ಮೈಸೂರಿನಲ್ಲಿ ಪೋಷಕರು ಪ್ರೀತಿ ಒಪ್ಪದಿದ್ದಕ್ಕೆ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು

ಕತ್ತು ಕೂಯ್ದುಕೊಂಡು ಮೆಟ್ಟಿಲು ಮೇಲೆ ಹುಡುಗ, ಅವನ ಪಕ್ಕದಲ್ಲೇ ಹುಡುಗಿ. ಇಬ್ಬರ ಕುತ್ತಿಗೆಯಲ್ಲೂ ರಕ್ತಸ್ರಾವ. ಒದ್ದಾಡುತ್ತಿದ್ದರೂ ಜನರು ನೆರವಿಗೆ ಬಾರದೆ ಕೊನೆಗೆ ಆಸ್ಪತ್ರೆಗೆ ಸೇರಿಸಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ

ಆತ್ಮತ್ಯೆಗೆ ಯತ್ನಿಸಿದ ಪ್ರೇಮಿಗಳು

ಆತ್ಮತ್ಯೆಗೆ ಯತ್ನಿಸಿದ ಪ್ರೇಮಿಗಳು

  • Share this:
ಮೈಸೂರು(ಜುಲೈ.09): ಈ ಇಬ್ಬರು ಪ್ರೇಮಿಗಳು ಅಪ್ರಾಪ್ತರು ಕಾನೂನಿನ ಪ್ರಕಾರ ಇವರ ಹೆಸರೇ ಹೇಳುವಂತಿಲ್ಲ, ಇನ್ನು ಕಾನೂನಿನಲ್ಲಿ ಇವರಿಗೆ ಮದುವೆಯ ಅವಕಾಶ ಎಲ್ಲಿದೆ. ಸ್ಕೂಲ್‌ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿದ್ದ ಜೋಡಿ ಕಾಲೇಜಿನಲ್ಲಿ ಭೇಟಿಯಾಗಿದ್ದಾರೆ. ಭೇಟಿ ಪರಿಚಯವಾಗಿ, ಪರಿಚಯ ಪ್ರೀತಿಯಾಗಿದೆ. ಇವೇಲ್ಲವು ನಡೆದಿದ್ದು ಕೇವಲ ಒಂದು ವರ್ಷದ ಹಿಂದೆ. ಆ ಒಂದು ವರ್ಷದ ನಂತರ ಮನೆಯಲ್ಲಿ ಇವರಿಬ್ಬರ ಪ್ರೀತಿ ಪ್ರಯಣದ ವಿಚಾರ ತಿಳಿದಿದೆ. ಆದರೆ, ಇದಕ್ಕೆ ಒಪ್ಪದ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೆ ಬೇಸರಗೊಂಡ ಈ  ಪ್ರೇಮಿಗಳು ಕತ್ತುಕೂಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಪ್ರೀತಿ ಮಾಡೋದು ತಪ್ಪಲ್ಲ. ಹದಿಹರೆಯದಲ್ಲಿ ಪ್ರೀತಿ ಹುಟ್ಟೋದು ಸಹಜ ಕೂಡ. ಆದರೆ, ಪ್ರೀತಿಸಿ ಮದುವೆ ಆಗುವುದು, ಜೀವನ ಕಟ್ಟಿಕೊಳ್ಳೋದು ತಪಸ್ಸು ಎನ್ನುವುದು ಬಹುತೇಕ ಪ್ರೇಮಿಗಳಿಗೆ ಅರ್ಥವೇ ಆಗುವುದಿಲ್ಲ. ಅದಕ್ಕೊಂದು ತಾಜಾ ಉದಾಹರಣೆ ಮೈಸೂರು ಜಿಲ್ಲೆಯ ಪಿಯುಸಿ ಪ್ರೇಮಿಗಳ ಆತ್ಮಹತ್ಯೆ ಯತ್ನ. ಒಂದೆ ಒಂದು ವರ್ಷ ಪ್ರೀತಿಸಿದ್ದ ಈ ಅಪ್ರಾಪ್ತರು ಕುತ್ತಿಗೆ ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಪ್ರೀತಿಯ ಹಿಂದೆ ಅಂತರ್ಜಾತಿಯ ನಂಟು ಇದೆ.

ಕತ್ತು ಕೂಯ್ದುಕೊಂಡು ಮೆಟ್ಟಿಲು ಮೇಲೆ ಹುಡುಗ, ಅವನ ಪಕ್ಕದಲ್ಲೇ ಹುಡುಗಿ. ಇಬ್ಬರ ಕುತ್ತಿಗೆಯಲ್ಲೂ ರಕ್ತಸ್ರಾವ. ಒದ್ದಾಡುತ್ತಿದ್ದರೂ ನೆರವಿಗೆ ಬಾರದ ಜನ. ಕೊನೆಗೆ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಪೊಲೀಸರು. ಇವೆಲ್ಲ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದುಗ್ಗಹಳ್ಳಿಯಲ್ಲಿಂದು ನಡೆದ ಸನ್ನಿವೇಶ. ಆಗಿದ್ದಿಷ್ಟೆ, ಹುಲ್ಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ಈ ಅಪ್ರಾಪ್ತರು, ಪರಸ್ಪರ ಪ್ರೀತಿಸುತ್ತಿದ್ದರು. ಅಂತರ್ಜಾತಿ ಎನ್ನುವ ಕಾರಣಕ್ಕೆ ಇಬ್ಬರ ಪೋಷಕರೂ ವಿರೋಧಿಸಿದ್ದರು. ಇದರಿಂದ ಮನನೊಂದಿದ್ದ ಪಿಯುಸಿ ಪ್ರೇಮಿಗಳು, ಕತ್ತು ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಕ್ತಸ್ರಾವದ ಮಡುವಿನಲ್ಲಿ ಮಲಗಿದ್ದ ಇಬ್ಬರನ್ನ ರಕ್ಷಿಸಿದ ಪೊಲೀಸರು ತಕ್ಷಣ ಆಸ್ಪತ್ರೆಗೆ ರವಾನಿಸಿ ಪ್ರಾಣ ಉಳಿಸಿದ್ದಾರೆ.

ಈ ಇಬ್ಬರು ಪ್ರೇಮಿಗಳು ಅಪ್ರಾಪ್ತರು ಕಾನೂನಿನ ಪ್ರಕಾರ ಇವರ ಹೆಸರೇ ಹೇಳುವಂತಿಲ್ಲ, ಸ್ಕೂಲ್‌ಮುಗಿಸಿ ಕಾಲೇಜು ಮೆಟ್ಟಿಲು ಹತ್ತದ್ದರು. ದುಗ್ಗಹಳ್ಳಿ ನಿವಾಸಿಯಾಗಿದ್ದ ಅಪ್ರಾಪ್ತೆ, ಕುರಿಹುಂಡಿ ನಿವಾಸಿಯಾಗಿದ್ದ ಅಪ್ರಾಪ್ತನನ್ನ ಹುಲ್ಲಹಳ್ಳಿಯ ಕಾಲೇಜಿನಲ್ಲಿ ಭೇಟಿಯಾಗಿದ್ದಾರೆ. ಭೇಟಿ ಪರಿಚಯವಾಗಿ, ಪರಿಚಯ ಪ್ರೀತಿಯಾಗಿದೆ. ಇವೇಲ್ಲವು ನಡೆದಿದ್ದು ಕೇವಲ ಒಂದು ವರ್ಷದ ಹಿಂದೆ. ಆ ಒಂದು ವರ್ಷದ ನಂತರ ಮನೆಯಲ್ಲಿ ಇವರಿಬ್ಬರ ಪ್ರೀತಿ ಪ್ರಯಣದ ವಿಚಾರ ತಿಳಿದಿದೆ. ಆದre, ಇದಕ್ಕೆ ಒಪ್ಪದ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೆ ಬೇಸರಗೊಂಡ ಈ ಪ್ರೇಮಿಗಳು ಕತ್ತುಕೂಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಹುಡುಗ ತಳ ಸಮುದಾಯದವನು ಮತ್ತು ಹುಡುಗಿ ಮೇಲ್ಜಾತಿಯವರು. ಹೀಗಾಗಿ ಇಬ್ಬರೂ ಕತ್ತು ಕೂಯ್ದುಕೊಂಡು ಒದ್ದಾಡುತ್ತಿದ್ದರೂ ಯಾರೊಬ್ಬರೂ ನೆರವಿಗೆ ಬಂದಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಆ್ಯಂಬುಲೆನ್ಸ್​ನಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ : ರಾಷ್ಟ್ರ ಪಕ್ಷಿ ನವಿಲುಗಳಿಗೆ ವಿಷ ಹಾಕಿ ಕೊಂದ ಪಾಪಿಗಳು ; ಕೋಟೆ ನಾಡಿನಲ್ಲೊಂದು ಹೃದಯವಿದ್ರಾವಕ ಘಟನೆ

ಇನ್ನೋಂದು ವಿಷಯ ಅಂದ್ರೆ, ಮದುವೆ ವಯಸ್ಸು ಆಗದಿದ್ದರೂ ಮನೆಯಿಂದ ಹೊರಟು ಹೋಗಿದ್ದರು. ಪ್ರೇಮಿಗಳನ್ನು ಮನೆಗೆ ಕರೆಸಿಕೊಂಡ ಕುಟುಂಬಸ್ಥರು, ನ್ಯಾಯ ಪಂಚಾಯಿತಿ ಮಾಡಿದ್ದರು. ಪ್ರೇಮಿಗಳಿಗೆ ದೂರಾಗುವಂತೆ ತಾಕೀತು ಮಾಡಿದ್ದರು. ಪೋಷಕರ ಮಾತಿಗೂ ಬಗ್ಗದ ಪ್ರೇಮಿಗಳು, ಅಪ್ರಾಪ್ತೆಯ ಮನೆ ಎದುರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆಸ್ಪತ್ರೆಯ ಮುಂದೆ ಅಪ್ರಾಪ್ತನ ತಾಯಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಮಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ ಹುಡುಗಿ ಕಡೆಯವರು ಆಸ್ಪತ್ರೆಗೆ ಬಂದಿರಲಿಲ್ಲ. ಪ್ರೀತಿ ಮಾಡೋದು ತಪ್ಪಲ್ಲ. ಅದನ್ನು ದಕ್ಕಿಸಿಕೊಳ್ಳುವುದಕ್ಕೆ ತಾಳ್ಮೆ ಬೇಕು. ದುಡುಕಿ ತಮ್ಮ ಪ್ರಾಣಕ್ಕೂ ಆಪತ್ತು ತಂದುಕೊಂಡು, ಮನೆಯವರಿಗೂ ಮಾನಸಿಕ ಹಿಂಸೆ ಕೊಡುವ ದುಸ್ಸಾಹಸಕ್ಕೆ ಕೈ ಹಾಕಬಾರದಿತ್ತು. ಇಷ್ಟೇಲ್ಲ ಆಗಿದ್ದರು ಎರಡು ಕುಟುಂಬಸ್ಥರು ಪೊಲೀಸ್‌ಠಾಣೆಯಲ್ಲಿ ದೂರು ನೀಡದೆ ಇರುವುದು ಕೊಂಚ ಅನುಮಾನಕ್ಕೆ ಕಾರಣವಾಗಿದೆ.
Published by:G Hareeshkumar
First published: