ಚಿಕ್ಕಮಗಳೂರು: ಲವ್ ಜಿಹಾದ್ ಹೆಸರಲ್ಲಿ ದೇಶದಲ್ಲಿ ವ್ಯವಸ್ಥಿತಿ ಷಡ್ಯಂತ್ರಗಳು ನಡೆಯುತ್ತಿವೆ. ಲವ್ ಜಿಹಾದ್ ಈಗ ಕೇವಲ ಪ್ರೀತಿ-ಪ್ರೇಮ-ಮದುವೆಯಾಗಿ ಉಳಿದಿಲ್ಲ, ಇದು ಭಯೋತ್ಪಾದನೆಯ ಮತ್ತೊಂದು ಮುಖವಾಗಿದ್ದು, ಒಂದು ಕೋಮಿನ ಜನಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಉಡುಪಿ-ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಲವ್ ಜಿಹಾದ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಲವ್ ಜಿಹಾದ್ ಬಗ್ಗೆ ಬೇರೆ-ಬೇರೆ ಭಾಗದಲ್ಲಿ ಅವರ ಪ್ರಾರ್ಥನಾಲಯದಲ್ಲಿ ಭಾಷಣ ಮಾಡಿರುವುದು, ಮಾತನಾಡಿರುವುದು ಈಗ ಬೆಳಕಿಗೆ ಬರುತ್ತಿದೆ. ಓವೈಸಿಯಂತಹ ಕೋಮುವಾದಿಗಳು ಲವ್ ಜಿಹಾದ್ ಬಗ್ಗೆ ಓಪನ್ ಆಗಿ ಮಾತನಾಡುತ್ತಿದ್ದಾರೆ. ನಿನ್ನೆ ಕೂಡ ಉಡುಪಿಯಲ್ಲಿ 17 ವರ್ಷದ ಅಪ್ರಾಪ್ತ ಯುವತಿಯನ್ನು ಯುವಕ ಕರೆದುಕೊಂಡು ಹೋಗಿ ನಾಪತ್ತೆಯಾಗಿದ್ದಾನೆ. ಇದರ ಹಿಂದೆಯೂ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಮೊದಲೇ ಪ್ಲ್ಯಾನ್ ಆಗಿದೆ. ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಬೇಕು, ಯಾವ ಬಸ್ಸಲ್ಲಿ ಹೋಗಬೇಕು, ಯಾವ ಕಾರಲ್ಲಿ ಹೋಗಬೇಕು, ರಾಜ್ಯದ ಗಡಿಯಿಂದ ಎಲ್ಲಿಗೆ ಹೋಗಬೇಕು, ಎಲ್ಲಾ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ
ಚಿಕ್ಕ ಚಿಕ್ಕ ಹೆಣ್ಣು ಮಕ್ಕಳನ್ನು ಪ್ರಚೋದನೆಗೆ ಒಳಪಡಿಸಿ ಹಣದ ಆಮಿಷ ತೋರಿಸಿ ಲವ್ ಜಿಹಾದ್ ಹೆಸರಲ್ಲಿ ಸಮಾಜ ಪರಿವರ್ತನೆಯ ಒಂದು ಷಡ್ಯಂತ್ರ ನಡೆಯುತ್ತಿದೆ. ಆದ್ದರಿಂದ ಕರ್ನಾಟಕದ ಕರಾವಳಿ ಭಾಗ ಹಾಗೂ ಬೆಂಗಳೂರು ಸೇರಿದಂತೆ ಬೇರೆ-ಬೇರೆ ಭಾಗದಲ್ಲಿ ಈ ರೀತಿಯ ಷಡ್ಯಂತ್ರವನ್ನು ತಡೆಯಬೇಕು. ಲವ್ ಜಿಹಾದ್ ತಡೆಯಬೇಕು ಎಂದರೆ ಕಠಿಣ ಮತಾಂತರ ನಿಷೇಧ ಕಾಯ್ದೆಯ ಅಗತ್ಯ ಇದೆ. ಕರ್ನಾಟಕದಲ್ಲಿ ಅತ್ಯಂತ ಜರೂರಾಗಿ ಈ ಕೆಲಸ ನಡೆಯಬೇಕಿದೆ. ಹಣದ ಆಮಿಷದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಕುತಂತ್ರವನ್ನ ಒಂದು ಕೋಮಿನ ಜನ ಮಾಡುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳು ಇದಕ್ಕೆ ಬಲಿಯಾಗುತ್ತಿರುವ ಸಂದರ್ಭದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನ ಆದಷ್ಟು ಬೇಗ ಜಾರಿಗೆ ತರಬೇಕು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ