ಕೋತಿಗೂ ನಾಯಿ ಮರಿಗೂ ಗೆಳೆತನ ; ನಾಯಿಯನ್ನು ತನ್ನ ಮಡಿಲಲ್ಲಿ ಹೊತ್ತೊಯ್ತಿರೋ ಕೋತಿ

ಮೂರು - ನಾಲ್ಕು ದಿನಗಳಿಂದ ಕೋತಿ ಹಾಗೂ ನಾಯಿಮರಿ ಜೊತೆಯಾಗಿಯೇ ಅಡ್ಡಾಡುತ್ತಿವೆ. ಎಲ್ಲಿಗೇ ಹೋದರೂ ಎರಡೂ ಜೊತೆಯಲ್ಲಿಯೇ ಇರುತ್ತವೆ. ಕೋತಿ ನಾಯಿ ಮರಿಗೆ ತಾಯಿಯ ಮಮತೆ ತೋರಿಸುತ್ತಿದೆ

ನಾಯಿ ಮರಿ ಜೊತೆಗೆ ಕೋತಿ

ನಾಯಿ ಮರಿ ಜೊತೆಗೆ ಕೋತಿ

  • Share this:
ಕಲಬುರ್ಗಿ(ಅಕ್ಟೋಬರ್​. 30): ಕೋತಿ ಮತ್ತು ನಾಯಿ ಮರಿ ಕುಚುಕು… ಕುಚುಕ… ದೋಸ್ತಿ. ಎಲ್ಲಿಯೇ ಹೋದರು ಕೋತಿ ನಾಯಿ ಮರಿಯನ್ನು ಜೊತೆಗಿಟ್ಟುಕೊಂಡು ಹೋಗುತ್ತಿದೆ. ತನ್ನ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡಂತೆ  ಜಂಪ್ ಮಾಡುತ್ತಿರೋ ಕೋತಿ. ಅಮ್ಮನಂತೆ ನಾಯಿ ಮರಿ ಮೇಲೆ ಕೋತಿ ಪ್ರೀತಿ ತೋರಿಸುತ್ತಿದ್ದು, ನಾಯಿ ಮರಿಯೂ ಕೋತಿಯ ಹಿಂದೆ ಹಿಂದೆಯೇ ಹೋಗುತ್ತಿದೆ. ಇಂಥದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿರುವುದು ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಶಿವೂರು ಗ್ರಾಮ. ಇತ್ತೀಚೆಗೆ ಬಂದಿದ್ದ ಭೀಮಾ ನದಿ ಪ್ರವಾಹದಿಂದ ಶಿವೂರು ಗ್ರಾಮ ನಲುಗಿ ಹೋಗಿತ್ತು. ಪ್ರವಾಹ ಇಳಿಮುಖವಾದ ನಂತ್ರ ಗ್ರಾಮಕ್ಕೆ ಎರಡು ಕೋತಿಗಳು ಬಂದಿವೆ. ಈ ಪೈಕಿ ಒಂದು ಕೋತಿಗೂ, ನಾಯಿ ಮರಿಗೂ ಗೆಳೆತನ ಬೆಳೆದಿದೆ. ಎರಡು-ಮೂರು ದಿನಗಳ ಕಾಲ ಗ್ರಾಮದಲ್ಲಿಯೇ ಇದ್ದ ಕೋತಿ ಜೊತೆ ನಾಯಿಮರಿ ಗೆಳೆತನ ಏರ್ಪಟ್ಟಿದೆ. ಅವೆರಡರ ಫ್ರೆಂಡ್ ಶಿಪ್ ಹೇಗಿದೆ ಎಂದ್ರೆ ಕೋತಿ ಎಲ್ಲಿಗೇ ಹೋದರೂ ನಾಯಿಮರಿ ಇರಲೇಬೇಕು.

ನಾಯಿ ಮರಿಯನ್ನು ಬಿಟ್ಟು ಕೋತಿ ಇರುತ್ತಿಲ್ಲ, ಕೋತಿಯನ್ನು ಬಿಟ್ಟು ನಾಯಿ ಮರಿ ಇರುತ್ತಿಲ್ಲ. ಯಾರಾದರೂ ಹತ್ತಿರಕ್ಕೆ ಬಂದ್ರೆ ನಾಯಿ ಮರಿಯನ್ನು ಎತ್ತಿಕೊಂಡು ಕೋತಿ ದೂರ ಓಡಿ ಹೋಗುತ್ತದೆ. ಯಾವುದೇ ಪ್ರತಿರೋಧ ಒಡ್ಡದೆ ಕೋತಿಯೊಂದಿಗೆ ನಾಯಿಮರಿ ಅಡ್ಡಾಡುತ್ತಿದೆ. ತಾನು ತಿನ್ನುವ ಜೊತೆಗೆ, ನಾಯಿಮರಿಗೂ ತಿನ್ನುವುದಕ್ಕೆ ಕೋತಿ ಏನಾದರು ಕೊಡುತ್ತಿದೆ.

ಹಾಗೆ ನೋಡಿದ್ರೆ ಕೋತಿ ಮತ್ತು ನಾಯಿ ಬದ್ಧ ಶತೃತಗಳು. ಯಾವುದಾದರೂ ಕೋತಿ ಅಪ್ಪಿ ತಪ್ಪಿ ಊರಿಗೆ ಬಂದ್ರೆ ಬೊಗಳಿ, ಕಚ್ಚುವುದಕ್ಕೆ ಪ್ರಯತ್ನಿಸಿ ನಾಯಿಗಳು ಕೋತಿಯನ್ನು ಓಡಿಸುತ್ತವೆ. ಆದರೆ, ಇಲ್ಲಿ ಬದ್ಧ ಶತೃತಗಳ ನಡುವೆಯೇ ಗಾಢ ಗೆಳೆತನ ಏರ್ಪಟ್ಟಿದ್ದು, ಕೋತಿ ಮತ್ತು ನಾಯಿಮರಿ ಗೆಳೆತನ ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಯಡಿಯೂರಪ್ಪ ಮುಂದಿನ 3 ವರ್ಷ ಸಿಎಂ ಆಗಿರುತ್ತಾರೆ ಎಂದು ನಾನೇನೂ ಹೇಳೊಲ್ಲ : ಶಾಸಕ ಯತ್ನಾಳ

ಮೂರು - ನಾಲ್ಕು ದಿನಗಳಿಂದ ಕೋತಿ ಹಾಗೂ ನಾಯಿಮರಿ ಜೊತೆಯಾಗಿಯೇ ಅಡ್ಡಾಡುತ್ತಿವೆ. ಎಲ್ಲಿಗೇ ಹೋದರೂ ಎರಡೂ ಜೊತೆಯಲ್ಲಿಯೇ ಇರುತ್ತವೆ. ಕೋತಿ ನಾಯಿ ಮರಿಗೆ ತಾಯಿಯ ಮಮತೆ ತೋರಿಸುತ್ತಿದೆ. ಅದೇ ಕಾರಣಕ್ಕೆ ನಾಯಿ ಮರಿಯೂ ಕೋತಿಯೊಂದಿಗಿ ಸುಮ್ಮನೇ ಇರಬೇಕೆನಿಸುತ್ತಿದೆ ಎಂದು ಗ್ರಾಮದ ಯುವತಿ ಲಕ್ಷ್ಮಿ ಬಾಳಿಕಾಯಿ ತಿಳಿಸಿದ್ದಾರೆ.

ಬೇರೆ ನಾಯಿಗಳೂ ಕೋತಿಯನ್ನು ತಡೆಯುವ ಗೋಜಿಗೆ ಹೋಗಿಲ್ಲ. ಹೀಗಾಗಿ ನಾಯಿಮರಿ ಜೊತೆ ಕೋತಿ ಹಾಯಾಗಿ ಅಡ್ಡಾಡಿಕೊಂಡಿತ್ತು. ಆದರೆ, ಕೋತಿ ಮತ್ತು ನಾಯಿಮರಿ ದೋಸ್ತಿ ನೋಡಲು ಗ್ರಾಮಸ್ಥರು ಬೆನ್ನು ಬಿದ್ದಿದ್ದಾರೆ. ಅದರಲ್ಲಿಯೂ ಮಕ್ಕಳು ಕೋತಿ ಮತ್ತು ನಾಯಿ ಮರಿಗಳು ಹೋದಲ್ಲೆಲ್ಲಾ ಹೋಗುತ್ತಿದ್ದರಿಂದ ಕೋತಿ ರೋಸಿ ಹೋಗಿದೆ. ಗ್ರಾಮಸ್ಥರ ಕಾಟ ತಾಳದೆ ನಾಯಿಮರಿ ಜೊತೆ ಕೋತಿ ಅಡಿವಿ ಕಡೆ ಹೊರಟು ಹೋಗಿದೆ.
Published by:G Hareeshkumar
First published: