HOME » NEWS » District » MAHARASHTRA GOVERNMENT IMPORTANT MEETING TOMORROW ON KRISHNA RIVER WATER SHARING SAYS MINISTER RAMESH JARAKIHOLI HK

ಕೃಷ್ಣ ನದಿ ನೀರು ಹಂಚಿಕೆ ಸಂಬಂಧ ನಾಳೆ ಮಹಾರಾಷ್ಟ್ರ ಸರ್ಕಾರದ ಜತೆಗೆ ಮಹತ್ವ ಸಭೆ ; ಸಚಿವ ರಮೇಶ್ ಜಾರಕಿಹೊಳಿ

ನಾಳೆ ಮುಂಬೈನಲ್ಲಿ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ ಪಾಟೀಲ್ ಜತೆಗೆ ಸಭೆ ನಡೆಸಲು ಸಚಿವ ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ

news18-kannada
Updated:July 7, 2020, 9:36 PM IST
ಕೃಷ್ಣ ನದಿ ನೀರು ಹಂಚಿಕೆ ಸಂಬಂಧ ನಾಳೆ ಮಹಾರಾಷ್ಟ್ರ ಸರ್ಕಾರದ ಜತೆಗೆ ಮಹತ್ವ ಸಭೆ ; ಸಚಿವ ರಮೇಶ್ ಜಾರಕಿಹೊಳಿ
ಸಚಿವ ರಮೇಶ್​ ಜಾರಕಿಹೊಳಿ
  • Share this:
ಬೆಳಗಾವಿ(ಜುಲೈ.07): ಕರ್ನಾಟಕ, ಮಹಾರಾಷ್ಟ್ರ ನಡುವೆ ಕೃಷ್ಣ ನದಿ ನೀರು ಒಪ್ಪಂದ ಬಗ್ಗೆ ಅನೇಕ ದಿನಗಳಿಂದ ಮಾತುಕತೆ ನಡೆದಿಲ್ಲ. ಈ ಪ್ರಯತ್ನಕ್ಕೆ ಸದ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ. ನಾಳೆ ಈ ಬಗ್ಗೆ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ ಪಾಟೀಲ್ ಜತೆಗೆ ಮುಂಬೈನಲ್ಲಿ ಸಭೆ ನಡೆಸುವುದಾಗಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಕೃಷ್ಣ ನದಿ ನೀರು ಒಪ್ಪಂದ ಆಗದ ಕಾರಣ ಬೆಳಗಾವಿ ಜಿಲ್ಲೆ ಸೇರಿ ವಿಜಯಪುರ, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ಪ್ರತಿವರ್ಷ ಎದುರಾಗುತ್ತಿವೆ. ಮಳೆಗಾಲ ಸಂದರ್ಭದಲ್ಲಿ ಕೊಯ್ನಾ ಸೇರಿ ಡ್ಯಾಂಗಳು ಭರ್ತಿಯಾದ ಸಂದರ್ಭದಲ್ಲಿ ಮಾಹಿತಿ ನೀಡದೇ ಮಹಾರಾಷ್ಟ್ರದಿಂದ ಕೃಷ್ಣ ನದಿಗೆ ನೀರು ಬಿಡುತ್ತಾರೆ.

ಮಹಾರಾಷ್ಟ್ರದಿಂದ ನೀರು ಬಿಡುವುದರಿಂದ ಬೆಳಗಾವಿ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತದೆ. ಈ ಬಗ್ಗೆ ಮಹಾರಾಷ್ಟ್ರದ ಜತೆಗೆ ಪ್ರವಾಹ ಸಂಬಂಧ ಸಮನ್ವಯ ಸಮಿತಿ ರಚನೆ ಮಾಡಬೇಕು ಎಂದು ಉತ್ತರ ಕರ್ನಾಟಕದ ಅನೇಕ ಹೋರಾಟಗಾರರ ಆಗ್ರಹಿಸಿದ್ದರು.

ಸದ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜತೆಗೆ ಮಾತಕತೆ ನಡೆಸಲು ಮುಂದಾಗಿದ್ದಾರೆ. ನಾಳೆ ಈ ಬಗ್ಗೆ ಮುಂಬೈನಲ್ಲಿ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ ಪಾಟೀಲ್ ಜತೆಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷ್ಣ ನದಿ ನೀರು ಹಂಚಿಕೆ ಸಂಬಂಧ ಮಹತ್ವ ಚರ್ಚೆ ನಡೆಯಲಿದೆ.
ಸಚಿವದ್ವಯರ ಸಭೆಯ ನಂತರ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಭೇಟಿ ಮಾಡಿ ಮಾತನಾಡುವ ಪ್ರಯತ್ನ ಮಾಡುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಇದನ್ನೂ ಓದಿ :  ಗುಂಡ್ಲುಪೇಟೆಯಲ್ಲಿ ಒಂದೇ ಕುಟುಂಬದ ಐವರಿಗೆ ಕೊರೋನಾ ಸೋಂಕು ; ಚಾಮರಾಜನಗರ ಜಿಲ್ಲೆಯಲ್ಲಿ 120 ಕ್ಕೇರಿದ ಸೋಂಕಿತರ ಸಂಖ್ಯೆ

ಇಬ್ಬರು ಸಚಿವರ ಸಭೆಯ ನಂತರ ಮುಂದಿನ ದಿನದಲ್ಲಿ ಸಿಎಂ ಬಿಎಸ್ ವೈ ಹಾಗೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಡವೆ ಚರ್ಚೆ ನಡೆಯಲಿದೆ. ಕೃಷ್ಣ ನದಿ ನೀರು ಸಂಬಂಧ ಶಾಶ್ವತ ಪರಿಹಾರಕ್ಕೆ ಯತ್ನ ನಡೆಸುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಮಹಾರಾಷ್ಟ್ರದಿಂದ ಬೇಸಿಗೆ ಸಂದರ್ಭದಲ್ಲಿ ಅಥಣಿ ಸೇರಿ ಗಡಿಭಾಗಕ್ಕೆ ಕೃಷ್ಣ ನದಿಯಿಂದ 4 ಟಿಎಂಸಿ ನೀರು ಬಿಡಬೇಕು ಎಂಬುದು ಕರ್ನಾಟಕದ ಬೇಡಿಕೆಯಾಗಿದೆ. ಮಹಾರಾಷ್ಟ್ರದ ಜತ್ತ ತಾಲೂಕಿನ ಗ್ರಾಮಗಳಿಗೆ ರಾಜ್ಯದ ತುಬಚಿ ಬಬಲೇಶ್ವರ ಏತ ನೀರಾವರಿ ಮೂಲಕ ನೀರು ಬಿಡುವ ಸಂಬಂಧ ಮಹಾರಾಷ್ಟ್ರ ಬೇಡಿಕೆ ಇಟ್ಟಿದೆ. ಈ ಬಗ್ಗೆ ಮಹತ್ವದ ಚರ್ಚೆ ನಡೆದು ಒಮ್ಮತಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.
Published by: G Hareeshkumar
First published: July 7, 2020, 9:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories