ಗದಗ-ಬೆಟಗೇರಿ ಅವಳಿ ನಗರದಲ್ಲಿ ಭಾರಿ ಚಳಿ; ಥಂಡಿ, ಕೊರೋನಾಗೆ ಹೆದರಿ ಹೊರಬಾರದ ಜನರು!

ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಬರುವುದು ಸಾಮಾನ್ಯ. ಆದರೆ ಈ ಭಾರಿ ಕೊರೋನಾ ಹಾವಳಿ ಜೊತೆಗೆ ಕೊರೋನಾ ರೂಪಾಂತರದ ಹಾವಳಿ ಹೆಚ್ಚಾಗಿದೆ. ಹೀಗಾಗಿ ಜನರು ಚಳಿ ಎಂದ್ರೆ ಸಾಕು ಭಯ ಪಡುತ್ತಿದ್ದಾರೆ. ಅದ್ಯಾವಾಗ ಈ ಕೊರೆಯುವ ಚಳಿ ಹೋಗುತ್ತೇ ಅಂತಾ ಇದ್ದಾರೆ ಗದಗ ಜಿಲ್ಲೆಯ ಜನರು.

ಮೈ ಕೊರೆಯುವ ಚಳಿಯ ನಡುವೆ ವಾಕಿಂಗ್ ಮಾಡುತ್ತಿರುವ ಜನರು.

ಮೈ ಕೊರೆಯುವ ಚಳಿಯ ನಡುವೆ ವಾಕಿಂಗ್ ಮಾಡುತ್ತಿರುವ ಜನರು.

  • Share this:
ಗದಗ: ಗದಗ ಜಿಲ್ಲೆಯಲ್ಲಿ ಜನರು ಎಷ್ಟೇ ಬಿಸಿಲು ಇದ್ದರು, ಎಷ್ಟೇ ಚಳಿ ಇದ್ದರು ಭಯ ಪಡ್ತಾಯಿರಲ್ಲಿಲ್ಲ. ಆದರೆ, ಈ ಭಾರಿ ನಡುಗುವ ಚಳಿಗೆ ಜನರು ಹೈರಾಣಾಗಿದ್ದಾರೆ. ಜನರು ಸೂರ್ಯೋದಯ ಮುಂಚೆ ವಾಕಿಂಗ್ ಮಾಡಲು ಹೋಗ್ತಾಯಿದ್ರು. ಆದರೆ, ಕಳೆದ ಒಂದು ವಾರದಿಂದ ವಾಕಿಂಗ್ ಮಾಡುವ ಜನರು ಕಾಣ್ತಾಯಿಲ್ಲಾ. ಹೌದು ಕೊರೆಯುವ ಚಳಿ ಹಾಗೂ ಕೊರೋನಾ ರೂಪಾಂತರಕ್ಕೆ ಅಂಜಿ ಮನೆ ಸೇರಿಕೊಂಡಿದ್ದಾರೆ. ಈ ಭಾರಿ ಅಷ್ಟೊಂದು ಚಳಿ ಗದಗ ಜಿಲ್ಲೆಯಲ್ಲಿ ಆವರಿಸಿಕೊಂಡಿದೆ. ಹೀಗಾಗಿ ಬೆಚ್ಚಿಗಿನ ಮೊರೆ ಹೋಗಿದ್ದಾರೆ ಗದಗ-ಬೆಟಗೇರಿ ಅವಳಿ ನಗರದ ಜನರು.

ಬೆಳ್ಳಂಬೆಳ್ಳಗೆ ವಾಕಿಂಗ್ ಮಾಡಲು ಮನೆಯಿಂದ ಹೊರಗಡೆ ಬರ್ತಾಯಿದ್ರು. ಆದರೆ, ಕಳೆದ ಒಂದು ವಾರದಿಂದ ಗದಗ- ಬೆಟಗೇರಿ ಅವಳಿ ನಗರದಲ್ಲಿ ವಿಪರೀತ ಚಳಿ ಇದೆ. ಹೀಗಾಗಿ ಮುಂಜಾನೆ ಮನೆಯಿಂದಲೇ ಹೊರಗೆ ಬರ್ತಾಯಿಲ್ಲಾ. ಬಸವ ವನ,  ಜಿಲ್ಲಾ ಕ್ರೀಡಾಂಗಣ, ಸೇರಿದಂತೆ ಅವಳಿ ನಗರದ ಮೈದಾನದಲ್ಲಿ ವಾಕಿಂಗ್ ಮಾಡುವ ಜನರು ಕಾಣ್ತಾಯಿದ್ರು. ಬಸವಣ್ಣನವರ ಮೂರ್ತಿಯ ಆವರಣದಲ್ಲಿ ಸಾವಿರಾರು ಜನರು ನಿತ್ಯ ವಾಕಿಂಗ್, ವ್ಯಾಯಾಮ ಮಾಡ್ತಾಯಿದ್ರು. ಆದರೆ ಒಂದು ವಾರದಿಂದ ಅತಿಯಾದ ಚಳಿಗೆ ಮನೆಯಿಂದ ಹೊರಗಡೆ ಬರಲು ಹಿಂದೆಟ್ಟು ಹಾಕುತ್ತಿದ್ದಾರೆ. ಪ್ರತಿನಿತ್ಯ 5:30 ಹಾಗೂ 6 ಗಂಟೆಗೆ ಬರ್ತಾಯಿದ್ದ ಜನರು, ಚಳಿಯಿಂದಾಗಿ  7 ಗಂಟೆಗೆ ಬರ್ತಾಯಿದ್ದಾರೆ. ಅದರಲ್ಲೂ ಮಕ್ಕಳು, ಹಿರಿಯ ನಾಗರಿಕರು ಹಾಗು ಮಹಿಳೆಯರು ವಾಕಿಂಗ್ ಬರುವುದನ್ನೆ ಬಿಟ್ಟಿದ್ದಾರೆ. ಅಷ್ಟೊಂದು ಚಳಿ ಈ ಭಾರಿ ಆವರಿಸಿಕೊಂಡಿದೆ.

ಇದನ್ನು ಓದಿ: ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭ!

ಗದಗ ಬೆಟಗೇರಿ ಅವಳಿ ನಗರದಲ್ಲಿ ಕನಿಷ್ಠ 28 ರಿಂದ ಗರಿಷ್ಠ 15 ರಷ್ಟು ತಾಪಮಾನ ದಾಖಲು ಆಗುತ್ತಿದೆ. ಹೀಗಾಗಿ ಕೊರೆಯುವ ಚಳಿ ಸಿಕ್ಕಾ ಪಟ್ಟಿ ಇದ್ದು, ಬೆಚ್ಚನೆಯ ಉಡುಪು ತೊಟ್ಟು ಕೆಲವರು ಮಾತ್ರ ವಾಕಿಂಗ್ ಬರ್ತಾಯಿದ್ದಾರೆ. ಅದರಲ್ಲೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ವಾಕಿಂಗ್ ಬರ್ತಾಯಿದ್ದಾರೆ. ಹಾಗೇ ರೂಪಾಂತರ ಕೊರೋನಾ ವೈರಸ್ ಬಂದಿರುವುದರಿಂದ ಆರೋಗ್ಯಲ್ಲಿ ಏರುಪೇರಾದಿತ್ತು ಎನ್ನುವ ಭಯ ಸಹ ಕಾಡ್ತಾಯಿದೆ. ಈ ಭಾರಿ ಅತಿಯಾದ ಮಳೆಯಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಚಳಿ ಇದೆ. ಸಂಜೆ ಏಳು ಗಂಟೆಯಾದರೆ ಸಾಕು ತಪ್ಪಾದ ಗಾಳಿ ಬೀಸುತ್ತಿದೆ. ಹೀಗಾಗಿ ಸಂಜೆ ಬೇಗನೆ ಮನೆ ಸೇರಿಕೊಳ್ಳುತ್ತಿರುವ ಜನರು ಮುಂಜಾನೆ ಸೂರ್ಯೋದಯವಾಗಿ ಸ್ವಲ್ಪ ಬಿಸಿಲು ಬಿದ್ದ ನಂತರವೇ ಮನೆಯಿಂದ ಹೊರಗಡೆ ಬರ್ತಾಯಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಇಷ್ಟೊಂದು ಚಳಿ ಇರಲಿಲ್ಲ. ಆದರೆ ಈ ಭಾರಿ ಅತಿಯಾದ ಮಳೆಯಿಂದ ಚಳಿ ಇದೆ.

ಇನ್ನೂ ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಬರುವುದು ಸಾಮಾನ್ಯ. ಆದರೆ ಈ ಭಾರಿ ಕೊರೋನಾ ಹಾವಳಿ ಜೊತೆಗೆ ಕೊರೋನಾ ರೂಪಾಂತರದ ಹಾವಳಿ ಹೆಚ್ಚಾಗಿದೆ. ಹೀಗಾಗಿ ಜನರು ಚಳಿ ಎಂದ್ರೆ ಸಾಕು ಭಯ ಪಡುತ್ತಿದ್ದಾರೆ. ಅದ್ಯಾವಾಗ ಈ ಕೊರೆಯುವ ಚಳಿ ಹೋಗುತ್ತೇ ಅಂತಾ ಇದ್ದಾರೆ ಗದಗ ಜಿಲ್ಲೆಯ ಜನರು.

ವರದಿ: ಸಂತೋಷ ಕೊಣ್ಣೂರ
Published by:HR Ramesh
First published: