HOME » NEWS » District » MADIKERI BJP MLA APPACHU RANJAN EXPULSION DISGRUNTLED RHHSN RSK

ಬಕೆಟ್ ಹಿಡಿಯುವವರಿಗೆ ಸಚಿವ ಸ್ಥಾನ; ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ

ಬಿಜೆಪಿಯ ಬೆಳವಣಿಗಾಗಿ ಹಲವು ವರ್ಷಗಳಿಂದ ದುಡಿದವರನ್ನು ಕಡೆಗಣಿಸಲಾಗುತ್ತಿದೆ. ಕೇವಲ ಬಕೆಟ್ ಹಿಡಿದುಕೊಂಡು, ಪಕ್ಷಕ್ಕೆ ಹೊರಗಿನಿಂದ ಬಂದು ಪೋಸ್ ಕೊಡುತ್ತಿರುವವರಿಗೆ ಸಚಿವ ಸ್ಥಾನ ಕೊಡಲಾಗುತ್ತಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ಹೊರಹಾಕಿದರು.

news18-kannada
Updated:January 16, 2021, 7:12 PM IST
ಬಕೆಟ್ ಹಿಡಿಯುವವರಿಗೆ ಸಚಿವ ಸ್ಥಾನ; ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ
ಅಪ್ಪಚ್ಚು ರಂಜನ್
  • Share this:
ಕೊಡಗು: ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೊಡಗು ಜಿಲ್ಲೆಯನ್ನು ಕಡೆಗಣಿಸಿರುವುದಕ್ಕೆ ಅಸಮಾಧಾನಗೊಂಡಿರುವ ಶಾಸಕ ಅಪ್ಪಚ್ಚು ರಂಜನ್ ಮೂರು ದಿನಗಳ ಬಳಿಕ ಕೊನೆಗೂ ಮೌನ ಮುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಕೋವಿಶೀಲ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ ಸಂದರ್ಭ ಅವರು ಮಾತನಾಡಿದ್ದಾರೆ. ಬಕೆಟ್ ಹಿಡಿಯುವವರಿಗೆ ಸಚಿವ ಸ್ಥಾನ ಕೊಡಲಾಗಿದೆ. ಪ್ರಾಮಾಣಿಕವಾಗಿ ಸಂಘದ ಮಾತು ಕೇಳಿಕೊಂಡು ತಲೆಯಾಡಿಸುತ್ತಾ ಸುಮ್ಮನೆ ಇದ್ದಿದ್ದರಿಂದ ನಮನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದು ಬಾರಿ ಮಡಿಕೇರಿ ಕ್ಷೇತ್ರದಿಂದ ಬಿಜೆಪಿ ಶಾಸಕನಾಗಿ ಗೆದ್ದಿದ್ದೇನೆ. ಆದರೂ ಸಚಿವಸ್ಥಾನ ಕೊಡದೆ ಕೇವಲ ಸಿಎಂಗೆ ಬಕೆಟ್ ಹಿಡಿಯುವವರಿಗೆ ಸಚಿವ ಸ್ಥಾನ ಕೊಡಲಾಗಿದೆ. ಪಕ್ಷದ ವಿಚಾರ ಬೀದಿಗೆ ಬರಬಾರದು ಎಂದು ಸುಮ್ಮನಿದ್ದೆವು. ಇನ್ನು ಹತ್ತು ದಿನಗಳು ಕಳೆಯಲಿ, ಬಳಿಕ ಕೇಂದ್ರದ ನಾಯಕರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಹಾಗೆ ಎಂಎಲ್ ಸಿ ವಿಶ್ವನಾಥ್ ಅವರು ಸೈನಿಕನ ಕುರಿತು ಹೇಳಿರುವುದು ಸರಿಯೇ ಇದೆ. ಅವರು ಹೇಳಿರುವುದೆಲ್ಲವೂ ಸತ್ಯವೇ ಹೊರತ್ತು, ಸುಳ್ಳಲ್ಲ. ಸೈನಿಕನಿಂದಲೇ ವಿಶ್ವನಾಥ್ ಅವರು ಉಪಚುನಾವಣೆಯಲ್ಲಿ ಸೋತಿದ್ದಾರೆ ಎಂದು ನೂತನ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.

ಚುನಾವಣೆ ಸಂದರ್ಭ ಹುಣಸೂರು ಉಸ್ತುವಾರಿಯನ್ನು ನಾನೇ ಹೊತ್ತಿದ್ದೆ. ಆ ವೇಳೆ ಎಲ್ಲವನ್ನೂ ನಾನು ಚೆನ್ನಾಗಿ ನೋಡಿದ್ದೇನೆ. ಚುನಾವಣೆ ಎರಡು ದಿನ ಇರುವಾಗ ಏನೆಲ್ಲಾ ನಡೆಯಿತು ಎನ್ನೋದು ನನಗೆ ಸಂಪೂರ್ಣ ಗೊತ್ತಿದೆ. ಸೈನಿಕನಿಂದಾಗಿಯೇ ವಿಶ್ವನಾಥ್ ಸೋತಿದ್ದು ಎಂದು ಹೇಳಿದ್ದಾರೆ. ಹೀಗೆ ವಿಶ್ವನಾಥ್ ಸೋಲಿಗೆ ಕಾರಣವಾದವರಿಗೆ ಸಚಿವ ಸ್ಥಾನ ನೀಡಿರುವುದು ದುರಂತವೇ ಸರಿ ಎಂದು ಹೇಳುವ ಮೂಲಕ ಎಂಎಲ್ ಸಿ ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ ಸಚಿವ ಯೋಗೇಶ್ವರ್ ವಿರುದ್ಧವೂ ಕಿಡಿಕಾರಿದ್ದಾರೆ.

ಇದನ್ನು ಓದಿ: ಹಿಂದೂಗಳನ್ನು ನಾಶ ಮಾಡುತ್ತೇನೆ ಎನ್ನುವವರಿಗೆ ಹೆಚ್ಚು ಅನುದಾನ; ಹಿಂದೂ ರಕ್ಷಕರಿಗೆ ಭದ್ರತೆ ಹಿಂದಕ್ಕೆ; ಸಿಎಂ ವಿರುದ್ಧ ಮತ್ತೆ ಯತ್ನಾಳ ಕಿಡಿ

ಬಿಜೆಪಿಯ ಬೆಳವಣಿಗಾಗಿ ಹಲವು ವರ್ಷಗಳಿಂದ ದುಡಿದವರನ್ನು ಕಡೆಗಣಿಸಲಾಗುತ್ತಿದೆ. ಕೇವಲ ಬಕೆಟ್ ಹಿಡಿದುಕೊಂಡು, ಪಕ್ಷಕ್ಕೆ ಹೊರಗಿನಿಂದ ಬಂದು ಪೋಸ್ ಕೊಡುತ್ತಿರುವವರಿಗೆ ಸಚಿವ ಸ್ಥಾನ ಕೊಡಲಾಗುತ್ತಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ಹೊರಹಾಕಿದರು.

ಇನ್ನು ಬೆಂಗಳೂರು ಶಾಸಕ ಜಮೀರ್ ಅಹಮದ್ ಅವರ ಕ್ಷೇತ್ರಕ್ಕೆ 200 ಕೋಟಿ ರೂಪಾಯಿ ಅನುದಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದೆ. ಇದೊಂದೇ ಜಿಲ್ಲೆಯಲ್ಲ, ಬೇರೆ ಬೇರೆ ಜಿಲ್ಲೆಗಳು ಕೂಡ ಕಳೆದ ಬಾರಿ ಪ್ರವಾಹದಿಂದ ತತ್ತರಿಸಿವೆ. ಆ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿ ಅಲ್ಲಿನ ಜನರ ಸಂಕಷ್ಟ ಬಗೆಹರಿಸಿ ಜನರ ಸ್ಥಿತಿ ಸುಧಾರಿಸುವಂತೆ ಮಾಡಬೇಕಾಗಿತ್ತು. ಅಂತಹ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡುವ ಬದಲು ಬೆಂಗಳೂರು ನಗರದ ಕ್ಷೇತ್ರಕ್ಕೆ ಅಷ್ಟೊಂದು ಅನುದಾನವನ್ನು ಕೊಡುವ ಅಗತ್ಯವಾದರೂ ಏನಿತ್ತು ಎಂದು ಅಪ್ಪಚ್ಚು ರಂಜನ್ ಸಿಎಂ ಯಡಿಯೂರಪ್ಪ ಅವರನ್ನು ನೇರವಾಗಿಯೇ ಪ್ರಶ್ನಿಸಿದ್ದಾರೆ.
Published by: HR Ramesh
First published: January 16, 2021, 7:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories