Madikeri Dasara: ಶಕ್ತಿ ದೇವತೆಗಳ ಕರಗ ಉತ್ಸವದ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ

ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕರಗ ಉತ್ಸವ ಮನೆ ಮನೆಗಳಿಗೆ ಹೋಗಲು ಅವಕಾಶ ಇರಲಿಲ್ಲ. ಈ ಬಾರಿ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಿದೆ. ಹೀಗಾಗಿ ನಾಳೆಯಿಂದ ಕರಗ ಉತ್ಸವ ಮನೆ ಮನೆಗೆ ತೆರಳಲಿದೆ. ಇದರಿಂದ ಕೊಡಗಿನಲ್ಲಿ ಸೋಂಕಿನ ನಿಯಂತ್ರಣವಾಗಲಿದೆ ಎನ್ನೋ ನಂಬಿಕೆ ಇದೆ.

ಕರಗ ಉತ್ಸವದ ಮೂಲಕ ಮಡಿಕೇರಿ ದಸರಾಗೆ ಚಾಲನೆ ನೀಡಲಾಯಿತು.

ಕರಗ ಉತ್ಸವದ ಮೂಲಕ ಮಡಿಕೇರಿ ದಸರಾಗೆ ಚಾಲನೆ ನೀಡಲಾಯಿತು.

  • Share this:
ಕೊಡಗು: ಮಡಿಕೇರಿ ಶಕ್ತಿ ದೇವತೆಗಳ ಕರಗಗಳ ಉತ್ಸವಕ್ಕೆ (Karaga Utsava) ಚಾಲನೆ ನೀಡುವ ಮೂಲಕ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ (Madikeri Dasara Inaugurated) ದೊರೆತ್ತಿದೆ. ಮಡಿಕೇರಿ ನಗರದ ಪಂಪಿನ ಕೆರೆ ಬಳಿಯಿಂದ ಎಂಎಲ್ ಸಿ ಗಳಾದ ಸುನಿಲ್ ಸುಬ್ರಹ್ಮಣಿ ಮತ್ತು ವೀಣಾ ಅಚ್ಚಯ್ಯ ಅವರು ಪೂಜೆ ಸಲ್ಲಿಸುವ ಮೂಲಕ ಕರಗ ಉತ್ಸವಕ್ಕೆ ಚಾಲನೆ ನೀಡಿದರು. ನಗರದ ಶಕ್ತಿ ದೇವತೆಗಳಾದ ದಂಡಿನ ಮಾರಿಯಮ್ಮ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ ಮತ್ತು ಕಂಚಿ ಕಾಮಾಕ್ಷಿ, ದೇವತೆಗಳ ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬನ್ನಿ ಮಂಟಪ ಮಾರ್ಗದ ಮೂಲಕ ಹೊರಟ ಕರಗ ಉತ್ಸವ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಆಯಾ ದೇವಾಲಯಗಳಿಗೆ ತೆರಳಿತು.

ಕೋವಿಡ್ ಹಿನ್ನೆಲೆಯಲ್ಲಿ ಪ್ರತೀ ದೇವರ ಕರಗದ ಜೊತೆಗೆ ಕೇವಲ 25 ಜನರು ಇರುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಆದರೆ ಜನರು ಮಾತ್ರ ಅದನ್ನು ಪಾಲಿಸದೆ ನೂರಾರು ಸಂಖ್ಯೆಯಲ್ಲಿ ಸೇರಿದ್ದು ವಿಪರ್ಯಾಸ. ಇನ್ನು ನಾಳೆಯಿಂದ ನಾಲ್ಕು ಶಕ್ತಿ ದೇವತೆಗಳ ಕರಗಗಳು ಮಡಿಕೇರಿ ನಗರವನ್ನು ಪ್ರದಕ್ಷಿಣೆ ಹಾಕಲಿವೆ. ಕರಗಗಳು ಪ್ರತೀ ಮನೆ ಮನೆಗೂ ತೆರಳಲಿವೆ. ಈ ವೇಳೆ ಪ್ರತೀ ದೇವತೆಗಳ ಕರಗದ ಜೊತೆಗೆ ಕೇವಲ 10 ಜನರು ಮಾತ್ರವೇ ಇರುವಂತೆ ಜಿಲ್ಲಾಡಳಿತ ಸೂಚಿಸಿದ್ದು, ಅದನ್ನಾದರೂ ಭಕ್ತರು ಪಾಲನೆ ಮಾಡುತ್ತಾರಾ ಎನ್ನೋದನ್ನು ಕಾದು ನೋಡಬೇಕು.

ಇಂದು ಪಂಪಿನ ಕೆರೆಯಿಂದ ಚಾಲನೆ ನೀಡಿದ ಕರಗ ಉತ್ಸವದ ವೇಳೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮತ್ತು ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್ ಭಾಗಿಯಾಗಿದ್ದರು. ಮಡಿಕೇರಿ ರಾಜರ ಆಳ್ವಿಕೆ ಕಾಲದಿಂದಲೂ ಮಡಿಕೇರಿ ಕರಗ ಉತ್ಸವ ನಡೆಯುತ್ತಿದ್ದು ಎಂದಿಗೂ ಉತ್ಸವ ನಿಂತಿರಲಿಲ್ಲ. ಹಿಂದೆ ಪ್ಲೇಗ್ ಮತ್ತು ಕಾಲರಾ ಸೋಂಕುಗಳು ಬಂದಾಗ ಕರಗ ಉತ್ಸವವನ್ನು ನಡೆಸುವ ಮೂಲಕ ಮಹಾಮಾರಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿತ್ತು ಎನ್ನೋ ನಂಬಿಕೆ ಜನರಲ್ಲಿ ಇಂದಿಗೂ ಇದೆ. ಆದರೆ ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕರಗ ಉತ್ಸವ ಮನೆ ಮನೆಗಳಿಗೆ ಹೋಗಲು ಅವಕಾಶ ಇರಲಿಲ್ಲ. ಈ ಬಾರಿ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಿದೆ. ಹೀಗಾಗಿ ನಾಳೆಯಿಂದ ಕರಗ ಉತ್ಸವ ಮನೆ ಮನೆಗೆ ತೆರಳಲಿದೆ. ಇದರಿಂದ ಕೊಡಗಿನಲ್ಲಿ ಸೋಂಕಿನ ನಿಯಂತ್ರಣವಾಗಲಿದೆ ಎನ್ನೋ ನಂಬಿಕೆ ಇದೆ.

ಹಿಂದೆ ರಾಜರು ಕೊಡಗಿನಲ್ಲಿ ಕರಗಗಳ ಉತ್ಸವಕ್ಕೆ ಚಾಲನೆ ನೀಡಿ ಬಳಿಕ ನವರಾತ್ರಿ ಆಚರಿಸುತ್ತಿದ್ದರು ಎಂದಿದ್ದಾರೆ ಕರಗ ಹೊರುವ ಉಮೇಶ್ ಸುಬ್ರಮಣಿ. ಕಳೆದ ವರ್ಷ ಕರಗ ಮತ್ತು ಮಡಿಕೇರಿ ದಸರಾ ಎರಡೂ ಸರಿಯಾಗಿ ಆಚರಣೆ ಆಗಿರಲಿಲ್ಲ. ಕೋವಿಡ್ ಕಡಿಮೆ ಆಗಿರುವುದರಿಂದ ಈ ಬಾರಿಯಾದರೂ ಸಂತಸದಿಂದ ಕರಗ ಮತ್ತು ದಸರಾ ಆಚರಿಸುತ್ತಿರುವ ನೆಮ್ಮದಿ ಇದೆ ಎಂದು ಭಕ್ತರಾದ ವೀಣಾಕ್ಷಿ ಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: KL rahula And Athiya Shetty; ವಿರುಷ್ಕಾ ರೀತಿಯಲ್ಲಿ ಕೆ.ಎಲ್.ರಾಹುಲ್, ಆಥಿಯಾ ಶೆಟ್ಟಿ ಜೋಡಿಗೆ ಸಿಕ್ತು ಹೊಸ ಹೆಸರು

ಮೈಸೂರು ದಸರಾಗೂ ವಿದ್ಯುಕ್ತ ಚಾಲನೆ 

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿದ್ಯುಕ್ತ ಚಾಲನೆ ದೊರಕಿದೆ. ಇದರೊಂದಿಗೆ ಅರಮನೆ ನಗರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಚಾಮುಂಡಿ ಬೆಟ್ಟದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸಿ ದಸರಾಕ್ಕೆ ಚಾಲನೆ ನೀಡಿದರು. ಇತ್ತ ರಾಜವಂಶಸ್ಥರ ಖಾಸಗಿ ದಸರಾಕ್ಕೂ ಚಾಲನೆ ದೊರಕಿದ್ದು, ಯದುವೀರ ಒಡೆಯರ್ 7ನೇ ಬಾರಿಗೆ ಸಿಂಹಾಸನ ಏರಿ ದರ್ಬಾರ್ ಆರಂಭಿಸಿದ್ದಾರೆ.
Published by:HR Ramesh
First published: