ಚಿತ್ರದುರ್ಗ: ಮಾದಿಗ ಸಮುದಾಯ ಸೇರಿದಂತೆ ಪರಿಶಿಷ್ಟ ಜಾರಿಗಳ ಒಳ ಮೀಸಲಾತಿ ಮರು ಪರಿಶೀಲನೆಗೆ ಸುಪ್ರಿಂ ಕೋರ್ಟ್ ನೀಡಿದ ತೀರ್ಪನ್ನು ಚಿತ್ರದುರ್ಗ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸ್ವಾಗತಿಸಿ ಅಭಿನಂದನೆ ತಿಳಿಸಿದ್ದಾರೆ. ಚಿತ್ರದುರ್ಗ ಮಾದಾರ ಗುರು ಪೀಠದಲ್ಲಿ ಸುದ್ದಿಗೋಷ್ಠಿ ನಡಸಿದ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ದಲಿತ ಪರಿಶಿಷ್ಠ ಜಾತಿಯಲ್ಲಿನ ಸಮುದಾಯಗಳು ಸಂವಿಧಾನಿಕವಾಗಿ ಹಕ್ಕು ಬಾಧ್ಯತೆಯಿಂದ ವಂಚಿತ ಆಗಬಾರದೆಂದು ಪರಾಮರ್ಶಿಸಿರುವ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂಬರುವ ಸಚಿವ ಸಂಪುಟ, ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರ ಮತ್ತು ಸಮಾಜ ಕಲ್ಯಾಣ ಸಚಿವರು ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಬೇಗ ತೀರ್ಮಾನಿಸಬೇಕು. ಒಳ ಮೀಸಲಾತಿಗೆ ಸಂಬಂಧಿಸಿದ ಈ ವರದಿಯನ್ನ ಕೇಂದ್ರಕ್ಕೆ ಕಳುಹಿಸುತ್ತಾರೋ ಸರ್ಕಾರದಲ್ಲಿಯೇ ತೀರ್ಮಾನ ಕೈಗೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಅವರು ವರದಿಯನ್ನ ಕಾನೂನಾತ್ಮಕವಾಗಿ ಪರಿಶೀಲನೆ ಮಾಡಿ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಸ್ವಾಮೀಜಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಶೇ.50ರಷ್ಟು ಮದ್ಯ ಮಾರಾಟ ಕುಸಿತ; ಕಂಗಾಲಾದ ಸಗಟು ವ್ಯಾಪಾರಸ್ಥರು
ರಾಜ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರು ಆಗಿರುವ ಗೋವಿಂದ ಕಾರಜೋಳ ನಮ್ಮ ಸಮಾಜದವರೇ ಇದ್ದಾರೆ. ಅವರು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ. ಆದ್ದರಿಂದ ನಮ್ಮೆಲ್ಲರಿಗೂ ಇದೊಂದು ಆಶಾದಾಯಕವಾದ ಬೆಳವಣಿಗೆಯಾಗಿದೆ. ಈ ವಿಷಯದ ಬಗ್ಗೆ ನಮ್ಮ ಬಳಿ ಸಚಿವರು ಅವರ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸಮಾಜ ಕಲ್ಯಾಣ ಸಚಿವರ ಹೇಳಿಕೆಗೆ ಅಭಿನಂದಿಸುತ್ತೇನೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ನ ಅಭಿಪ್ರಾಯವನ್ನ ಸ್ವಾಗತಿಸುತ್ತೇನೆ. ಸರ್ಕಾರ ಅತೀ ಬೇಗನೇ ಈ ನಿರ್ಧಾರ ಕೈಗೊಳ್ಳಲು ಒತ್ತಾಯಿಸುತ್ತೇನೆ. ಒಳ ಮೀಸಲಾತಿ ವರ್ಗಿಕರಣ ಯಾರಿಗೂ ಅನ್ಯಾಯವಾಗದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದವರು ವರದಿ ಕೊಟ್ಟಿದ್ದಾರೆ. ಆ ವರದಿಯಯನ್ನ ಬೇಗ ಜಾರಿಗೆ ತರಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಎಂದು ಮಾದಾರ ಗುರುಪೀಠದ ಶ್ರೀಗಳು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಸಂಗೊಳ್ಳಿರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥ; ಕಿಡಿಗೇಡಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಸೃಷ್ಠಿಸುವ ಯತ್ನ
ಇತ್ತೀಚೆಗೆ ಹೈದರಾಬಾದ್ ಕರ್ನಾಟಕದಲ್ಲಿ ನಮ್ಮ ಸಮುದಾಯದವರ ಮೇಲೆ ಹಲ್ಲೆ, ಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಇವಗಳನ್ನ ನೋಡಿಕೊಂಡು ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಇಂತಹ ಅಮಾನವೀಯ ಕೃತ್ಯಗಳ ವಿರುದ್ದ ಹೋರಾಟ ರೂಪಿಸುಬೇಕಿತ್ತು, ಆದರೆ ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಕಾರಣಕ್ಕೆ ಮಾಧ್ಯಮದ ಮೂಲಕ ಒತ್ತಯ ಮಾಡುತ್ತಿದ್ದೇವೆ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಮುದಾಯಕ್ಕೆ ಸರ್ಕಾರ ರಕ್ಷಣೆ ನೀಡಬೇಕು. ಈ ಸಮುದಾಯದ ಮೇಲೆ ಹಲ್ಲೆ, ದೌರ್ಜನ್ಯ, ಹತ್ಯೆ ನಡೆದರೆ ನಾವೂ ಸರ್ಕಾರದ ವಿರುದ್ದ ದ್ವನಿ ಎತ್ತಬೇಕಾಗುವ ಸಂದರ್ಭಗಳು ಬರಬಹುದು. ಅದಕ್ಕೆ ಅವಕಾಶ ಕಲ್ಪಿಸದೆ ಗೃಹ ಸಚಿವರು, ಮುಖ್ಯ ಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯೂರು ಆಧಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ, ಒಳ ಮೀಸಲಾತಿ ಪಡೆಯಲು ಸರ್ಕಾರದ ಗಮನ ಸೆಳೆಯಲು ಮಾದಿಗ ಸಮುದಾಯ 25ಕ್ಕೂ ಹೆಚ್ಚು ವರ್ಷಗಳಿಂದ ಹೋರಾಟ ಮಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ನಿನ್ನೆ ಸುಪ್ರೀಂ ಕೋರ್ಟ್ ಆಯಾ ರಾಜ್ಯ ಸರ್ಕಾರಗಳು ಪರಾಮರ್ಷಿಸಿ ಸೂಕ್ತ ನ್ಯಾಯ ಕೊಡುವುದಕ್ಕೆ ದಾರಿ ಮಾಡಿಕೊಟ್ಟಿದೆ. ಆದ್ದರಿಂದ ರಾಜ್ಯ ಸರ್ಕಾರ ವರದಿಯನ್ನ ಕೇಂದ್ರಕ್ಕೆ ಕಳುಹಿಸುವ ಮುಖೇನಾ ಪರಿಶಿಷ್ಠರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಶಕ್ತರಾಗಿರುವ ಮಾದಿಗ ಸಮುದಾಯಕ್ಕೆ ಎಲ್ಲಾ ರೀತಿಯ ಸೌಲಭ್ಯ ದೊರಕುವ ನಿಟ್ಟಿನಲ್ಲಿರುವ ಈ ವರದಿಯನ್ನ ಶೀಘ್ರವಾಗಿ ಶಿಫಾರಸ್ಸು ಮಾಡಬೇಕು ಎಂದಿದ್ದಾರೆ. ಅಲ್ಲದೇ, ಮಾದಿಗ ಸಮುದಾಯದ ಜನಪ್ರತಿನಿಧಿಗಳು ಮರೆಯಲ್ಲಿ ನಿಂತು ಹೋರಾಟಗಾರರಿಗೆ ಬೆಂಬಲ ನೀಡಿದೆ ಮುಂಚೂಣಿಗೆ ನಿಂತು ಹೋರಾಟ ಮಾಡಿದ್ದರೆ ಇದು ಇನ್ನೂ ಬೇಗ ಆಗುತ್ತಿತ್ತು. ಈ ವರದಿಯನ್ನ ಅಂಗೀಕರಿಸದಿದ್ದರೇ ರಾಜ್ಯಾದ್ಯಂತ ತತ್ವ ಬದ್ದವಾಗಿ ಮಾದಿಗ ಸಮುದಾಯದ ಎಲ್ಲಾ ಶ್ರೀಗಳು ಸೇರಿ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತೀವ್ರಗೊಂಡ ಲಂಪಿ ಚರ್ಮ ಕಾಯಿಲೆ - ಜನ ಆಯ್ತು ಈಗ ದನಗಳಿಗೆ ಕ್ವಾರಂಟೈನ್
ಕೋಡಿಹಳ್ಳಿ ಮಠದ ಮಾರ್ಕಡೇಯಮುನಿ ಸ್ವಾಮೀಜಿ ಮಾತನಾಡಿ, ಸುಪ್ರೀಂ ಕೋರ್ಟಿನ ತೀರ್ಪು ನಮಗೆ ಸಂತಸ ತಂದಿದೆ, ಜನಸಂಖ್ಯೆಗೆ ಅನುಗುಣವಾಗಿ ನ್ಯಾಯ ಕೊಡಬೇಕು. ನಾವು ಯಾರ ಅಡವು ಆಸ್ತಿ ಕೇಳುತ್ತಿಲ್ಲ ಮೀಸಲಾತಿ ಅನುಗುಣವಾಗಿ ನಮ್ಮ ಸವಲತ್ತು ಕೇಳುತ್ತಿದ್ದೇವೆ. ಯಾರನ್ನೂ ನಾವು ಬಿಕ್ಷೆ ಬೇಡುತ್ತಿಲ್ಲ ಎಂದಿದ್ದಾರೆ.
ವರದಿ: ವಿನಾಯಕ ತೊಡರನಾಳ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ