ಲೆಕ್ಕಿಸದೇ ಚಾಲಕ ಪಿಕಪ್​ ವಾಹನವನ್ನು ಚಲಾಯಿಸಿದ್ದಾನೆ. ನೀರಿನ ರಭಸಕ್ಕೆ ಪಿಕಪ್​​ ಮಗುಚಿ ಕೊಚ್ಚಿ ಹೋಗಿದೆ. ಅದರೊಳಗಿದ್ದ ಚಾಲಕ ಅದೃಷ್ಟವಶಾತ್​ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.


    ಉಪ್ಪಿನಂಗಡಿ ಪೊಲೀಸ್​ ಠಾಣೆ ಜನರಲ್ಲಿ ಎಚ್ಚರಿಕೆಯಿಂದ ಇರುವಂತೆ ಪ್ರಕಟನೆ ಹೊರಡಿಸಿದೆ. ಉಪ್ಪಿನಂಗಡಿ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ತೀರಾ ಮಳೆಯಾಗುತ್ತಿದ್ದು ಅಲ್ಲಲ್ಲಿ ಪ್ರಾಕೃತಿಕ ವಿಕೋಪ ಕಂಡು ಬರುತ್ತಿದೆ. ನದಿ, ಹಳ್ಳ, ತೋಡು ಮುಂತಾದ ಪ್ರದೇಶಗಳ ಬಳಿಯಿರುವ ಜನರು ಮುಂಜಾಗೃತೆ ವಹಿಸಿಕೊಳ್ಳುವಂತೆ ಗ್ರಾಮ ಪಂಚಾಯತ್​​ ವತಿಯಿಂದ ಈಗಾಗಲೇ ಧ್ವನಿವರ್ಧಕ ಮುಖಾಂತರ ಸೂಚನೆ ನೀಡಲಾಗಿದೆ ಎಂದು ಪಿಎಸ್​ಐ ಶ್ರೀ ಈರಯ್ಯ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.




    ಮಳೆವಿಪರೀತ ಸುರಿಯುತ್ತಿದ್ದು, ನೆರೆ ನೀರಿನಮಟ್ಟ ವ್ಯಾಪಕವಾಗಿ ಏರುತ್ತಿದ್ದು, ಮಹಿಳೆಯರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಮನವಿ ಮಾಡಿಕೊಳ್ಳಲಾಗಿದೆ. ನೆರೆ ನೀರನ್ನು ವೀಕ್ಷಿಸಲು ಮಕ್ಕಳು, ಜನರು ಮುಗಿಬೀಳುತ್ತಿರುವುದು, ಮೊಬೈಲ್​ ಚಿತ್ರೀಕರಣ, ಸೆಲ್ಫೀ ತೆಗೆಯುತ್ತಿರುವುದು ಕಂಡು ಬರುತ್ತಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿ ವಿನಂತಿ ಮಾಡಿದ್ದಾರೆ.

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು