HOME » NEWS » District » MAHAJAN COMMISSION REPORT IS FINAL SAYS SHYAMSUNDER GAIKWAD PTH HK

ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ - ಭಾಷಾ ಸಾಮರಸ್ಯಕ್ಕೆ ಧಕ್ಕೆ ಸಲ್ಲ: ಶ್ಯಾಮಸುಂದರ ಗಾಯಕವಾಡ

ಮರಾಠಾ ಸಮಾಜವನ್ನು 3 ಬಿ ಯಿಂದ 2 ಎ ಗೆ ಸೇರ್ಪಡೆ ಮಾಡಬೇಕು ಎನ್ನುವುದು ಪ್ರಮುಖ ಬೇಡಿಕೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೀಡಿರುವ ಭರವಸೆಯನ್ನು ಕೂಡಲೆ ಈಡೇರಿಸಬೇಕು ಎಂದರು.

news18-kannada
Updated:December 1, 2020, 3:16 PM IST
ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ - ಭಾಷಾ ಸಾಮರಸ್ಯಕ್ಕೆ ಧಕ್ಕೆ ಸಲ್ಲ: ಶ್ಯಾಮಸುಂದರ ಗಾಯಕವಾಡ
ಶ್ಯಾಮಸುಂದರ ಗಾಯಕವಾಡ
  • Share this:
ಹುಬ್ಬಳ್ಳಿ(ಡಿಸೆಂಬರ್​. 01): ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ಕೆಲವರು ಭಾಷಾ ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವುದು ಖಂಡನೀಯ ಎಂದು ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟದ‌ ಅಧ್ಯಕ್ಷ ಶ್ಯಾಮಸುಂದರ ಗಾಯಕವಾಡ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿರುವ ಮರಾಠರು ಅಪ್ಪಟ ಕನ್ನಡಿಗರು. ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಾರ್ಹ ನಡೆ ಎಂದಿದ್ದಾರೆ. ಮರಾಠಾ ಎಂದರೆ ಭಾಷೆಯಲ್ಲ ಸಮುದಾಯ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಡಿಸೆಂಬರ್  5 ರಂದು ಕರೆ ನೀಡಿರುವ ಬಂದ್ ತಪ್ಪು. ಮರಾಠಾ ಸಮಾಜದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ನಿಗಮ ಸ್ಥಾಪಿಸಲಾಗುತ್ತಿದೆ. ಮರಾಠಾ ಸಮಾಜವನ್ನು 3 ಬಿ ಯಿಂದ 2 ಎ ಗೆ ಸೇರ್ಪಡೆ ಮಾಡಬೇಕು ಎನ್ನುವುದು ಪ್ರಮುಖ ಬೇಡಿಕೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೀಡಿರುವ ಭರವಸೆಯನ್ನು ಕೂಡಲೆ ಈಡೇರಿಸಬೇಕು ಎಂದರು.

ಚುನಾವಣೆ ಬಹಿಷ್ಕಾರ, ನಿಗಮಕ್ಕೆ ವಿರೋಧ ಮಾಡುವುದು ಸರಿಯಲ್ಲ. ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಸಿ ಎಂ ಯಡಿಯೂರಪ್ಪನವರಿಗೆ ಮರಾಠಾ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇಬ್ಬರ ವರ್ಗಾವಣೆ

ಹುಬ್ಬಳ್ಳಿಯಲ್ಲಿ ರೌಡಿಗಳು ಮತ್ತು ವಕೀಲರ ಜೊತೆ ಪೊಲೀಸರ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಲೆದಂಡವಾಗಿದೆ.‌ ನವನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಭು ಸೂರಿನ್‌‌ರನ್ನು ಬೇರೆ ಕಡೆ ಎತ್ತಂಗಡಿ ಮಾಡಲಾಗಿದೆ.‌ ಓರ್ವ ಪೊಲೀಸ್ ಕಾನ್ಸ್‌ಟೇಬಲ್‌ ಅಮಾನತು ಮಾಡಲಾಗಿದೆ. ವಕೀಲ ವಿನೋದ ಪಾಟೀಲ್ ಮತ್ತು ರೌಡಿಶೀಟರ್ ಪ್ರವೀಣ ಪೂಜಾರಿ ಸೇರಿದಂತೆ ಕೆಲವರು ಇತ್ತೀಚೆಗೆ ಜಗಳ ಮಾಡಿಕೊಂಡಿದ್ದರು.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ನಡುರಸ್ತೆಯಲ್ಲಿ ಕಿತ್ತಾಟ ನಡೆದಿತ್ತು. ವಿಷಯ ತಿಳಿದು ಜಗಳ ಬಿಡಿಸಲು ಹೋಗಿದ್ದ ಪೊಲೀಸರ ಜೊತೆಯೇ ವಾಗ್ವಾದ ನಡೆಸಿದ್ದರು. ಗಲಾಟೆಯಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ವೇಳೆ ವಕೀಲ ವಿನೋದ್ ಪಾಟೀಲ್‌ಗೆ ಕೈಕೊಳ ತೊಡಿಸಲಾಗಿತ್ತು. ಕೈಕೊಳ ತೊಡಿಸಿದ್ದನ್ನು ಖಂಡಿಸಿ ವಕೀಲರು ಪ್ರತಿಭಟನೆ ಮಾಡಿದ್ದರು.

ಇದನ್ನೂ ಓದಿ : ಸಿಎಂ ಬದಲಾಗ್ತಾರೆ ಅಂತ ಅದ್ಯಾವ ದೇವ್ರು ನಿಮಗೆ ಸೂಚನೆ ಕೊಟ್ರು - ಸಚಿವ ಸೋಮಣ್ಣ ಪ್ರಶ್ನೆ

ಪೊಲೀಸ್ ಸಿಬ್ಬಂದಿ ಗಳ ಅಮಾನತಿಗೆ ಒತ್ತಾಯಿಸಿದ್ದರು. ಇದೇ ವೇಳೆ ಒತ್ತಡ ದಲ್ಲಿ ಕೆಲಸ ಮಾಡಲು ಆಗಲ್ಲಾ. ಬೇರೆ ಠಾಣೆಗೆ ಸಾಮೂಹಿಕ ವರ್ಗಾವಣೆ ಮಾಡುವಂತೆ ಆಗ್ರಹಿಸಿ ನವನಗರ ಠಾಣೆಯ 35 ಜನ ಪೊಲೀಸರು ಐಜಿಪಿಗೆ ಪತ್ರ ಬರೆದಿದ್ದರು.

ಘಟನೆಯ ಕುರಿತು ಮಾಹಿತಿ ಪಡೆದ ಉತ್ತರ ವಲಯದ ಐಜಿಪಿ ಹಾಗೂ ಹುಬ್ಬಳ್ಳಿ - ಧಾರವಾಡ ಡಿಸಿಪಿ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಓರ್ವ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
Published by: G Hareeshkumar
First published: December 1, 2020, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories