Love, Sex, Dhoka: ಪೊಲೀಸ್ ಠಾಣೆ ಎದುರೇ ಪ್ರಿಯಕರನಿಗೆ ಗೂಸಾ ಕೊಟ್ಟ ಯುವತಿ

ಆದ್ರೆ ರಹೀನಾ ಹೇಳುವ ಪ್ರಕಾರ, ಇಬ್ಬರು ಕೂಡಾ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಂತೆ. ಇರ್ಪಾನ್ ಕೂಡಾ ಪ್ರೀತಿಸುತ್ತಿದ್ದನಂತೆ.  ಮದುವೆ ಮಾಡಿಕೊಳ್ಳುವುದಾಗಿ ಹೇಳಿ, ರಹೀನಾ ಜೊತೆ ದೈಹಿಕ ಸಂಬಂಧ ಕೂಡಾ ಬೆಳಸಿದ್ದನಂತೆ. 

ಯುವಕ-ಯುವತಿ

ಯುವಕ-ಯುವತಿ

 • Share this:
  ಕಲಬುರ್ಗಿ(ಸೆ.19): ಅದು ಪೊಲೀಸ್ ಠಾಣೆ. ಪೊಲೀಸ್ ಠಾಣೆಯ ಮುಂದೆಯೇ ಯುವತಿಯೋರ್ವಳು ತನ್ನ ಪ್ರಿಯಕರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.  ಪೊಲೀಸ್ ಠಾಣೆಯ ಮುಂದೆಯೇ ರಣಚಂಡಿ ರೂಪ ತಾಳಿದ್ದ ಯುವತಿಯನ್ನು ಕಂಡು, ಯುವಕ ಕಂಗಾಲಾಗಿ ಹೋಗಿದ್ದ. ಅಷ್ಟಕ್ಕೂ ಯುವಕನಿಗೆ ಯುವತಿ ಹಿಗ್ಗಾಮುಗ್ಗಾ ಥಳಿಸಲು ಕಾರಣ ಲವ್, ಶಾದಿ, ದೋಖಾ ಲಫಡಾ.

  ಪ್ರಿಯಕರನಿಗೆ ಕಪಾಳ ಮೋಕ್ಷ ಮಾಡ್ತಿರುವ ಯುವತಿ.  ಒಂದೆಡೆ ಕಪಾಳಕ್ಕೆ ಬಾರಿಸಿದ್ರೆ ಮತ್ತೊಂದಡೆ  ಒದೆಯುತ್ತಿದ್ದಾಳೆ. ಯುವತಿಯ ಆಕ್ರೋಶ ನೋಡಿ ಸ್ವತಃ ಯುವಕ ಕಂಗಾಲಾಗಿ ಹೋಗಿದ್ದಾನೆ.  ಹೊಡಿಬೇಡ ಹೊಡಿಬೇಡ ಅಂತ ಯುವಕ ಗೋಗರೆದ್ರು ಕೇಳದ ಯುವತಿ, ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಪೊಲೀಸರು ಬಂದ್ರು ಕೂಡಾ ಡೋಂಟ್ ಕೇರ್ ಅನ್ನದೇ  ಹೊಡೆದು, ಒದ್ದು  ತನ್ನ ಆಕ್ರೋಶ, ನೋವನ್ನೆಲ್ಲಾ ಹೊರಹಾಕಿದ್ದಾಳೆ.

  ಇನ್ನು ಯುವತಿ ಈ ರೀತಿಯಾಗಿ ಹೊಡೆದಿದ್ದು ಬೇರಲ್ಲೂ ಅಲ್ಲಾ, ಬದಲಾಗಿ ಪೊಲೀಸ್ ಠಾಣೆಯ ಮುಂದೇಯೆ.  ಹೌದು, ಕಲಬುರಗಿ ನಗರದಲ್ಲಿರುವ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯ ಮುಂದೆ ಇಂದು ಹೈಡ್ರಾಮಾ ನಡೆಯಿತು. ಇನ್ನು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವ ಈ ಯುವತಿ ಹೆಸರು ರಹಿನಾ ಅಂತ. ಬೆಂಗಳೂರು ನಿವಾಸಿ. ಇನ್ನು ಯುವತಿಯಿಂದ ಒದೆ ತಿಂತಿರುವ ಈ ಯುವಕನ ಹೆಸರು ಇರ್ಪಾನ್ ಅಂತ. ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿ.

  ಇದನ್ನೂ ಓದಿ:Karnataka CET Result Tomorrow: ನಾಳೆ ಸಂಜೆ 4 ಗಂಟೆಗೆ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್ ಮಾಡಿ

  ಬೆಂಗಳೂರಿನಲ್ಲಿ ಶೋರೂಮ್ ಒಂದರಲ್ಲಿ ಕೆಲಸ ಮಾಡಿಕೊಂಡಿರುವ ರಹಿನಾ ಮತ್ತು ಖಾಸಗಿ  ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇರ್ಪಾನ್ ನಡುವೆ ಸ್ನೇಹ ಬೆಳೆದಿತ್ತು. ಆದು ಬೇರೊಬ್ಬ ಸ್ನೇಹಿತನ ಮೂಲಕ ಇಬ್ಬರಿಗೂ ಪರಿಚಯವಾಗಿತ್ತು.  ಇಬ್ಬರಿಗೂ ಕಳೆದ ಆರು ವರ್ಷಗಳಿಂದ ಪರಿಚಯವಿದೆ. ಇಬ್ಬರು ಕೂಡಾ ಅನೇಕ ವರ್ಷಗಳ ಕಾಲ ಸುತ್ತಾಡಿದ್ದಾರೆ. ಟೂರ್, ಪಿಕ್ ನಿಕ್ ಅಂತ ಓಡಾಡಿದ್ದಾರೆ. ಇಬ್ಬರ ನಡುವೆ ಉತ್ತಮ ಬಾಂಧವ್ಯ ಕೂಡಾ ಇತ್ತಂತೆ.

  ಆದ್ರೆ ರಹೀನಾ ಹೇಳುವ ಪ್ರಕಾರ, ಇಬ್ಬರು ಕೂಡಾ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಂತೆ. ಇರ್ಪಾನ್ ಕೂಡಾ ಪ್ರೀತಿಸುತ್ತಿದ್ದನಂತೆ.  ಮದುವೆ ಮಾಡಿಕೊಳ್ಳುವುದಾಗಿ ಹೇಳಿ, ರಹೀನಾ ಜೊತೆ ದೈಹಿಕ ಸಂಬಂಧ ಕೂಡಾ ಬೆಳಸಿದ್ದನಂತೆ.  ಹೀಗಾಗಿ ರಹೀನಾ ಗರ್ಭಿಣಿಯಾಗಿದ್ದಳಂತೆ. ಮದುವೆಯಾಗುವ ಮುನ್ನವೇ ಮಗುವಾದ್ರೆ ಸಮಸ್ಯೆಯಾಗುತ್ತೆ ಅಂತ ಹೇಳಿ, ಗರ್ಭಪಾತ ಕೂಡ ಮಾಡಿಸಿದ್ದನಂತೆ.   ಕಳೆದ ಕೆಲ ತಿಂಗಳ ಹಿಂದೆ ಕಲಬುರಗಿ ನಗರದ ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ  ಮದುವೆ ಕೂಡಾ ಆಗಿದ್ದಾರಂತೆ. ಆದ್ರೆ ಇದೀಗ ಇರ್ಪಾನ್, ನಾನು ನಿನ್ನ ಮದುವೆಯಾಗೋದಿಲ್ಲಾ ಅಂತ ಹೇಳ್ತಾಯಿದ್ದಾನಂತೆ. ಇದು ರಹಿನಾಳ ಆಕ್ರೋಶಕ್ಕೆ ಕಾರಣವಾಗಿದೆ.

  ಹೌದು, ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಗೆ ಒಪ್ಪಿದ ನಂತರ, ಹೊರಗಡೆ ಮದುವೆಯಾಗೋದಾಗಿ ಇರ್ಪಾನ್ ಹೇಳಿದ್ದನಂತೆ. ಆದ್ರೆ ಇಲ್ಲಿಯವರಗೆ ಮದುವೆಯಾಗಿಲ್ಲ. ಇದೀಗ ಕೇಳಿದ್ರೆ ನಾನು ನಿನ್ನ ಪ್ರೀತಿಸಿಯೇ ಇಲ್ಲಾ. ನಾನು ನಿನ್ನ ಮದುವೆಯಾಗೋದಿಲ್ಲ ಅಂತ ಹೇಳ್ತಿದ್ದಾನಂತೆ. ಹೀಗಾಗಿ ಬೆಂಗಳೂರಿನಿಂದ ಕಲಬುರಗಿಗೆ ಬಂದಿದ್ದ, ರಹೀನಾ, ಇಂದು ಕಲಬುರಗಿ ನಗರದ ಗ್ರಾಮೀಣ ಪೊಲೀಸ್ ಠಾಣೆಗೆ ಹೋಗಿದ್ದಳು. ಅಲ್ಲಿ ಪೊಲೀಸರು ಇರ್ಪಾನ್ ನನ್ನು ಕೂಡಾ ಕರೆಸಿದ್ದರು. ಯಾವಾಗ ನನಗೂ, ರಹಿನಾಗೂ ಸಂಬಂಧವಿಲ್ಲಾ ಅಂತ ಇರ್ಪಾನ್ ಹೇಳಿದನೋ, ಆಗ ಆಕ್ರೋಶಗೊಂಡ ಮಹಿಳೆ, ಠಾಣೆಯ ಮುಂದೆ ಎಲ್ಲರ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾಳೆ.

  ಇದನ್ನೂ ಓದಿ:Chamarajanagar: ಕೊರೋನಾದಿಂದ ದುಡಿಯುವ ವ್ಯಕ್ತಿ ಕಳೆದುಕೊಂಡು ಬೀದಿಪಾಲಾಗಿವೆ 236 ಕುಟುಂಬಗಳು

  ಇತ್ತ ರಹೀನಾ, ಇಬ್ಬರು ಪ್ರೀತಿಸುತ್ತಿದ್ದೆವು, ಇಬ್ಬರ ನಡುವೆ ಸಂಬಂಧವಿತ್ತು. ಇಷ್ಟು ದಿನ ಚೆನ್ನಾಗಿಯೇ ಇದ್ದ. ಆದ್ರೆ ಇದೀಗ ಮದುವೆಯಾಗೋದಿಲ್ಲಾ ಅಂತ ಹೇಳ್ತಿದ್ದಾನೆ ಅಂತ ಹೇಳಿದ್ರೆ, ಇತ್ತ ಇರ್ಪಾನ್ ಮಾತ್ರ ಬೇರೆಯದೇ ಕತೆ ಹೇಳುತ್ತಿದ್ದಾನೆ. ನಾನು ರಹೀನಾಳನ್ನು ಪ್ರೀತಿಸುತ್ತಿರಲಿಲ್ಲಾ. ಜಸ್ಟ್ ಪ್ರೆಂಡ್ಸ್ ಆಗಿದ್ದೆವು. ನನ್ನ ಸ್ನೇಹಿತನಾಗಿರುವ ಅಜರ್,ರಹೀನಾಳನ್ನು ಪ್ರೀತಿಸುತ್ತಿದ್ದ. ನಾನು ಮಾತ್ರ ರಹೀನಾಳ ಜೊತೆ ಸಂಬಂಧ ಹೊಂದಿಲ್ಲಾ. ಇಬ್ಬರು ಫ್ರೆಂಡ್ಸ್ ಆಗಿದ್ದವು. ಆದ್ರೆ ಕೆಲ ಪೋಟೋಗಳನ್ನು ಆಕೆಯ ತೆಗೆಸಿಕೊಂಡು, ಇದೀಗ ನನಗೆ ಮದುವೆಯಾಗುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಅಂತ ಆರೋಪಿಸಿದ್ದಾನೆ.

  ರಹೀನಾ ಮತ್ತು ಇರ್ಪಾನ್ ಲವ್ ಲಫಡಾ ಇದೀಗ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.  ಪೊಲೀಸರು ಇದೀಗ ಯಾರು ಸರಿ,ಯಾರು ತಪ್ಪು ಅನ್ನೋದನ್ನು ಪರಿಶೀಲಿಸುತ್ತಿದ್ದಾರೆ.  ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದು, ಇದೀಗ, ಇರ್ಪಾನ್​ಗೆ ರಹೀನಾ ಬೇಡವಾಗಿದ್ದಾಳೆ.  ಆದ್ರೆ ಇಬ್ಬರ ನಡುವೆ ನಿಜವಾಗಿಯೂ ಪ್ರೀತಿಯಿತ್ತಾ, ಅಥವಾ ಒನ್ ಸೈಡ್ ಲವ್ ಆಗಿತ್ತಾ ಅನ್ನೋದು, ಇಬ್ಬರು ಸತ್ಯವನ್ನು ಹೇಳಿದಾಗ ಮಾತ್ರ ಗೊತ್ತಾಗಲಿದೆ.
  Published by:Latha CG
  First published: