ಮೈಸೂರು; ಅವರಿಬ್ಬರು ಪರಸ್ಪರ ಐದು ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಈಗ ಅವರಿಬ್ಬರ ಮಧ್ಯೆ ಸ್ಟೇಟಸ್ ಅಡ್ಡಿಯಾಗಿ 'ನೀನು ಡ್ರೈವರ್. ನಾನು ನಿನ್ನ ಮದುವೆ ಆಗೋದಿಲ್ಲ, ಅಂತ ಪ್ರೇಯಸಿ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ಪ್ರಿಯಕರ 'ನನಗೆ ಸಿಗದ ನೀನು ಮತ್ಯಾರಿಗೂ ಸಿಗಬಾರದು ಅಂತ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಇದೀಗ ಆಸ್ಪತ್ರೆಯಲ್ಲಿ ಯುವತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಕೊಲೆಗೆ ಯತ್ನಿಸಿದ ಪಾಗಲ್ ಪ್ರೇಮಿ ಪೊಲೀಸರ ವಶದಲ್ಲಿದ್ದಾನೆ.
ಗಗನ್ ಹಾಗೂ ಮೇಘಾ (ಹೆಸರು ಬದಲಿಸಲಾಗಿದೆ) ಇವರಿಬ್ಬರು ಪರಸ್ಪರ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇದೀಗ ಪ್ರಿಯಕರ ತಾನು ಪ್ರೀತಿಸಿದ ಹುಡುಗಿಯನ್ನೇ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಘಟನೆ ಮೈಸೂರಿನ ದೀವಾನ್ಸ್ ರಸ್ತೆಯಲ್ಲಿ ನಡೆದಿದ್ದು, ಘಟನೆ ನಂತರ ಆರೋಪಿ ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದಾನೆ.
ಇದನ್ನು ಓದಿ: ಹಸನಾಗದ ನೆರೆ ಸಂತ್ರಸ್ತರ ಬದುಕು, ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ವಿಫಲ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಹೌದು, ಗಗನ್ ಅಲಿಯಾಸ್ ಕೆಂಚ ಮೂಲತಃ ಮೈಸೂರಿನ ಕೆ.ಆರ್.ಮೊಹಲ್ಲಾ ನಿವಾಸಿ. ಯುವತಿ ಮೇಘಾ ಕೂಡ ಮೈಸೂರಿನ ಕೆ.ಆರ್ ಮೊಹಲ್ಲಾದ ನಿವಾಸಿ. ಇವರಿಬ್ಬರು ಕೂಡ ಪರಸ್ಪರ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಯುವತಿಗೆ 18 ವರ್ಷ ತುಂಬದ ಹಿನ್ನೆಲೆಯಲ್ಲಿ 18 ವರ್ಷವಾದ ನಂತರ ಮದುವೆ ಆಗೋಣ ಅಂತ ಇಬ್ಬರು ಮಾತನಾಡಿಕೊಂಡಿದ್ದರು. ಆದರೆ ಇವರ ಪ್ರೀತಿ ಮನೆಯವರಿಗೆ ಗೊತ್ತಾಗಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅವನ ಸಹವಾಸ ಬಿಡುವಂತೆ ಮನೆಯವರು ಕೂಡ ಯುವತಿಗೆ ಎಚ್ಚರಿಕೆ ನೀಡಿದ್ದಾರಂತೆ. ಆ ಬಳಿಕ ಯುವತಿ ಸಹ ಗಗನ್ನನ್ನು ಅವೈಡ್ ಮಾಡಿ ಇನ್ಮುಂದೆ ನನ್ನ ಸಹವಾಸಕ್ಕೆ ಬರಬೇಡ ಎಂದಿದ್ದಾಳೆ. ಇದಲ್ಲದೆ ಇತ್ತೀಚಿಗೆ ಡ್ರೈವರ್ ಆಗಿದ್ದ ಗಗನ್ ಬಗ್ಗೆ ಮೇಘಾ ಬೇಸರ ಮಾಡಿಕೊಂಡಿದ್ದಳು ಎನ್ನಲಾಗಿದೆ. ನಾಲ್ಕೈದು ತಿಂಗಳಿಂದ ಚರ್ಚೆಯಾಗಿ ಇದೇ ವಿಚಾರಕ್ಕೆ ಜಗಳ ಕೂಡ ಆಗಿತ್ತು. ಕಳೆದ ಎರಡು ದಿನದಿಂದ ಊಟ ಮಾಡದ ಗಗನ್ ಖಿನ್ನತೆಗೆ ಒಳಗಾಗಿ ಇಂದು ಬೆಳಗ್ಗೆ ಮನೆ ಬಳಿ ನಿಂತಿದ್ದ ಅಶ್ವಿನಿಗೆ ಚಾಕು ಇರಿದು ಪೊಲೀಸರಿಗೆ ಶರಣಾಗಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ