ಕೊಪ್ಪಳ(ಮಾ.01): ಇಂದು ಜಗತ್ತಿನಾದ್ಯಂತ ಮಹಾಶಿವರಾತ್ರಿಯನ್ನು (Maha Shivratri) ಆಚರಿಸುತ್ತಾರೆ. ಇಂದು ಶಿವನ ಆರಾಧನೆ(Lord Shiva), ಶಿವನ ಸ್ಮರಣೆ ಮಾಡುವುದು. ಶಿವನ ಪ್ರಮುಖ ದೇವಸ್ಥಾನಗಳಿಗೆ(Shiva Temples) ಭೇಟಿ ನೀಡುವುದು ಸಾಮಾನ್ಯ. ಭಾರತ ದೇಶದಲ್ಲಿ(India) ದ್ವಾದಶ ಲಿಂಗ ದರ್ಶನವು ಪವಿತ್ರ ಎಂಬ ನಂಬಿಕೆ ಇದೆ. 12 ಲಿಂಗಗಳಲ್ಲಿ ಒಂದೇ ಕಡೆ 9 ಲಿಂಗಗಳ ದರ್ಶನ ಪಡೆಯುವಂಥ ಅವಕಾಶ ಕೊಪ್ಪಳ ಜಿಲ್ಲೆಯಲ್ಲಿದೆ. ಕೊಪ್ಪಳ ಜಿಲ್ಲೆಯ ನವಲಿಂಗೇಶ್ವರ ದೇವಸ್ಥಾನದಲ್ಲಿ 9 ಲಿಂಗಗಳ ದರ್ಶನ ಪಡೆಯಬಹುದಾಗಿದೆ. 10ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಬೇಕಾಗಿದೆ.
9 ಲಿಂಗಗಳ ದರ್ಶನ ಪಡೆಯಬಹುದು
ಭಾರತೀಯ ಸಂಸ್ಕೃತಿಯಲ್ಲಿ ಶಿವನ ಆರಾಧನೆ ಮುಖ್ಯವಾಗಿದೆ. ಅದರಲ್ಲಿಯೂ ಕಾಶಿ ವಿಶ್ವನಾಥ, ಕೇದಾರನಾಥ, ಸೌರಾಷ್ಟ್ರ ಸೋಮನಾಥ. ಶ್ರೀಶೈಲ ಮಲ್ಲಿಕಾರ್ಜುನ ಹೀಗೆ ದ್ವಾದಶ ಲಿಂಗಗಳು ಇರುವ ಕ್ಷೇತ್ರಗಳು ಪವಿತ್ರವಾದ ಕ್ಷೇತ್ರಗಳೆಂಬ ಖ್ಯಾತಿ ಹೊಂದಿದೆ. ಜನ ಸಾಮಾನ್ಯರಿಗೆ ದ್ವಾದಶ ಲಿಂಗಗಳ ದರ್ಶನ ಪಡೆಯುವುದು ಕಷ್ಟ ಸಾಧ್ಯ. ಇದೇ ಕಾರಣಕ್ಕೆ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನವಲಿಂಗೇಶ್ವರ ದೇವಸ್ಥಾನ ಇದೆ. ಹೆಸರು ಹೇಳಿದಂತೆ ನವಲಿಂಗೇಶ್ವರ ಹೇಳಿದಂತೆ ಇಲ್ಲಿ 9 ದೇಶದ ಪ್ರಮುಖ ಲಿಂಗಗಳು ಇವೆ.
ಸೌರಾಷ್ಟ್ರ ಸೋಮನಾಥ, ಶ್ರೀಶೈಲ ಮಲ್ಲಿಕಾರ್ಜುನ. ಉಜ್ಜಯಿನಿ ಮಹಾಕೂಟೇಶ್ವರ, ಓಂಕಾರ ಅಮರೇಶ್ವರ, ಪರಳಿ ರಾಮೇಶ್ವರ, ಡಾಕಿನಿ ನಾಗೇಶ್ವರ, ಗೋದಾವರಿ ತ್ರಯಂಬಕೇಶ್ವರ, ಹಿಮಾಲಯದ ಕೇದರನಾಥ ಹಾಗೂ ಸುರಾದ್ರಿ ಘೋಷ್ಮೇಶ್ವರ ದೇವರ ದರ್ಶನವನ್ನು ಒಂದೇ ಕಟ್ಟಡದಲ್ಲಿ ದರ್ಶನ ಪಡೆಯಬಹುದಾಗಿದೆ. ನವಲಿಂಗೇಶ್ವರ ದೇವಸ್ಥಾನ ಪ್ರವೇಶದ ಮುನ್ನ ಮಾರ್ಕೇಂಡೇಶ್ವರ ದೇವಸ್ಥಾನವಿದ್ದು. ದೇವಾಲಯ ಪ್ರವೇಶಿಸಿದ ನಂತರ ಒಂಬತ್ತು ದೇವರ ದರ್ಶನ ಪಡೆಬಹುದಾಗಿದೆ.
10ನೇ ಶತಮಾನದಲ್ಲಿ ದೇವಾಲಯ ನಿರ್ಮಾಣ
ಐತಿಹಾಸಿಕ ಪಟ್ಟಣವಾಗಿರುವ ಕುಕನೂರಿನಲ್ಲಿರುವ ನವಲಿಂಗೇಶ್ವರ ದೇವಸ್ಥಾನವು ಇಲ್ಲಿಯ ಆದಿಶಕ್ತಿ ಮಹಾಮಯ ದೇವಸ್ಥಾನದ ಪಕ್ಕದಲ್ಲಿದೆ. ನವಲಿಂಗೇಶ್ವರ ದೇವಸ್ಥಾನವನ್ನು ಕಲ್ಯಾಣ ಚಾಲೂಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ. ಆದರೆ ದೇವಸ್ಥಾನವನ್ನು ಯಾರು ನಿರ್ಮಿಸಿದರು ಎಂಬುವುದು ಸರಿಯಾಗಿ ತಿಳಿದು ಬಂದಿಲ್ಲ. ಆದರೆ 927ನೆಯ ಶತಮಾನದಲ್ಲಿ ಜಗದೇಕಮಲ್ಲ ಎಂಬುವವರು ಜೀರ್ಣೋದ್ಧಾರ ಮಾಡಿರುವುದು ದೇವಸ್ಥಾನ ಮುಂಭಾಗದಲ್ಲಿರುವ ಶಿಲಾಶಾನದಿಂದ ತಿಳಿದು ಬರುತ್ತಿದೆ.
ದೇವಸ್ಥಾನದ ಜೀರ್ಣೋದ್ದಾರದ ಅವಶ್ಯಕತೆ ಇದೆ
ನವಲಿಂಗೇಶ್ವರ ಬೃಹತ್ ದೇವಸ್ಥಾನದಲ್ಲಿರುವ ನವಲಿಂಗಗಳ ಪೂಜೆಯನ್ನು ಮಾಡಲು ಅರ್ಚಕರನ್ನು ಸಹ ನೇಮಿಸಿಲ್ಲ. ಈಗ ಪಕ್ಕದ ಮಹಾಮಯಿ ದೇವಸ್ಥಾನ ಅರ್ಚಕರೇ ಪೂಜೆ ಸಲ್ಲಿಸುತ್ತಾರೆ. ವಿವಿಧ ಲಿಂಗಗಳು, ಅವುಗಳ ಪ್ರಾಮುಖ್ಯತೆ, ಈ ದೇವಸ್ಥಾನದ ಬಗ್ಗೆ ಮಾಹಿತಿ. ಹಳೆಯದಾದ ದೇವಾಲಯದ ಸುಂದರ ಕೆತ್ತನೆಗಳು ನಿಧಾನವಾಗಿ ಹಾಳಾಗುತ್ತಿವೆ. ಈ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯ ದೇವಸ್ಥಾನ ರಕ್ಷಿಸಬೇಕಾಗಿದೆ. ಈ ದೇವಸ್ಥಾನ ಕರ್ನಾಟಕ ಸರಕಾರದ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿದೆ. ಆದರೆ ಇಲ್ಲಿ ದೇವಸ್ಥಾನದ ರಕ್ಷಣೆಯೂ ಇಲ್ಲ, ದೇವಸ್ಥಾನದಲ್ಲಿರುವ ದೇವರ ಪೂಜೆ ಸಹ ಮಾಡುತ್ತಿಲ್ಲ.
ಪುರಾತನ ಕಾಲದ ಸುಂದರ ಕೆತ್ತನೆ ಇರುವ ದೇವಸ್ಥಾನವು ಈಗ ಹಾಳಾಗುತ್ತಿದೆ. ಈ ದೇವಸ್ಥಾನವನ್ನು ಪುನರ್ಜ್ಜೀವನಗೊಳಿಸಬೇಕಾಗಿದೆ. ಶಿವರಾತ್ರಿ ಸಂದರ್ಭದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನ ಮಾಡುವ ಆಸ್ತಿಕರು, ಇಲ್ಲಿಯ ನವಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನವನ್ನು ಸಹ ಪಡೆಯುತ್ತಾರೆ.
Published by:Latha CG
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ