ಗದಗ ಜಿಲ್ಲೆಯಲ್ಲಿ ಹಾರಾಡುತ್ತಾ ನೆಲಕ್ಕೆ ಬೀಳುತ್ತಿರುವ ಹಕ್ಕಿಗಳು; ಡಂಬಳ ಗ್ರಾಮದಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿವೆ ಪಕ್ಷಿಗಳು

ಮೊದಲೇ ಗದಗ ಜಿಲ್ಲೆಯಲ್ಲಿ ಈಗ ವಿದೇಶಿ ಹಕ್ಕಿಗಳು ಸಹ ಬಂದಿದ್ದು, ಅವುಗಳ ಮೇಲೆ‌‌ ಕಟ್ಟೆಚ್ಚರ ವಹಿಸಲಾಗಿದೆ. ಇದರ ನಡುವೆ ಏಕಾಏಕಿ ಹಕ್ಕಿಗಳು ಸಾವನ್ನಪ್ಪುತ್ತಿರುವುದರಿಂದ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಹಾಗಾಗಿ ಕೂಡಲೇ ನಿಗೂಢವಾಗಿ ಸಾವನ್ನಪುತ್ತಿರುವ ಹಕ್ಕಿಗಳ ರಹಸ್ಯ ಕಂಡು ಹಿಡಿಯಬೇಕಿದೆ.

ಸತ್ತು ಬಿದ್ದಿರುವ ಪಕ್ಷಿಗಳು.

ಸತ್ತು ಬಿದ್ದಿರುವ ಪಕ್ಷಿಗಳು.

  • Share this:
ಗದಗ: ಕೊರೋನಾ ವೈರಸ್​ ಗೆ ವ್ಯಾಕ್ಸಿನ್ ಸಿಕ್ತು ಎನ್ನುವ ಸಂತಸದ ನಡುವೆ ಮತ್ತೊಂದು ಗಂಡಾಂತರ ಎದುರಾಗಿದೆ. ಹೌದು ದೇಶದಲ್ಲಿ ಹಕ್ಕಿ ಜ್ವರದ ಭೀತಿಯ ನಡುವೆ, ಇವಾಗ ರಾಜ್ಯದಲ್ಲಿ ಕೂಡ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ. ಗದಗ ಜಿಲ್ಲೆಯಲ್ಲಿ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪಿ, ಹಕ್ಕಿ ಜ್ವರದ ಭೀತಿ ಸೃಷ್ಟಿ ಮಾಡಿವೆ. ಕೊರೋನಾ ವೈರಸ್ ಗೆ ಮದ್ದು ಸಿಕ್ಕಿತು ಎನ್ನುವಷ್ಟರಲ್ಲಿ ಗದಗ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಆರಂಭವಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಹಕ್ಕಿಗಳು ಹಾರಾಡುತ್ತಾ ನೆಲಕ್ಕೆ ಬಿಳ್ತಾಯಿವೆ. ಹೀಗಾಗಿ ಹಕ್ಕಿ ಜ್ವರದ ಆತಂಕ ಎದುರಾಗಿದೆ. ಡಂಬಳ ಗ್ರಾಮದ ತೋಂಟದಾರ್ಯ ಮಠಕ್ಕೆ ಸೇರಿದ ತೋಟದಲ್ಲಿ ಹಾಗೂ ಜಮೀನಿನಲ್ಲಿ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ.

ಕೆಲವು ಹಕ್ಕಿಗಳು ಹಾರಾಡುತ್ತಲೇ ನೆಲಕ್ಕೆ ಬಿದ್ದು ಸಾವನ್ನಪ್ಪಿದರೆ, ಇನ್ನೂ ಕೆಲವು ಪಕ್ಷಿಗಳು ವಿಲವಿಲ ಒದ್ದಾಡಿ ಸಾಯುತ್ತಿವೆ. ಸುಮಾರು‌ 25 ಕ್ಕೂ ಹೆಚ್ಚು ವಿವಿಧ ಜಾತಿಯ ಹಕ್ಕಿಗಳು ಸಾವನ್ನಪ್ಪಿದ್ದು, ಸಾವನ್ನಪ್ಪಿರುವ ಹಕ್ಕಿಗಳನ್ನು ತಿಂದು ನಾಯಿಗಳು ಗ್ರಾಮಕ್ಕೆ ಬರುತ್ತಿವೆ.  ಹೀಗಾಗಿ ಗ್ರಾಮದಲ್ಲಿ ಮತ್ತಷ್ಟು ಆತಂಕ ಎದುರಾಗಿದೆ. ಕೂಡಲೇ ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಕ್ಕಿಗಳ ಸಾವಿನ ಕುರಿತು ತನಿಖೆ ಮಾಡಿ ನಿಖರವಾದ ಕಾರಣ ಹೇಳಬೇಕು ಅಂತಾ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಆರೋಗ್ಯ ಹಾಗೂ ಅರಣ್ಯ ಇಲಾಖೆಯಿಂದ ಸ್ಥಳ ಪರಿಶೀಲನೆ

ಡಂಬಳ ಗ್ರಾಮದಲ್ಲಿ ನಿಗೂಢವಾಗಿ ಹಕ್ಕಿಗಳು ಸಾವನ್ನಪ್ಪುತ್ತಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದಾರೆ. ಹಕ್ಕಿಗಳು ಸಾವನ್ನಪ್ಪಿರುವ ಸ್ಥಳಗಳಿಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಹಕ್ಕಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಹಾಗೇ ಡಂಬಳ ಗ್ರಾಮ ಸೇರಿದಂತೆ ಹಲವೆಡೆ ಸಾವನ್ನಪ್ಪಿರುವ ಹಕ್ಕಿಗಳ ಪತ್ತೆ ಕಾರ್ಯ ಸಹ ಮಾಡ್ತಾಯಿದ್ದಾರೆ.

ಇದನ್ನು ಓದಿ: ಮದುವೆಯಾದ 18 ದಿನಗಳ ಬಳಿಕ ಚಿನ್ನಾಭರಣದೊಂದಿಗೆ ಪ್ರಿಯಕರನೊಂದಿಗೆ ಪರಾರಿಯಾದ ನವವಧು!

ಈ ಕುರಿತು ಗದಗ ಜಿಲ್ಲಾ ಆರೋಗ್ಯ ಅಧಿಕಾರಿಯಾದ ಡಾ. ಸತೀಶ ಬಸರಿಗಿಡದ ಅವರು ಪ್ರತಿಕ್ರಿಯಿಸಿದ್ದು, ನಮಗೆ ಮಾಹಿತಿ ಸಿಕ್ಕ ತಕ್ಷಣ ನಮ್ಮ ಸಿಬ್ಬಂದಿಗಳನ್ನು ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದೇವೆ. ಅವರು ಪರಿಶೀಲನೆ ನಡೆಸಿದ ಮೇಲೆ ಹಕ್ಕಿಗಳು ಯಾಕೆ ಸಾವನ್ನಪ್ಪುತ್ತಿವೆ ಎನ್ನುವ ಕುರಿತು ನಿಖರವಾದ ಕಾರಣ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಮೊದಲೇ ಗದಗ ಜಿಲ್ಲೆಯಲ್ಲಿ ಈಗ ವಿದೇಶಿ ಹಕ್ಕಿಗಳು ಸಹ ಬಂದಿದ್ದು, ಅವುಗಳ ಮೇಲೆ‌‌ ಕಟ್ಟೆಚ್ಚರ ವಹಿಸಲಾಗಿದೆ. ಇದರ ನಡುವೆ ಏಕಾಏಕಿ ಹಕ್ಕಿಗಳು ಸಾವನ್ನಪ್ಪುತ್ತಿರುವುದರಿಂದ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಹಾಗಾಗಿ ಕೂಡಲೇ ನಿಗೂಢವಾಗಿ ಸಾವನ್ನಪುತ್ತಿರುವ ಹಕ್ಕಿಗಳ ರಹಸ್ಯ ಕಂಡು ಹಿಡಿಯಬೇಕಿದೆ.

ವರದಿ: ಸಂತೋಷ ಕೊಣ್ಣೂರ
Published by:HR Ramesh
First published: