ಮಂಗಳೂರಿನ ವೃಕ್ಷತಪಸ್ವಿಯ ಸಾಧನೆ; ಮಾದವ್ ಉಳ್ಳಾಲ್ ಪರಿಸರ ಪ್ರೀತಿಗೆ ಅಪಾರ ಜನಮೆಚ್ಚುಗೆ

ಮಾದವ್ ಉಳ್ಳಾಲ್ ಬ್ಯಾಂಕ್ ನ ಪಿಗ್ಮಿ ಕಲೆಕ್ಟರ್ ಆಗಿ ಮಂಗಳೂರಿನ ವಿವಿಧ ಭಾಗಗಳಲ್ಲಿ ಠೇವಣಿ ಸಂಗ್ರಹಿಸುತ್ತಿದ್ದರು. ಪಿಗ್ಮಿಗೆ ನಡೆದುಕೊಂಡೇ ಹೋಗುತ್ತಿದ್ದ ಅವರಿಗೆ ಜಾಗತಿಕ ತಾಪಮಾನದ ಬಗ್ಗೆ ಅರಿವು ಮೂಡಿತು. ಮಂಗಳೂರಿನ ವಿವಿಧ ಭಾಗಗಳಲ್ಲಿ ಠೇವಣಿ ಸಂಗ್ರಹ್ಕಕೆ ತೆರಳುವಾಗ ರಸ್ತೆ ಬದಿ ನೆರಳು ಇರುತ್ತಿರಲಿಲ್ಲ.

ಪರಿಸರ ಪ್ರೇಮಿ ಮಾದವ್ ಉಳ್ಲಾಲ್.

ಪರಿಸರ ಪ್ರೇಮಿ ಮಾದವ್ ಉಳ್ಲಾಲ್.

  • Share this:
ಮಂಗಳೂರು; ಹಸಿರು ಪರಿಸರ ಉಳಿಸಬೇಕು, ಬೆಳಸಬೇಕು ಎಂಬುದು ಕೇವಲ ಪರಿಸರ ದಿನಾಚರಣೆ ಕಾರ್ಯಕ್ರಮದ ಭಾಷಣಕಷ್ಟೇ ಸೀಮಿತವಾಗುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧ ಎನ್ನುವಂತೆ ಮಂಗಳೂರಿನಲ್ಲೊಬ್ಬರು ಹಸಿರು ಪರಿಸರ ಕೈಂಕರ್ಯದ ಕಾರ್ಯ ಮಾಡುತ್ತಿದ್ದಾರೆ.

ಹಚ್ಚ ಹಸಿರಿನ ವೃಕ್ಷಗಳ ನಡುವೆ ನಿಸ್ವಾರ್ಥ ಸೇವೆ ಮಾಡುತ್ತಿರುವ ವೃಕ್ಷ ತಪಸ್ವಿಯ ಹೆಸರು ಮಾದವ್ ಉಳ್ಲಾಲ್. ಇವರು ಮಂಗಳೂರು ಹೊರವಲಯದ ಉಳ್ಳಾಲದ ನಿವಾಸಿ. ವೃತ್ತಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿರುವ ಇವರು ಸಂಪಾದನೆಯ ಒಂದು ಪಾಲನ್ನು ವೃಕ್ಷಗಳ ಪಾಲನೆ ಪೋಷಣೆಗೆ ಮೀಸಲಿಟ್ಟಿರುವುದರ ಜೊತೆಗೆ ತನ್ನ ಜೀವನವನ್ನೇ ಹಸಿರು ಪರಿಸರ ನಿರ್ಮಾಣಕ್ಕೆ ಮುಡಿಪಾಗಿಟ್ಟಿದ್ದಾರೆ. ಕಳೆದ 30 ವರ್ಷಗಳಿಂದಲೂ ಮರ-ಗಿಡಗಳನ್ನು ಬೆಳೆಸಿಕೊಂಡು ಬಂದಿರುವ ಇವರು ಇಲ್ಲಿವರೆಗೂ ಬರೋಬ್ಬರಿ 32 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ.

ಮಾದವ್ ಉಳ್ಳಾಲ್ ಬ್ಯಾಂಕ್ ನ ಪಿಗ್ಮಿ ಕಲೆಕ್ಟರ್ ಆಗಿ ಮಂಗಳೂರಿನ ವಿವಿಧ ಭಾಗಗಳಲ್ಲಿ ಠೇವಣಿ ಸಂಗ್ರಹಿಸುತ್ತಿದ್ದರು. ಪಿಗ್ಮಿಗೆ ನಡೆದುಕೊಂಡೇ ಹೋಗುತ್ತಿದ್ದ ಅವರಿಗೆ ಜಾಗತಿಕ ತಾಪಮಾನದ ಬಗ್ಗೆ ಅರಿವು ಮೂಡಿತು. ಮಂಗಳೂರಿನ ವಿವಿಧ ಭಾಗಗಳಲ್ಲಿ ಠೇವಣಿ ಸಂಗ್ರಹ್ಕಕೆ ತೆರಳುವಾಗ ರಸ್ತೆ ಬದಿ ನೆರಳು ಇರುತ್ತಿರಲಿಲ್ಲ. ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗುತ್ತಿರಲಿಲ್ಲ. ಈ ಬಗ್ಗೆ ಜಾಗೃತಗೊಂಡ ಮಾದವ್ ಉಳ್ಳಾಲ್ ಜಾಗತಿಕ ತಾಪಮಾನ ಕಡಿಮೆ ಮಾಡಲು ವೃಕ್ಷಗಳನ್ನು ಬೆಳೆಸುವುದೇ ಉತ್ತರ ಎಂಬ ನಿಟ್ಟಿನಲ್ಲಿ ಕಾರ್ಯೋನ್ಮುಖನಾದರು.

ಮೊದಲು ನಗರದ ಹಂಪನ್‌ಕಟ್ಟೆಯಿಂದ ಜ್ಯೋತಿ, ಬಲ್ಮಠದ ರಸ್ತೆ ಬದಿಗಳಲ್ಲಿ ಪ್ರಾರಂಭದಲ್ಲಿ ಗಿಡ ನೆಟ್ಟರು‌. ಅಂದು ಇವರು ನೆಟ್ಟ ಗಿಡಗಳು ಇಂದು ಬೃಹದಾಕಾರವಾಗಿ ರಸ್ತೆ ಬದಿ ಬೆಳೆದಿದೆ. ಇದೀಗ ಮಂಗಳೂರಿನ ತಲಪಾಡಿಯಿಂದ-ನಂತೂರು ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಾಲುಮರ ಗಿಡ ನಾಟಿ ಮಾಡುವ ಕಾರ್ಯಕ್ಕೆ ಮಾದವ್ ಉಳ್ಳಾಲ್ ಇಳಿದಿದ್ದಾರೆ‌. ಈ ಕಾರ್ಯಕ್ಕಾಗಿಯೇ ತನ್ನ ಪಿಗ್ಮಿ ಕಲೆಕ್ಟರ್ ಉದ್ಯೋಗಕ್ಕೆ ಮೂರು ವರ್ಷಗಳ ಕಾಲ ರಜೆ ಘೋಷಿಸಿದ್ದಾರೆ.

ಇದನ್ನೂ ಓದಿ : ಯಾದಗಿರಿಯಲ್ಲಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಸ್ಥಾನಕ್ಕೂ ಆಪರೇಷನ್ ಕಮಲ


ಇವರ ಈ ಪರಿಸರ ಪ್ರೀತಿಗೆ ಅರಣ್ಯ ಇಲಾಖೆ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ, ಸಂಘ ಸಂಸ್ಥೆಗಳು ನೆರವಾಗುತ್ತಿದೆ. ಕೇವಲ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಲ್ಲೂ ಪರಿಚಿತರ ಮೂಲಕ ಗಿಡವನ್ನು ನೆಡುವ ಕಾರ್ಯ ಮಾಡಿದ್ದಾರೆ. ರುದ್ರ ಭೂಮಿ, ದೇವಸ್ಥಾನ, ಶಾಲೆ ವಠಾರದಲ್ಲಿಯೂ ಗಿಡಗಳ ನಾಟಿಯನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಇಂದು ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗಿರುವ ಪರಿಸರ ಪ್ರೀತಿಯನ್ನು ಮಾದವ್ ಉಳ್ಳಾಲ್ ಕಳೆದ 30 ವರ್ಷಗಳಿಂದ ಪ್ರತಿದಿನ ತೋರಿಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ.
Published by:MAshok Kumar
First published: